For Quick Alerts
  ALLOW NOTIFICATIONS  
  For Daily Alerts

  ಕೌಟುಂಬಿಕ ಕಲಹ: ಖ್ಯಾತ ಕಿರುತೆರೆ ನಟ ಆತ್ಮಹತ್ಯೆ

  |

  ಇತ್ತಿಚಿಗೆ ಕೌಟುಂಬಿಕ ಕಲಹ ಹಾಗೂ ಖಿನ್ನತೆಯಿಂದ ಬಳಲಿ ಸಾವಿಗೆ ಶರಣಾಗುವ ನಟ-ನಟಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಕೌಟುಂಬಿಕ ಕಲಹಕ್ಕೆ ಬೇಸತ್ತು ತಮಿಳಿನ ಕಿರುತೆರೆಯ ಜನಪ್ರಿಯ ಕಲಾವಿದ ಲೋಕೇಶ್‌ ರಾಜೇಂದ್ರನ್‌(34) ಮಂಗಳವಾರ(ಅಕ್ಟೋಬರ್‌ 4) ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಾಲ ಕಲಾವಿದನಾಗಿ ಕಿರುತೆರೆಗೆ ಕಾಲಿಟ್ಟ ಲೋಕೇಶ್‌ ರಾಜೇಂದ್ರನ್‌ ಬದುಕು ದುರಂತವಾಗಿ ಅಂತ್ಯಕಂಡಿದೆ.

  1996ರ ಸಮಯದಲ್ಲಿ ಪ್ರಸಾರವಾಗುತ್ತಿದ್ದ 'ಮರ್ಮದೇಸಮ್​' ಧಾರಾವಾಹಿಯಲ್ಲಿ ಬಾಲ ನಟನಾಗಿ ಖ್ಯಾತಿ ಪಡೆದಿದ್ದ ಲೋಕೇಶ್‌ ರಾಜೇಂದ್ರನ್‌ ಅಗಲಿಕೆ ತಮಿಳು ಕಿರುತೆರೆಗೆ ಆಘಾತ ಉಂಟುಮಾಡಿದೆ. ಮರ್ಮದೇಸಮ್ ಧಾರಾವಾಹಿಯ ಐದು ಭಾಗಗಳಲ್ಲಿ 'ವಿಡತು ಕರುಪ್ಪು' ನ ರಾಸು ಪಾತ್ರದ ಮೂಲಕ ಜನರ ಮನಸ್ಸು ತಲುಪಿದ್ದರು. ಬಾಲ್ಯದಿಂದಲೂ ನಟನೆಯ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಲೋಕೇಶ್‌ ರಾಜೇಂದ್ರನ್‌ ತಮಿಳಿನ 150ಕ್ಕೂ ಅಧಿಕ ಧಾರಾವಾಹಿಗಳಲ್ಲಿ ಹಾಗೂ ಸುಮಾರು 15 ಸಿನಿಮಾಗಳಲ್ಲಿ ನಟಿಸಿ ಜನ ಮನ್ನಣೆ ಗಳಿಸಿದ್ದಾರೆ.

  ವೇದಿಕೆ ಮೇಲೆಯೇ ಕುಸಿದು ಬಿದ್ದು ಗಾಯಕ ನಿಧನ!ವೇದಿಕೆ ಮೇಲೆಯೇ ಕುಸಿದು ಬಿದ್ದು ಗಾಯಕ ನಿಧನ!

  ಇತ್ತೀಚಿಗಷ್ಟೇ ಲೋಕೇಶ್​ ರಾಜೇಂದ್ರನ್​ ನಟಿಸಿದ್ದ 'ವಿದಾತು ಕರುಪ್ಪು' ಧಾರಾವಾಹಿ​ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಧಾರಾವಾಹಿ ತಂಡ ದೊಡ್ಡ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಲೋಕೇಶ್​ ರಾಜೇಂದ್ರನ್ ಕೂಡ ಭಾಗಿಯಾಗಿದ್ದರು.

