For Quick Alerts
  ALLOW NOTIFICATIONS  
  For Daily Alerts

  ಲಾಕ್ ಡೌನ್ ಹಿನ್ನಲೆ 'ಬಿಗ್ ಬಾಸ್' ರಿಯಾಲಿಟಿ ಶೋ ಮರು ಪ್ರಸಾರ

  |

  ಕಿರುತೆರೆ ಲೋಕದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್. ಭಾರತದಲ್ಲಿ ಹಿಂದಿ ಕಿರುತೆರೆಯಿಂದ ಪ್ರಾರಂಭವಾದ ಬಿಗ್ ಬಾಸ್, ಈಗ ಬೇರೆ ಬೇರೆ ಭಾಷೆಗೂ ಕಾಲಿಟ್ಟಿದ್ದು, ಭಾರಿ ಜನಪ್ರಿಯತೆ ಪಡೆದಿದೆ. ದಕ್ಷಿಣ ಭಾರತದಲ್ಲಿ ಕನ್ನಡ ಸೇರಿದಂತೆ ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿಯೂ ಪ್ರಸಿದ್ಧ ಶೋ ಆಗಿ ಹೊರಹೊಮ್ಮಿದೆ.

  ಪ್ರಥಮ್ ಗೆ ಈ ಕೆಲಸ ಕೂಡ ಬರುತ್ತಾ..? ಸಕಲ ಕಾಲ ವಲ್ಲಭ ಪ್ರಥಮ್ | Filmibeat Kannada

  ಲಾಕ್ ಡೌನ್ ಹಿನ್ನಲೆ ಸದ್ಯ ಯಾವುದೇ ರಿಯಾಲಿಟಿ ಶೋ ಮತ್ತು ಧಾರಾವಾಹಿಗಳ ಚಿತ್ರೀಕರಣ ಮಾಡುವ ಹಾಗಿಲ್ಲ. ಇನ್ನೇನು ಎರಡು ಮೂರು ದಿನಗಳಲ್ಲಿ ಚಿತ್ರೀಕರಣವಾದ ಧಾರಾವಾಹಿ ಸಹ ಮುಗಿಯಲಿದೆ. ಮುಂದೇನು? ಎನ್ನುವ ಚಿಂತೆ ಮನರಂಜನೆ ವಾಹಿನಿಗಳಿಗೆ ಕಾಡುತ್ತಿದೆ. ಹಾಗಾಗಿ ಪ್ರಸಿದ್ಧ ಶೋಗಳನ್ನು ಮರುಪ್ರಸಾರ ಮಾಡಲು ವಾಹಿನಿಗಳು ನಿರ್ಧರಿಸಿವೆ. ಮುಂದೆ ಓದಿ..

  ಮತ್ತೆ ಬರ್ತಿದೆ ತಮಿಳು ಬಿಗ್ ಬಾಸ್

  ಮತ್ತೆ ಬರ್ತಿದೆ ತಮಿಳು ಬಿಗ್ ಬಾಸ್

  ಈಗಾಗಲೆ ಪ್ರಸಾರವಾಗಿರುವ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಅನ್ನು ಮರುಪ್ರಸಾರ ಮಾಡಲು ಪ್ಲಾನ್ ಮಾಡಲಾಗಿದೆಯಂತೆ. ಅಂದ್ಹಾಗೆ ಕನ್ನಡ ಬಿಗ್ ಬಾಸ್ ಅಂತ ಅಂದ್ಕೋಬೇಡಿ. ಸಕಲಕಲಾವಲ್ಲಭ ಕಮಲ್ ಹಾಸನ್ ನಡೆಸಿಕೊಟ್ಟಿರುವ ತಮಿಳಿನ ಬಿಗ್ ಬಾಸ್ ಸೀಸನ್-3 ಮತ್ತೆ ಪ್ರಸಾರ ವಾಗುತ್ತಿದೆ.

  ಏಪ್ರಿಲ್ ರಿಂದ ತಮಿಳು ಬಿಗ್ ಬಾಸ್ ಪ್ರಸಾರ

  ಏಪ್ರಿಲ್ ರಿಂದ ತಮಿಳು ಬಿಗ್ ಬಾಸ್ ಪ್ರಸಾರ

  ಏಪ್ರಿಲ್ 1 ರಿಂದ ತಮಿಳು ಬಿಗ್ ಬಾಸ್ ಸೀಸನ್ 3 ಮರು ಪ್ರಸಾರವಾಗಲಿದೆ. ಅಂದ್ಹಾಗೆ ವಿಜಯ ಟಿವಿಯಲ್ಲಿ ಬಿಗ್ ಬಾಸ್ -3 ಮರು ಪ್ರಸಾರವಾಗಲಿದೆ ಎಂದು ಈಗಾಗಲೆ ಅನೌನ್ಸ್ ಮಾಡಲಾಗಿದೆ. ಜೊತೆಗೆ ವಿಡಿಯೋ ಪ್ರೋಮೊ ಸಹ ಮಾಡಿ ಬಿಡುಗಡೆ ಮಾಡಿದೆಯಂತೆ.

