ತಂದೆಯ ಸುಧೀರ್ ನೆನೆದು ಶಿವಣ್ಣನ ಮುಂದೆ ಕಣ್ಣೀರಿಟ್ಟ ತರುಣ್ ಸುಧೀರ್ !

By Naveen

Recommended Video

ತರುಣ್ ಸುಧೀರ್ ಶಿವಣ್ಣನ ಮುಂದೆ ಕಣ್ಣೀರಿಟ್ಟಿದ್ದೇಕೆ ? | Filmibeat Kannada

ಸ್ಟಾರ್ ಸುವರ್ಣ ಮತ್ತು ವಿಯು ಅಪ್ ನಲ್ಲಿ ಪ್ರಸಾರ ಆಗುತ್ತಿರುವ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದ ಎರಡನೇ ಎರಡನೇ ಸಂಚಿಕೆ ನಿನ್ನೆ ಪ್ರಸಾರ ಆಗಿದೆ. ಎರಡನೇ ಸಂಚಿಕೆಯಲ್ಲಿ ನಟ ಶರಣ್, ಚಿಕ್ಕಣ್ಣ ಮತ್ತು ನಿರ್ದೇಶಕ ತರುಣ್ ಸುಧೀರ್ ಭಾಗಿಯಾಗಿದ್ದರು.

ಶರಣ್, ಚಿಕ್ಕಣ್ಣ, ತರುಣ್ ಸುಧೀರ್ ಅವರ ಸಂಚಿಕೆ ತುಂಬ ನಗು ಇತ್ತು. ಆದರೆ ಕೊನೆಯ ಸುತ್ತಿನಲ್ಲಿ ಶಿವಣ್ಣನ ಒಂದು ಪ್ರಶ್ನೆಗೆ ಉತ್ತರಿಸುತ್ತ ತರುಣ್ ಸುಧೀರ್ ಕಣ್ಣೀರು ಹಾಕಿದರು. ಖ್ಯಾತ ಖಳ ನಟ ಸುಧೀರ್ ಅವರ ಮಗನಾಗಿರುವ ತರುಣ್ ಸುಧೀರ್ ಇಂದು ಒಬ್ಬ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಸುಧೀರ್ ಅವರ ಇಬ್ಬರು ಮಕ್ಕಳಾದ ತರುಣ್ ಸುಧೀರ್ ಮತ್ತು ನಂದಕಿಶೋರ್ ಅಪ್ಪನ ಹೆಸರನ್ನು ಉಳಿಸಿದ್ದಾರೆ. ಆದರು ಸಹ ತಂದೆ ಇದ್ದಾಗ ಅವರ ಬೆಲೆ ನಮಗೆ ತಿಳಿಯಲಿಲ್ಲ ಎನ್ನುವ ನೋವು ತರುಣ್ ಅವರಿಗೆ ಇಂದಿಗೂ ಕಾಡುತ್ತಿದೆ. ಮಂದೆ ಓದಿ..

ನಿಮ್ಮ ಜೀವನದ ದೊಡ್ಡ ಮಿಸ್ಟೇಕ್ ಏನು?

ನಿಮ್ಮ ಜೀವನದ ದೊಡ್ಡ ಮಿಸ್ಟೇಕ್ ಏನು?

'ನಿಮ್ಮ ಜೀವನದ ದೊಡ್ಡ ಮಿಸ್ಟೆಕ್ ಏನು?' ಎಂದು ಶಿವಣ್ಣ ಕಾರ್ಯಕ್ರಮದ ಅತಿಥಿ ಆಗಿದ್ದ ತರುಣ್ ಸುಧೀರ್ ಅವರಿಗೆ ಪ್ರಶ್ನೆಯೊಂದನ್ನು ಕೇಳಿದರು. ಪ್ರಶ್ನೆ ಉತ್ತರಿಸಲು ಶುರು ಮಾಡಿದ ತರುಣ್ ಸುಧೀರ್ ಭಾವುಕರಾದರು.

