'ಬಿಗ್ ಬಾಸ್'ನಲ್ಲಿ ದೊಡ್ಡ ಬದಲಾವಣೆ: ನಿರೂಪಕರ ಬದಲಾವಣೆಗೆ ಪ್ಲಾನ್
ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ನಲ್ಲಿ ದೊಡ್ಡ ಬದಲಾವಣೆ ಮಾಡಲು ಆಯೋಜಕರು ನಿರ್ಧರಿಸಿದ್ದಾರೆ. ಅಂದಹಾಗೆ ಕನ್ನಡ ಬಿಗ್ ಬಾಸ್ ಅಂತ ಅಂದ್ಕೋಬೇಡಿ. ತಮಿಳು ಬಿಗ್ ಬಾಸ್ ನಿರೂಪಕ ಬದಲಾವಣೆ ಮಾಡಲು ಪ್ಲಾನ್ ನಡೆಯುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. ಬಿಗ್ ಬಾಸ್ ಪ್ರಾರಂಭದಿಂದ ಕಮಲ್ ಹಾಸನ್ ನಿರೂಪಣೆಯ ಜವಾಬ್ದಾರಿ ವಹಿಸಿಕೊಂಡಿದ್ದರು. 4ನೇ ಆವೃತ್ತಿಯನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ.
ಆದರೀಗ ಬಂದಿರುವ ಸುದ್ದಿಯ ಪ್ರಕಾರ ಕಮಲ್ ಹಾಸನ್ ಬಿಗ್ ಬಾಸ್ ಶೋನಿಂದ ಹಿಂದೆ ಸರಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಕಮಲ್ ಹಾಸನ್ ರಾಜಕೀಯದಲ್ಲಿ ಸಕ್ರಿಯರಾದ ಕಾರಣ ಇನ್ಮುಂದೆ ಬಿಗ್ ಬಾಸ್ ನಡೆಸಿಕೊಡುವುದಿಲ್ಲವಂತೆ. ಈ ಸುದ್ದಿ ಕಮಲ್ ಹಾಸನ್ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದೆ.
ಕಮಲ್ ಹಾಸನ್ ಜಾಗಕ್ಕೆ ತಮಿಳಿನ ಖ್ಯಾತ ನಟ ಸಿಲಂಬರಸನ್ ಅಲಿಯಾಸ್ ಸಿಂಬು ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ಸುದ್ದಿ ಬಲವಾಗಿ ಕೇಳಿಬರುತ್ತಿದೆ. ಸಿಲಂಬರಸನ್ ಕೂಡ ಅದ್ಭುತವಾಗಿ ಶೋ ನಡೆಸಿಕೊಡಲಿದ್ದಾರೆ ಎನ್ನುವುದು ಆಯೋಜಕರ ನಂಬಿಕೆ. ತಮ್ಮ ನಿಲುವು, ಪ್ರತಿಕ್ರಿಯೆಯನ್ನು ತುಂಬಾ ಸ್ಪಷ್ಟವಾಗಿ ಹೇಳಲು ಸಿಲಂಬರಸನ್ ಹಿಂಜರಿಯುವುದಿಲ್ಲ. ಹಾಗಾಗಿ ಬಿಗ್ ಬಾಸ್ ನಿರೂಪಣೆಯನ್ನು ಚೆನ್ನಾಗಿ ಮಾಡುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂಬ ನಂಬಿಕೆ ಹೊಂದಿದ್ದಾರೆ.

ಒಂದು ವೇಳೆ ಈ ಸುದ್ದಿ ನಿಜವೇ ಆಗಿದ್ದರೇ ಕಿರುತೆರೆ ಪ್ರೇಕ್ಷಕರಿಗೆ, ಬಿಗ್ ಬಾಸ್ ಪ್ರಿಯರಿಗೆ ಹೊಸ ಬದಲಾವಣೆ ಆಗಿರಲಿದೆ. ಆದರೆ ಈ ಬಗ್ಗೆ ಆಯೋಜಕರು ಇನ್ನು ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ. ಕಮಲ್ ಹಾಸನ್ ಜಾಗದಲ್ಲಿ ನಿಂತು ಸಿಂಬು ಹೇಗೆ ನಡೆಸಿಕೊಡಲಿದ್ದಾರೆ ಎನ್ನುವುದು ಅಭಿಮಾನಿಗಳ ಕುತೂಹಲ.
ಇನ್ನು ಇತ್ತೀಚಿಗಷ್ಟೆ ಬಿಗ್ ಬಾಸ್ ಶೋ ಮುಗಿಸಿರುವ ಕಮಲ್ ಹಾಸನ್ ಸದ್ಯ ರಾಜಕೀಯದಲ್ಲಿ ನಿರತರಾಗಿದ್ದಾರೆ. ಶಂಕರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಇಂಡಿಯನ್ -2 ಸಿನಿಮಾದ ಚಿತ್ರೀಕರಣ ಸಹ ಬಾಕಿ ಇದೆ. ಸಿಂಬು ಕೂಡ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











