ನಮ್ಮ ಧರ್ಮ ಬೇರೆ ಬೇರೆ, ನನ್ನ ತಂದೆ ಒಪ್ಪಲ್ಲ ; ಪ್ರಪೋಸ್ ಮಾಡಿದ ಬಾಯ್‌ಫ್ರೆಂಡ್ - ಕಣ್ಣೀರಾದ ಬಿಗ್ ಬಾಸ್ ಸ್ಫರ್ಧಿ

ಪ್ರೀತಿ ಅಂದರೆ ಹಾಗೇ. ಅದಕ್ಕೆ ಕಣ್ಣಿಲ್ಲದಿದ್ದರೂ ಕಣ್ಣಿನ ತುಂಬಾ ಆಸೆ ಹುಟ್ಟಿಸುವ ಸಾಮರ್ಥ್ಯ ಇದೆ. ಪ್ರೀತಿ ಎನ್ನುವುದು ಕೇವಲ ಎರಡು ದೇಹಕ್ಕೆ ಸಂಬಂಧಿಸಿದ್ದಲ್ಲ. ಎರಡು ಮನಸ್ಸುಗಳು ಮುಕ್ತವಾಗಿ ಒಂದನ್ನೊಂದು ಅರಿತುಕೊಳ್ಳುವುದು. ಪ್ರೀತಿಗೆ ಎಲ್ಲರನ್ನು ಎಲ್ಲವನ್ನೂ ಜಯಿಸುವಂತಹ ನಿಗೂಢವಾದ ಶಕ್ತಿ ಇದೆ. ಪ್ರತಿಯೊಂದು ಧರ್ಮದಲ್ಲಿಯೂ ಈ ಪ್ರೀತಿಯ ಪರಿಕಲ್ಪನೆಗೆ ಅಪಾರವಾದ ಆದ್ಯತೆ ಇದೆ.

ಇನ್ನು ನಿಜವಾದ ಪ್ರೀತಿಯ.. ಆಳಕ್ಕೆ ಇಳಿದು ನೋಡಿದಾಗ ಅದರ ಅರ್ಥ ಹುಡುಕುತ್ತಾ ಹೋದಾಗ ಪ್ರೀತಿ ಎನ್ನುವುದು ಮನಸಿಂದ ಬರಬೇಕೆ ಹೊರತು ಆ ಪ್ರೀತಿ ಒತ್ತಾಯ ಪೂರ್ವಕವಾಗಿರಬಾರದು ಎಂಬ ವಿಚಾರದ ಅರಿವು ಆಗುತ್ತೆ. ಇನ್ನೂ ಎಲ್ಲ ಜಾತಿಯಲ್ಲಿಯೂ ಪ್ರೀತಿ ಇದೆ, ಆದರೆ ಪ್ರೀತಿಗೆ ಜಾತಿ ಧರ್ಮ ಇಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಬೆಳ್ಳಿ ತೆರೆ ಇರಲಿ.. ಕಿರುತೆರೆ ಇರಲಿ.. ಹಲವರು ಧರ್ಮಕ್ಕಿಂತ ಪ್ರೀತಿ ದೊಡ್ಡದು ಎಂಬ ಸಂದೇಶವನ್ನು ಸಾರಿದ್ದಾರೆ. ಅಂತರ್ ಧರ್ಮಿಯ ಮದುವೆಯಾಗಿದ್ದಾರೆ. ಆದರೆ, ಅಲ್ಲೊಬ್ಬರ.. ಇಲ್ಲೊಬ್ಬರ.. ವಿಚಾರದಲ್ಲಿ ಈ ಧರ್ಮದ ಬೇಲಿ ಪ್ರೀತಿಗೆ ಅಡ್ಡಿಯಾಗುತ್ತೆ. ಉದಾಹರಣೆಗೆ ನಿಕ್ಕಿ ತಾಂ ಬೋಲಿ ಮತ್ತು ಅರ್ಬಾಜ್ ಪಟೇಲ್.

