ಕೆಟ್ಟದಾಗಿ ಮುಟ್ಟಿದ, ಕೆಟ್ಟ ಸಂಜ್ಞೆ ಮಾಡಿದ: ಬಿಗ್‌ಬಾಸ್ ಸ್ಪರ್ಧಿ ಮೇಲೆ ಸಹ ಸ್ಪರ್ಧಿ ಆರೋಪ

ಬಿಗ್‌ಬಾಸ್‌ ರಿಯಾಲಿಟಿ ಶೋ ಬಹು ಸಮಯದಿಂದ ಭಾರತದ ಹಲವು ಭಾಷೆಗಳಲ್ಲಿ ನಡೆಯುತ್ತಿದೆ. ಬಿಗ್‌ಬಾಸ್ ಮನೆಯಲ್ಲಿ ಹಲವು ಜಗಳಗಳು, ಗಲಾಟೆಗಳು, ಹೊಡೆದಾಟಗಳು, ಅಪ್ಪುಗೆ, ಮುತ್ತು ಇಂಥಹವೆಲ್ಲ ನಡೆದಿವೆ ಆದರೆ ಲೈಂಗಿಕ ದೌರ್ಜನ್ಯದ ಪ್ರಕರಣ ಅಷ್ಟಾಗಿ ಕೇಳಿ ಬಂದಿಲ್ಲ.

ಇದೀಗ ಬಿಗ್‌ಬಾಸ್ ತೆಲುಗು ಸೀಸನ್ 5 ನಡೆಯುತ್ತಿದ್ದು ಮಹಿಳಾ ಸ್ಪರ್ಧಿಯೊಬ್ಬರು ಸಹ ಸ್ಪರ್ಧಿ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.

ತೆಲುಗು ಬಿಗ್‌ಬಾಸ್ ಮನೆಯಲ್ಲಿರುವ ನಟಿ ಪ್ರಿಯಾಂಕಾ, ಸಹ ಸ್ಪರ್ಧಿ ಕಮಿಡಿಯನ್ ಲೊಬೊ ವಿರುದ್ಧ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿದ್ದಾರೆ. ಆದರೆ ಪ್ರಿಯಾಂಕಾ ಈ ಆರೋಪವನ್ನು ಕೆಲವು ಸಹ ಸ್ಪರ್ಧಿಗಳ ಮುಂದಷ್ಟೆ ಮಾಡಿದ್ದಾರೆ ಹೊರತು ಆಯೋಜಕರ ಬಳಿಯಾಗಲಿ ಬಿಗ್‌ಬಾಸ್ ತೆಲುಗು ನಿರೂಪಕ ನಾಗಾರ್ಜುನ ಬಳಿಯಾಗಲಿ ಅಲ್ಲ.

 Telugu Bigg Boss Contestant Priyanka Singh Alleged On Co Contestant Lobo

ಆಗಿದ್ದಿಷ್ಟು, ಬಿಗ್‌ಬಾಸ್ ಮನೆಯಲ್ಲಿ ಕ್ಯಾಪ್ಟೆನ್ಸಿಗಾಗಿ 'ಹೈದರಾಬಾದ್ ಅಮ್ಮಾಯಿ-ಅಮೆರಿಕ ಬುಲ್ಲೊಡು' ಹೆಸರಿನ ಟಾಸ್ಕ್ ನಡೆದಿತ್ತು. ಅದಾದ ಬಳಿಕ ಪ್ರಿಯಾಂಕಾ ಸಹ ಸ್ಪರ್ಧಿಗಳಾದ ಕಾಜಲ್ ಹಾಗೂ ಸಿರಿ ಬಳಿ ಮಾತನಾಡುತ್ತಾ, ಸಹ ಸ್ಪರ್ಧಿ ಲೋಬೊ ನನ್ನನ್ನು ಕೆಟ್ಟದಾಗಿ ಮುಟ್ಟಿದ, ಕೆಟ್ಟದಾಗಿ ನನಗೆ ಸಂಜ್ಞೆ ಮಾಡಿದ ಎಂದಿದ್ದಾರೆ.

