ಅಪ್ಪ ಅಮ್ಮ ರಿಚ್ ಆಗಿದ್ರೆ ರಕ್ಷಿತಾ ಕೂಡ ಒಳ್ಳೆ ಬಟ್ಟೆ ಹಾಕ್ತಿದ್ಲು; 'ಕಾಂತಾರ' ನಟ ಅಸಮಾಧಾನ

ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳು ಆಡುವ ಪ್ರತಿ ಮಾತನ್ನು ವೀಕ್ಷಕರು ನೋಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸರಿ ಎನಿಸಿದ್ದನ್ನು ಸರಿ ಎಂದು ಒಪ್ಪಿಕೊಂಡರೆ ತಪ್ಪು ಎನಿಸಿದ್ದನ್ನು ಖಂಡಿಸುತ್ತಿದ್ದಾರೆ.

3ನೇ ವಾರದಲ್ಲಿ ರಕ್ಷಿತಾಳನ್ನು ಅಶ್ವಿನಿ ಗೌಡ ಹಾಗೂ ಜಾಹ್ನವಿ ಟಾರ್ಗೆಟ್ ಮಾಡಿದ್ದರು. ಆಕೆಯ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಲು ನೋಡಿದ್ದರು. ಇನ್ನು ರಕ್ಷಿತಾಳನ್ನು ಅಶ್ವಿನಿ 'ಸ್ಲಮ್' ಎಂದು ಕರೆದಿದ್ದು ಅದನ್ನು ಮ್ಯೂಟ್ ಮಾಡಿದ್ದು ಬಳಿಕ 'ಎಸ್' ಎಂದು ಹೇಳಿದ್ದು ಎಲ್ಲವೂ ಗೊತ್ತೇಯಿದೆ. ಅಶ್ವಿನಿ ಪದ ಪಳಕೆ ಕಂಡಿಸಿ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ.

ಅಶ್ವಿನಿ ಗೌಡ ಹಾಗೂ ಬಿಗ್‌ಬಾಸ್ ಆಯೋಜಕರ ವಿರುದ್ಧ ವಕೀಲರೊಬ್ಬರು ದೂರು ದಾಖಲಿಸಿದ್ದರು. ಅಶ್ವಿನಿ ನಡೆ, ನುಡಿ ಬಗ್ಗೆ ವೀಕ್ಷಕರು ಬೇಸರ ವ್ಯಕ್ತಪಡಿಸುತ್ತಾ ಬರ್ತಿದ್ದಾರೆ. ಇನ್ನು ರಕ್ಷಿತಾಗೆ ಆ ಪದ ಬಳಸಿದ ಬಗ್ಗೆ 'ಕಾಂತಾರ' ಸ್ವರಾಜ್ ಶೆಟ್ಟಿ ಖಂಡಿಸಿದ್ದಾರೆ. ರಕ್ಷಿತಾಳ ಅಪ್ಪ ಅಮ್ಮ ಶ್ರೀಮಂತರಾಗಿದ್ದರೆ ಆಕೆ ಕೂಡ ಒಳ್ಳೆ ಬಟ್ಟೆ ತೊಡುತ್ತಿದ್ದಳು ಎಂದಿದ್ದಾರೆ.

Swaraj Shetty Defends Rakshita in Bigg Boss Kannada Condemns Ashwini Gowda s Remarks

ಕರಾವಳಿ ಮೂಲದ ಸ್ವರಾಜ್ ಶೆಟ್ಟಿ ರಂಗಭೂಮಿಯಲ್ಲಿ ಗುರ್ತಿಸಿಕೊಂಡಿದ್ದಾರೆ. ಕೆಲ ತುಳು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಕಾಂತಾರ' ಚಿತ್ರದಲ್ಲಿ ಗರುವಾ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಚಾಪ್ಟರ್‌-1 ಚಿತ್ರದಲ್ಲಿ ಪಂಜುರ್ಲಿ ವೇಷ ಹಾಕಿ ಕಾಣಿಸಿಕೊಂಡಿದ್ದಾರೆ. ನ್ಯಾಷನಲ್ ಟಿವಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ರಕ್ಷಿತಾ ಬಿಗ್‌ಬಾಸ್ ಜರ್ನಿ ಬಗ್ಗೆ ಸ್ವರಾಜ್ ಮಾತನಾಡಿದ್ದಾರೆ.

"ನಮ್ಮವರು ಒಬ್ಬರು ಬಿಗ್‌ಬಾಸ್ ಮನೆಗೆ ಹೋಗಿರುವುದು ಖುಷಿಯಾಗುತ್ತಿದೆ. ಅಷ್ಟು ದೊಡ್ಡವರ ನಡುವೆ ಪುಟ್ಟ ಹುಡುಗಿ ಇದ್ದಾಳೆ. ಮನೆಯಲ್ಲಿ ಏನೇನೊ ಆಯ್ತು, ಅದು ಬೇಸರವಾಯಿತು. ಓಪನ್ ಅಪ್ ಆಗಿ ಮಾತನಾಡುತ್ತಿದ್ದಾಳೆ. ಟಾಸ್ಕ್ ಚೆನ್ನಾಗಿ ಆಡ್ತಾಳೆ, ಬುದ್ಧಿವಂತೆ. ದೊಡ್ಡವರ ರೀತಿ ಬೆರೆತು ಆಡುವುದು ಕಷ್ಟ ಆಗುತ್ತಿರಬಹುದು. ಆಕೆಯ ಜರ್ನಿ ದೊಡ್ಡದಾಗಿರುತ್ತದೆ ಅನ್ನಿಸುತ್ತಿದೆ. ಕರಾವಳಿಯವರಾಗಿ ಆಕೆಗೆ ಆಲ್‌ ದಿ ಬೆಸ್ಟ್" ಎಂದು ಸ್ವರಾಜ್ ಹೇಳಿದ್ದಾರೆ.

