For Quick Alerts
  ALLOW NOTIFICATIONS  
  For Daily Alerts

  ತೆಲುಗು ಬಿಗ್‌ಬಾಸ್ ಆಯೋಜಕರ ಮೇಲೆ ಮತ್ತೊಂದು ಗಂಭೀರ ಆರೋಪ

  |

  ತೆಲುಗು ಬಿಗ್‌ಬಾಸ್‌ ಒಳ್ಳೆಯ ಟಿಆರ್‌ಪಿ ಯನ್ನೇ ಕಲೆಹಾಕುತ್ತಿದೆ. ಆದರೆ ಬಿಗ್‌ಬಾಸ್ ಆಯೋಜಕರ ಮೇಲೆ ಅನುಮಾನ ಹುಟ್ಟುವಂತೆ ಆರೋಪಗಳೂ ಸಹ ಕೇಳಿಬರುತ್ತಿವೆ.

  ಕೆಲವು ದಿನಗಳ ಹಿಂದಷ್ಟೆ ಬಿಗ್‌ಬಾಸ್‌ ನಿಂದ ಹೊರಬಂದ ಸ್ಪರ್ಧಿ ಕರಾಟೆ ಕಲ್ಯಾಣಿ, ಬಿಗ್‌ಬಾಸ್ ಆಯೋಜಕರು ಎಲಿಮಿನೇಶನ್ ಅನ್ನು ಪಾರದರ್ಶಕವಾಗಿ, ನ್ಯಾಯಯುತವಾಗಿ ಮಾಡುತ್ತಿಲ್ಲ ಎಂದು ಆರೋಪ ಮಾಡಿದ್ದರು. ಈಗ ಮತ್ತೊಂದು ಆರೋಪವನ್ನು ಮತ್ತೊಬ್ಬ ಸ್ಪರ್ಧಿ ಮಾಡಿದ್ದಾರೆ.

  ಶಿರಾ ಉಪಚುನಾವಣೆ ಕಣಕ್ಕೆ ಧುಮುಕಲಿದ್ದಾರೆ ಬಿಗ್‌ಬಾಸ್ ಮಾಜಿ ಸ್ಪರ್ಧಿ

  ವೈಲ್ಡ್‌ ಕಾರ್ಡ್ ಎಂಟ್ರಿ ಪಡೆದಿದ್ದ ನಟಿ ಸ್ವಾತಿ ದೀಕ್ಷಿತ್‌, ಹೋದಷ್ಟೇ ಬೇಗ ಬಿಗ್‌ಬಾಸ್ ಮನೆಯಿಂದ ಹೊರಬಂದರು. ಆದರೆ ಹೊರಗೆ ಬಂದ ನಂತರ ಬಿಗ್‌ಬಾಸ್ ಮತ್ತು ನಾಗಾರ್ಜುನ ವಿರುದ್ಧ ಆರೋಪ ಮಾಡಿದ್ದಾರೆ.

  ನಾನು ಒಳಗೆ ಹೋದಾಗ ಚೆನ್ನಾಗಿಯೇ ಆಟವಾಡಿದ್ದೆ, ಚೆನ್ನಾಗಿಯೇ ಪ್ರದರ್ಶನ ನೀಡಿದ್ದೆ. ಆದರೆ ನಾನು ಚೆನ್ನಾಗಿ ಆಡಿದ ಭಾಗಗಳನ್ನು ಆಯೋಜಕರು ಅಳಿಸಿ ಹಾಕಿ ಉಳಿದ ದೃಶ್ಯಗಳನ್ನಷ್ಟೆ ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ ಸ್ವಾತಿ ದೀಕ್ಷಿತ್‌.

  ತೆಲುಗು ಬಿಗ್‌ಬಾಸ್: ಸ್ಪರ್ಧಿಯೊಬ್ಬರ ಅಪಹರಣ, ಮನೆಯೊಳಗೆ ಸಖತ್ ಹೈಡ್ರಾಮಾ

  'ಜನರಿಗೆ ಚೆನ್ನಾಗಿ ಮನರಂಜಿಸದಿದ್ದರೆ ಜನರು ಮತ ಹಾಕುವುದಿಲ್ಲ, ಸ್ವಾತಿ ಗೆ ಆದ ಗತಿಯೇ ನಿಮಗೂ ಆಗುತ್ತದೆ' ಎಂದು ನಾಗಾರ್ಜುನ ಎಪಿಸೋಡ್‌ನಲ್ಲಿ ಹೇಳಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸ್ವಾತಿ, ಹೊರಬಂದ ಆಟಗಾರರ ಬಗ್ಗೆ ನಾಗಾರ್ಜುನ ಹಾಗೆ ಹೇಳುವುದು ತರವಲ್ಲ, ನಾನು ಪೂರ್ಣ ಪರಿಶ್ರಮ ಹಾಕಿಯೇ ಆಟವಾಡಿದ್ದೆ' ಎಂದಿದ್ದಾರೆ.

  Read more about: bigg boss telugu tv
  English summary
  Bigg Boss 4 Contestant Swati Deekshit alleged that bigg boss organizers not playing fair with some contestants.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X