ನಾಳೆಯ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಶರಣ್, ಚಿಕ್ಕಣ್ಣ, ತರುಣ್
'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮ ಪ್ರತಿ ಭಾನುವಾರ ಪ್ರಸಾರವಾಗುತ್ತಿದೆ. ನಾಳೆಯ ಕಾರ್ಯಕ್ರಮದ ಸಂಚಿಕೆಯಲ್ಲಿ ನಟ ಶರಣ್, ಚಿಕ್ಕಣ್ಣ ಮತ್ತು ನಿರ್ದೇಶಕ ತರುಣ್ ಸುಧೀರ್ ಇರುತ್ತಾರೆ. ಶಿವಣ್ಣನ ಜೊತೆಗೆ ಸೇರಿ ಈ ಮೂರು ಜನರು ಮಸ್ತ್ ಮಜಾ ಮಾಡಿದ್ದಾರೆ.
ಈಗಾಗಲೇ ಶರಣ್, ಚಿಕ್ಕಣ್ಣ, ತರುಣ್ ಅವರ ಸಂಚಿಕೆಯ ಪ್ರೋಮೋಗಳು ಬಂದಿದೆ. ಪ್ರೋಮೋ ನೋಡಿದವರಿಗೆ ಕಾರ್ಯಕ್ರಮವನ್ನು ಮಿಸ್ ಮಾಡಬಾರದು ಎಂದುಕೊಳ್ಳುತ್ತಾರೆ. ಇನ್ನು ಚಿಕ್ಕಣ್ಣ ಇದ್ದ ಕಡೆ ನಗು ಇದ್ದೇ ಇರುತ್ತದೆ. ಈ ಕಾರ್ಯಕ್ರಮದಲ್ಲಿಯೂ ಅದು ಮುಂದುವರೆದಿದೆ. ಸಿನಿಮಾದ ನೋಡಿ ಇಷ್ಟ ಪಟ್ಟಿದ್ದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಜೋಡಿ ಈ ಕಾರ್ಯಕ್ರಮದಲ್ಲಿ ಮೋಡಿ ಮಾಡಿದೆ.

ಸ್ಟಾರ್ ಸುವರ್ಣ ವಾಹಿನಿ ಮತ್ತು ವಿಯು (viu) ಅಪ್ ನಲ್ಲಿ ಪ್ರಸಾರ ಆಗುತ್ತಿರುವ ಹೊಸ ಕಾರ್ಯಕ್ರಮ 'ನಂ 1 ಯಾರಿ ವಿತ್ ಶಿವಣ್ಣ'ದ ಮೊದಲ ಸಂಚಿಕೆಯಲ್ಲಿ ನಟ ಉಪೇಂದ್ರ ಮತ್ತು ಗುರುಕಿರಣ್ ಬಂದಿದ್ದರು. ಎರಡನೇ ಸಂಚಿಕೆಯಲ್ಲಿ ಶರಣ್, ಚಿಕ್ಕಣ್ಣ, ತರುಣ್ ಸುಧೀರ್ ಆಗಮಿಸಿದ್ದಾರೆ. ಮೂರನೇ ಸಂಚಿಕೆಯಲ್ಲಿ ನಟ ಶ್ರೀ ಮುರಳಿ, ನಿರ್ದೇಶಕ ನರ್ತನ್ ಹಾಗೂ ನಾಲ್ಕನೇ ಸಂಚಿಕೆಯಲ್ಲಿ ಶೃತಿ ಹರಿಹರನ್ ಮತ್ತು ಶ್ರದ್ಧಾ ಶ್ರೀನಾಥ್ ಅತಿಥಿ ಆಗಲಿದ್ದಾರೆ. ಜೊತೆಗೆ 'ಟಗರು' ಚಿತ್ರತಂಡ ಕೂಡ ಈ ಕಾರ್ಯಕ್ರಮಕ್ಕೆ ಬಂದಿದ್ದು, ಆ ಸಂಚಿಕೆಯ ಚಿತ್ರೀಕರಣ ಮುಗಿದಿದೆ.


Click it and Unblock the Notifications











