twitter
    For Quick Alerts
    ALLOW NOTIFICATIONS  
    For Daily Alerts

    ಹಲವು ಸವಾಲು, ನಿರ್ಬಂಧಗಳ ನಡುವೆ ಧಾರಾವಾಹಿ ಚಿತ್ರೀಕರಣ ಇಂದಿನಿಂದ ಶುರು

    |

    ಕೊರೊನಾ ವೈರಸ್ ಲಾಕ್ ಡೌನ್ ಕಾರಣದಿಂದ ಸುಮಾರು ಎರಡು ತಿಂಗಳಿನಿಂದ ಧಾರಾವಾಹಿಗಳ ಚಿತ್ರೀಕರಣ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದವು. ಚಿತ್ರೀಕರಣ ಪೂರ್ಣಗೊಳಿಸಿ ತಮ್ಮ 'ಬ್ಯಾಂಕ್‌'ನಲ್ಲಿ ಉಳಿದಿದ್ದ ಕಂತುಗಳನ್ನು ಪ್ರಸಾರ ಮಾಡಿದ ನಂತರ ವಾಹಿನಿಗಳು ಕೆಲವು ಧಾರಾವಾಹಿಗಳನ್ನು ಆರಂಭದಿಂದ ಮರುಪ್ರಸಾರ ಮಾಡತೊಡಗಿದ್ದವು.

    Recommended Video

    ಮತ್ತೆ ಒಂದಾದ ಜೊತೆ ಜೊತೆಯಲಿ ತಂಡ ಶೂಟಿಂಗ್ ನಲ್ಲಿ ಭಾಗಿ | Anirudh | JotheJotheyali | Serial Shooting Resumed

    ಧಾರಾವಾಹಿಗಳ ಪ್ರಿಯರು ತಮ್ಮ ನೆಚ್ಚಿನ ಸೀರಿಯಲ್‌ಗಳಿಲ್ಲದೆ ಬೇಸರಗೊಂಡಿದ್ದರು. ಅವರಿಗೆ ಸಂತಸದ ಸುದ್ದಿ ದೊರಕಿದ್ದು, ಇಂದಿನಿಂದ (ಮೇ 25) ಧಾರಾವಾಹಿಗಳ ಚಿತ್ರೀಕರಣ ಆರಂಭವಾಗಿವೆ. ಕೆಲವು ಧಾರಾವಾಹಿಗಳ ನಿರ್ಮಾಣ ಸಂಸ್ಥೆಗಳು ಹಣಕಾಸಿನ ಹೊರೆಯಿಂದಾಗಿ ಧಾರಾವಾಹಿಗಳನ್ನು ಮುಂದುವರಿಸದೆ ಇರಲು ನಿರ್ಧರಿಸಿವೆ ಎನ್ನಲಾಗಿದೆ. ಇದರಿಂದ ಕೆಲವು ಧಾರಾವಾಹಿಗಳು ಕಾಯಂ ಆಗಿ ನಿಂತುಹೋಗುವ ಸಾಧ್ಯತೆ ಇದೆ. ಆದರೆ ಅನೇಕ ಜನಪ್ರಿಯ ಧಾರಾವಾಹಿಗಳು ಮರುಜೀವ ಪಡೆದುಕೊಂಡಿವೆ. ಮುಂದೆ ಓದಿ...

    ಸೋಮವಾರದಿಂದ ಧಾರಾವಾಹಿಗಳ ಚಿತ್ರೀಕರಣ ಆರಂಭ: ಎಲ್ಲೆಲ್ಲಿ ಹೇಗೆ?ಸೋಮವಾರದಿಂದ ಧಾರಾವಾಹಿಗಳ ಚಿತ್ರೀಕರಣ ಆರಂಭ: ಎಲ್ಲೆಲ್ಲಿ ಹೇಗೆ?

    ಸೋಮವಾರದಿಂದ ಆರಂಭ

    ಸೋಮವಾರದಿಂದ ಆರಂಭ

    ಸರ್ಕಾರ ವಿಧಿಸಿರುವ ವಿವಿಧ ನಿಬಂಧನೆಗಳಿಗೆ ಅನುಗುಣವಾಗಿ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಸೋಮವಾರದಿಂದ ಧಾರಾವಾಹಿಗಳ ಚಿತ್ರೀಕರಣಕ್ಕೆ ಮರು ಚಾಲನೆ ನೀಡಲಾಗಿದೆ. ಹಾಗೆಂದು ಸೋಮವಾರದಿಂದಲೇ ಧಾರಾವಾಹಿಗಳ ಪ್ರಸಾರ ಆರಂಭವಾಗುವುದಿಲ್ಲ.

    ಒಂದು ವಾರ ಸಮಯ ಬೇಕು

    ಒಂದು ವಾರ ಸಮಯ ಬೇಕು

    ಧಾರಾವಾಹಿಗಳ ಚಿತ್ರೀಕರಣದ ನಂತರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಸಮಯ ತೆಗೆದುಕೊಳ್ಳುತ್ತದೆ. ಹಾಗೆಯೇ ಧಾರಾವಾಹಿ ಪ್ರಸಾರ ಆರಂಭ ಮಾಡುವ ಮೂಲಕ ಕೆಲವು ಕಂತುಗಳಿಗಾಗುವಷ್ಟು ಚಿತ್ರೀಕರಣ ಪೂರ್ಣಗೊಳಿಸಬೇಕು. ಹೀಗಾಗಿ ಧಾರಾವಾಹಿಗಳ ಹೊಸ ಕಂತುಗಳ ಪ್ರಸಾರ ಆರಂಭಕ್ಕೆ ಒಂದು ವಾರವಾದರೂ ಸಮಯ ಬೇಕಾಗುತ್ತದೆ.