Tears on The 50 Bigg Boss Nikki Tamboli Accepts Arbaz Patel s Proposal Dad s Religious Objection

ಹೌದು, ನಿಕ್ಕಿ ತಾಂಬೋಲಿ.. ಬಾಲಿವುಡ್‌ನ ಬಿಂದಾಸ್ ಚೆಲುವೆ. 2019ರಲ್ಲಿ ತೆಲುಗಿನ ''ಚಿಕಟಿ ಗಡಿಲೋ ಚಿತ್ತಕೋಟುಡು'' ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶ ಮಾಡಿದ ನಿಕ್ಕಿ ''ಕಾಂಚನಾ 3'' ಚಿತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದರು.

ಆ ನಂತರ ''ಬಿಗ್ ಬಾಸ್'' ನಿಕ್ಕಿ ತಾಂಬೋಲಿಗೆ ರತ್ನಗಂಬಳಿ ಹಾಸಿತು. 2020ರಲ್ಲಿ ಹಿಂದಿಯ ''ಬಿಗ್ ಬಾಸ್'' ಸೀಸನ್ 14ರಲ್ಲಿ ಭಾಗವಹಿಸಿದ ನಿಕ್ಕಿ 2ನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿದರು. ''ಖತ್ರೋನ್ ಕೇ ಖಿಲಾಡಿ''.. ''ಸೆಲೆಬ್ರೆಟಿ ಮಾಸ್ಟರ್ ಶೆಫ್'' ಕಾರ್ಯಕ್ರಮದಲ್ಲಿ ಕೂಡ ಸ್ಫರ್ಧಿಯಾಗಿ ಭಾಗವಹಿಸಿದರು.

ಇನ್ನೂ ಅರ್ಬಾಜ್ ಪಟೇಲ್ ಅವರ ಬದುಕು ಬದಲಿಸಿದ್ದು ಟಿಕ್ ಟಾಕ್. ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಲೇ MTV ಸ್ಪಿಟ್ಸ್‌ವಿಲ್ಲಾ X5ದಲ್ಲಿ ಭಾಗವಹಿಸಿದ್ದ ಅರ್ಬಾಜ್ ಪಟೇಲ್ ಮರಾಠಿಯ ''ಬಿಗ್ ಬಾಸ್'' ಸೀಸನ್ 5ರಲ್ಲಿ ಕೂಡ ಭಾಗವಹಿಸಿದ್ದರು. ವಿಶೇ‍ಷ ಅಂದರೆ ಈ ಮನೆಗೆ ಮತ್ತೊಬ್ಬ ಸ್ಫರ್ಧಿಯಾಗಿ ನಿಕ್ಕಿ ತಾಂಬೋಲಿ ಕೂಡ ಬಂದಿದ್ದರು. ಇದೇ ಮನೆಯಲ್ಲಿ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು.

ಇಲ್ಲಿಂದಾಚೆ 2024ರಲ್ಲಿ ಇಬ್ಬರು ತಮ್ಮ ಸಂಬಂಧವನ್ನು ಅಧಿಕೃತವಾಗಿ ಘೋಷಿಸಿದರು. ಇಬ್ಬರು ಭವಿಷ್ಯದ ಕುರಿತು ಗಂಭೀರವಾಗಿ ಯೋಚನೆ ಮಾಡುತ್ತಿದ್ದೇವೆ ಎಂದು ಹೇಳಿದರು. ಹಲವು ಸಭೆ-ಸಮಾರಂಭ-ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡರು.

Tears on The 50 Bigg Boss Nikki Tamboli Accepts Arbaz Patel s Proposal Dad s Religious Objection

ಇಂಥಾ ನಿಕ್ಕಿ ತಾಂಬೋಲಿ ಮತ್ತು ಅರ್ಬಾಜ್ ಪಟೇಲ್ ಸದ್ಯ ಹೊಸದಾಗಿ ಶುರುವಾಗಿರುವ ''ದಿ 50'' ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ. ಇದೇ ಸಮಯದಲ್ಲಿ ಮನೆಯ ಉಳಿದ ಸ್ಫರ್ಧಿಗಳ ಎದುರು ನಿಕ್ಕಿ ತಾಂಬೋಲಿಗೆ ಅರ್ಬಾಜ್ ಪಟೇಲ್ ಮಂಡಿಯೂರಿ ಪ್ರಪೋಸ್ ಮಾಡಿದ್ದಾರೆ.

