ಹೆಣ್ಣು ಮಗುವಿಗೆ ಜನ್ಮ ನೀಡಿದ ಸಂಭ್ರಮದಲ್ಲಿ ನಟಿ ಕಾವ್ಯ ಗೌಡ; ಅತೀ ಖುಷಿಯಾದ ಕ್ಷಣ ಎಂದ ನಟಿ
ರಾಮಭಕ್ತರ ಪಾಲಿಗೆ ನಿನ್ನೆ ಶುಭದಿನ. ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ನಿನ್ನೆ ಬಹಳ ವಿಜೃಂಭಣೆಯಿಂದ ನಡೆದಿರುವುದು ನಮಗೆಲ್ಲಾ ತಿಳಿದೇ ಇದೆ. ಬರೋಬ್ಬರಿ ಐದು ಶತಮಾನಗಳಿಂದ ರಾಮ ಭಕ್ತರು ಕಾಯುತ್ತಿದ್ದ ಆ ಸುಂದರ ಕ್ಷಣ ನಿನ್ನೆ ಒದಗಿಬಂದಿದೆ. ಒಂದೆಡೆ ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಟಾಪನೆಯ ಸಂಭ್ರಮ ಒಂದೆಡೆಯಾದರೆ ಮತ್ತೊಂಡೆ ಕಿರುತೆರೆ ನಟಿ ಕಾವ್ಯ ಗೌಡ ಸಿಹಿಸುದ್ದಿಯನ್ನು ನೀಡಿದ್ದಾರೆ.
ಹೌದು, ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಆದ ದಿನವೇ ಮುದ್ದಾಗ ಹೆಣ್ಣು ಮಗುವಿಗೆ ಕಿರುತೆರೆ ನಟಿ ಕಾವ್ಯ ಗೌಡ ಜನ್ಮ ನೀಡಿದ್ದಾರೆ. ಈ ಸಂತಸದ ವಿಚಾರವನ್ನು ಸ್ವತಃ ಕಾವ್ಯ ಗೌಡ ಅವರೇ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. "ನಮ್ಮ ಜೀವನದ ಅತಿ ಖುಷಿಯಾದ ಕ್ಷಣವನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳಲು ತುಂಬಾ ಖುಷಿಯಾಗುತ್ತಿದೆ. ನಮಗೆ ಹೆಣ್ಣು ಮಗುವಾಗಿದೆ. ತಾಯಿ ಮತ್ತು ಮಗು ಆರೋಗ್ಯವಾಗಿ ಇದ್ದೇವೆ" ಎಂದು ಬರೆದುಕೊಂಡಿದ್ದಾರೆ.

ಇದರ ಜೊತೆಗೆ "ಈ ಜರ್ನಿಯಲ್ಲಿ ನೀವೆಲ್ಲರೂ ತೋರಿಸಿದ ಪ್ರೀತಿ ಮತ್ತು ಸಪೋರ್ಟ್‌ಗೆ ವಂದನೆಗಳು. ಈ ಸಮಯದಲ್ಲಿ ನಿಮ್ಮ ಪ್ರಾರ್ಥನೆಗಳು ನಮಗೆ ಮುಖ್ಯವಾಗಿತ್ತು" ಎಂದು ಕಾವ್ಯ ಇನ್ ಸ್ಟಾಗ್ರಾಂನಲ್ಲಿ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಂದ ಹಾಗೇ ಕಾವ್ಯ ಗೌಡ ಅವರ ಸೀಮಂತ ಇತ್ತೀಚಿಗಷ್ಟೇ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಡೆದಿತ್ತು. ಈ ಶುಭ ಸಮಾರಂಭಕ್ಕೆ ಸೀರಿಯಲ್ ಜೊತೆಗೆ ಸಿನಿಮಾ ತಾರೆಯರು ಕೂಡಾ ಭಾಗವಹಿಸಿದ್ದರು.
ಅಂದ ಹಾಗೇ ಕಾವ್ಯ ಗೌಡ ಅವರು ಕೊನೆಯದಾಗಿ ನಟಿಸಿದ್ದು 'ರಾಧಾ ರಮಣ' ಧಾರಾವಾಹಿ. 'ರಾಧಾ ರಮಣ' ಧಾರಾವಾಹಿಯಲ್ಲಿ ಆರಾಧನಾ ಪಾತ್ರಕ್ಕೆ ಜೀವ ತುಂಬಿದ್ದ ಕಾವ್ಯ ಗೌಡ ಅವರು ತದ ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಮುಂದೆ ತಮ್ಮ ಬಹುಕಾಲದ ಪ್ರಿಯತಮ ಸೋಮಶೇಖರ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಕಾವ್ಯ ಗೌಡ ಅವರು ತಮ್ಮ ಎರಡನೇ ವಿವಾಹ ವಾರ್ಷಿಕೋತ್ಸವದಂದು ತಾವು ತಾಯಿಯಾಗುತ್ತಿರುವ ಸಂತಸದ ವಿಚಾರವನ್ನು ಹಂಚಿಕೊಂಡಿದ್ದರು.

ಬೇಬಿ ಬಂಪ್ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ಆಕೆ ನಾವು ಇಲ್ಲಿಯ ತನಕ ಬಚ್ಚಿಟ್ಟುಕೊಂಡಿದ್ದ ಬೆಸ್ಟ್ ಸೀಕ್ರೆಟ್ ಇದು. ಇದೀಗ ಈ ಸಂತಸದ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. 2024ರಲ್ಲಿ ಮುದ್ದು ಕಂದನ ಆಗಮನವಾಗಲಿದೆ. ಈ ಸುಂದರ ಕ್ಷಣ, ಅನುಭವಕ್ಕಾಗಿ ಕಾಯುತ್ತಿದ್ದೇನೆ" ಎಂದು ಬರೆದುಕೊಂಡಿದ್ದರು.


Click it and Unblock the Notifications











