ಗಂಡಸರ ಜೊತೆ ಹಾಸಿಗೆ ಹಂಚಿಕೊಳ್ಳುವಷ್ಟು ನಾನಿನ್ನೂ ಬರಗೆಟ್ಟಿಲ್ಲ; ಬಿಗ್ ಬಾಸ್‌ನ ₹1.65ಕೋಟಿ ಆಫರ್‌ಗೆ ಖ್ಯಾತ ನಟಿ ಕೆಂಡ
ಇನ್ನೇನು ಕೆಲವೇ ದಿನ ಕನ್ನಡದಲ್ಲಿ ''ಬಿಗ್ ಬಾಸ್'' ಕಾರ್ಯಕ್ರಮ ಆರಂಭ ಆಗಲಿದೆ. ಕಳೆದ ಹನ್ನೊಂದು ವರ್ಷದಿಂದ ಕಾಯಾ ವಾಚಾ ಮನಸಾದಿಂದ ಕಾರ್ಯಕ್ರಮ ಮುನ್ನಡೆಸಿಕೊಂಡು ಬಂದ ಸುದೀಪ್ ಈ ಬಾರಿ ಕೂಡ ಮನೆಯ ಜವಾಬ್ಧಾರಿ ವಹಿಸಿಕೊಂಡಿದ್ದಾರೆ. ಇನ್ನೂ.. ಪ್ರತಿ ವರ್ಷ ''ಬಿಗ್ ಬಾಸ್'' ಅಂದರೆ ಎಲ್ಲರ ಕಣ್ಣು ಅರಳುತ್ತೆ .. ಕಿವಿ ನಿಮಿರುತ್ತೆ.
ಆ ಭಾಷೆ.. ಈ ಭಾಷೆ ಅಂತಲ್ಲ. ಎಲ್ಲಾ ಭಾಷೆಯಲ್ಲಿ ಈ ವರ್ಷ ತಮ್ಮ ಇಷ್ಟದ ತಾರೆಯರು ''ಬಿಗ್ ಬಾಸ್'' ಮನೆಗೆ ಬರಬಹುದಾ ಎನ್ನುವ ಪ್ರಶ್ನೆ ಕಾಡಲು ಶುರುವಾಗುತ್ತೆ. ಇದಕ್ಕೆ ಪೂರಕವಾಗಿ ''ಬಿಗ್ ಬಾಸ್'' ಆರಂಭವಾಗುವ ಒಂದೆರಡು ತಿಂಗಳ ಮುಂಚೆಯೇ ಕೆಲವರ ಹೆಸರುಗಳು ಚಿತ್ರಸಂತೆಯಲ್ಲಿ ಕೇಳಿ ಬರಲು ಶುರುವಾಗುತ್ತವೆ.

ಇನ್ನು ''ಬಿಗ್ ಬಾಸ್'' ಕೇವಲ ಕಾರ್ಯಕ್ರಮ ಅಲ್ಲ. ಆಯೋಜಕರ ಪಾಲಿಗೆ ಮತ್ತು ವಾಹಿನಿಯ ಪಾಲಿಗೆ ಅದು ನಂಬರ್ ಗೇಮ್. ಒಂದೊಂದು ಎಪಿಸೋಡ್ ಜೊತೆ ಕೋಟ್ಯಂತರ ರೂಪಾಯಿಯ ವ್ಯವಹಾರ ನಡೆಯುತ್ತೆ.