ನಾನು ಇಂದು ನನ್ನ ಸುಂದರ ಸಂಗಾತಿಗೆ ನಿಮ್ಮೆಲ್ಲರ ಮುಂದೆ ಪ್ರಪೋಸ್ ಮಾಡುತ್ತೇನೆ ಎಂದು ಹೇಳಿದ ಅರ್ಬಾಜ್ ನಾನು ತುಂಬಾನೇ ಕೋಪಿಷ್ಟ, ಆದರೆ ಇವಳನ್ನು ನೋಡಿದ ಕೂಡಲೇ ನನ್ನೆಲ್ಲ ಕೋಪ ಕರಗಿ ಹೋಗುತ್ತೆ ಎಂದು ಹೇಳಿದ್ದಾರೆ. ನಿನ್ನನ್ನೂ ನಾನು ತುಂಬಾ ಪ್ರೀತಿಸುತ್ತೇನೆ ಎಂದಿದ್ದಾರೆ.

ಅರ್ಬಾಜ್ ಪಟೇಲ್ ಅವರ ಈ ಪ್ರೇಮ ನಿವೇದನೆಯಿಂದ ಭಾವುಕಗೊಂಡ ನಿಕ್ಕಿ ತಾಂಬೋಲಿ ಈ ಕ್ಷಣಕ್ಕಾಗಿ ನಾನು ತುಂಬಾನೇ ಕಾತುರದಿಂದ ಕಾಯುತ್ತಿದ್ದೆ ಎಂದು ಹೇಳಿದ್ದಾರೆ. ಆದರೆ ನಮ್ಮ ಧರ್ಮ ಬೇರೆ ಬೇರೆ. ಬೇರೆ ಬೇರೆ ಧರ್ಮಗಳಿಗೆ ನಾವು ಸೇರಿದ ಹಿನ್ನೆಲೆ ಇದೇ ಸಮಯದಲ್ಲಿ ನನಗೆ ಭಯ ಕೂಡ ಕಾಡುತ್ತಿದೆ ಎಂದು ಹೇಳಿದ ನಿಕ್ಕಿ ಕಳೆದೊಂದುವರೆ ವರ್ಷದಿಂದ ನಾವು ಜೊತೆಯಲ್ಲಿ ಇದ್ದೇವೆ, ಆದರೂ ಕೂಡ ನನ್ನ ತಂದೆ ನಮ್ಮ ಪ್ರೀತಿಯನ್ನು ಒಪ್ಪಲು ತಯಾರಿಲಲ್ ಎಂದಿದ್ದಾರೆ. ನನ್ನ ತಂದೆಯ ಆಶಯಕ್ಕೆ ವಿರುದ್ಧವಾಗಿ ನಾನು ಹೋಗಿದ್ದೇನೆ ಎಂದು ಕಣ್ಣೀರಾಗಿದ್ದಾರೆ. ನನ್ನ ತಂದೆ ನಮ್ಮ ಪ್ರೀತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಸದ್ಯ ಇವರ ಈ ಲವ್ ಎಪಿಸೋಡ್‌ನ ವಿಡಿಯೋ ಮತ್ತು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕೆಲವರು ನಿಕ್ಕಿ ತಾಂಬೋಲಿ ಅವರ ಪರ ಮಾತನಾಡಿದರೆ, ಇನ್ನೂ ಕೆಲವರು ನಿಕ್ಕಿ ತಾಂಬೋಲಿ ಅವರ ತಂದೆಯ ಪರ ವಕಾಲತ್ತು ವಹಿಸಿ ಮಾತನಾಡುತ್ತಿದ್ದಾರೆ. ಚರ್ಚೆ ಮಾಡುತ್ತಿದ್ದಾರೆ.

More from Filmibeat

English summary
"Nikki Tamboli gets emotional during Arbaz Patel’s grand proposal, revealing a major family rift. The actress opens up about her father’s disapproval due to their different religions. Get the full story on this viral moment from The 50."
Read more about: biggboss love ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X