Tanvi Rao: 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಿಂದ ಹೊರಬಂದಿದ್ದು ನಿಜವೇ? ತನ್ವಿ ಪ್ರತಿಕ್ರಿಯೆ
ಕಲರ್ ಕನ್ನಡ ವಾಹಿನಿಯ 'ಲಕ್ಷ್ಮೀಬಾರಮ್ಮ' ಧಾರಾವಾಹಿಯಲ್ಲಿ ಈಗ ಲಕ್ಷ್ಮೀಗೆ ತಾಳಿ ಪೂಜೆ ನಡೆಯುತ್ತಿದೆ. ಆದರೆ ಈ ವಿಚಾರವನ್ನು ಕಾವೇರಿ, ಕೀರ್ತಿಗೆ ಹೇಳೇ ಇಲ್ಲ. ಸುಪ್ರೀತಾ ಈಗ ಕೀರ್ತಿ ವಿರುದ್ಧ ನಿಂತಿದ್ದು, ಸದಾ ಹೊಟ್ಟೆ ಉರಿಯುವಂತಹ ಸುದ್ದಿಯನ್ನೇ ಹೇಳುತ್ತಿರುತ್ತಾಳೆ. ಕೀರ್ತಿಗಂತೂ ವೈಷ್ಣವ್ ಕೈ ತಪ್ಪುತ್ತಿದ್ದಾನೆ ಎಂದು ಸಂಕಟ ಅನುಭವಿಸುತ್ತಿದ್ದಾಳೆ.
ಹೀಗಿರುವಾಗ ಇತ್ತೀಚೆಗಷ್ಟೇ 'ಲಕ್ಷ್ಮೀಬಾರಮ್ಮ' ಧಾರಾವಾಹಿಯಿಂದ ಕೀರ್ತಿ ಪಾತ್ರಧಾರಿ ಹೊರ ನಡೆಯಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಸದ್ದು ಮಾಡಿತ್ತು. ಅದರ ಬಗ್ಗೆ ಇದೀಗ ಸ್ವತಃ ತನ್ವಿ ರಾವ್ ಸ್ಪಷ್ಟನೆ ದೊರೆತಿದೆ. ಕೀರ್ತಿ ಪಾತ್ರದಿಂದ ನಟಿ ತನ್ವಿ ರಾವ್ ಹೊರ ನಡೆಯಲಿದ್ದಾರೆ ಎನ್ನಲಾಗಿತ್ತು. ಆ ಜಾಗಕ್ಕೆ ಬೇರೆ ನಟಿ ಬರುತ್ತಾರೆ ಎಂದು ಅಭಿಮಾನಿಗಳು ಕೂಡ ಬೇಸರ ಮಾಡಿಕೊಂಡಿದ್ದರು.

ಇದೀ ಸ್ವತಃ ತನ್ವಿ ರಾವ್ ತಾವು ಧಾರಾವಾಹಿ ಬಿಡುವ ಸುದ್ದಿ ಬಗ್ಗೆಮಾಹಿತಿ ನೀಡಿದ್ದಾರೆ. ತಾವು 'ಲಕ್ಷ್ಮೀಬಾರಮ್ಮ' ಧಾರಾವಾಹಿಯಿಂದ ಹೊರನಡೆಯುತ್ತಿಲ್ಲ. ನಾನು ಕೀರ್ತಿ ಪಾತ್ರದಲ್ಲಿ ಮುಂದುವರೆಯುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ಕೀರ್ತಿ ತನ್ವಿ ಹಂಚಿಕೊಂಡಿದ್ದಾರೆ.
ಸ್ಪಷ್ಟನೆ ನೀಡಿರುವ ನಟಿ
"ಎಲ್ಲರಿಗೂ ನಮಸ್ಕಾರ. ನಾನು 'ಲಕ್ಷ್ಮಿಬಾರಮ್ಮ' ಧಾರಾವಾಹಿಯನ್ನು ಬಿಡಲಿದ್ದೇನೆ ಎಂಬ ವದಂತಿ ಕೇಳ್ಪಟ್ಟೆ. ಇದು ಸತ್ಯವಲ್ಲ. ನನ್ನ ಬಗ್ಗೆ ಹೊಸ ಮಾಹಿತಿ ಇದ್ದರೆ ನನ್ನ ಸಾಮಾಜಿಕ ಜಾಲತಾಣ ಅಕೌಂಟ್ ಅಥವಾ ನನ್ನ ಬಯೋನಲ್ಲಿ ಲಿಂಕ್ ಮಾಡಿರುವ ವೆಬ್ ಸೈಟ್‌ನಿಂದ ನಿಮಗೆ ತಿಳಿಸುತ್ತೇನೆ. ನಿಮ್ಮೆಲ್ಲರ ಪ್ರೀತಿ, ಕಾಳಜಿಗಾಗಿ ತುಂಬು ಹೃದಯದ ಧನ್ಯವಾದ. ಮುಂದೆ ಕೂಡ ಇದೇ ರೀತಿ ನಮ್ಮ ಧಾರಾವಾಹಿಗೆ ನಿಮ್ಮ ಬೆಂಬಲವನ್ನು ಕೇಳಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಾವು ಧಾರಾವಾಹಿಯಲ್ಲಿ ಮುಂದುವರೆಯುವುದಾಗಿ ಸ್ಪಷ್ಟಪಡಿಸಿದ್ದಾರೆ.

