ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ಹಿರಿಯ ನಿರ್ದೇಶಕ:ಸುದರ್ಶನ್ ಸೂರಿ ಅವತಾರದಲ್ಲಿ ನಾಗಾಭರಣ
ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈಗಾಗಲೇ ಯಶಸ್ವಿಯಾಗಿ 300 ಸಂಚಿಕೆ ಪೂರೈಸಿರುವ 'ಒಲವಿನ ನಿಲ್ದಾಣ' ಧಾರಾವಾಹಿಯು ಪ್ರತಿ ದಿನವೂ ಟ್ವಿಸ್ಟ್‌ಗಳ ಮೂಲಕ ವೀಕ್ಷಕರನ್ನು ರಂಜಿಸುತ್ತಿದೆ.
ಅನಿರೀಕ್ಷಿತವಾಗಿ ನಾಯಕ ಸಿದ್ಧಾಂತ್ ಹಾಗೂ ನಾಯಕಿ ತಾರಿಣಿಯ ಮದುವೆಯಾಗುತ್ತದೆ. ನಾಯಕಿ ತಾತನೇ ಮುಂದೆ ನಿಂತು ಈ ಮದುವೆ ಮಾಡಿಸುತ್ತಾನೆ. ಆದರೆ, ಮದುವೆ ಆದ ಮೇಲೆ ನಾಯಕ ಸಿದ್ಧಾಂತ್ ತಾಯಿ ನಿರುಪಮಾಗೂ ಮತ್ತು ತಾರಿಣಿ ತಾಯಿ ಉಮಾ ನಡುವೆ ದ್ವೇಷ ಇರುವ ವಿಚಾರ ಹೊರ ಬರುತ್ತದೆ. ಈ ದ್ವೇಷದ ಕಥೆಯಲ್ಲಿ ಆಗಾಗ ಕೇಳಿ ಬರುತ್ತಿರುವ ಹೆಸರು ಸುದರ್ಶನ್ ಸೂರಿ.

ಮತ್ತೆ ಕಿರುತೆರೆಗೆ ಕಾಲಿಟ್ಟ ನಾಗಾಭರಣ
ಈಗಾಗಲೇ ಸುದರ್ಶನ್ ಸೂರಿ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಸಂಚಿಕೆಯ ಪ್ರೋಮೋವನ್ನು ಕಲರ್ಸ್ ಕನ್ನಡ ಬಿಡುಗಡೆ ಮಾಡಿದೆ. ಅದರಲ್ಲಿ ಸುದರ್ಶನ್ ಸೂರಿಯಾಗಿ ಕನ್ನಡ ಸಿನಿಮಾ ರಂಗದ ಹಿರಿಯ ನಿರ್ದೇಶಕ, ನಟ ಟಿ ಎಸ್ ನಾಗಭರಣ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸಾಕಷ್ಟು ಟ್ವಿಸ್ಟ್‌ಗಳನ್ನು ನೀಡಿರುವ 'ಒಲವಿನ ನಿಲ್ದಾಣ' ಧಾರಾವಾಹಿಗೆ ನಾಗಾಭರಣ ಎಂಟ್ರಿಯಾಗಿದ್ದು ಮಗದಷ್ಟು ಟ್ವಿಸ್ಟ್ ನೀಡಲಿರುವುದಂತೂ ನಿಜ.
'ಬ್ರಹ್ಮಗಂಟು' ಸೀರಿಯಲ್‌ನಲ್ಲಿ ನಟನೆ
ಕೊನೆಯ ಬಾರಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಾಯಕ ಲಕ್ಷ್ಮಣ್ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದ ನಾಗಾಭರಣ ಮತ್ತೆ ಬೇರೆ ಯಾವುದು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿರಲಿಲ್ಲ. ಶ್ರುತಿ ನಾಯ್ಡು ಅವರ 'ಬ್ರಹ್ಮಗಂಟು'ವಿನಲ್ಲಿ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದ ನಾಗಾಭರಣ ಮತ್ತೆ ಅವರದೇ ಧಾರಾವಾಹಿಯ ಮೂಲಕ ಕಿರುತೆರೆಗೆ ಮರಳುತ್ತಿದ್ದಾರೆ.
ಪ್ರಾಚಿ, ಸಂಜಯ್ ಎಂಬ ಪಾತ್ರಗಳ ಎಂಟ್ರಿ
ನಾಯಕ ಸಿದ್ಧಾಂತ್ ಕೆಲಸ ಮಾಡುತ್ತಿರುವ ಕಂಪೆನಿಯ ಬಾಸ್ ಪ್ರಾಚಿ ಆಗಿ 'ಜೊತೆಜೊತೆಯಲಿ'ಖ್ಯಾತಿಯ ಮೀರಾ ಪಾತ್ರಧಾರಿ ಮಾನಸ ಮನೋಹರ್ ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾಗಿದೆ. ತದ ನಂತರ ಅವರ ಪತಿ ಸಂಜಯ್ ಆಗಿ ಆದಿ ಲೋಕೇಶ್ ಅವರು ಕೂಡಾ ನಟಿಸಿದ್ದು ಧಾರಾವಾಹಿಯಲ್ಲಿ ಅವರು ಕೂಡಾ ಕಾಣಿಸಿಕೊಂಡಿದ್ದಾಗಿದೆ. ಅಲ್ಲದೇ ಧಾರಾವಾಹಿಯಲ್ಲಿ ಆದಿ ಲೋಕೇಶ್ ಅವರು ಖಳನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.

ಹೇಗಿರಬಹುದು ಟ್ವಿಸ್ಟ್?
ಅಂದ ಹಾಗೇ ಪ್ರಾಚಿ ಹಾಗೂ ಸಂಜಯ್ ಪಾತ್ರಗಳ ಆಗಮನದಿಂದಾಗಿ ಒಂದಾಗಿರುವಂತಹ ಸಿದ್ಧಾಂತ್ ತಾರಿಣಿ ದಾಂಪತ್ಯದಲ್ಲಿ ಬಿರುಕು ಮೂಡುತ್ತ ಎಂಬ ಟೆನ್ಷನ್ ವೀಕ್ಷಕರಿಗೆ ಮೂಡಿದೆ. ಅದರ ಬೆನ್ನಲ್ಲೇ ಸುದರ್ಶನ್ ಸೂರಿ ಆಗಮನದಿಂದ ನಿರುಪಮಾ ಹಾಗೂ ಉಮಾ ನಡುವಿನ ದ್ವೇಷ ಮಾಯವಾಗಿ ಎರಡು ಸಂಸಾರಗಳು ಒಂದಾದರೆ ಸಾಕು ಎನ್ನುವುದು ಪ್ರೇಕ್ಷಕರ ಆಸೆ.


Click it and Unblock the Notifications











