Bigg Boss: ತೆಲುಗು ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟ ಕನ್ನಡತಿ ಯಶ್ಮಿ ಗೌಡ ಯಾರು? ಹಿನ್ನೆಲೆಯೇನು?

By ಅನಿತಾ ಬನಾರಿ

ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿಬರುತ್ತಿರುವ 'ಬಿಗ್ ಬಾಸ್' ರಿಯಾಲಿಟಿ ಶೋ ಯಶಸ್ವಿ ಹತ್ತು ಸೀಸನ್‌ಗಳನ್ನು ಪೂರೈಸಿರುವುದು ಕಿರುತೆರೆ ವೀಕ್ಷಕರಿಗೆ ತಿಳಿದೇ ಇದೆ. ಅಷ್ಟೇ ಅಲ್ಲದೇ, ಬಿಗ್ ಬಾಸ್ 11 ಹೊಸ ಸೀಸನ್‌ಗೆ ಕ್ಷಣಗಣನೆ ಶುರುವಾಗಿದೆ‌. ಇದರ ಜೊತೆಗೆ ಮಗದೊಂದು ಸಿಹಿ ಸುದ್ದಿ ಎಂದರೆ ತೆಲುಗು ಬಿಗ್ ಬಾಸ್ ಸೀಸನ್ 8 ಶುರುವಾಗಿದೆ.

ನಾಗಾರ್ಜುನ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಈ ರಿಯಾಲಿಟಿ ಶೋವಿನಲ್ಲಿ ಕನ್ನಡತಿ ಯಶ್ಮಿ ಗೌಡ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ಯಶ್ಮಿ ಗೌಡ ಅವರ ಇನ್‌ಸ್ಟಾಗ್ರಾಂನಲ್ಲಿ ಬಿಗ್ ಬಾಸ್‌ಗೆ ಹೋಗುತ್ತಿರುವ ವಿಚಾರದ ಕುರಿತ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ "ಹೊಸ ಅಧ್ಯಾಯ ಶುರುವಾಗಿದೆ" ಎಂದು ಬರೆದುಕೊಂಡಿದ್ದಾರೆ.

Telugu Bigg Boss 8 contestant Yashmi Gowda acting journey started from modeling

ತೆಲುಗು ಕಿರುತೆರೆಯಲ್ಲಿ ಸಕ್ರಿಯರಾಗಿರುವ ಯಶ್ಮಿ ಗೌಡ ಅವರು 'ವಿದ್ಯಾ ವಿನಾಯಕ' ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟರು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ವಿದ್ಯಾ ವಿನಾಯಕ' ಧಾರಾವಾಹಿಯಲ್ಲಿ ರಕ್ಷಾ ಆಗಿ ಅಭಿನಯಿಸಿದ್ದ ಯಶ್ಮಿ ಗೌಡ ನೆಗೆಟಿವ್ ಛಾಯೆಯಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮೊದಲ ಧಾರಾವಾಹಿಯಲ್ಲಿಯೇ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಆಕೆ ನಂತರ ಹಾರಿದ್ದು ತೆಲುಗು ಕಿರುತೆರೆಗೆ.

ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಾಗಭೈರವಿ' ಧಾರಾವಾಹಿಯಲ್ಲಿ ಈಕೆ ಭೈರವಿಯಾಗಿ ಅಭಿನಯಿಸಿದರು. ಮುಂದೆ ಈ ಧಾರಾವಾಹಿಯು ಅದೇ ಹೆಸರಿನಲ್ಲಿ ಕನ್ನಡಕ್ಕೆ ಡಬ್ ಆಗಿದ್ದು ಭೈರವಿ ಪಾತ್ರದ ಮೂಲಕ ಕನ್ನಡ ಕಿರುತೆರೆಯಲ್ಲಿಯೂ ಈಕೆ ಮೋಡಿ ಮಾಡಿದ್ದರು. ನಂತರ ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕೃಷ್ಣ ಮುಕುಂದ ಮುರಾರಿ' ಧಾರಾವಾಹಿಯಲ್ಲಿ ಮುಕುಂದಳಾಗಿ ಮೋಡಿ ಮಾಡಿದರು.