ಕೀರ್ತಿ ಪಾತ್ರ ಮೆಚ್ಚಿದ ಅಭಿಮಾನಿಗಳು
'ಲಕ್ಷ್ಮೀಬಾರಮ್ಮ' ಧಾರಾವಾಹಿ ಪ್ರಾರಂಭವಾ ಆದಾಗಿನಿಂದಲೂ ತನ್ವಿ ರಾವ್ ಗಮನ ಸೆಳೆಯುತ್ತಿದ್ದಾರೆ. ತಮ್ಮ ಪಾತ್ರಕ್ಕೆ ಕೊಂಚವೂ ಕೊರತೆಯಾಗದಂತೆ ನಡೆಸಿಕೊಂಡು ಬಂದಿದ್ದಾರೆ. ಕೀರ್ತಿ ಅವರ ಪಾತ್ರವನ್ನು ಪ್ರೇಕ್ಷಕರು ಕೂಡ ಮೆಚ್ಚಿಕೊಂಡಿದ್ದಾರೆ. ಧಾರಾವಾಹಿಯಲ್ಲಿ ಕೀರ್ತಿ ಅವರು ಕಾವೇರಿಯ ಆಟಕ್ಕೆ ಬಲಿಯಾಗಿರುವುದಕ್ಕೆ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ. ತನ್ವಿ ಧಾರಾವಾಹಿಯಿಂದ ಹೊರ ನಡೆಯುವ ಸುದ್ದಿ ಕೇಳುತ್ತಿದ್ದಂತೆ ಅಭಿಮಾನಿಗಳು ಬೇಸರ ಮಾಡಿಕೊಂಡು, ತನ್ವಿ ರಾವ್ ಬಿಟ್ಟರೆ, ಈ ಪಾತ್ರಕ್ಕೆ ಬೇರೆ ಯಾರೂ ಸೂಟ್ ಆಗಲ್ಲ ಎನ್ನುತ್ತಿದ್ದರು.
ವಿಭಿನ್ ಕಂಠದ ನಟಿ ತನ್ವಿ
ಇನ್ನು ತನ್ವಿ ರಾವ್‌ಗೆ ಇದು ಮೊದಲ ಧಾರಾವಾಹಿ ಅಲ್ಲ. ಬಾಲ ನಟಿಯಾಗಿ ಬಣ್ಣದ ಲೋಕಕ್ಕೆ ಬಂದಿದ್ದ ಈಕೆ, 'ಆಕೃತಿ' ಎಂಬ ಧಾರಾವಾಹಿಗೂ ಬಣ್ಣ ಹಚ್ಚಿದ್ದರು. ಅಷ್ಟೇ ಅಲ್ಲದೇ ಕೆಲ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು, 'ಗುಲ್ ಮೊಹರ್', 'ಗುಲಾಬ್ ಗ್ಯಾಂಗ್' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿದ್ದಾರೆ.
ಭರತನಾಟ್ಯ ಕಲಾವಿದೆ
ಎಲ್ಲರಿಗಿಂತಲೂ ವಿಭಿನ್ನವಾಗಿ ನಟಿಸುವ ತನ್ವಿ ರಾವ್ ಧ್ವನಿ ಹಾಗೂ ಏರಿಳಿತ ವಿಭಿನ್ನವಾಗಿದೆ. ಇನ್ನು ಇವರ ಡ್ರೆಸ್ಸಿಂಗ್ ಸೆನ್ಸ್ ಕೂಡ ಗಮನ ಸೆಳೆಯುತ್ತದೆ. ಈಕೆ ಭರತನಾಟ್ಯ ಕಲಾವಿದೆಯೂ ಹೌದು. ತನ್ವಿ ರಾವ್ ನಟನೆಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದ್ದು, ಬಣ್ಣದ ಲೋಕದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.


Click it and Unblock the Notifications











