ಬಿಗ್ ಬಾಸ್ ಟ್ರೋಫಿ ಮುಡಿಗೇರಿಸಿಕೊಂಡ ಲಕ್ಷ್ಮೀ ನಿವಾಸ ನಟಿ ; ಗೆದ್ದ ಹಣ ಎಷ್ಟು ?

''ಬಿಗ್ ಬಾಸ್'' ಕೇವಲ ಕಾರ್ಯಕ್ರಮ ನಡೆಸಿಕೊಡುವ ಸ್ಟಾರ್ ನಿರೂಪಕರಿಗೆ ಮಾತ್ರ ಚಿನ್ನದ ಮೊಟ್ಟೆ ಇಡುವ ಕೋಳಿ ಅಲ್ಲ. ಬದಲಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಫರ್ಧಿಗಳಿಗೆ ಕೂಡ ಇಲ್ಲಿ ಭಾರೀ ಹಣವನ್ನು ನೀಡಲಾಗುತ್ತೆ. ಕೆಲವರು ಇಲ್ಲಿ ವಾರಕ್ಕೆ ಲಕ್ಷ ಎಣಿಸಿದರೆ ಇನ್ನೂ ಕೆಲವರ ಸಂಭಾವನೆ ವಾರದ ಲೆಕ್ಕ ತಪ್ಪಿ ಹೋಗುವಷ್ಟಿರುತ್ತೆ. ''ಬಿಗ್ ಬಾಸ್‌''ನಲ್ಲಿ ಹೇಗಾದರೂ ಮಾಡಿ ಭಾಗವಹಿಸಬೇಕು ಎಂದು ಹಲವರು ಕನಸು ಕಾಣಲು ಇದು ಕೂಡ ಪ್ರಮುಖ ಕಾರಣ.

ಇಂಥಾ ''ಬಿಗ್ ಬಾಸ್'' ಕಾರ್ಯಕ್ರಮ ಕನ್ನಡದಲ್ಲಿ ಈ ವರ್ಷದ ಆರಂಭದಲ್ಲಿ ಮುಕ್ತಾಯವಾಗಿತ್ತು. ಇನ್ನು ಹಿಂದಿ, ಮಲಯಾಳಂ, ತಮಿಳು ಮತ್ತು ತೆಲುಗಿನಲ್ಲಿ ಕಳೆದ ವರ್ಷಾಂತ್ಯಕ್ಕೆ ''ಬಿಗ್ ಬಾಸ್'' ಮನೆಗೆ ಬಾಗಿಲು ಹಾಕಲಾಗಿತ್ತು.

Tanvi Kolte Wins Bigg Boss Marathi 6 Bags 15 Lakh Diamonds amp amp Luxury Rides

ಆದರೆ.. ಮರಾಠಿಯಲ್ಲಿ ಮಾತ್ರ, ಬೇರೆ ಎಲ್ಲಾ ಭಾಷೆಯಲ್ಲಿ ಕಾರ್ಯಕ್ರಮ ಮುಕ್ತಾಯವಾದ ನಂತರ ''ಬಿಗ್ ಬಾಸ್‌''ನ ಬಾಗಿಲು ತೆರೆಯಲಾಗಿತ್ತು. ಜನವರಿ ಹನ್ನೊಂದರಂದು ಕಾರ್ಯಕ್ರಮ ಶುರುವಾಗಿತ್ತು.

ಈಗ 98 ದಿನಗಳ ನಂತರ ಈ ಕಾರ್ಯಕ್ರಮ ಅಂತ್ಯವಾಗಿದ್ದು ತನ್ವಿ ಕೋಲ್ತೆ ಈ ಬಾರಿಯ ''ಬಿಗ್ ಬಾಸ್'' ವಿಜೇತೆಯಾಗಿ ಹೊರ ಹೊಮ್ಮಿದ್ದಾರೆ.

ಹೌದು, ತನ್ವಿ ಕೋಲ್ತೆ.. ಮರಾಠಿ ಕಿರುತೆರೆಯ ಚೆಲುವೆ. ''ಘಡಗೆ ಆ್ಯಂಡ್ ಸನ್ಸ್''.. ''ಮೋಲ್ಕರಿನ್ ಬಾಯಿ''.. ಧಾರಾವಾಹಿಗಳ ಮೂಲಕ ಮನೆ ಮಾತಾಗಿರುವ ತನ್ವಿ, ''ಲಕ್ಷ್ಮಿ ನಿವಾಸ್'' ಧಾರಾವಾಹಿಯಲ್ಲಿ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತಿದ್ದರು.

ಈ ''ಲಕ್ಷ್ಮಿ ನಿವಾಸ್'' ಕನ್ನಡದ ''ಲಕ್ಷ್ಮಿ ನಿವಾಸ'' ಧಾರಾವಾಹಿಯ ರಿಮೇಕ್ ಅನ್ನೋದು ವಿಶೇಷ. ಆದರೆ.. ಇದೇ ಸಮಯದಲ್ಲಿ ''ಬಿಗ್ ಬಾಸ್'' ಅವಕಾಶ ತನ್ವಿ ಅವರಿಗೆ ಬಂತು. ಈ ಹಿನ್ನೆಲೆ ''ಲಕ್ಷ್ಮಿ ನಿವಾಸ್'' ಧಾರಾವಾಹಿಯಿಂದ ಅರ್ಧದಲ್ಲೇ ಹೊರ ನಡೆದ ತನ್ವಿ ಈಗ ''ಬಿಗ್ ಬಾಸ್'' ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