  ಲೋಕೇಶ್​ ರಾಜೇಂದ್ರನ್ ತೆರೆಯ ಹಿಂದಿನ ನಿಜ ಜೀವನ ದುಸ್ತರವಾಗಿತ್ತು ಎನ್ನಲಾಗಿದೆ. ಕೆಲವು ಸಮಯದಿಂದ ಲೋಕೇಶ್​ ರಾಜೇಂದ್ರನ್ ಹಾಗೂ ಅವರ ಪತ್ನಿ ನಡುವೆ ಮನಸ್ತಾಪ ಉಂಟಾಗಿದ್ದು, ಪತ್ನಿ ವಿಚ್ಚೇದನ ಪಡೆಯಲು ಮುಂದಾಗಿದ್ದರು ಎನ್ನಲಾಗಿದೆ. ಈ ಘಟನೆಯಿಂದ ಮಾನಸಿಕ ಖಿನ್ನತೆಗೊಳಗಾಗಿದ್ದ ನಟ ಸಾವಿಗೆ ಶರಣಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

  ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಲೋಕೇಶ್ ರಾಜೇಂದ್ರನ್ ವಿಪರೀತ ಕುಡಿತದ ಚಟಕ್ಕೆ ಒಳಗಾಗಿದ್ದರು. ಚೈನ್ನೈನ ಬಸ್ ನಿಲ್ದಾಣಗಳಲ್ಲಿ ಆಗಾಗ ಮಲಗುತ್ತಿದ್ದು, ಸೋಮವಾರ ಕೂಡ ಹಾಗೆ ಮಲಗಿದ್ದರು. ಅವರು ಅಸ್ವಸ್ಥಗೊಂಡಿರುವುದನ್ನು ಗಮನಿಸಿದ ದಾರಿಹೋಕರೊಬ್ಬರು, ಕೂಡಲೇ ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾರೆ. ಜೊತೆಗೆ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ತಕ್ಷಣವೇ ಅವರನ್ನು ಸರ್ಕಾರಿ ಕಿಲ್ಪಾಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ರಾತ್ರಿ ಲೋಕೇಶ್ ರಾಜೇಂದ್ರನ್ ಕೊನೆಯುಸಿರೆಳೆದಿದ್ದಾರೆ.

  ಮಗನ ಸಾವಿನ ಬಗ್ಗೆ ಲೋಕೇಶ್ ರಾಜೇಂದ್ರನ್ ತಂದೆ ಮಾತನಾಡಿದ್ದು, ಲೋಕೇಶ್​ ಮತ್ತು ಅವನ ಹೆಂಡತಿ ನಡುವೆ ಮನಸ್ತಾಪ ಉಂಟಾಗಿತ್ತು. ಈ ವಿಚಾರ ನನಗೆ ಒಂದು ತಿಂಗಳ ಹಿಂದೆ ಗೊತ್ತಾಗಿದೆ. ನಾಲ್ಕು ದಿನಗಳ ಹಿಂದೆ ಆತನ ಹೆಂಡತಿಯಿಂದ ಡಿವೋರ್ಸ್​ಗಾಗಿ ಲೀಗಲ್​ ನೋಟಿಸ್ ನೀಡಿದ್ದಾರೆ. ಕಳೆದ ಶುಕ್ರವಾರ ಆತನನ್ನು ನಾನು ಕೊನೆಯ ಬಾರಿ ನೋಡಿದ್ದೆ. ತುಂಬಾ ಖಿನ್ನತೆಗೆ ಒಳಗಾಗಿದ್ದ. ನಾನು ಎಡಿಟರ್‌ ಆಗುತ್ತೇನೆ ಸ್ವಲ್ಪ ಹಣ ಬೇಕು ಅಂತ ಕೇಳಿದ್ದ, ಮಗನಿಗಾಗಿ ನಾನು ಕೊಟ್ಟಿದ್ದೆ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.

  ಇನ್ನು ಇತ್ತೀಚಿಗೆ ತಮಿಳು ಕಿರುತೆರೆಯ ನಟಿ ದೀಪಾ ಪ್ರೇಮವೈಫಲ್ಯದಿಂದ ಮನನೊಂದು ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಸಾವಿಗೆ ಶರಣಾಗಿದ್ದರು. ಕಲಾವಿದರ ಬದುಕು ಈ ರೀತಿ ಅಂತ್ಯಗೊಳ್ಳುತ್ತಿರುವುದು ದುರಂತ ಎಂದು ತಮಿಳು ಕಿರುತೆರೆ ಆತಂಕ ವ್ಯಕ್ತಪಡಿಸಿದೆ.

  ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777

  English summary
  Tamil television actor Lokesh Rajendran (34), who is best known for his work as a child artist in popular tele serial ‘Marmadesam’, died by suicide.
  Thursday, October 6, 2022, 11:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X