TPL Season-3: ನೋಡಲು ತಯಾರಾಗಿ ಕಿರುತೆರೆ ಕಲಾವಿದರ ಕ್ರಿಕೆಟ್, ಯಾವಾಗ, ಎಲ್ಲಿ ತಿಳಿಯಿರಿ
ದೇಶದಲ್ಲೆಲ್ಲಾ ಕ್ರಿಕೆಟ್ ಫಿವರ್ ಜೋರಾಗೇ ಇದ್ದು, ಹಲವು ನಟ ನಟಿಯರು ಮೈದಾನದಲ್ಲಿ ಕಾಣಿಸಿಕೊಂಡು ತಮ್ಮ ನೆಚ್ಚಿನ ಪಂದ್ಯಗಳನ್ನು ನೋಡಿ ಖುಷಿಪಡುತ್ತಾರೆ. ಸಿನಿಮಾ ಮತ್ತು ಕ್ರಿಕೆಟ್‌ಗೆ ಬಿಡಿಸಲಾರದ ನಂಟು ಕೂಡ ಇದೆ. ಹಲವು ಕ್ರಿಕೆಟ್ ತಾರೆಯರು ಸಿನಿಮಾ ತಾರೆಯರನ್ನು ವರಿಸಿದ್ದಾರೆ. ಸದ್ಯಕ್ಕೆ ಕ್ರಿಕೆಟ್ ಜ್ವರ ಕಿರುತೆರೆಗೂ ಆವರಿಸುತ್ತಿದೆ.
ಕಿರುತೆರೆ ಕಲಾವಿದರ ಕ್ರಿಕೆಟ್ ಈಗಾಗಲೇ ಯಶಸ್ವಿಯಾಗಿ ಎರಡು ಸೀಸನ್ ಮುಗಿದಿದ್ದು, ಮೂರನೇ ಸೀಸನ್‌ಗೆ ತಯಾರಾಗುತ್ತಿದೆ. ಕಲಾವಿದರು ಮತ್ತು ತಂತ್ರಜ್ಞರ ಬದುಕಿಗೆ ಆಸರೆಯಾಗುವ ಉದ್ದೇಶದಿಂದ ಎನ್ 1 ಕ್ರಿಕೆಟ್ ಅಕಾಡೆಮಿಯ ಬಿ.ಆರ್.ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ಟೆಲಿವಿಷನ್ ಪ್ರೀಮಿಯರ್ ಲೀಗ್ ನಡೆಯಲಿದೆ.

