'ಮಜಾ ಟಾಕೀಸ್' ಹೆಸರಿನಲ್ಲಿ ಮೋಸ: ಸ್ಪಷ್ಟನೆ ಕೊಟ್ಟ ಸೃಜನ್ ಲೋಕೇಶ್.!

By Harshitha

Recommended Video

ಸೃಜನ್ ಹೆಸರಲ್ಲಿ ಸುಲಿಗೆ, ಸ್ಪಷ್ಟನೆ ನೀಡಿದ ಸೃಜಾ & ಮಜಾ ಟೀಂ..! | Oneindia Kannada

ಕನ್ನಡ ಕಿರುತೆರೆಯ ಅತಿ ಜನಪ್ರಿಯ ಕಾರ್ಯಕ್ರಮಗಳ ಪೈಕಿ 'ಮಜಾ ಟಾಕೀಸ್' ಕೂಡ ಒಂದು. ವೀಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಾ ಬಂದಿರುವ 'ಮಜಾ ಟಾಕೀಸ್' ಕನ್ನಡ ಸಿನಿಮಾಗಳ ಪಾಲಿಗೆ ಬೃಹತ್ ವೇದಿಕೆ.

ಒಳ್ಳೆಯ ಟಿ.ಆರ್.ಪಿ ಹೊಂದಿರುವ 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ತಮ್ಮ ಸಿನಿಮಾಗಳನ್ನ ಪ್ರಮೋಟ್ ಮಾಡಲು ಎಷ್ಟೋ ಚಿತ್ರತಂಡಗಳು ಕ್ಯೂನಲ್ಲಿವೆ. ಹೀಗಿರುವಾಗಲೇ, ''ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಸಿನಿಮಾ ಪ್ರಮೋಷನ್ ಮಾಡಬೇಕು ಅಂದ್ರೆ ದುಡ್ಡು ಕೊಡಬೇಕು'' ಅಂತ ಯಾರೋ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.

ಸಾಲದಕ್ಕೆ, ''ಮಜಾ ಟಾಕೀಸ್'ನಲ್ಲಿ ಆಡಿಯನ್ಸ್ ಆಗಿ ಕೂರಬೇಕು ಅಂದರೂ ದುಡ್ಡು ಕೊಡಬೇಕು'' ಅಂತ ಗುಲ್ಲೆಬ್ಬಿಸಿದ್ದಾರೆ. ಈ ವಿಚಾರ ಕಿವಿಗೆ ಬಿದ್ದ ಕೂಡಲೆ 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿಯೇ ಸೃಜನ್ ಲೋಕೇಶ್ ಸ್ಪಷ್ಟನೆ ಕೊಟ್ಟಿದ್ದರು.

''ನಾವು ಯಾವ ಚಿತ್ರತಂಡದಿಂದಲೂ ದುಡ್ಡು ಪಡೆಯುವುದಿಲ್ಲ. ಆಡಿಯನ್ಸ್ ಆಗಿ ಬಂದು ಕೂರುವವರಿಗೂ ದುಡ್ಡು ಇಲ್ಲ. ದಯವಿಟ್ಟು ಇದನ್ನೆಲ್ಲ ನಂಬಬೇಡಿ'' ಎಂದು ಸೃಜನ್ ಲೋಕೇಶ್ ಹೇಳಿದ್ದರು.

ಇದೀಗ ತಮ್ಮ ಇಡೀ 'ಮಜಾ ಟಾಕೀಸ್' ತಂಡದೊಂದಿಗೆ ಫೇಸ್ ಬುಕ್ ಲೈವ್ ಗೆ ಬಂದು ಮತ್ತೊಮ್ಮೆ ಇದೇ ವಿಚಾರದ ಬಗ್ಗೆ ಸೃಜನ್ ಲೋಕೇಶ್ ಕ್ಲಾರಿಟಿ ಕೊಟ್ಟಿದ್ದಾರೆ. ಮುಂದೆ ಓದಿರಿ...