ಹೀಗಾಗಿಯೇ ''ಬಿಗ್ ಬಾಸ್'' ಆಯೋಜಕರು ಕೂಡ ಚಿತ್ರ-ವಿಚಿತ್ರ ಆಸಾಮಿಗಳನ್ನೇ ಮೊದಲು ಟಾರ್ಗೆಟ್ ಮಾಡುತ್ತಾರೆ. ವಿವಾದಾತ್ಮಕ ವ್ಯಕ್ತಿಗಳನ್ನು ಮನೆಯೊಳಗೆ ಕರೆತರಲು ಕಸರತ್ತು ಮಾಡುತ್ತಾರೆ. ಮತ್ತೂ ಕೆಲ
ಒಮ್ಮೆ ಸ್ಫರ್ಧಿಗಳಿಗೆ ಹಣದಾಸೆಯನ್ನು ಕೂಡ ತೋರಿಸುತ್ತಾರೆ. ಈ ಕಾರಣಕ್ಕೆ ''ಬಿಗ್ ಬಾಸ್'' ಕಡೆಯಿಂದ ಕರೆ ಬಂದಿದ್ದೇ ತಡ ಹಲವು ತಾರೆಯರು ತಮ್ಮ ಕೆಲಸವನ್ನೆಲ್ಲಾ ಮರೆತು ''ಬಿಗ್ ಬಾಸ್'' ಅಡ್ರೆಸ್ ಹುಡುಕಿಕೊಂಡು ಹೋಗುತ್ತಾರೆ. ಎಷ್ಟೇ ಬ್ಯುಸಿಯಾಗಿದ್ದರು ಕೂಡ ಹಣದ ಮೇಲಿನ ವ್ಯಾಮೋಹದಿಂದ ರಂಪ-ರಾಮಾಯಣ-ಕಿರಿಕ್‌ನ ಭಾಗವಾಗಲು ಮನೆಗೆ ಬರುತ್ತಾರೆ.
ಆದರೆ ಎಲ್ಲರೂ ಒಂದೇ ಸಾಲಿಗೆ ಸೇರಿದವರಾಗುವುದಿಲ್ಲ. ಅಲ್ಲೊಬ್ಬರು.. ಇಲ್ಲೊಬ್ಬರು.. ಹಣದ ಮುಖ ನೋಡದೇ ಬಂದ ಆಫರ್‌ನ ಎಡಗಾಲಿನಲ್ಲಿ ಒದೆಯುತ್ತಾರೆ. ಹಣಕ್ಕಿಂತ ಮನೆಯ ವಾತಾವರಣ ಹೇಗಿದೆ ಎನ್ನುವುದರ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಉದಾಹರಣೆಗೆ ತನುಶ್ರೀ ದತ್ತಾ .
ಹೌದು, ತನುಶ್ರೀ ದತ್ತಾ..'ಆಶಿಕ್ ಬನಾಯಾ ಆಪ್ನೇ' ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಬಂದ ಚೆಲುವೆ. ಆ ನಂತರ ಚಿತ್ರಕ್ಕಿಂತ ವಿವಾದಗಳಿಂದನೇ ಸುದ್ದಿಯಾದ ತನುಶ್ರೀ 2018ರ ಆಚೀಚೆ ನಾನಾ ಪಾಟೇಕರ್ ಮೇಲೆ ಮೀಟೂ ಆರೋಪ ಮಾಡಿದ್ದರು. ಹಾಡೊಂದರ ಚಿತ್ರೀಕರಣ ಸಮಯದಲ್ಲಿ 'ನಾನಾ ಪಾಟೇಕರ್' ತನ್ನ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದರು ಎಂದು ಹೇಳಿದ್ದರು. ತಮ್ಮ ಈ ಹೇಳಿಕೆಯಿಂದ ತನುಶ್ರೀ ದತ್ತಾ ಆ ಕಾಲದಲ್ಲಿ ದೊಡ್ಡ ಸಂಚಲನವೇ ಸೃಷ್ಟಿ ಮಾಡಿದ್ದರು.

ಇಂಥಾ ತನುಶ್ರೀ ದತ್ತಾ ಅವರನ್ನು ಈ ಬಾರಿ ''ಬಿಗ್ ಬಾಸ್'' ಮನೆಯಲ್ಲಿ ನೋಡಲು ಹಲವರು ಬಯಸಿದ್ದರು. ಆದರೆ ಹಲವರ ಆಸೆಯ ಮೇಲೆ ತನುಶ್ರೀ ತಣ್ಣೀರೆರಚಿದರು. ''ಬಿಗ್ ಬಾಸ್'' ಮನೆಗೆ ತನುಶ್ರೀ ಹೋಗಲಿಲ್ಲ. ಆಯೋಜಕರು ₹1.65ಕೋಟಿ ಹಣದ ಆಮಿಷವನ್ನೊಡ್ಡಿದರು ಕೂಡ ತನುಶ್ರೀ ನಿರ್ಧಾರ ಬದಲಾಗಲಿಲ್ಲ. ಖುದ್ದು ತನುಶ್ರೀಯೇ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಕಂಡ ಕಂಡ ಗಂಡಸರ ಜೊತೆ ಹಾಸಿಗೆ ಹಂಚಿಕೊಳ್ಳಲು ನಾನಿನ್ನೂ ಬರಗೆಟ್ಟಿಲ್ಲ ಎಂದು ಹೇಳಿದ್ದಾರೆ.
