'ಶ್ರೀರಸ್ತು ಶುಭಮಸ್ತು' ನಟಿ ಲಾವಣ್ಯ ಬಾಲ್ಯದ ಕನಸು ಈಡೇರಿಸಿಕೊಂಡಿದ್ದೇಗೆ ಗೊತ್ತೇ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯೂ ಒಂದು. ವಿಭಿನ್ನ ಕಥಾಹಂದರದ ಜೊತೆಗೆ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿಯೂ ಈ ಧಾರಾವಾಹಿಯು ಯಶಸ್ವಿಯಾಗಿದೆ. ಇನ್ನು 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ನಾಯಕ ಮಾಧವನ ಹಿರಿಸೊಸೆ ಪೂರ್ಣಿಯಾಗಿ ಅಭಿನಯಿಸುತ್ತಿರುವ ಲಾವಣ್ಯ ಮನೋಜ್ಞ ನಟನೆಯ ಮೂಲಕ ಮೋಡಿ ಮಾಡುತ್ತಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ರಮಣ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಲಾವಣ್ಯ ಮುಂದೆ ಕಾರ್ಪೋರೆಟ್ ಕಂಪೆನಿಗೆ ಸೇರಿದರು. ಆದರೆ ಬಾಲ್ಯದಿಂದಲೂ ನಟನೆಯತ್ತ ವಿಶೇಷ ಒಲವು ಹೊಂದಿದ್ದ ಈಕೆಗೆ ಯಾವಾಗ ನಟಿಯಾಗಬೇಕು ಎಂಬ ನಿರ್ಧಾರ ಅತಿಯಾಯಿತೋ ಆಗ ಕೆಲಸಕ್ಕೆ ವಿದಾಯ ಹೇಳಿ ನಟನೆಯತ್ತ ಮುಖ ಮಾಡಿದರು.

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಜ ರಾಣಿ' ಧಾರಾವಾಹಿಯಲ್ಲಿ ನಟಿಸಿದ್ದ ಲಾವಣ್ಯ ಅಲ್ಲೂ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ಮುಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸಂಘರ್ಷ' ಧಾರಾವಾಹಿಯಲ್ಲಿ ನಾಯಕನ ತಂಗಿಯಾಗಿ ಈಕೆ ನಟಿಸಿದರು.
ಪೋಷಕ ಪಾತ್ರಗಳ ಮೂಲಕ ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ಲಾವಣ್ಯ ನಂತರ ನಟಿಸಿದ್ದು ಪೌರಾಣಿಕ ಧಾರಾವಾಹಿಯಲ್ಲಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪೌರಾಣಿಕ ಧಾರಾವಾಹಿ 'ದಾಸ ಪುರಂದರ'ದಲ್ಲಿ ನಾಯಕ ಶ್ರೀನಿವಾಸನ ಚಿಕ್ಕಮ್ಮ ಪದ್ಮಳಾಗಿ ಈಕೆ ಅಭಿನಯಿಸಿದ್ದರು. ಪದ್ಮ ಪಾತ್ರದಲ್ಲಿ ನೆಗೆಟಿವ್ ಜೊತೆಗೆ ಪಾಸಿಟಿವ್ ಪಾತ್ರದಲ್ಲಿ ಮೋಡಿ ಮಾಡಿದ್ದ ಲಾವಣ್ಯ ಸದ್ಯ ಪೂರ್ಣಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ.

ನಟಿ ಲಾವಣ್ಯ ಅವರ ಪತಿ ಕೂಡಾ ನಟ ಹೌದು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಮೃತಧಾರೆ' ಧಾರಾವಾಹಿಯಲ್ಲಿ ನಾಯಕಿ ಭೂಮಿಕಾ ತಮ್ಮ ಜೀವ ಆಗಿ ಅಭಿನಯಿಸಿದ್ದ ಶಶಿ ಹೆಗಡೆ ಅವರೇ ನಟಿ ಲಾವಣ್ಯ ಅವರ ಪತಿ. ಅಂದ ಹಾಗೇ ಲಾವಣ್ಯ ಮತ್ತು ಶಶಿ ಅವರು ಈ ಹಿಂದೆ 'ರಾಜ ರಾಣಿ' ಧಾರಾವಾಹಿಯಲ್ಲಿ ತೆರೆ ಹಂಚಿಕೊಂಡಿದ್ದರು. ಆಶ್ಚರ್ಯ ಎಂದರೆ ಅವರಿಬ್ಬರೂ ಈ ಧಾರಾವಾಹಿಯಲ್ಲಿ ಅವರು ಕಾಣಿಸಿಕೊಂಡಿದ್ದು ಅಣ್ಣ ತಂಗಿಯಾಗಿ.
ಕಳೆದ ವರ್ಷವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಲಾವಣ್ಯ ಮತ್ತು ಶಶಿ ಅವರು ರಿಯಾಲಿಟಿ ಶೋ ವೊಂದರಲ್ಲಿ ಕಾಣಿಸಿಕೊಂಡಿದ್ದರು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೋಡಿ ನಂ 1' ಸೀಸನ್ 2 ರಲ್ಲಿ ಭಾಗವಹಿಸಿದ್ದ ಲಾವಣ್ಯ ಮತ್ತು ಶಶಿ ಪ್ರತಿ ವಾರವೂ ವಿಭಿನ್ನ ಕಾನ್ಸೆಪ್ಟ್ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸಿದ್ದರು. ಮಾತ್ರವಲ್ಲದೇ ಆ ಸೀಸನ್ ನ ವಿನ್ನರ್ ಆಗಿಯೂ ಆ ಜೋಡಿ ಹೊರಹೊಮ್ಮಿದ್ದರು.


Click it and Unblock the Notifications











