ತನ್ನ ಮನೆಯನ್ನೇ ದೋಚಿ ಪರಾರಿಯಾದ ನಟಿ: ಪೊಲೀಸರ ಹುಡುಕಾಟ

ತಮಿಳು ಕಿರುತೆರೆಯ ಖ್ಯಾತ ನಟಿ ಸುಚಿತ್ರಾ ವಿರುದ್ಧ ಕಳ್ಳತನದ ಆರೋಪ ಕೇಳಿ ಬಂದಿದೆ. ನಟಿ ಸುಚಿತ್ರಾ ಪತಿಯ ಜೊತೆ ಸೇರಿ ಗಂಡನ ಮನೆಯನ್ನೇ ದೋಚಿ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಕೊರೊನಾ ವೈರಸ್ ಆರ್ಥಿಕ ಸಂಕಷ್ಟ ಮತ್ತು ಲಾಕ್ ಡೌನ್ ನಡುವೆಯೂ ಬಾಳ ಸಂಗಾತಿಯನ್ನು ಹುಡುಕಿಕೊಂಡಿದ್ದ ಸುಚಿತ್ರಾ, ಆತನ ಜೊತೆಯೇ ಸೇರಿ ಕಳ್ಳತನ ಮಾಡಿದ್ದಾರೆ.

ಲಾಕ್ ಡೌನ್ ಸಮಯದಲ್ಲಿ ಮಣಿಕಂದನ್ ಎಂಬುವವನನ್ನು ಸ್ನೇಹ ಮಾಡಿ ಬಳಿಕ ಆತನನ್ನೆ ಮದುವೆಯಾದ ಸುಚಿತ್ರಾಗೆ ಹಣದ ಸಮಸ್ಯೆ ಎದುರಾಗಿದೆ. ಬಳಿಕ ಇಬ್ಬರು ಮಣಿಕಂದ್ ಮನೆಗೆ ತೆರಳಿದ್ದಾರೆ. ಮೊದಲು ಇಬ್ಬರ ಮದುವೆಯನ್ನು ಮನೆಯಲ್ಲಿ ಒಪ್ಪಿಕೊಂಡಿರಲಿಲ್ಲ. ಬಳಿಕ ಇಬ್ಬರನ್ನು ಮನೆಗೆ ಸೇರಿಸಿದ್ದಾರೆ. ಮುಂದೆ ಓದಿ...

ತನ್ನ ಮನೆಗೆ ಕನ್ನ ಹಾಕಿದ ಜೋಡಿ

ತನ್ನ ಮನೆಗೆ ಕನ್ನ ಹಾಕಿದ ಜೋಡಿ

ಮನೆ ಸೇರಿದರೂ ಇಬ್ಬರಿಗೆ ಹಣದ ಸಮಸ್ಯೆ ದೂರ ಆಗಿರಲಿಲ್ಲ. ಹಾಗಾಗಿ ಈ ಜೋಡಿ ಮಾಸ್ಟರ್ ಪ್ಲಾನ್ ಮಾಡಿದೆ. ಅಪ್ಪ- ಅಮ್ಮನ ಬಳಿ ಇರುವ ಹಣ, ಒಡವೆಯನ್ನು ಕೇಳುವ ಸ್ಥಿತಿಯಲ್ಲಿಲ್ಲ ಎಂದು ಅರಿತ ಇವರು ಕದಿಯುವ ಪ್ಲಾನ್ ಮಾಡಿದ್ದಾರೆ. ಮನೆಯಲ್ಲಿರುವ ಹಣ, ಒಡವೆಯನ್ನು ದೋಚುವಂತೆ ಪತಿಗೆ ಹೇಳಿದ್ದಾರೆ. ಸುಚಿತ್ರಾಗಳ ಯೋಜನೆಯಂತೆ ತನ್ನ ಮನೆಗೆ ಕನ್ನ ಹಾಕಿದ್ದಾನೆ ಮಣಿಕಂದನ್. ಆದರೆ ಸುಚಿತ್ರಾ ಚಿತ್ರೀಕರಣವಿದೆ ಎಂದು ಹೇಳಿ ಹೊರಟು ಹೋಗಿದ್ದಾರೆ.

