'ಬೆತ್ತಲೆ' ಬೆನ್ನು ತೋರಿಸಿ 'ಬಿಗ್ ಬಾಸ್' ಮನೆಗೆ ಬಂದ ಚೆಲುವೆ
ಬಣ್ಣದ ಸೆಳೆತಕ್ಕೆ ಸಿಲುಕಿದವರಲ್ಲಿಯೇ ಹಲವಾರು ಜನ ''ಬಿಗ್ ಬಾಸ್''ನಲ್ಲಿ ಭಾಗವಹಿಸಬೇಕೆಂದು ಕನಸು ಕಾಣುತ್ತಾರೆ. ಆದರೆ .. ಈ ಸುವರ್ಣ ಅವಕಾಶ ಎಲ್ಲರಿಗೆ ಸಿಗುವುದಿಲ್ಲ. ಯಾಕೆಂದರೆ ''ಬಿಗ್ ಬಾಸ್''ನ ನಿಯಮಾವಳಿಯೇ ಹಾಗೇ ಇದೆ. ಮಾನದಂಡಕ್ಕೆ ಕೇವಲ ಹೆಸರು ಮಾತ್ರ ಮುಖ್ಯವಲ್ಲ ಬದಲಿಗೆ ಆ ಹೆಸರಿಗೊಂದು ಸಮ್ಮೋಹಕವಾದ ಶಕ್ತಿ ಇರಬೇಕು.. ಆ ಹೆಸರು ಕೇಳಿದರೆ ಸಾಕು ಜನಸಾಮಾನ್ಯರು..ಕಾರ್ಯಕ್ರಮ ನೋಡಲು ಬಂದು ಕೂರಬೇಕು..
ಇಲ್ಲದಿದ್ದರೆ ಯಾವುದಾದರೂ ವಿವಾದ ಮಾಡಿಕೊಂಡಿರಬೇಕು. ಸದಾ ಕಾಲ ಕಾಲು ಕೆರೆದು ಜಗಳಕ್ಕೆ ನಿಲ್ಲುವ ವಿವಾದಿತ ವ್ಯಕ್ತಿಯಾಗಿರಬೇಕು. ಹೀಗಿದ್ದಾಗಲೇ ''ಬಿಗ್ ಬಾಸ್'' ಮನೆಗೆ ಹೋಗಲು ಸಾಧ್ಯವಾಗುವುದು ಎನ್ನುವ ಮಾತು ಕಿರುತೆರೆಯಲ್ಲಿ ಕೇಳಿ ಬರುತ್ತೆ. ಹಾಗೇ ನೋಡಿದರೆ ಈ ಮಾತು ನಿಜಾ ಕೂಡ ಹೌದು.

ಇನ್ನೂ ''ಬಿಗ್ ಬಾಸ್'' ಮನೆಗೆ ಹೋಗಲೇಂದೇ.. ''ಬಿಗ್ ಬಾಸ್''ನ ಗಮನ ಸೆಳೆಯಲೆಂದೇ.. ನಾನಾ ಸರ್ಕಸ್‌ಗಳನ್ನು ಮಾಡುವವರು ಕೂಡ ಇದ್ದಾರೆ. ''ಬಿಗ್ ಬಾಸ್'' ಮನೆಗೆ ಹೋಗಿ ಬಂದರೆ ತಮ್ಮ ಜನ್ಮ ಸಾರ್ಥಕ ಎಂದುಕೊಂಡವರು ಕೂಡ ಇದ್ದಾರೆ.
ಆದರೆ ಇಷ್ಟೆಲ್ಲಾ ಕಸರತ್ತುಗಳನ್ನು ಮಾಡಿದ ಮೇಲೂ ಕೂಡ ನಾನು ಈ ಮನೆಗೆ ಬರಲು ಯಾವ ಗಿಮಿಕ್ಕು ಮಾಡಿಲ್ಲ. ಯಾರ ಸಹಾಯವನ್ನು ಕೂಡ ಪಡೆದಿಲ್ಲ. ಬದಲಿಗೆ ನನ್ನಲ್ಲಿನ ಪ್ರತಿಭೆಯನ್ನು ಗುರುತಿಸಿ ''ಬಿಗ್ ಬಾಸ್''ನವರೇ ನನ್ನ ಕರೆದಿದ್ದು, ದುಂಬಾಲು ಬಿದ್ದಿದ್ದು ಅಂದರೆ ಹೇಗಿರಬೇಡ..? ಸದ್ಯ ''ತಾನ್ಯಾ ಮಿತ್ತಲ್'' ವಿಚಾರದಲ್ಲಿ ಕೂಡ ಇದೇ ಆಗಿದೆ.