ಇದೀಗ ತೆಲುಗು ಬಿಗ್ ಬಾಸ್ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟಿರುವ ಈಕೆಗೆ ಸಣ್ಣ ವಯಸ್ಸಿನಿಂದಲೂ ನಟಿಯಾಗಬೇಕು ಎಂಬ ಕನಸಿತ್ತು. ಆದರೆ, ಮನೆಯಲ್ಲಿ ಪೂರಕವಾದ ವಾತಾವರಣವಿರಲಿಲ್ಲ. ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ ಪದವಿ ಪಡೆದಿರುವ ಯಶ್ಮಿ ಗೌಡ ಬಣ್ಣದ ಲೋಕದ ನಂಟು ಬೆಳೆಸಿಕೊಂಡಿದ್ದು ಮಾಡೆಲಿಂಗ್ ಮೂಲಕ.

Telugu Bigg Boss 8 contestant Yashmi Gowda acting journey started from modeling

ಒಂದಲ್ಲ ಒಂದು ದಿನ ನಟಿಯಾಗಬೇಕು, ಬಣ್ಣದ ಲೋಕದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಕಾರಣದಿಂದ ಮಾಡೆಲಿಂಗ್ ಜಗತ್ತಿನಲ್ಲಿ ದೊರೆತ ಎಲ್ಲಾ ಅವಕಾಶಗಳನ್ನು ಬಳಸಿಕೊಂಡರು. 2015 ರ "ಮಿಸ್ ಮೈಸೂರು ಹಾಗೂ 2016 ರಲ್ಲಿ "ಮಿಸ್ ಪೋಟೋಜೆನ್ ಅವಾರ್ಡ್" ಪ್ರಶಸ್ತಿಯನ್ನು ಈಕೆ ಪಡೆದುಕೊಂಡರು.

'ವಿದ್ಯಾ ವಿನಾಯಕ' ರಕ್ಷಾ ಆಗಿ ನಟಿಸುವ ಮೂಲಕ ನಟಿಯಾಗಬೇಕು ಎಂಬ ಕನಸನ್ನು ಈಕೆ ನನಸು ಮಾಡಿಕೊಂಡರು. ಮುಂದೆ ಅದೇ ನಿರ್ದೇಶಕರ 'ಪಾರು' ಧಾರಾವಾಹಿಗೂ ಈಕೆ ಆಡಿಶನ್ ನೀಡಿದ್ದರು‌. ಟೈಟಲ್ ಪಾತ್ರಕ್ಕೂ ಆಯ್ಕೆಯಾಗಿದ್ದರು. ಆದರೆ, ಕೊನೆಯ ಸಮಯದಲ್ಲಿ ಆಕೆಗೆ ಆ ಪಾತ್ರ ಸಿಗಲಿಲ್ಲ. ಅದೇ ಸಮಯದಲ್ಲಿ ತೆಲುಗು ಕಿರುತೆರೆಯಲ್ಲಿ ನಟಿಸುವ ಅವಕಾಶ ಆಕೆಗೆ ಬಂದಿತು.

'ಸ್ವಾತಿ ಚಿನಕುಲು' ಎನ್ನುವ ಧಾರಾವಾಹಿಯಲ್ಲಿ ವೆನಿಲ ಎನ್ನುವ ಪಾತ್ರದಲ್ಲೂ ಕಾಣಿಸಿಕೊಳ್ಳುವ ಮೂಲಕ ಪರಭಾಷೆಯ ಕಿರುತೆರೆಯಲ್ಲಿ ನಟನಾ ಕಂಪನ್ನು ಪಸರಿಸಿದರು ಈಕೆ. ಮುಂದೆ ತೆಲುಗಿನ ಒಂದೆರಡು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಈಕೆ ಇದೀಗ ತೆಲುಗು ಬಿಗ್ ಬಾಸ್‌ನ ಸ್ಪರ್ಧಿಯಾಗಿರುವುದು ಸಂತಸದ ಸಂಗತಿ. ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಈಕೆ ಇದೀಗ ಬಿಗ್ ಬಾಸ್ ಮೂಲಕ ಮತ್ತೊಮ್ಮೆ ವೀಕ್ಷಕರ ಮನ ಸೆಳೆಯುತ್ತಾರಾ? ಅನ್ನೋದು ಕುತೂಹಲದ ಪ್ರಶ್ನೆ.

More from Filmibeat

English summary
Kannada actress Yashmi Gowda entered Telugu Bigg Boss season 8. Do you know is she?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X