ಜನವರಿಯಲ್ಲಿ ಟೆಲಿವಿಷನ್ ಪ್ರೀಮಿಯರ್ ಲೀಗ್
ಈ ಬಾರಿ ಟೆಲಿವಿಷನ್ ಪ್ರೀಮಿಯರ್ ಲೀಗ್‌ನ ಮೂರನೇ ಸೀಸನ್ ಜನವರಿಯಲ್ಲಿ ನಡೆಯಲಿದೆ. ಅದಕ್ಕೂ ಮುನ್ನ ಬೆಂಗಳೂರಿನ ಎಂಎಂ ಲೆಗಸಿಯಲ್ಲಿ ಟಿಪಿಎಲ್ ಸೀಸನ್-3 ಟೀಂ ಲೋಗೋ ಬಿಡುಗಡೆ ಮಾಡಲಾಗಿದೆ. ಪಂದ್ಯಾವಳಿಗೆ ವೀರಶೈವ ವೇದಿಕೆ ಬೆಂಬಲ ನೀಡಿದೆ. TPL ಸೀಸನ್‌ಗೆ ನಮ್ಮ ಸಂಪೂರ್ಣ ಬೆಂಬಲ ಹಾಗು ಯಾವುದೇ ಸಹಾಯ ನಾನು ಮಾಡಲು ಸಿದ್ಧ ಎಂದು ವೀರಶೈವ ವೇದಿಕೆ ರಾಷ್ಟ್ರೀಯ ಅಧ್ಯಕ್ಷ ಜಯಂತ್ ಕುಮಾರ್ ಹೇಳಿದ್ದಾರೆ.
ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್ 3ರ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ಜನವರಿ 24 ರಿಂದ 28ರ ವರೆಗೆ ಐದು ದಿನ ಜರುಗಲಿದೆ. ಒಟ್ಟು 10 ತಂಡಗಳು ಭಾಗಿಯಾಗಲಿದ್ದು, 150 ಮಂದಿ ಆಟಗಾರರು ಮೈದಾನಕ್ಕೆ ಇಳಿಯಲಿದ್ದಾರೆ. ಒಂದು ಟೀಂನಲ್ಲಿ 15 ಜನ ಇರುತ್ತಾರೆ. ಒಂದು ಗ್ರೂಪ್‌ಗೆ 4 ಲೀಗ್ ಮ್ಯಾಚ್, ಲೀಗ್ ಮ್ಯಾಚ್ ಬಳಿಕ ಸೆಮಿ ಫೈನಲ್, ಫೈನಲ್ ನಡೆಯಲಿದೆ. ಒಟ್ಟು 23 ಪಂದ್ಯಾವಳಿ ಇರಲಿದೆ ಎಂದು ಟಿಪಿಎಲ್ ಆಯೋಜಕರಾದ ಸುನಿಲ್ ಕುಮಾರ್ ಬಿ ಆರ್ ಮಾಹಿತಿ ನೀಡಿದ್ದಾರೆ.
ಟಿಪಿಎಲ್ ಸೀಸನ್-3 ತಂಡಗಳು
1.ಅಶ್ವಸೂರ್ಯ ರೈಡರ್ಸ್ (ಹರ್ಷ ಸಿಎಂ ಗೌಡ ನಾಯಕ, ರಂಜಿತ್ ಕುಮಾರ್.ಎಸ್ ಓನರ್)
2. ಗೋಲ್ಡನ್ ಈಗಲ್ (ವಿಹಾನ್ ನಾಯಕ, ಕುಶಾಲ್ ಗೌಡ ಓನರ್)
3. ಕೆಕೆಆರ್ ಮೀಡಿಯಾ ಹೌಸ್ (ಅರುಣ್ ರಾಮ್ ಗೌಡ ನಾಯಕ, ಲಕ್ಷ್ಮೀ ಕಾಂತ್ ರೆಡ್ಡಿ ಓನರ್)
4. ಖುಷಿ 11 (ಅಲಕ್ ನಂದ ಶ್ರೀನಿವಾಸ್ ನಾಯಕ, ಅನಿಲ್ ಬಿಆರ್ ಓನರ್)
5. ಎವಿಆರ್ ಟಸ್ಕರ್ (ಚೇತನ್ ಸೂರ್ಯ ನಾಯಕ, ಅರವಿಂದ್ ವೆಂಕಟ್ ರೆಡ್ಡಿ ಓನರ್)
6. ರಾಸು ವಾರಿಯರ್ (ದೀಕ್ಷಿತ್ ಶೆಟ್ಟಿ ನಾಯಕ, ರಘು ಭಟ್ ಓನರ್)
7. ಭಜರಂಗಿ ಬಾಯ್ಸ್ (ಸಾಗರ್ ಬಿಳಿಗೌಡ ನಾಯಕ, ಸ್ವಸ್ತಿಕ್ ಆರ್ಯ ಓನರ್)
8. ದಿ ಬುಲ್ ಸ್ಕ್ವಾಡ್ (ಶರತ್ ಪದ್ಮಾನಾಭ್ ನಾಯಕ, ಮೋನಿಶ್ ಓನರ್)
9. ಇನ್‌ಸೇನ್ ಕ್ರಿಕೆಟ್ ಟೀಂ (ರವಿಶಂಕರ್ ಗೌಡ ನಾಯಕ, ಫೈಜಾನ್ ಖಾನ್ ಓನರ್)
10. ಜಿಎಲ್‌ಆರ್ ವಾರಿಯರ್ಸ್ (ಲೂಸ್ ಮಾದ ಯೋಗಿ ನಾಯಕ, ರಾಜೇಶ್ ಎಲ್ ಓನರ್)

ಟಿಪಿಎಲ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ರಾಗಿಣಿ ದ್ವಿವೇದಿ ಇದ್ದಾರೆ. ಒಟ್ಟು 102 ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಸಾಥ್ ಕೊಡಲಿದ್ದಾರೆ. ಈ 10 ತಂಡಗಳಿಗೂ ಅಂಬಾಸಿಡರ್ ಹಾಗೂ ಓನರ್‌ಗಳಿರಲಿದ್ದಾರೆ. ಎವಿಆರ್ ಗ್ರೂಪ್ ಹೆಚ್.ವೆಂಕಟೇಶ್ ರೆಡ್ಡಿ ಹಾಗೂ ಅರವಿಂದ್ ವೆಂಕಟೇಶ್ ರೆಡ್ಡಿ ಟೈಟಲ್ ಸ್ಪಾನ್ಸರ್ ಮಾಡಿದ್ದಾರೆ. ಈ ಬಾರಿಯ ಟೆಲಿಮಿಷನ್ ಪ್ರೀಮಿಯರ್ ಲೀಗ್ ಸೀಸನ್-3ನಲ್ಲಿ ಮಾಧ್ಯಮದವರಿಗೂ ಅವಕಾಶ ನೀಡಲಾಗಿದೆ. ಮ್ಯಾನ್ ಆಫ್ ದಿ ಸೀರಿಸ್ ಪಟ್ಟ ಪಡೆದವರಿಗೆ ಕಾರು, ಆರೆಂಜ್ ಕ್ಯಾಪ್ ಹೋಲ್ಡರ್ (ಬ್ಯಾಟ್ಸ್‌ಮನ್), ಪರ್ಪಲ್ ಕ್ಯಾಪ್ ಹೋಲ್ಡರ್ (ಬೌಲರ್) ಪಡೆದವರಿಗೆ ಬೈಕ್ ಬಹುಮಾನ ನೀಡಲಾಗುತ್ತದೆ.


Click it and Unblock the Notifications











