ಕೊನೆಗೂ ಪೊಲೀಸ್ ಆಗೆ ಬಿಟ್ಟಳು ಮಗಳು ಜಾನಕಿ: ಬರಲಿದೆ ಹೊಸ ಅಧ್ಯಾಯ

ಕನ್ನಡ ಕಿರುತೆರೆ ಲೋಕದಲ್ಲಿ ಸಿಕ್ಕಪಟ್ಟೆ ಚರ್ಚೆಯಾಗುತ್ತಿರುವ ಧಾರಾವಾಹಿ ಮಗಳು ಜಾನಕಿ. ಟಿ ಎನ್ ಸೀತಾರಾಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಮಗಳು ಜಾನಕಿ' ಧಾರಾವಾಹಿ ಈಗ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಟಿ ಎನ್ ಸೀತರಾಮ್ ಧಾರಾವಾಹಿಗಳೆಂದರೆ ಕುತೂಹಲ ಹೆಚ್ಚಾಗಿರುತ್ತೆ, ಪ್ರೇಕ್ಷಕರನ್ನು ಚಿಂತೆಗೆ ಹಚ್ಚುವಂತೆ ಇರುತ್ತೆ.

ಸದ್ಯ ಮಗಳು ಜಾನಕಿ ಧಾರಾವಾಹಿ ಕುತೂಹಲದ ಉತ್ತುಂಗಕ್ಕೆ ಬಂದು ನಿಂತಿದೆ. ಮಗಳು ಜಾನಕಿ ಧಾರಾವಾಹಿಗೆ ದೊಡ್ಡ ತಿರುವು ಪಡೆದುಕೊಳ್ಳುತ್ತಿದೆ. ಜಾನಕಿ ಖಾಕಿ ತೊಟ್ಟು ಖದರ್ ತೋರಿಸುವ ಕಾಲ ಸಮೀಪ ಬಂದಿದೆ. ಸಿ ಎಸ್ ಪಿ ಮಗಳು ಯಾವಾಗ ಪೊಲೀಸ್ ಆಗುತ್ತಾಳೆ ಎನ್ನುವುದು ಪ್ರೇಕ್ಷಕರ ಕಾಡುತ್ತಿದ್ದ ದೊಡ್ಡ ಪ್ರಶ್ನೆಯಾಗಿತ್ತು. ಆದ್ರೀಗ ಜಾನಕಿಯನ್ನು ಪೊಲೀಸ್ ಪಾತ್ರದಲ್ಲಿ ನೋಡುವ ಸಮಯ ಬಂದಿದೆ.

ಸಿ ಎಸ್ ಪಿ ಮಗ ಮಧುಕರ ಮನೆ ಬಿಟ್ಟು ಹೋಗುವ ನಿರ್ಧಾರ ಮಾಡಿದ್ದಾನೆ. ಮತ್ತೊಂದೆಡೆ ಜಾನಕಿ ಪೊಲೀಸ್ ಅಧಿಕಾರಿಯಾಗಲು ತಯಾರಿ ನಡೆಸುತ್ತಿದ್ದಾರೆ, ಜಾನಕಿ ಪತಿ ನಿರಂಜನ್ ಹೊಸ ಬ್ಯುಸಿನೆಸ್ ಶುರು ಮಾಡಲು ಸಜ್ಜಾಗುತ್ತಿದ್ದಾರೆ. ಇದರ ನಡುವೆ ಜಾನಕಿ ಪೊಲೀಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಮುಂದೆ ಓದಿ..

ಖಾಕಿ ಧರಿಸಿ ಎಂಟ್ರಿ ಕೊಟ್ಟ ಮಗಳು ಜಾನಕಿ

ಖಾಕಿ ಧರಿಸಿ ಎಂಟ್ರಿ ಕೊಟ್ಟ ಮಗಳು ಜಾನಕಿ

ಈ ಮೊದಲು ಅಂದ್ರೆ ಧಾರಾವಾಹಿ ಪ್ರಾರಂಭದಲ್ಲಿ ಜಾನಕಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರೋಮೊ ಅನ್ನು ಪ್ರಸಾರ ಮಾಡಲಾಗಿತ್ತು. ಆ ನಂತರ ಕತೆ ಏನೇನೊ ತಿರುವುಗಳನ್ನು ಪಡೆದು ಮುನ್ನುಗ್ಗುತ್ತಿತ್ತು. ಇದನ್ನ ಕಂಡ ಪ್ರೇಕ್ಷಕರು ಸಿ ಎಸ್ ಪಿ ಮಗಳು ಪೊಲೀಸ್ ಆಗುತ್ತಾಳಾ ಎನ್ನುವ ಚರ್ಚೆ ಪ್ರಾರಂಭವಾಗಿತ್ತು. ಆದ್ರೀಗ ಜಾನಕಿ ದಿಢೀರನೆ ಪೊಲೀಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ.

ಬುಲೆಟ್ ಏರಿ ಬಂದ ಜಾನಕಿ

ಬುಲೆಟ್ ಏರಿ ಬಂದ ಜಾನಕಿ

ಇಷ್ಟು ದಿನ ಜಾನಕಿ ಸೀರೆ ತೊಟ್ಟು ಪಕ್ಕಾ ಗೃಹಿಣಿಯಾಗಿ, ಅಳುಮುಂಜಿ ಜಾನಕಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಆದ್ರೀಗ ಜಾನಕಿ ಬದಲಾಗಿದ್ದಾರೆ. ಜಾನಕಿ ಲೆವೆಲ್ ಬದಲಾಗಿದೆ, ಜಾನಕಿ ಈಗ ಐ ಪಿ ಎಸ್ ಅಧಿಕಾರಿಯಾಗಿ ಎಂಟ್ರಿ ಕೊಡಲಿದ್ದಾರೆ. ಬುಲೆಟ್ ಏರಿ ಬರುವ ಜಾನಕಿ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಜಾನಕಿ ಕನಸು ನನಸಾಗುವ ಸಮಯ ಹತ್ತಿರ ಬಂದಿದೆ.