ಹೌದು ತಾನ್ಯಾ ಮಿತ್ತಲ್.. ಹಿಂದಿ ನೆಲದ ಉದ್ಯಮಿ.. ಭಾಷಣಗಾರ್ತಿ. 2018ರ ಮಿಸ್ ಟೂರಿಸಂ ಏಷ್ಯಾ ಪ್ರಶಸ್ತಿ ವಿಜೇತೆ. ''ಮಹಾಕುಂಭ ಮೇಳ''ದಲ್ಲಿ ಕಾಲ್ತುಳಿತವಾದಾಗ ಹಲವಾರು ಜನರ ರಕ್ಷಣೆಯನ್ನು ತಾವು ಮಾಡಿರುವುದಾಗಿ ತಾನ್ಯ ಈ ಹಿಂದೆ ಹೇಳಿಕೊಂಡಿದ್ದರು.
ಆ ನಂತರ ''ಪಹಲ್ಗಾಮ್''ನಲ್ಲಿ ಭಯೋತ್ಪಾದಕರ ದಾಳಿ ನಡೆದಾಗ ಉಗ್ರರಿಗೆ ಯಾವ ಧರ್ಮವೂ ಇರುವುದಿಲ್ಲ ಎಂದು ಹೇಳಿ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದರು.
ಇಂಥಾ ತಾನ್ಯಾ ಮಿತ್ತಲ್ ಸದ್ಯ ಹಿಂದಿಯ ''ಬಿಗ್ ಬಾಸ್'' ಮನೆಗೆ ಹೋಗಿದ್ದಾರೆ. ಪ್ರೇಕ್ಷಕರ ಗಮನ ಸೆಳೆಯಲು ಪ್ರಯತ್ನ ಮಾಡುತ್ತಿದ್ದಾರೆ. ಇವರನ್ನು ಮನೆಯ ಬೇರೆ ಸದಸ್ಯರಿಗೆ ಮತ್ತು ಪ್ರೇಕ್ಷಕರಿಗೆ ''ಆಧ್ಯಾತ್ಮಿಕ ಪ್ರಭಾವಿ'' ವ್ಯಕ್ತಿ ಅಂದರೆ ''Spiritual Influencer'' ಎಂದು ಪರಿಚಯಿಸಲಾಗಿದೆ.ಆದರೆ ಇದೇ ಸಮಯದಲ್ಲಿ ಇವರ ಮುಖವಾಡ ಕಳಚಿ ಬಿದ್ದಿದ್ದು ಸದ್ಯ ತಾನ್ಯಾ ಟ್ರೋಲಿಗರಿಗೆ ಆಹಾರವಾಗಿದ್ದಾರೆ.
ಹೌದು, ಮನೆಯಲ್ಲಿ ಇತರೆ ಸ್ಫರ್ಧಿಗಳ ಜೊತೆ ಮಾತನಾಡುವ ಸಮಯದಲ್ಲಿ ತಾನ್ಯಾ ತಮ್ಮನ್ನು ತಾವು ''ಸಂಸ್ಕಾರಸ್ಥ'' ಮಹಿಳೆ ಎಂದು ಹೇಳಿದ್ದಾರೆ. ಈ ಕಾರ್ಯಕ್ರಮಕ್ಕೆ ನಾನು ಸೀರೆ ಹಾಕಿಕೊಂಡು ಬಂದಿದ್ದೇನೆ, ನನಗೆ ಇದು ದೊಡ್ಡ ಅವಕಾಶ ಎಂದು ಹೇಳಿರುವ ತಾನ್ಯಾ ಮನೆಯಲ್ಲಿರಲು 800 ಸೀರೆಗಳನ್ನು ತೆಗೆದುಕೊಂಡು ಬಂದಿರುವುದಾಗಿ ಕೂಡ ಹೇಳಿದ್ದಾರೆ. ಇಷ್ಟೇ ಆಗಿದ್ದರೆ ಯಾರು ಚಕಾರ ಎತ್ತುತ್ತಿರಲಿಲ್ಲ. ಆದರೆ ತಾನ್ಯಾ ತಮ್ಮನ್ನು ತಾವು ಸಂಸ್ಕಾರಿ ಮಹಿಳೆ ಎಂದು ಹೇಳಿಕೊಂಡಿದ್ದು ಈಗ ಹಲವರ ಕಣ್ಣು ಕೆಂಪಾಗಿಸಿದೆ. ತಾನ್ಯಾ ಅವರ ಈ ಮಾತು ಈಗ ಹಲವರ ಅಸಹನೆ ಅಸಮಾಧಾನಕ್ಕೆ ಕಾರಣವಾಗಿದೆ.
