ಶಿಕ್ಷಕಿಗೆ ಒಂದು ಕೋಟಿ ಗೆದ್ದುಕೊಟ್ಟ ಪ್ರಶ್ನೆ ಇದು: ನಿಮಗೆ ಗೊತ್ತೆ ಉತ್ತರ?

12ನೇ ಸೀಸನ್‌ನ ಕೌನ್ ಬನೇಗಾ ಕರೋರ್‌ಪತಿ (ಕೆಬಿಸಿ) ಶೋನಲ್ಲಿ ಈಗಾಗಲೇ ಮೂರು ಮಂದಿ ಒಂದು ಕೋಟಿ ಗೆದ್ದಿದ್ದಾರೆ. ವಿಶೇಷವೆಂದರೆ ಮೂವರೂ ಸಹ ಮಹಿಳೆಯರೇ.

ಹೌದು, ಮೊದಲಿಗೆ ದೆಹಲಿಯ ನಾಜಿಯಾ ನಜೀಮ್ ಒಂದು ಕೋಟಿ ಗೆದ್ದರು, ನಂತರ ಐಪಿಎಸ್ ಅಧಿಕಾರಿ ಮೋಹಿತಾ ಶರ್ಮಾ ಒಂದು ಕೋಟಿ ರೂಪಾಯಿ ಹಣ ಗೆದ್ದರು. ಈಗ ಶಾಲಾ ಶಿಕ್ಷಕಿ ಅನುಪಾ ದಾಸ್ ಒಂದು ಕೋಟಿ ಗೆದ್ದಿದ್ದಾರೆ.

ಅದ್ಭುತವಾಗಿ ಆಟವಾಡಿದ ಚತ್ತೀಸ್‌ಘಡ, ಜದಲ್‌ಪುರದ ಅನುಪಾ ದಾಸ್, ಲಭ್ಯವಿದ್ದ ಲೈಫ್‌ಲೈನ್‌ಗಳನ್ನು ಬುದ್ಧಿವಂತಿಕೆಯಿಂದ ಬಳಸಿ ಕೊನೆಗೆ ಒಂದು ಕೋಟಿ ರೂಪಾಯಿ ಗೆದ್ದುಕೊಂಡರು.

Teacher Anupa Das Became Third Crorepathi In KBC 12 Season

ನವೆಂಬರ್ 18 , 1962 ರಲ್ಲಿ ರೆಜಾಂಗ್ ಲಾ, ಲಡಾಕ್‌ನಲ್ಲಿ ಯಾರಿಗೆ ಪರಮ ವೀರ ಚಕ್ರ ನೀಡಿ ಗೌರವಿಸಲಾಯಿತು? ಈ ಪ್ರಶ್ನೆಯನ್ನು ಒಂದು ಕೋಟಿಯ ಪ್ರಶ್ನೆಯನ್ನಾಗಿ ಅಮಿತಾಬ್ ಬಚ್ಚನ್, ಅನುಪಾ ದಾಸ್‌ಗೆ ಕೇಳಿದರು.

ಆಯ್ಕೆಗಳು: ಮೇಜರ್ ದಾನ್ ಸಿಂಗ್ ತಪ್ಪಾ, ಲೆಫ್ಟಿನಂಟ್ ಕರ್ನಲ್ ಅಧಿಶಿರ್ ತರಪೋಲ್, ಸುಬೇದಾರ್ ಜೋಗಿಂದರ್ ಸಿಂಗ್, ಮೇಜರ್ ಶೈತಾನ್ ಸಿಂಗ್. ಪ್ರಶ್ನೆಯ ಸರಿ ಉತ್ತರ ಮೇಜರ್ ಶೈತಾನ್ ಸಿಂಗ್ ಆಗಿತ್ತು. ಈ ಉತ್ತರ ನೀಡಿ ಒಂದು ಕೋಟಿ ಗೆದ್ದರು ಅನುಪಾ ದಾಸ್.

ನಂತರ ಏಳು ಕೋಟಿಯ ಜಾಕ್‌ಪಾಟ್ ಪ್ರಶ್ನೆ ಕೇಳಲಾಯಿತು. ಆದರೆ ಆ ಪ್ರಶ್ನೆಯನ್ನು ಉತ್ತರಿಸಲಾಗದೆ ಕ್ವಿಟ್ ಮಾಡಿದರು ಅನುಪಾ ದಾಸ್.

ಏಕದಿನ ಪಂದ್ಯದಲ್ಲಿ ರಜಿಯಾ ಪೂನಾವಾಲ ಹಾಗೂ ಶೌಕತ್ ದುಕನ್‌ವಾಲಾ ಅವರುಗಳು ಯಾವ ತಂಡವನ್ನು ಪ್ರತಿನಿಧಿಸುತ್ತಾರೆ? ಇದು ಏಳು ಕೋಟಿಯ ಪ್ರಶ್ನೆಯಾಗಿತ್ತು.

ಆಯ್ಕೆಗಳು: ಕೀನ್ಯಾ, ಯುಎಇ, ಕೆನಡಾ, ಇರಾನ್. ಸರಿ ಉತ್ತರ: ಯುಎಇ ಆಗಿತ್ತು. ಆದರೆ ಈ ಪ್ರಶ್ನೆಗೆ ಉತ್ತರಿಸದೆ ಆಟವನ್ನು ಕ್ವಿಟ್ ಮಾಡಿದರು ದೀಪಿಕಾ ದಾಸ್.

More from Filmibeat

English summary
Teacher Anupa Das became third winner in KBC 12 season. Here is the question which gave one crore to Anupa Das.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X