'ಸುಬ್ಬಲಕ್ಷ್ಮಿ ಸಂಸಾರ'ದಲ್ಲಿ ಸಂಭ್ರಮೋ ಸಂಭ್ರಮ; ಹೆಣ್ಣು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ಪಂಕಜಾ ಶಿವಣ್ಣ
ನಟ ಭವಾನಿ ಸಿಂಗ್ ಹಾಗೂ ನಟಿ ಪಂಕಜಾ ಶಿವಣ್ಣ ಪ್ರಮೋಶನ್ ಪಡೆದಿದ್ದರೆ. ಹೌದು, ಅಪ್ಪಂದಿರ ದಿನದಂದು ನಟ ಭವಾನಿ ಸಿಂಗ್ ಅಪ್ಪ ಆಗಿ ಭಡ್ತಿ ಪಡೆದಿದ್ದಾರೆ. ಭವಾನಿ ಸಿಂಗ್ ಅವರ ಪತ್ನಿ ಪಂಕಜಾ ಶಿವಣ್ಣ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಶುಭ ಸುದ್ದಿಯನ್ನು ಸ್ವತಃ ಪಂಕಜಾ ಶಿವಣ್ಣ ಅವರೇ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ತಮ್ಮಿಬ್ಬರ ಕೈಗಳ ಮೇಲೆ ಪುಟ್ಟ ಮಗುವಿನ ಕೈ ಇರುವ ಫೋಟೋವೊಂದನ್ನು ಹಂಚಿಕೊಂಡಿರುವ ಪಂಕಜಾ ಶಿವಣ್ಣ" ನಮ್ಮ ಮನೆಗೆ ಪುಟ್ಟ ರಾಜಕುಮಾರಿ ಬಂದಿದ್ದಾಳೆ.
ಈ ತಂದೆಯ ದಿನದಂದು ನಮಗೆ ಹೆಣ್ಣು ಮಗು ಆಗಿದೆ ಎಂದು ಘೋಷಿಸಲು ಬಯಸುತ್ತೇವೆ" ಎಂದು ಬರೆದುಕೊಂಡಿದ್ದಾರೆ.

ಇದರ ಜೊತೆಗೆ "ನಿಮ್ಮ ಬೆಂಬಲವಿಲ್ಲದೆ ಈ ಪ್ರಯಾಣವು ಸುಲಭವಲ್ಲ. ನೀವು ನನ್ನನ್ನು ನಗಿಸಿದ ರೀತಿ ಈ ಪ್ರಯಾಣವನ್ನು ಆನಂದಿಸಿ ಈ ಒಂಭತ್ತು ತಿಂಗಳುಗಳು ಹೇಗೆ ಕಳೆದವು ಎಂದು ನನಗೆ ತಿಳಿದಿರಲಿಲ್ಲ. ನೀನು ಎಷ್ಟೇ ಬ್ಯುಸಿ ಇದ್ದರೂ ನನ್ನ ಜೊತೆ ಇದ್ದೆ. ಮೊದಲ ದಿನದಿಂದ ಲೇಬರ್ ರೂಮ್‌ನಲ್ಲಿ ಕೊನೆಯ ದಿನದವರೆಗೂ ನನ್ನ ಕೈ ಹಿಡಿದು ಚೆಕ್‌ಅಪ್ ಮಾಡಿದ್ದೆ. ಈ ಪಯಣದಲ್ಲಿ ನೀನೇ ನನ್ನ ಶಕ್ತಿ. ಎಲ್ಲವೂ ಸರಿಹೋಗುತ್ತದೆ ಎಂದು ಹೇಳಿ ಧೈರ್ಯ ತುಂಬಿದಿರಿ. ನಾನು ಪ್ರೀತಿಸಿದ ವ್ಯಕ್ತಿ ತಂದೆಯಾಗುವುದನ್ನು ನೋಡುವುದು ತುಂಬಾ ಅದ್ಭುತವಾಗಿದೆ. ಅಪ್ಪಂದಿರ ದಿನದ ಶುಭಾಶಯಗಳು" ಎಂದು ತಮ್ಮ ಪ್ರೀತಿಯ ಪತಿಗೆ ಧನ್ಯವಾದಗಳನ್ನು ಹೇಳಿದ್ದಾರೆ ಪಂಕಜಾ ಶಿವಣ್ಣ.
ಅಂದ ಹಾಗೇ ತಾವು ಪೋಷಕರಾಗಿ ಭಡ್ತಿ ಪಡೆಯುವ ವಿಚಾರವನ್ನು ಸ್ವತಃ ಭವಾನಿ ಸಿಂಗ್ ಅವರೇ ಇತ್ತೀಚೆಗಷ್ಟೇ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಹೌದು,
ಮೆಟರ್ನಿಟಿ ಫೋಟೋಶೂಟ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಭವಾನಿ ಸಿಂಗ್ "ನಮ್ಮ ಸಂಸಾರ ದೊಡ್ಡದಾಗುತ್ತಿದೆ" ಎಂದು ಬರೆದುಕೊಂಡಿದ್ದರು.
'ಸುಬ್ಬಲಕ್ಷ್ಮಿ ಸಂಸಾರ' ಧಾರಾವಾಹಿಯಲ್ಲಿ ಜೊತೆಯಾಗಿ ಭವಾನಿ ಸಿಂಗ್ ಮತ್ತು ಪಂಕಜಾ ಶಿವಣ್ಣ ನಟಿಸಿದ್ದರು. ಧಾರಾವಾಹಿಯಲ್ಲಿ ಜೊತೆಯಲ್ಲಿ ನಟಿಸುತ್ತಿದ್ದಾಗ ಆದ ಪರಿಚಯ ಸ್ನೇಹವಾಗಿ ಬದಲಾಯಿತು. ನಂತರ ಇಬ್ಬರ ನಡುವೆ ಪ್ರೀತಿ ಬೆಳೆಯಿತು. 2019ರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಮದುವೆಯಾಗಿ ಐದು ವರ್ಷದ ಬಳಿಕ ಈ ಜೋಡಿಯ ಬದುಕಿನಲ್ಲಿ ಪುಟ್ಟ ಕಂದಮ್ಮನ ಆಗಮನವಾಗಿದೆ. ಒಟ್ಟಿನಲ್ಲಿ ಮುದ್ದು ಕಂದನ ಆಗಮನದಿಂದ ದಂಪತಿಗಳು ಇಬ್ಬರೂ ಸಂತಸದಿಂದ ಇರುವುದಂತೂ ನಿಜ.


Click it and Unblock the Notifications