ಯಾಕೆಂದರೆ ''ಬಿಗ್ ಬಾಸ್'' ಮನೆಗೆ ಬರುವ ಮೊದಲು ತಮ್ಮ ಹಿಂಬಾಲಕರ ಗಮನ ಸೆಳೆಯಲು ಹೆಚ್ಚಿನ ವೀವ್ಸ್ ಮತ್ತು ಲೈಕ್‌ಗಳಿಗಾಗಿ ಕ್ಯಾಮರಾ ಎದುರು ''ಅರೆ ಬೆತ್ತಲೆ''ಯಾಗುತ್ತಿದ್ದರು ತಾನ್ಯಾ. ಬ್ಲೌಸ್ ಹಾಕಿಕೊಳ್ಳುವುದು ಹೇಗೆ..? ಎಂದು ತೋರಿಸುತ್ತಿದ್ದರು. ಅದು ಒಂದೆರಡು ಬಾರಿಯಲ್ಲ. ತಾನ್ಯಾ ಈ ತರಹದ ಹಲವಾರು ವಿಡಿಯೋಗಳನ್ನು ಮಾಡಿದ್ದಾರೆ. ಕೆಲ ಒಮ್ಮೆ ಸೀರೆಯ ಸೆರಗನ್ನು ಕೂಡ ಬೀಳಿಸಿದ್ದಾರೆ. ಇಷ್ಟೇ ಅಲ್ಲ ಪೆಟಿಕೋಟ್ ಹಾಕಿಕೊಳ್ಳೋದು ಹೇಗೆ..? ಎಂದು ಕೂಡ ಇವರು ಹಲವು ವಿಡಿಯೋ ಮಾಡಿದ್ಧಾರೆ.
ಹೀಗಾಗಿಯೇ ಹಲವರು ತಾನ್ಯಾ ಅವರ ವಿರುದ್ಧ ಈಗ ತಿರುಗಿ ಬಿದ್ದಿದ್ದು ಕ್ಯಾಮರಾ ಎದುರು ''ಬೆತ್ತಲೆ'' ಬೆನ್ನು ಪ್ರದರ್ಶಿಸುವವಳು ಸಂಸ್ಕಾರದ ಬಗ್ಗೆ ಮಾತನಾಡುತ್ತಿದ್ದಾಳೆ ಎಂದು ಕಿಡಿ ಕಾರುತ್ತಿದ್ದಾರೆ. ಇವಳ ಸಂಸ್ಕಾರ ಎಲ್ಲ ನಕಲಿ ಎನ್ನುತ್ತಿದ್ದಾರೆ. ಬ್ಲೌಸ್ ಮತ್ತು ಲಂಗದ ಸಹಾಯದಿಂದಲೇ ಬಿಗ್ ಬಾಸ್ ಟಿಕೆಟ್ ಪಡೆದ ಚೆಲುವೆಯ ಬಾಯಲ್ಲಿ ಸಂಸ್ಕಾರದ ಮಾತು ಕೇಳೋಕಾಗಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ತಾನ್ಯಾ ಇಲ್ಲಿಯವರೆಗೆ ಬ್ಲೌಸ್ ಕುರಿತು ಮಾಡಿರುವ ವಿಡಿಯೋಗಳನ್ನು ಕೂಡ ಹೆಕ್ಕಿ ತೆಗೆದು ವೈರಲ್ ಮಾಡುತ್ತಿದ್ದಾರೆ. ಮನೆಯಿಂದ ಇವರನ್ನು ಮೊದಲು ಹೊರ ಹಾಕಿ ಎಂದು ''ಬಿಗ್ ಬಾಸ್''ಬಳಿ ಮನವಿಯನ್ನು ಕೂಡ ಮಾಡಿಕೊಳ್ಳುತ್ತಿದ್ದಾರೆ.


Click it and Unblock the Notifications