ನಾಪತ್ತೆಯಾಗಿರುವ ಸುಚಿತ್ರಾ

ನಾಪತ್ತೆಯಾಗಿರುವ ಸುಚಿತ್ರಾ

ಮನೆಯಲ್ಲಿ ಕಳ್ಳತನವಾದ ವಿಚಾರ ಗೊತ್ತಾಗಿ ಮಣಿಕಂದನ್ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಮಾಡಿದ ಪೊಲೀಸರಿಗೆ ಮನೆಯವರೇ ಕದ್ದಿರ ಬಹುದು ಎನ್ನುವ ಅನುಮಾನ ಮೂಡಿದೆ. ತಕ್ಷಣ ಮಣಿಕಂದನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಬಳಿ ಮಣಿಕಂದನ್ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆದರೆ ಸುಚಿತ್ರಾ ನಾಪತ್ತೆಯಾಗಿದ್ದಾಳೆ.

ಕಿರುತೆರೆಯಲ್ಲಿ ಹೆಸರು ಮಾಡಿರುವ ನಟಿ

ಕಿರುತೆರೆಯಲ್ಲಿ ಹೆಸರು ಮಾಡಿರುವ ನಟಿ

ಸುಚಿತ್ರಾ ತಮಿಳು ಧಾರಾವಾಹಿಗಳ ಮೂಲಕ ಜನಪ್ರಿಯವಾದ ನಟಿ. ದೈವಮಗಳ್ ಹೆಸರಿನ ಸನ್ ಟಿವಿ ಧಾರಾವಾಹಿ ಮೂಲಕ ತಮಿಳು ಜನ ಮನೆ ಮನೆ ತಲುಪಿದ್ದಾಳೆ. ಆದರೆ, ಲಾಕ್ ಡೊನ್ ನಿಂದಾಗಿ ಧಾರಾವಾಹಿ ಚಿತ್ರೀಕರಣ ನಿಂತಿತ್ತು. ಈ ಸಂದರ್ಭದಲ್ಲಿ ಸಿಕ್ಕವನೇ ಡ್ರೈವರ್ ಮಣಿಕಂದನ್. ಮಣಿಕಂದನ್ ಜೊತೆ ಕಾರಿನಲ್ಲಿ ಸುತ್ತಾಡುತ್ತಾ ಇಬ್ಬರು ಆತ್ಮೀಯರಾಗಿದ್ದರು.

Recommended Video

ನನ್ನ ನಂಬಿ ಸರ್ಕಾರ ದೊಡ್ಡ ಜವಾಬ್ದಾರಿ ಕೊಟ್ಟಿದೆ | Shruthi Krishna | Filmibeat Kannada
ಚಾಲಕನಾಗಿ ಕೆಲಸ ಮಾಡುತ್ತಿದ್ದ ಮಣಿಕಂದನ್

ಚಾಲಕನಾಗಿ ಕೆಲಸ ಮಾಡುತ್ತಿದ್ದ ಮಣಿಕಂದನ್

ಚಿತ್ರರಂಗ ಸೇಸೇರುವ ಉದ್ದೇಶದಿಂದ ಚೆನ್ನೈಗೆ ಆಗಮಿಸಿದ್ದ ಮಣಿಕಂದನ್ ಅವಕಾಶ ಸಿಗದ ಕಾರಣ, ಧಾರಾವಾಹಿ ನಟಿಯರಿಗೆ ಚಾಲಕನಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದ. ಸುಚಿತ್ರಾ ಜೊತೆಗಿನ ಕೆಲ ತಿಂಗಳ ಸ್ನೇಹ ಗಾಢವಾಗುತ್ತಿದ್ದಂತೆ ಪ್ರೇಮಿಗಳಾಗಿ ದಂಪತಿಗಳಾದರು ಕೊನೆಗೆ ಪಾರ್ಟ್ನರ್ ಇನ್ ಕ್ರೈಂ ಎನಿಸಿಕೊಂಡಿದ್ದಾರೆ. ಮನೆ ಕಳ್ಳತನದ ಬಗ್ಗೆ ತಿಳಿಯಲು ಯೂಟ್ಯೂಬ್ ನಲ್ಲಿ ವಿಡಿಯೋಗಳನ್ನು ನೋಡಿದ್ದರು ಎಂದು ತಿಳಿದು ಬಂದಿದೆ.

More from Filmibeat

English summary
Tamil TV Artist Suchitra robs her own house and goes Absconding.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X