ಕಿರುತೆರೆಯ ಖ್ಯಾತ ನಟಿ ವಿ.ಜೆ ಚಿತ್ರಾ ಆತ್ಮಹತ್ಯೆಗೆ ಶರಣು
ತಮಿಳು ಕಿರುತೆರೆ ಲೋಕದ ಜನಪ್ರಿಯ ನಟಿ ವಿಜೆ ಚಿತ್ರಾ ಆತ್ಮಹತ್ಯೆಗೆ ಶರಣಾಗಿದ್ದಾರೆ. 28 ವರ್ಷದ ಚಿತ್ರಾ ಚೆನ್ನೈನ ನಜರೆತ್ ಪೆಟ್ಟೈನ ಪಂಚತಾರಾ ಹೋಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ವಿಜಯ್ ಟಿವಿಯ ಜನಪ್ರಿಯ ಧಾರಾವಾಹಿ ಪಾಂಡಿಯನ್ ಸ್ಟೋರ್ಸ್ ನ ಮುಲೈ ಪಾತ್ರದ ಮೂಲಕ ಚಿತ್ರಾ ಹೆಚ್ಚು ಖ್ಯಾತಿಗಳಿಸಿದ್ದರು. ವಿಜೆ ಚಿತ್ರಾ EVP ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ಮುಗಿಸಿ ಇಂದು ಬೆಳಗ್ಗೆ 2.30ಕ್ಕೆ ತನ್ನ ಹೋಟೆಲ್ ರೂಮ್ ಗೆ ಮರಳಿದ್ದರು ಎಂದು ಹೇಳಲಾಗುತ್ತಿದೆ. ಚಿತ್ರ ಹಠಾತ್ ನಿಧನದ ಸುದ್ದಿ ಅಭಿಮಾನಿಗಳಿಗೆ ಮತ್ತು ಸ್ನೇಹಿತರಿಗೆ ಆಘಾತತಂದಿದೆ. ಮುಂದೆ ಓದಿ..

ಹೇಮಂತ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಚಿತ್ರಾ
ಚಿತ್ರಾಗೆ ಆಗಲೇ ಮದುವೆ ಫಿಕ್ಸ್ ಆಗಿದ್ದು, ಭಾವಿ ಪತಿ ಉದ್ಯಮಿ ಹೇಮಂತ್ ಜೊತೆ ಹೋಟೆಲ್ ನಲ್ಲಿ ವಾಸಿಸುತ್ತಿದ್ದರು ಎಂದು ವರದಿಯಾಗಿದೆ. ಕಲವೇ ತಿಂಗಳ ಹಿಂದೆಯಷ್ಟೆ ಚಿತ್ರಾ ಮತ್ತು ಹೇಮಂತ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಿಶ್ಚಿತಾರ್ಥದ ಫೋಟೋಗಳು ಸಹ ವೈರಲ್ ಆಗಿತ್ತು.

ಭಾವಿ ಪತಿ ಹೇಮಂತ್ ಪ್ರತಿಕ್ರಿಯೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾವಿ ಪತಿ ಹೇಮಂತ್, 'ಚಿತ್ರಾ ಸ್ನಾನ ಮುಗಿಸಿ ವಾಪಸ್ ಆಗುವುದಾಗಿ ಹೇಳಿ ಹೋದಳು. ತುಂಬಾ ಸಮಯವಾದರೂ ಬರಲಿಲ್ಲ, ಬಳಿಕ ಬಾಗಿಲು ಬಡಿದ ನಂತರವೂ ಬಾಗಿಲು ತೆಗೆಯಲಿಲ್ಲ. ಬಳಿಕ ಹೋಟೆಲ್ ಉದ್ಯೋಗಿಗೆ ಕರೆ ಮಾಡಿ ನಕಲಿ ಕೀ ಬಳಸಿ ಬಾಗಿಲು ತೆರೆದರು. ಚಿತ್ರಾ ತನ್ನ ಸೀರೆಯೊಂದಿಗೆ ಸೀಲಿಂಗ್ ಫ್ಯಾನ್ ನಲ್ಲಿ ನೇತಾಡುತ್ತಿದ್ದಳು' ಎಂದಿದ್ದಾರೆ. ನಜರೆತ್ ಪೆಟ್ಟೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಖಿನ್ನತೆಯಿಂದ ಬಳಲುತ್ತಿದ್ದರಾ ಚಿತ್ರಾ ?
ಮೂಲಗಳ ಪ್ರಕಾರ ಚಿತ್ರಾ ಖಿನ್ನತೆಯಿಂದ ಬಳಲುತ್ತಿದ್ದರಂತೆ. ಆತ್ಮಹತ್ಯೆಗೆ ಇದೇ ಕಾರಣ ಎಂದು ಹೇಳಲಾಗುತ್ತಿದೆ. ಚಿತ್ರಾ ಹಠಾತ್ ನಿಧನ ಅಭಿಮಾನಿಗಳು, ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ಆಘಾತತಂದಿದೆ. ಅನೇಕರು ಸಾಮಾಜಿಕ ಜಾಲತಾಣ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.

ನಟಿ ಮತ್ತು ನಿರೂಪಕಿಯಾಗಿ ಖ್ಯಾತಿಗಳಿಸಿರುವ ಚಿತ್ರಾ
ಚಿತ್ರಾ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸುವ ಜೊತೆೆಗೆ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ. ಅಧ್ಬುತ ನಟಿ ಮತ್ತು ಉತ್ತಮ ಡ್ಯಾನ್ಸರ್ ಆಗಿದ್ದ ಚಿತ್ರಾ ಅವರನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಕಾಮಂಟ್ಸ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದ ಚಿತ್ರಾ ಸುಂದರ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು.


Click it and Unblock the Notifications