ಸೋಮವಾರದಿಂದ ಹೊಸ ಅಧ್ಯಾಯ ಪ್ರಾರಂಭ

ಸೋಮವಾರದಿಂದ ಹೊಸ ಅಧ್ಯಾಯ ಪ್ರಾರಂಭ

ಮುಂದಿನ ಸೋಮವಾರದಿಂದ ಮಗಳು ಜಾನಕಿ ಧಾರಾವಾಹಿಯ ಹೊಸ ಅಧ್ಯಾಯ ಪ್ರಾರಂಭವಾಗಲಿದೆ. ಸದ್ಯ ಜಾನಕಿ ಪೊಲೀಸ್ ಅಧಿಕಾರಿಯಾಗಲು ತಯಾರಿ ಮಾಡುತ್ತಿದ್ದಾರೆ. ಜಾನಕಿಯ ತಯಾರಿ ನೋಡಿ ಪ್ರೇಕ್ಷಕರು ಅಚ್ಚರಿ ಪಟ್ಟುಕೊಳ್ಳುತ್ತಿದ್ದಾರೆ. ಸದ್ಯ ಪೊಲೀಸ್ ತಯಾರಿಯಲ್ಲಿರುವ ಜಾನಕಿ ಐ ಪಿ ಎಸ್ ಆಗಲು ಇನ್ನು ಕೆಲವು ದಿನಗಳು ಬೇಕಾಗುತ್ತಂತೆ. ಆದ್ರೆ ಈಗಲೆ ಭರ್ಜರಿ ತಯಾರಿಯಲ್ಲಿದ್ದಾರೆ ಜಾನಕಿ.

ಅಪ್ಪ ಭಾರ್ಗಿ ವಿರುದ್ಧ ತಿರುಗಿ ನಿಲ್ಲುತ್ತಾಳಾ ಜಾನಕಿ

ಅಪ್ಪ ಭಾರ್ಗಿ ವಿರುದ್ಧ ತಿರುಗಿ ನಿಲ್ಲುತ್ತಾಳಾ ಜಾನಕಿ

ಮಗಳು ಪೊಲೀಸ್ ಅಧಿಕಾರಿಯಾಗುತ್ತಿದ್ದಾಳೆ ಅಂದ್ರೆ ಎಂತಾ ಅಪ್ಪನಿಗಾದ್ರು ಹೆಮ್ಮೆ ಎನಿಸುತ್ತೆ. ಆದ್ರೆ ಜಾನಕಿ ಪೊಲೀಸ್ ಆಗುವುದನ್ನ ನೋಡಲು ಭಾರ್ಗಿ ಕೈಯಲ್ಲಿ ಸಾದ್ಯವಾಗುತ್ತಿಲ್ಲ. ಭಾರ್ಗಿಯ ಅವ್ಯವಹಾರ, ಮೋಸ, ವಂಚನೆ ಮಗಳಿಗೆ ಗೊತ್ತಾಗುತ್ತೆ ಎನ್ನುವ ಭಯದಲ್ಲಿದ್ದಾರೆ ಭಾರ್ಗಿ. ಹೇಗಾದರು ಮಾಡಿ ಮಗಳು ಪೊಲೀಸ್ ಆಗುವುದನ್ನ ತಡೆಯಬೇಕೆಂದು ಸಂಚು ರೂಪಿಸುತ್ತಿದ್ದಾರೆ ಅಪ್ಪ ಚಂದು ಭಾರ್ಗಿ. ಆದ್ರೆ ಅದನ್ನೆಲ್ಲ ಮೀರಿ ಮಗಳು ಪೊಲೀಸ್ ಆಗಿ ಎಂಟ್ರಿ ಕೊಡುತ್ತಾಳೆ.

ನಿರಂಜನ್, ಮಧುಕರ, ಚಂಚಲ ಕತೆ

ನಿರಂಜನ್, ಮಧುಕರ, ಚಂಚಲ ಕತೆ

ಜಾನಕಿಗೆ ಪತಿ ನಿರಂಜನ್ ಮೇಲೆ ಪ್ರೀತಿ ಪ್ರಾರಂಭವಾಗಿದೆ. ನಿರಂಜನ್ ಸದ್ಯ ಹೊಸ ಬ್ಯುಸಿನೆಸ್ ಮಾಡಲು ಮುಂದಾಗಿದ್ದಾರೆ. ಮತ್ತೊಂದೆಡೆ ಸಿ ಎಸ್ ಪಿ ಮುದ್ದಿನ ಮಗ ಮಧುಕರ್ ಮನೆ ಬಿಟ್ಟುಹೋಗುವ ನಿರ್ಧಾರ ಮಾಡಿದ್ದಾರೆ. ಚಂಚಲ ಹೋಮ್ ಮಿನಿಸ್ಟರ್ ಮಗ ಚಿರಂತನ್ ಚೌಧರಿ ಯನ್ನು ಪ್ರೀತಿಸುತ್ತಿದ್ದಾರೆ. ಇದೆಲ್ಲ ಯಾವ ಹಂತಕ್ಕೆ ಬಂದು ನಿಲ್ಲುತ್ತದೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿದೆ.

More from Filmibeat

English summary
Kannada famous serial T N Seetharam's 'Magalu Janaki' new twist. Janaki a police officer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X