Swaraj Shetty Defends Rakshita in Bigg Boss Kannada Condemns Ashwini Gowda s Remarks

ಇನ್ನು ರಕ್ಷಿತಾ ಬಗ್ಗೆ ಕೆಲವರು ಆ ರೀತಿ ಮಾತನಾಡಿದ್ದು ನೋಡಿ ಏನು ಅನಿಸಿತು ಎನ್ನುವ ಪ್ರಶ್ನೆಗೆ "ಅದೆಲ್ಲಾ ಅವರವರ ಮನಸ್ಥಿತಿ ಮೇಲೆ ಡಿಪೆಂಡ್ ಆಗಿರುತ್ತೆ. ಎಷ್ಟೋ ಜನ ಪಾಪದವರು ಇರ್ತಾರೆ. ಅವರ ಬಟ್ಟೆಯ ಬಗ್ಗೆ ಹೀಯ್ಯಾಳಿಸಬಾರದು. ಸಾಧ್ಯವಾದರೆ ಅವರಿಗೆ ಸಹಾಯ ಮಾಡಬೇಕು, ಅದೇ ರೀತಿ ರಕ್ಷಿತಾ ಬಗ್ಗೆ ಮಾತನಾಡಿದ್ದು ತಪ್ಪು. ನಿಮ್ಮ ಹಣೆಬರಹ ದೊಡ್ಡವರ ಮನೆಯಲ್ಲಿ ಹುಟ್ಟಿದ್ದೀರಾ. ಪಾಪದವರು ಪಾಪದವರ ಮನೆಯಿಂದ ಬಂದಿದ್ದಾರೆ. ಏನು ಮಾಡಲು ಆಗಲ್ಲ, ಅವರಪ್ಪ ಅಮ್ಮ ದೊಡ್ಡವರಾಗಿದ್ದರೆ ಇವ್ರು ಅದೇ ರೀತಿ ಇರ್ತಿದ್ರು. ನಾವು ಹಾಕುವ ಬಟ್ಟೆ ನಮಗೆ ಇಷ್ಟವಾಗಬೇಕು, ಬೇರೆಯವರಿಗೆ ಎಲ್ಲ. ಹರ್ಟ್ ಮಾಡಿದವರಿಗೆ ಏನು ಹೇಳಬೇಕೊ ಸುದೀಪ್ ಸರ್ ಹೇಳಿದ್ದಾರೆ. ಅದು ನಮಗೆಲ್ಲ ಸಮಾಧಾನ ತಂದಿದೆ" ಎಂದು ಸ್ವರಾಜ್ ಶೆಟ್ಟಿ ವಿವರಿಸಿದ್ದಾರೆ.

ಅಶ್ವಿನಿ ಗೌಡ ಮಾತ್ರವಲ್ಲ ಕಾಕ್ರೋಚ್ ಸುಧಿ ಪದ ಬಳಕೆ ಬಗ್ಗೆ ಕೂಡ ಭಾರೀ ಚರ್ಚೆ ನಡೆದಿತ್ತು. ವೀಕೆಂಡ್ ಪಂಚಾಯ್ತಿಯಲ್ಲಿ ಸುದೀಪ್ ಸರಿಯಾಗಿ ಕ್ಲಾಸ್ ತಗೊಂಡಿದ್ದರು. ಬಳಿಕ ತಾವು ಆ ರೀತಿ ಮಾತನಾಡಿದ್ದು ತಪ್ಪಾಯಿತು ಎಂದು ಅವರು ಒಪ್ಪಿಕೊಂಡಿದ್ದರು. ಇನ್ನು ರಕ್ಷಿತಾ ದಿನದಿಂದ ದಿನಕ್ಕೆ ಉತ್ತಮ ಆಟ ಪ್ರದರ್ಶಿಸುತ್ತಿದ್ದಾರೆ. ಸುದೀಪ್ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಆಕೆ ಶೋ ಗೆಲ್ಲಬೇಕು ಎಂದು ಕೆಲವರು ಬಯಸುತ್ತಿದ್ದಾರೆ. ಬಿಗ್‌ಬಾಸ್ ಮನೆ ಈಗ ಬಿಬಿ ಕಾಲೇಜ್ ಆಗಿ ಬದಲಾಗಿದೆ. ವೀಕ್ಷಕರನ್ನು ಭರ್ಜರಿ ಮನರಂಜನೆ ಉಣಬಡಿಸ್ತಿದೆ.

More from Filmibeat

Read more about: bigg boss 12 kantara
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X