Tanvi Kolte Wins Bigg Boss Marathi 6 Bags 15 Lakh Diamonds amp amp Luxury Rides

ಟ್ರೋಫಿಯ ಜೊತೆ 15 ಲಕ್ಷ ಹಣ ಪಡೆದಿರುವ ತನ್ವಿಗೆ 10 ಲಕ್ಷ ಮೌಲ್ಯದ ವಜ್ರಾಭರಣದ ವೋಚರ್ ಕೂಡ ಬಹುಮಾನದ ರೂಪದಲ್ಲಿ ನೀಡಲಾಗಿದೆ. ಇದಲ್ಲದೇ ಒಂದು ಎಲೆಕ್ಟ್ರಿಕ್ ಸ್ಕೂಟರ್ ಕೂಡ ತನ್ವಿಯ ಪಾಲಾಗಿದೆ.

ತಮ್ಮ ಈ ಗೆಲುವಿನ ಕುರಿತು ಮಾತನಾಡಿರುವ ತನ್ವಿ ಕೊಲ್ತೆ, ಮನೆಯ ಒಳಗಡೆ ಬರುವಾಗ ಕೇವಲ ತನ್ವಿ ಕೊಲ್ತೆ ಆಗಿ ಬಂದೆ, ಆದರೆ ಈಗ ಬ್ಯ್ರಾಂಡ್ ಆಗಿ ಮನೆಯಿಂದ ಹೊರಗಡೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ. ಎಲ್ಲರ ಬಾಯಲ್ಲಿಯೂ ನನ್ನ ಹೆಸರು ಇರಬೇಕೆನ್ನುವ ಕನಸಿತ್ತು ಆ ಕನಸು ಈಗ ನನಸಾಗಿದೆ ಎಂದು ಹೇಳಿದ್ದಾರೆ.

ಇನ್ನು ತನ್ವಿಯ ಜೊತೆ ವಿಶಾಲ್ ಕೋಟ್ಯಾನ್.. ಅನುಶ್ರೀ ಮಾನೆ.. ದೀಪಾಲಿ ಸೈಯದ್.. ಮತ್ತು ರಾಕೇಶ್ ಬಾಪಟ್ ಅಂತಿಮ ಕಣದಲ್ಲಿದ್ದರು. ಆ ಪೈಕಿ ತನ್ವಿ ವಿನ್ನರ್ ಸ್ಥಾನ ಅಲಂಕರಿಸಿದರೆ ರಾಕೇಶ್ ಬಾಪಟ್ ಮೊದಲ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಯನ್ನು ಪಟ್ಟಿದ್ದಾರೆ.


ಇನ್ನುಳಿದಂತೆ ಈ ಬಾರಿಯ ಮರಾಠಿ ''ಬಿಗ್ ಬಾಸ್'' ಮನೆಗೆ 22 ಜನ ಹೋಗಿದ್ದರು. ಆ ಪೈಕಿ 18 ಜನ ಆರಂಭದ ದಿನವೇ ಹೋದರೆ ನಾಲ್ಕು ಜನ ಆ ನಂತರ ವೈಲ್ಡ್ ಕಾರ್ಡ್ ಮೂಲಕ ಮನೆಯೊಳಗೆ ಹೋಗಿದ್ದರು. ಈ 22 ಸ್ಫರ್ಧಿಗಳ ಜೊತೆ ನೂರು ದಿನ ತನ್ವಿ ಸೆಣಸಾಡಿ ಈಗ ವಿಜೇತೆಯಾಗಿ ಹೊರ ಹೊಮ್ಮಿದ್ದಾರೆ.

`

ಮರಾಠಿ ಬಿಗ್ ಬಾಸ್ 6ರಲ್ಲಿ ಸ್ಫರ್ಧಿಸಿದ್ದ ಸ್ಫರ್ಧಿಗಳ ಹೆಸರು

ತನ್ವಿ ಕೊಲ್ತೆ, ರಾಕೇಶ್ ಬಾಪಟ್, ವಿಶಾಲ್ ಕೋಟ್ಯಾನ್, ಅನುಶ್ರೀ ಮಾನೆ, ದೀಪಾಲಿ ಸೈಯದ್, ಸೋನಾಲಿ ರಾವುತ್, ಪ್ರಭು ಶೆಲ್ಕೆ, ನೀಲಂ ಮುಖರ್ಜಿ, ರೋಹಿತ್ ಮಾನೆ, ಶಿಲ್ಪಾ ಕಿರಿಕೆರೆ, ಅವಿನಾಶ್ ಗಾಯಕ್ವಾಡ್, ಸಾಗರ್ ಪವಾರ್, ಪೂಜಾ ಪವಾರ್, ತೃಪ್ತಿ ದೇಸಾಯಿ, ಯಶ್ ಕುಲಕರ್ಣಿ, ಅಮೃತ ಪಾಟೀಲ್, ನಿತಿನ್ ಕಾಂಬ್ಳೆ, ರೂಪಲಿ ಕುಲಕರ್ಣಿ, ಸನಾ ರಯೀಸ್ ಖಾನ್, ಸ್ವಪ್ನಿಲ್ ಜೋಶಿ, ಕೃತಿ ಶಿಂಧೆ, ಕಿರಣ್ ಮಾನೆ.

`

English summary
Official: Tanvi Kolte is the Bigg Boss Marathi 6 winner! She takes home ₹15 Lakh, diamonds, and more. See photos of the Grand Finale and the runner-up here.`
Read more about: biggboss bigg boss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X