    ಧಾರಾವಾಹಿ ಶೂಟಿಂಗ್ ಮಾಡಲು ಈ ನಿಯಮಗಳನ್ನು ಪಾಲಿಸಲೇಬೇಕುಧಾರಾವಾಹಿ ಶೂಟಿಂಗ್ ಮಾಡಲು ಈ ನಿಯಮಗಳನ್ನು ಪಾಲಿಸಲೇಬೇಕು

    ಎಲ್ಲ ಧಾರಾವಾಹಿಗಳೂ ಶುರುವಾಗುತ್ತಿಲ್ಲ

    ಎಲ್ಲ ಧಾರಾವಾಹಿಗಳೂ ಶುರುವಾಗುತ್ತಿಲ್ಲ

    ಖಾಸಗಿ ವಾಹಿನಿಗಳು ಈಗಾಗಲೇ ವಿವಿಧ ಧಾರಾವಾಹಿಗಳು ಜೂನ್ 1ರಿಂದ ಪ್ರಸಾರವಾಗಲಿವೆ ಎಂಬ ಮಾಹಿತಿ ನೀಡಿವೆ. ಆದರೆ ಎಲ್ಲ ಧಾರಾವಾಹಿಗಳೂ ಹೊಸ ಕಂತುಗಳ ಪ್ರಸಾರ ಆರಂಭಿಸುತ್ತಿಲ್ಲ. 'ರಂಗನಾಯಕಿ' ಧಾರಾವಾಹಿ ಹೊಸ ಕಂತುಗಳು ಪ್ರಸಾರವಾಗುತ್ತಿಲ್ಲ. ಕೆಲವು ವಾಹಿನಿಗಳು ಡಬ್ಬಿಂಗ್ ಧಾರಾವಾಹಿಗಳ ಪ್ರಸಾರ ಆರಂಭಿಸಿರುವುದರಿಂದ ಅವುಗಳನ್ನು ಮುಂದುವರಿಸಿಕೊಂಡು ಹೋಗಲಿದ್ದು, ಒಂದಷ್ಟು ಧಾರಾವಾಹಿಗಳ ಹೊಸ ಕಂತುಗಳ ಪ್ರಸಾರ ಇನ್ನೂ ವಿಳಂಬವಾಗಬಹುದು.

    ಧಾರಾವಾಹಿಗಳ ಚಿತ್ರೀಕರಣಕ್ಕೆ ಸರ್ಕಾರ ವಿಧಿಸಿರುವ ಷರತ್ತುಗಳೇನು?: ಇಲ್ಲಿದೆ ವಿವರಧಾರಾವಾಹಿಗಳ ಚಿತ್ರೀಕರಣಕ್ಕೆ ಸರ್ಕಾರ ವಿಧಿಸಿರುವ ಷರತ್ತುಗಳೇನು?: ಇಲ್ಲಿದೆ ವಿವರ

    ದಿನಕ್ಕೆ ಒಂದೇ ಕಂತು

    ದಿನಕ್ಕೆ ಒಂದೇ ಕಂತು

    ಈ ಮುಂಚೆ ಒಮ್ಮೊಮ್ಮೆ ರಾತ್ರಿ ಹನ್ನೆರಡು ಗಂಟೆಯವರೆಗೂ ಶೂಟಿಂಗ್ ನಡೆಯುತ್ತಿತ್ತು. ಈಗ ಹಾಗೆ ಮಾಡಲು ಅವಕಾಶವಿಲ್ಲ. ಹಾಗೆಯೇ ಒಂದು ದಿನಕ್ಕೆ ಒಂದು ಎಪಿಸೋಡ್‌ಗೆ ಆಗುವಷ್ಟು ಮಾತ್ರವೇ ಚಿತ್ರೀಕರಿಸಲು ಸಾಧ್ಯ. ನಿರ್ದೇಶಕರಾಗಿ ನಮಗೆ ಇದು ದೊಡ್ಡ ಸವಾಲು. ಕಥೆಯಲ್ಲಿ ರಾಜಿಯಾಗದಂತೆ, ಸೀಮಿತ ಕಲಾವಿದರು, ತಂತ್ರಜ್ಞರನ್ನು ಬಳಸಿಕೊಂಡು ಚಿತ್ರೀಕರಿಸಬೇಕು' ಎಂದು 'ನನ್ನರಸಿ ರಾಧೆ' ಧಾರಾವಾಹಿ ನಿರ್ದೇಶಕ ವಿನೋದ್ ಧೋಂದಲೆ 'ಫಿಲ್ಮಿಬೀಟ್'ಗೆ ಮಾಹಿತಿ ನೀಡಿದರು.

    English summary
    Some of private television serials have started their works from Monday as per the government's guidelines.
    Tuesday, May 26, 2020, 22:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X