ಫೇಸ್ ಬುಕ್ ಲೈವ್ ಗೆ ಬಂದ 'ಮಜಾ ಟಾಕೀಸ್' ತಂಡ

ಫೇಸ್ ಬುಕ್ ಲೈವ್ ಗೆ ಬಂದ 'ಮಜಾ ಟಾಕೀಸ್' ತಂಡ

''ನಿಮಗೊಂದು ಮಾಹಿತಿ ನೀಡಲು ಇಡೀ 'ಮಜಾ ಟಾಕೀಸ್' ತಂಡ ಫೇಸ್ ಬುಕ್ ಲೈವ್ ಗೆ ಬಂದಿದ್ದೀವಿ. 'ಮಜಾ ಟಾಕೀಸ್'ನಲ್ಲಿ ಸಿನಿಮಾ ಪ್ರಮೋಷನ್ ಗೆ ಬರುವ ಸಿನಿಮಾ ತಂಡ ಆಗಲಿ, ಅಥವಾ ಆಡಿಯನ್ಸ್ ನಿಂದಾಗಲಿ... ನಮ್ಮ ಲೋಕೇಶ್ ಪ್ರೊಡಕ್ಷನ್ಸ್ ಅಥವಾ ಕಲರ್ಸ್ ವಾಹಿನಿ ದುಡ್ಡು ಪಡೆಯುವುದಿಲ್ಲ'' - ಸೃಜನ್ ಲೋಕೇಶ್

ಮೋಸ ಹೋಗಬೇಡಿ

ಮೋಸ ಹೋಗಬೇಡಿ

''ಯಾರೂ ಮೋಸ ಹೋಗಬಾರದು ಎಂಬ ಕಾರಣಕ್ಕೆ ನಮ್ಮ ಇಡೀ ತಂಡ ಫೇಸ್ ಬುಕ್ ಲೈವ್ ಗೆ ಬಂದು ಸ್ಪಷ್ಟನೆ ಕೊಡ್ತಿದ್ದೇವೆ'' ಎಂದಿದ್ದಾರೆ ನಟ ಸೃಜನ್ ಲೋಕೇಶ್

ಇದಕ್ಕೆಲ್ಲ ತುತ್ತಾಗಬೇಡಿ

ಇದಕ್ಕೆಲ್ಲ ತುತ್ತಾಗಬೇಡಿ

''ಯಾರಾದರೂ ಬಂದು ನಿಮ್ಮನ್ನ 'ಮಜಾ ಟಾಕೀಸ್' ಗೆ ಕರ್ಕೊಂಡು ಹೋಗ್ತೀವಿ, 'ಮಜಾ ಟಾಕೀಸ್'ನಲ್ಲಿ ನಿಮಗೆ ಎಂಟ್ರಿ ಕೊಡಿಸ್ತೀವಿ, ನಮಗೆ ದುಡ್ಡು ಕೊಡಿ ಅಂತ ಕೇಳಿದ್ರೆ... ಕೈ ಮುಗಿದು ಕೇಳಿಕೊಳ್ಳುವೆ ಇದಕ್ಕೆ ತುತ್ತಾಗಬೇಡಿ'' - ಸೃಜನ್ ಲೋಕೇಶ್

ಕಾರ್ಯಕ್ರಮಕ್ಕೆ ನಿಮ್ಮ ಬೆಂಬಲ ಇರಲಿ

ಕಾರ್ಯಕ್ರಮಕ್ಕೆ ನಿಮ್ಮ ಬೆಂಬಲ ಇರಲಿ

''ದಯವಿಟ್ಟು ಇದರ ಬಗ್ಗೆ ಗಮನ ಇರಲಿ. 'ಮಜಾ ಟಾಕೀಸ್' ಇರುವುದು ನಿಮಗೆ ಮನರಂಜನೆ ನೀಡಲು ಮಾತ್ರ. ನಮ್ಮ ಕಾರ್ಯಕ್ರಮಕ್ಕೆ ನಿಮ್ಮ ಬೆಂಬಲ ಇರಲಿ. 'ಮಜಾ ಟಾಕೀಸ್' ಯಾವುದೇ ಕಾರಣಕ್ಕೂ ದುಡ್ಡು ಪಡೆಯುವುದಿಲ್ಲ'' - ಸೃಜನ್ ಲೋಕೇಶ್

ಸೃಜನ್ ಕಳಕಳಿ

ಸೃಜನ್ ಕಳಕಳಿ

''ಮಜಾ ಟಾಕೀಸ್' ಹೆಸರಿನಲ್ಲಿ ಆಕ್ಟಿಂಗ್ ಕ್ಲಾಸ್ ಮಾಡ್ತೀವಿ ಅಂದರೂ ನಂಬಬೇಡಿ. 'ಮಜಾ ಟಾಕೀಸ್' ಹೆಸರಿನಲ್ಲಿ ಯಾರಿಗೂ ತೊಂದರೆ ಆಗಬಾರದು ಎಂಬುದು ನಮ್ಮ ಕಳಕಳಿ'' - ಸೃಜನ್ ಲೋಕೇಶ್

More from Filmibeat

English summary
Majaa Talkies team won't take money clarifies Talking Star Srujan Lokesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X