ತಂದೆ ಇದ್ದಾಗ ಅವರ ಬೆಲೆ ಗೊತ್ತಾಗಲಿಲ್ಲ

ತಂದೆ ಇದ್ದಾಗ ಅವರ ಬೆಲೆ ಗೊತ್ತಾಗಲಿಲ್ಲ

''ನಮ್ಮ ತಂದೆ ಇರಬೇಕಾದರೆ ಅವರ ಬೆಲೆ ನಮಗೆ ಗೊತ್ತಿರಲಿಲ್ಲ.'' ಎಂದು ಹೇಳಿ ತರುಣ್ ಮುಂದೆ ಏನು ಮಾತನಾಡಲಾಗದೆ ತಂದೆಯನ್ನು ನೆನೆದು ಕಣ್ಣೀರು ಹಾಕಿದರು.

ಸಮಾದಾನ ಮಾಡಿದ ಶಿವಣ್ಣ

ಸಮಾದಾನ ಮಾಡಿದ ಶಿವಣ್ಣ

''ನಮಗೂ ಗೊತ್ತು... ನಮಗೆ ಅವರು ತುಂಬ ಹತ್ತಿರ ಆದವರು. ನಾನು ಅವರ ಜೊತೆಗೆ ಸಿನಿಮಾ ಸಹ ಮಾಡಿದ್ದೇನೆ. ಅಪ್ಪಾಜಿಗೆ ಅವರು ಆಪ್ತರಾಗಿ ಇದ್ದರು. ಯಾವಾಗಲೂ ಊಟ ಮಾಡುವಾಗ ಅವರನ್ನು ಕರೆಯುತ್ತಿದ್ದರು. ಅವರು ಈಗ ಇದ್ದಿದ್ದರೆ ನಿಮ್ಮನ್ನು ನೋಡಿ ತುಂಬ ಖುಷಿ ಪಡುತ್ತಿದ್ದರು'' ಎಂದು ತರುಣ್ ರನ್ನು ಶಿವಣ್ಣ ಸಮಾದಾನ ಮಾಡಿದರು.

ನಮಗೂ ಹಾಗೆ ಆಗಿದೆ

ನಮಗೂ ಹಾಗೆ ಆಗಿದೆ

''ಆಗ ಹುಡುಗಾಟದಲ್ಲಿ ಏನೋ ಮಾಡಿರುತ್ತೇವೆ. ನಮಗೂ ಹಾಗೆ ಆಗಿದೆ. ಆದರೆ ಬರ್ತಾ ಬರ್ತಾ ಅವರ ಬೆಲೆ ಗೊತ್ತಾಯಿತು.' ಎಂದು ಹೇಳಿ ಶಿವರಾಜ್ ಕುಮಾರ್ ತಮ್ಮ ತಂದೆ ರಾಜ್ ಕುಮಾರ್ ಅವರನ್ನು ನೆನೆದರು.

ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು

ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು

ನಂತರ ''ನೀವು ಸಾಯುವುದಕ್ಕೂ ಮುಂಚೆ ಏನನ್ನು ಸಾಧಿಸಬೇಕು.?'' ಎಂಧು ಶಿವಣ್ಣ ಮತ್ತೆ ಒಂದು ಪ್ರಶ್ನೆ ಕೇಳಿದರು. ಆಗ ತರುಣ್ ''ಸಿನಿಮಾ ಬಗ್ಗೆ ಅಲ್ಲ. ವೈಯಕ್ತಿಕವಾಗಿ ಅಂದರೆ ನನಗೆ ಒಂದೇ ಒಂದು ಆಸೆ ಇದೆ. ನಾನು ಇರುವಷ್ಟು ದಿನ ಯಾವುದೇ ಕಷ್ಟ ಆಗದಂತೆ ನಮ್ಮ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಷ್ಟೇ.'' ಎಂದು ಹೇಳಿದರು. ಆ ಕ್ಷಣ ನಿಜಕ್ಕೂ ಇಡೀ ಸ್ಟೂಡಿಯೊದಲ್ಲಿ ಭಾವುಕತೆ ಮೂಡಿತು.

More from Filmibeat

English summary
Director Tarun Sudheer spoke about his father Sudheer in Star Suvarna's new show 'No1 yari with Shivanna' program.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X