ಹೊಸ ಫೋಟೋಶೂಟ್‌ನಲ್ಲಿ 'ತಂಗಾಳಿ'ಯಂತೆ ಕಂಡ ಈ ಕಿರುತೆರೆ ನಟಿ ಯಾರು? ಈಕೆಯ ಹಿನ್ನಲೆಯೇನು?

By ಅನಿತಾ ಬನಾರಿ

ಇತ್ತೀಚಿನ ದಿನಗಳಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಿರುವುದು ಸರ್ವೇ ಸಾಮಾನ್ಯ. ಕಿರುತೆರೆ ನಟಿಯರಂತೂ ಆಗಾಗ ಫೋಟೋಶೂಟ್‌ಗಳನ್ನು ಮಾಡಿಸುತ್ತಲೇ ಇರುತ್ತಾರೆ. ಇದೀಗ ಇಶಿತಾ ವರ್ಷ ಸರದಿ‌. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಅಗ್ನಿಸಾಕ್ಷಿ'. ಅದರಲ್ಲಿ ಮಾಯಾ ಆಗಿ ಅಭಿನಯಿಸಿದ್ದ ಇಶಿತಾ ವರ್ಷ ನಟನೆಯ ಹೊರತಾಗಿಯೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್.

ಆಗಾಗ ಫೋಟೋಶೂಟ್‌ಗಳನ್ನು ಮಾಡಿಸುತ್ತಾ ನೆಟ್ಟಿಗರ ಮನ ಸೆಳೆಯುವ ಇಶಿತಾ ವರ್ಷ ಇದೀಗ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ತಕ್ಷಣ ನೋಡಿದಾಗ ಏಂಜಲ್‌ನಂತೆ ಕಾಣುವ ಇಶಿತಾ ವರ್ಷ ಪೋಟೋ ಪಡ್ಡೆಗಳ ದಿಲ್ ಕದ್ದಿದ್ದಾರೆ. ನೆಟ್ಟಿಗರು ಕಂಡು ವಾವ್ ಎಂದು ಉದ್ಗರಿಸಿದ್ದಾರೆ.

Television actress Ishita Varsha shined through a different kind of photoshoot

ಅಂದ ಹಾಗೇ ಇಶಿತಾ ವರ್ಷ ಅವರು ಈ ಫೋಟೋಶೂಟ್ ಅನ್ನು ಕ್ರಿಸ್‌ಮಸ್ ಸಮಯದಲ್ಲಿ ಮಾಡಿಸಿಕೊಂಡಿದ್ದರು. ಇದೀಗ ಎರಡು ದಿನದ ಹಿಂದೆಯಷ್ಟೇ ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಟ್ರಾನ್ಸಪರೆಂಟ್ ಬಿಳಿ ಬಣ್ಣದ ಸೀರೆಯಲ್ಲಿ ಪಕ್ಕಾ ದೇವತೆಯಂತೆ ಆಕೆ ಕಂಗೊಳಿಸಿದ್ದರು. ಅದಕ್ಕೆ ಬಿಳಿಯ ಸ್ಲೀವ್ ಲೆಸ್ ಬ್ಲೌಸನ್ನು ಆಕೆ ಧರಿಸಿದ್ದರು.

ಕೈಯಲ್ಲಿ ಕೆಂಗುಲಾಬಿ ಹಿಡಿದಿರುವ ಆಕೆ ಗುಲಾಬಿ ಹೂಗಳಿಂದ ತಯಾರಿಸಿದ ಮಾಲೆಯನ್ನು ಮುಂದಾಲೆಯಾಗಿ ಬಳಸಿರುವುದು ವಿಶೇಷ. ಇದರ ಜೊತೆಗೆ ಕಿವಿಗೂ ದೊಡ್ಡದ ಜುಮುಕಿ ಧರಿಸಿರುವ ಇಶಿತಾ ಅವರು ಹಂಚಿಕೊಂಡಿರುವ ಈ ಫೋಟೋವನ್ನು ನೆಟ್ಟಿಗರು ಇಷ್ಟ ಪಟ್ಟಿದ್ದಾರೆ. ಮಾತ್ರವಲ್ಲ ಕಮೆಂಟ್‌ಗಳ ಮಹಾಪೂರವೇ ಹರಿದುಬರುತ್ತಿದೆ.

Television actress Ishita Varsha shined through a different kind of photoshoot

ಕೊನೆಯದಾಗಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸರಸು' ಧಾರಾವಾಹಿಯಲ್ಲಿ ಕೊನೆಯ ಬಾರಿ ಕಾಣಿಸಿಕೊಂಡ ಈಕೆ ಅತಿಥಿ ಪಾತ್ರದ ಮೂಲಕ ಗಮನ ಸೆಳೆದಿದ್ದರು. 'ಹೊಸ ಬಾಳಿಗೆ ನೀ ಜೊತೆಯಾದೆ', 'ತಂಗಾಳಿ', 'ಅಸಂಭವ' ಧಾರಾವಾಹಿಗಳಲ್ಲಿ ನಟಿಸಿರುವ ಈಕೆಗೆ ಜನಪ್ರಿಯತೆ ತಂದುಕೊಟ್ಟಿದ್ದು ಮಾತ್ರ 'ಅಗ್ನಿಸಾಕ್ಷಿ' ಧಾರಾವಾಹಿ.

ಇಂದಿಗೂ 'ಅಗ್ನಿಸಾಕ್ಷಿ' ಧಾರಾವಾಹಿಯ ಮಾಯಾ ಎಂದೇ ಗುರುತಿಸಲ್ಪಡುವ ಇಶಿತಾ ವರ್ಷ ಅವರು 'ಅಗ್ನಿಸಾಕ್ಷಿ' ಧಾರಾವಾಹಿಯ ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದು ಕಡಿಮೆಯೇ. ಒಂದರ್ಥದಲ್ಲಿ ನಟಿಸಲೇ ಇಲ್ಲ ಎಂದರೂ ತಪ್ಪಾಗಲಾರದು. 'ಸರಸು' ಧಾರಾವಾಹಿಯಲ್ಲಿ ಅತಿಥಿ ಪಾತ್ರದ ಮೂಲಕ ಗಮನ ಸೆಳೆದ ಈಕೆ ಇದೀಗ ನಟನೆಯಿಂದ ಕೊಂಚ ಬ್ರೇಕ್ ಪಡೆದುಕೊಂಡಿದ್ದಾರೆ. ಸದ್ಯ ವೈಲ್ಡ್ ಲೈಫ್ ಫೋಟೋಗ್ರಫಿಯತ್ತ ತಮ್ಮ ಚಿತ್ತ ಹರಿಸಿರುವ ಇಶಿತಾ ಇಲ್ಲಿಯ ತನಕ ತಾವು ಸೆರೆ ಹಿಡಿದಿರುವ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

More from Filmibeat

English summary
Ishita Varsha, who shined as Agni Sakshi serial Maya is attracting attention with a new photoshoot.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X