''ಬಾಲಿವುಡ್ ತಿಕಾನಾ''ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ತನುಶ್ರೀ ದತ್ತಾ, ಪ್ರತಿ ವರ್ಷ ''ಬಿಗ್ ಬಾಸ್'' ಕಡೆಯಿಂದ ನನಗೆ ಕರೆ ಬಂದೇ ಬರುತ್ತೆ ಎಂದು ಹೇಳಿದ್ದಾರೆ. ಈ ವರ್ಷ ಕೂಡ ಅಲ್ಲಿಂದ ಕರೆ ಬಂದಿತ್ತು. ಬಂದು ಒಮ್ಮೆ ಭೇಟಿ ಮಾಡಿಕೊಂಡು ಹೋಗಿ ಎಂದು ನನಗೆ ಹೇಳಿದ್ದರು. ಇಷ್ಟೇ ಅಲ್ಲ ₹1.65ಕೋಟಿಯ ಆಫರ್ ಕೂಡ ನೀಡಿದ್ದರು ಎಂದು ಹೇಳಿರುವ ತನುಶ್ರೀ ದತ್ತಾ ''ಬಿಗ್ ಬಾಸ್''ಗೆ ನಾನು ಈಗಲ್ಲ ಯಾವತ್ತು ಹೋಗುವುದಿಲ್ಲ ಎಂದು ಹೇಳಿದ್ಧಾರೆ.
ಮುಂದುವರೆದು ನಾನು ನನ್ನ ಕುಟುಂಬದವರ ಜೊತೆಯಲ್ಲಿಯೇ ವಾಸ ಮಾಡುವುದಿಲ್ಲ. ಅಂತಹದ್ದರಲ್ಲಿ ಗುರುತು-ಪರಿಚಯ ಇರದ ವ್ಯಕ್ತಿಗಳ ಜೊತೆ ಆ ಮನೆಯಲ್ಲಿ ನಾನು ಹೇಗೆ ಇರಲು ಸಾಧ್ಯ ಎಂದು ಪ್ರಶ್ನಿಸಿರುವ ತನುಶ್ರೀ ದತ್ತಾ ಅಲ್ಲಿ ಗಂಡಸರು ..ಮಹಿಳೆಯರು.. ಒಂದೇ ಹಾಲ್‌ನಲ್ಲಿ ಇರುತ್ತಾರೆ. ಜಗಳ ಮಾಡ್ತಾರೆ. ಕಣ್ಣೀರು ಹಾಕ್ತಾರೆ ಎಂದು ಹೇಳಿದ್ದಾರೆ.
ಎಲ್ಲಕ್ಕಿಂತ ಹೆಚ್ಚಾಗಿ ಆ ಮನೆಯಲ್ಲಿ ಹುಡುಗ-ಹುಡುಗಿ ಹಾಸಿಗೆಯನ್ನು ಕೂಡ ಹಂಚಿಕೊಳ್ಳುತ್ತಾರೆ. ರಿಯಾಲಿಟಿ ಶೋಗಾಗಿ ಅವರ ಟಿಆರ್‌ಪಿ ಸರಕಿಗಾಗಿ ನಾನು ಒಂದೇ ಹಾಸಿಗೆಯಲ್ಲಿ ಪರ ಪುರುಷನ ಜೊತೆ ಮಲಗಬೇಕಾ..? ನಿಮ್ಮ ಕಣ್ಣಿಗೆ ನಾನು ಆ ರೀತಿಯ ಹೆಣ್ಣಿನಂತೆ ಕಾಣುತ್ತಿದ್ದೀನಾ..? ಎಂದು ಕಿಡಿ ಕಾರಿರುವ ತನುಶ್ರೀ ದತ್ತಾ, ನಾನು ಅಷ್ಟೊಂದು ಚೀಪ್ ಅಲ್ಲ ಅಷ್ಟೊಂದು ಬರಗೆಟ್ಟು ಕುಂತಿಲ್ಲ ಎಂದು ಕೂಡ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಸದ್ಯ ತನುಶ್ರೀ ಆಡಿದ ಮಾತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ನಾಂದಿ ಹಾಡಿದೆ.


Click it and Unblock the Notifications