  ತಮಿಳಿನಲ್ಲಿ ಜನಪ್ರಿಯತೆ ಪಡೆದ ರಿಯಾಲಿಟಿ ಶೋ

  ತಮಿಳಿನಲ್ಲಿ ಜನಪ್ರಿಯತೆ ಪಡೆದ ರಿಯಾಲಿಟಿ ಶೋ

  ತಮಿಳಿನ 3ನೇ ಆವೃತ್ತಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ಜನಪ್ರಿಯ ಸ್ಪರ್ಧಿಗಳು ಇದ್ದರು. ವಿವಾದಗಳನ್ನು ಮಾಡಿಕೊಂಡಿದ್ದ ಸ್ಪರ್ಧಿಗಳು ಬಿಗ್ ಬಾಸ್-3ನಲ್ಲಿ ಭಾಗಿಯಾಗಿದ್ದರು. ಮಧುಮಿತ ಎನ್ನುವ ಸ್ಪರ್ಧಿ ಬಿಗ್ ಮನೆಯಲ್ಲಿಯೆ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದರು. ಆ ನಂತರ ಅವರನ್ನು ಮನೆಯಿಂದ ಹೊರಹಾಕಲಾಗಿತ್ತು.

  ವಿವಾದಗಳ ನಡುವೆ ಖ್ಯಾತಿಪಡೆದಿದ್ದ ಶೋ

  ವಿವಾದಗಳ ನಡುವೆ ಖ್ಯಾತಿಪಡೆದಿದ್ದ ಶೋ

  ಸೀಸನ್-3ನಲ್ಲಿ ಸ್ಪರ್ಥಿಯಾಗಿದ್ದ ಸರವಣನ್ ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿತ್ತು. ಯುವಕನಾಗಿದ್ದಾಗ ಬಸ್ ನಲ್ಲಿ ಮಹಿಳೆಯರಿಗೆ ಕಿರುಕುಳ ನೀಡಿದ್ದೆ ಎಂದು ಬಹಿರಂಗವಾಗಿ ಹಳಿದ್ದ ಸರವಣ್ ಅವರನ್ನು ಮನೆಯಿಂದ ಹೊರಹಾಕಲಾಗಿತ್ತು. ಸಾಕಷ್ಟು ವಿವಾದಗಳ ನಡುವೆಯೂ ತಮಿಳು ಬಿಗ್ ಬಾಸ್-3 ಭಾರಿ ಜನಪ್ರಿಯತೆ ಪಡೆದುಕೊಂಡಿತ್ತು.

  ಮುಗೆನ್ ರಾವ್ ವಿನ್ನರ್

  ಮುಗೆನ್ ರಾವ್ ವಿನ್ನರ್

  ತಮಿಳು ಬಿಗ್ ಬಾಸ್-3 ವಿನ್ನರ್ ಆಗಿ ಖ್ಯಾತ ಗಾಯಕ, ಸಂಯೋಜಕ ಮತ್ತು ನಟ ಮುಗೆನ್ ರಾವ್ ಹೊರಹೊಮ್ಮಿದ್ದರು. ರೋಚಕವಾಗಿದ್ದ ಬಿಗ್ ಬಾಸ್ ಸೀಸನ್-3ಅನ್ನು ಮತ್ತೆ ಟಿವಿಯಲ್ಲಿ ನೊಡಲು ಕಿರುತೆರೆ ಪ್ರೇಕ್ಷಕರು ಕಾತರರಾಗಿದ್ದಾರೆ. ಲಾಕ್ ಡೌನ್ ನ ಈ ಸಮಯದಲ್ಲಿ ಬೋರ್ ಆಗುತ್ತೆ, ಟೈಂ ಪಾಸ್ ಮಾಡುವುದು ಹೇಗೆ ಎನ್ನುವವರು ಮತ್ತೆ ಬಿಗ್ ಬಾಸ್ ನೋಡಿ ಎಂಜಾಯ್ ಮಾಡಬಹುದು.

  English summary
  Tamil Bigg Boss 3 Again telecasting amid Corona Lockdown. Kamal Hassan hosted by Tamil Bigg Boss.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X