ಇಂದಿನ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಡಾಲಿ, ಚಿಟ್ಟೆ, ಪುನರ್ವಸು
Recommended Video

ಕಿರುತೆರೆಯ ಹೊಸ ಕಾರ್ಯಕ್ರಮ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ 'ಟಗರು' ಚಿತ್ರತಂಡ ಬಂದಿದೆ. 'ಟಗರು' ಸಿನಿಮಾದಲ್ಲಿ ಶಿವರಾಜ್ ಕುಮಾರ್ ಜೊತೆಗೆ ನಟಿಸಿರುವ ಡಾಲಿ ಧನಂಜಯ್, ಚಿಟ್ಟೆ ವಸಿಷ್ಟ, ಪುನರ್ವಸು ಮಾನ್ವಿತಾ ಹರೀಶ್ ಕಾರ್ಯಕ್ರಮದ ಅತಿಥಿ ಆಗಿದ್ದಾರೆ.
'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಬಂದಿರುವ ಚಿತ್ರತಂಡ ಶಿವರಾಜ್ ಕುಮಾರ್ ಜೊತೆಗೆ ಹರಟೆ ಹೊಡೆದಿದೆ. ಟಗರು ಶಿವನ ಜೊತೆಗೆ ಇರುವ ಪೋಟೋವನ್ನು ಮಾನ್ವಿತಾ ಹರೀಶ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 'ಟಗರು' ತಂಡದ ಜೊತೆಗೆ ನಟಿ ಕಾವ್ಯ ಶಾ ಕೂಡ ಶಿವಣ್ಣನ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. 'ಟಗರು' ಸಿನಿಮಾ ಕಳೆದ ವಾರ ರಿಲೀಸ್ ಆಗಿದ್ದು, ಸಿನಿಮಾದ ಸ್ಕ್ರೀನ್ಸ್ ಪ್ಲೇ ಮತ್ತು ಪಾತ್ರಗಳಿಗೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ.

ಅಂದಹಾಗೆ, 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮ ನಟ ಉಪೇಂದ್ರ ಮತ್ತು ಗುರುಕಿರಣ್ ಅವರ ಸಂಚಿಕೆಯಿಂದ ಶುಭಾರಂಭವಾಗಿದೆ. ಎರಡನೇ ಸಂಚಿಕೆಯಲ್ಲಿ ನಟ ಶರಣ್, ಚಿಕ್ಕಣ್ಣ ಮತ್ತು ನಿರ್ದೇಶಕ ತರುಣ್ ಸುದೀರ್ ಆಗಮಿಸಿದ್ದಾರೆ. ಈ ಸಂಚಿಕೆ ನಾಳೆ ರಾತ್ರಿ 8 ಗಂಟೆಗೆ ಪ್ರಸಾರ ಆಗಲಿದೆ. ಸ್ಟಾರ್ ಸುವರ್ಣ ವಾಹಿನಿ ಮತ್ತು ವಿಯು ಅಪ್ ನಲ್ಲಿ ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ.


Click it and Unblock the Notifications