ಇದನ್ನು ಕೇಳಿ ಶಾಕ್‌ ಆದ ಕಾಜಲ್ ಹಾಗೂ ಸಿರಿ, ಲೋಬೊ ಹಾಗೆ ಮಾಡಿದಾಗಲೇ ನೀನು ಪ್ರತಿಭಟಿಸಬೇಕಿತ್ತು ಎಂದಿದ್ದಾರೆ. ಇವರು ಹೀಗೆ ಮಾತನಾಡುತ್ತಿರುವಾಗಲೇ ಅಲ್ಲಿಗೆ ಬಂದ ಲೋಬೊ ಇವರೇನು ಮಾತುಕತೆ ಮಾಡುತ್ತಿದ್ದಾರೆ ಎಂದು ಗೊತ್ತಿಲ್ಲದೆ, ನೇರವಾಗಿ ಹೋಗಿ ಪ್ರಿಯಾಂಕಾರನ್ನು ತಬ್ಬಿಕೊಂಡು ಅವರನ್ನು ತಬ್ಬಿಕೊಂಡಿದ್ದಾರೆ. ಆಗ ಪ್ರಿಯಾಂಕಾ, ''ಐ ಲವ್ ಯೂ ಅಣ್ಣಯ್ಯ' ಎಂದಿದ್ದಾರೆ.

ಪ್ರಿಯಾಂಕಾರ ಈ ವರ್ತನೆ ಕಂಡು ಕಾಜಲ್ ಮತ್ತು ಸಿರಿಗೆ ಆಘಾತವಾಗಿದೆ. ಈಗಷ್ಟೆ ಯಾವ ವ್ಯಕ್ತಿಯ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡುತ್ತಿದ್ದಳೊ ಅದೇ ವ್ಯಕ್ತಿಯನ್ನು ತಬ್ಬಿಕೊಂಡು 'ಲವ್ ಯು ಅಣ್ಣ' ಎನ್ನುತ್ತಿದ್ದಾಳಲ್ಲ ಎಂದು ಅವರು ಸಹ ಅವಾಕ್ಕಾಗಿದ್ದಾರೆ.

ಈ ವಿಷಯವನ್ನು ಬಿಗ್‌ಬಾಸ್ ನಿರೂಪಕ ನಾಗಾರ್ಜುನ ವೀಕೆಂಡ್ ಎಪಿಸೋಡ್‌ನಲ್ಲಿ ಚರ್ಚೆಗೆ ಎತ್ತಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ನಿಜವಾಗಿಯೂ ಲೋಬೊ, ಪ್ರಿಯಾಂಕಾ ಜೊತೆ ಕೆಟ್ಟದಾಗಿ ವರ್ತಿಸಿದರಾ ಅಥವಾ ಪ್ರಿಯಾಂಕಾ ಸುಳ್ಳು ಹೇಳಿ ಲೋಬೊ ಬಗ್ಗೆ ಕಟ್ಟ ಅಭಿಪ್ರಾಯ ಮೂಡಲು ಯತ್ನಿಸಿದರಾ ಎಂಬುದು ಗೊತ್ತಾಗಲಿದೆ. ಪ್ರಿಯಾಂಕಾ ಸಿಂಗ್ ಗಂಡಾಗಿದ್ದವರು ಕೆಲವು ತಿಂಗಳ ಹಿಂದೆ ಶಸ್ತ್ರ ಚಿಕಿತ್ಸೆ ಮೂಲಕ ಹೆಣ್ಣಾಗಿ ಪರಿವರ್ತನೆ ಆಗಿದ್ದಾರೆ.

ಕೆಲವು ದಿನಗಳ ಹಿಂದೆ ಸ್ಪರ್ಧಿ ಪ್ರಿಯಾ, ಸಹ ಸ್ಪರ್ಧಿಗಳಾದ ರವಿ ಮತ್ತು ಲಹರಿ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದರು. '' ''ಲಹರಿ ಮನೆಯಲ್ಲಿರುವ ಹುಡುಗರ ಜೊತೆ ಬಹಳ ಕ್ಲೋಸ್‌ ಆಗಿರುತ್ತಾಳೆ. ಎಲ್ಲರೊಟ್ಟಿಗೆ ಅಪ್ಪಿಕೊಳ್ಳುವುದು, ಮುತ್ತು ಕೊಡುವುದು ಮಾಡುತ್ತಾಳೆ. ರವಿ ಮತ್ತು ಲಹರಿ ಮಧ್ಯ ರಾತ್ರಿ ಬಾತ್‌ರೂಮ್‌ ಬಳಿ ಪರಸ್ಪರ ಅಪ್ಪಿಕೊಂಡಿದ್ದಿದ್ದನ್ನು ನಾನು ನೋಡಿದ್ದೇನೆ'' ಎಂದಿದ್ದರು.

More from Filmibeat

English summary
Telugu bigg boss contestant Priyanka Singh alleged that co contestant Lobo inappropriately touched her.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X