ಬಿಗ್‌ಬಾಸ್: ಯಾರು ಎಷ್ಟು ಪಡೆದರು-ಯಾರಿಗೆ ಒಲಿಯಿತು ಅದೃಷ್ಟ?

ತೆಲುಗು ಬಿಗ್‌ಬಾಸ್ 4 ನಿನ್ನೆಯಷ್ಟೆ ಮುಗಿದಿದೆ. ಎಲ್ಲರ ನಿರೀಕ್ಷೆಯಂತೆ ಅಭಿಜಿತ್ ದುದ್ದಲ ಬಿಗ್‌ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. 25 ಲಕ್ಷ ಬಹುಮಾನದ ಮೊತ್ತ ಮತ್ತು ಟ್ರೋಫಿಯನ್ನು ಮನೆಗೊಯ್ದಿದ್ದಾರೆ.

ಆದರೆ ಬಿಗ್‌ಬಾಸ್‌ ನಲ್ಲಿ ಗೆದ್ದವರು ಮಾತ್ರವೇ ಹಣ ಗಳಿಸುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವುದೇ. ಅಂತಿಮ ಹಂತದ ವರೆಗೆ ಬಂದವರಿಗೆ, ಹಲವು ಬಹುಮಾನಗಳು, ನಿರೂಪಕರಿಂದ ಖಾಸಗಿ ಬಹುಮಾನಗಳು ಪ್ರಾಪ್ತಿಯಾಗುತ್ತವೆ.

ನಿನ್ನೆಯ ತೆಲುಗು ಬಿಗ್‌ಬಾಸ್ 4 ಫೈನಲ್‌ನಲ್ಲಿ ಹೀಗೆಯೇ ಆಗಿದೆ. ಅಭಿಜಿತ್ ಬಿಗ್‌ಬಾಸ್ 4 ನ ವಿನ್ನರ್ ಆದರು. ಆದರೆ ಇನ್ನೂ ಕೆಲವರಿಗೆ ಕೆಲವು ಬಹುಮಾನಗಳು ದೊರೆತವು. ಕೆಲವರ ಅದೃಷ್ಟ ನಿನ್ನೆಯ ಬಿಗ್‌ಬಾಸ್ ಫೈನಲ್‌ ವೇದಿಕೆ ಮೇಲೆ ಬದಲಾಯಿತು.

ಅಂತಿಮ ಹಂತದಲ್ಲಿ ಬಿಗ್‌ಬಾಸ್ ಮನೆಯಲ್ಲಿ ನಾಲ್ಕು ಮಂದಿ ಉಳಿದಿದ್ದರು. ಅಭಿಜಿತ್ ದುದ್ದಲ, ಶೋಹೆಲ್, ಮೆಹಬೂಬ್, ಅಖಿಲ್, ದೇವಿ.

25+10 ಲಕ್ಷ ಹಣ, ಸಿನಿಮಾದಲ್ಲಿ ಅವಕಾಶ

25+10 ಲಕ್ಷ ಹಣ, ಸಿನಿಮಾದಲ್ಲಿ ಅವಕಾಶ

25 ಲಕ್ಷ ಪಡೆದು ಆಟವನ್ನು ಕ್ವಿಟ್ ಮಾಡಿದರು ಸೋಹೆಲ್. ವಿಶೇಷವೆಂದರೆ ಅವರಿಗೆ ನಾಗಾರ್ಜುನ ಪ್ರತ್ಯೇಕವಾಗಿ 10 ಲಕ್ಷ ಹಣ ಹಾಗೂ ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಹೇಳಿದರು. ಅಷ್ಟೇ ಅಲ್ಲದೆ, ಚಿರಂಜೀವಿ ಸ್ವತಃ ನಾನೇ ನಿನ್ನ ಸಿನಿಮಾದ ಕಾರ್ಯಕ್ರಮಕ್ಕೆ ಬರುತ್ತೇನೆ ಎಂದು ಪ್ರಮಾಣ ಮಾಡಿದರು.

ಮೆಹಬೂಬ್‌ಗೆ 10 ಲಕ್ಷ

ಮೆಹಬೂಬ್‌ಗೆ 10 ಲಕ್ಷ

ಸ್ಪರ್ಧಿ ಮೆಹಬೂಬ್‌ಗೆ ನಟ ಚಿರಂಜೀವಿ 10 ಲಕ್ಷ ಹಣ ನೀಡುವುದಾಗಿ ವೇದಿಕೆ ಮೇಲೆ ಘೋಷಿಸಿದರು. ಖಾಲಿ ಕೈಯಲ್ಲಿ ಮರಳುತ್ತಿದ್ದ ಮೆಹಬೂಬ್‌ಗೆ ಇದು ಸಮಾಧಾನಕರ ಬಹುಮಾನದಂತೆ ಒದಗಿಬಂತು.

ದೇವಿಗೆ ಚಿರಂಜೀವಿ ಸಿನಿಮಾದಲ್ಲಿ ಅವಕಾಶ

ದೇವಿಗೆ ಚಿರಂಜೀವಿ ಸಿನಿಮಾದಲ್ಲಿ ಅವಕಾಶ

ಇನ್ನು ದೇವಿಗೆ ಚಿರಂಜೀವಿ ದೊಡ್ಡ ಆಫರ್ ಅನ್ನೇ ನೀಡಿಬಿಟ್ಟರು. ದೇವಿಗೆ ತಮ್ಮ ಸಿನಿಮಾದಲ್ಲಿ ನಟಿಸುವ ಅವಕಾಶ ಕೊಟ್ಟರು ಚಿರಂಜೀವಿ. ದೇವಿ, ಚಿರಂಜೀವಿ ಅವರ ಮುಂದಿನ ಸಿನಿಮಾದಲ್ಲಿ ಅವರೊಟ್ಟಿಗೆ ನಟಿಸಲಿದ್ದಾರೆ.

Recommended Video

S Narayan ಗೆ ಗೌರವ ಡಾಕ್ಟರೇಟ್ | Filmibeat Kannada
ಅಖಿಲ್ ಗೆ ಏನೂ ಸಿಗಲಿಲ್ಲ!

ಅಖಿಲ್ ಗೆ ಏನೂ ಸಿಗಲಿಲ್ಲ!

ರನ್ನರ್ ಅಫ್ ಆದ ಅಖಿಲ್ ಗೆ ಏನೂ ಸಿಗಲಿಲ್ಲ. ಅವರಿಗೆ ಪ್ರತ್ಯೇಕವಾಗಿ ಹಣ ಸಿಗಲಿಲ್ಲ. ಅಥವಾ ಸಿನಿಮಾದಲ್ಲಿ ಅವಕಾಶಗಳು ಸಹ ಸಿಗಲಿಲ್ಲ. ಈ ಬಗ್ಗೆ ಮೀಮ್‌ಗಳು ಹರಿದಾಡುತ್ತಿವೆ.

More from Filmibeat

English summary
Telugu bigg boss 4 ended yesterday. Abijeet became winner. Some other contestants also got money from Nagarjuna and Chiranjeevi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X