ಬಿಗ್ ಬಾಸ್ ಶೋಗಳ TRP ರಿಲೀಸ್ ಮಾಡಿದ 'ಎಂಡೆಮೊಲ್': ಇತಿಹಾಸ ನಿರ್ಮಿಸಿದ ತೆಲುಗು

Recommended Video

ಬಿಗ್ ಬಾಸ್ ಶೋಗಳ TRP ರಿಲೀಸ್ ಮಾಡಿದ ಎಂಡೆಮೊಲ್,ಇತಿಹಾಸ ನಿರ್ಮಿಸಿದ ತೆಲುಗು | Filmibeat Kannada

ಭಾರತ ಜನಪ್ರಿಯ ಯಶಸ್ವಿ ರಿಯಾಲಿಟಿ ಶೋಗಳ ಪೈಕಿ ಬಿಗ್ ಬಾಸ್ ಪ್ರಮುಖವಾದದು. ಹಾಲಿವುಡ್ ನಿಂದ ಭಾರತಕ್ಕೆ ಬಂದಿರುವ ಈ ಶೋ 2006ರಲ್ಲಿ ಮೊದಲ ಸಲ ಹಿಂದಿಯಲ್ಲಿ ಆರಂಭವಾಯಿತು. ಅದಾದ ಬಳಿಕ ಭಾರತದ ವಿವಿಧ ಭಾಷೆಗಳಲ್ಲಿ ಬಿಗ್ ಬಾಸ್ ಪ್ರಸಾರವಾಗಿದೆ.

ಹಿಂದಿಯಲ್ಲಿ 13ನೇ ಆವೃತ್ತಿ, ಕನ್ನಡದಲ್ಲಿ 7ನೇ ಆವೃತ್ತಿ, ತೆಲುಗು, ತಮಿಳು, ಮರಾಠಿ, ಬೆಂಗಾಳಿ ಹಾಗೂ ಮಲಯಾಳಂ ಭಾಷೆಯಲ್ಲಿ ಬಿಗ್ ಬಾಸ್ ಬಂದಿದೆ. ಇಷ್ಟು ವರ್ಷಗಳ ಇತಿಹಾಸದಲ್ಲಿ ಯಾವ ಶೋಗೂ ಸಿಗದ ಟಿ.ಆರ್.ಪಿ ತೆಲುಗಿಗೆ ಸಿಕ್ಕಿದೆ.

ಈ ಮಾಹಿತಿಯನ್ನ ಖುದ್ದು ಬಿಗ್ ಬಾಸ್ ಶೋ ಹಕ್ಕು ಹೊಂದಿರುವ ಎಂಡೆಮೊಲ್ ಬಹಿರಂಗಪಡಿಸಿದೆ. ಅಷ್ಟಕ್ಕೂ, ತೆಲುಗು ಬಿಗ್ ಬಾಸ್ ನಿರ್ಮಿಸಿರುವ ಆ ದಾಖಲೆ ಏನು? ಮುಂದೆ ಓದಿ....

ಅತಿ ಹೆಚ್ಚು TRP ಪಡೆದ ಫೈನಲ್ ಎಪಿಸೋಡ್

ಅತಿ ಹೆಚ್ಚು TRP ಪಡೆದ ಫೈನಲ್ ಎಪಿಸೋಡ್

ಬಿಗ್ ಬಾಸ್ ಎಲ್ಲ ಭಾಷೆಗಳನ್ನು ಒಳಗೊಂಡಂತೆ ಇದುವರೆಗೂ ಯಾವ ಫೈನಲ್ ಎಪಿಸೋಡ್ ಗೂ ಸಿಗದಷ್ಟು ಟಿ.ಆರ್.ಪಿ ಪಡೆದಿದೆ ತೆಲುಗು ಬಿಗ್ ಬಾಸ್ ಮೂರನೇ ಆವೃತ್ತಿಯ ಫೈನಲ್. ಎಂಡೆಮೊಲ್ ಪ್ರಕಟ ಮಾಡಿರುವ ಪ್ರಕಾರ, 4.5 ಗಂಟೆಯಲ್ಲಿ 18.29 ಟಿ.ಆರ್.ಪಿ ರೇಟಿಂಗ್ ಪಡೆದುಕೊಂಡಿದೆ. ಇದು ಬಿಗ್ ಬಾಸ್ ಇತಿಹಾಸದಲ್ಲಿ ಹೊಸ ದಾಖಲೆ ಅಂತೆ.

ಮೋಡಿ ಮಾಡಿದ ನಾಗಾರ್ಜುನ

ಮೋಡಿ ಮಾಡಿದ ನಾಗಾರ್ಜುನ

ಸಲ್ಮಾನ್ ಖಾನ್ ನಿರೂಪಣೆ ಮಾಡುತ್ತಿರುವ ಬಿಗ್ ಬಾಸ್ 13 ಆವೃತ್ತಿ ನಡೆಯುತ್ತಿದೆ. ಸಲ್ಮಾನ್ ಹಾಗೂ ಹಿಂದಿ ಬಿಗ್ ಬಾಸ್ ಗೆ ಹೆಚ್ಚು ವೀಕ್ಷಕರಿದ್ದಾರೆ. ಈ ಕಡೆ ಕನ್ನಡದಲ್ಲಿ ಸುದೀಪ್ ನಡೆಸಿಕೊಡುತ್ತಿರುವ ಕನ್ನಡ ಬಿಗ್ ಬಾಸ್ ಹಾಗೂ ಆ ಕಡೆ ಕಮಲ್ ಹಾಸನ್ ನಡೆಸಿಕೊಡುತ್ತಿರುವ ತಮಿಳು ಬಿಗ್ ಬಾಸ್ ಗೂ ಹೆಚ್ಚು ವೀಕ್ಷಕರಿದ್ದಾರೆ. ಆದರೆ, ಫೈನಲ್ ಎಪಿಸೋಡ್ ಗಳನ್ನ ಲೆಕ್ಕಾಚಾರಕ್ಕೆ ತೆಗೆದುಕೊಂಡಾಗ, ನಾಗಾರ್ಜುನ ಸಾರಥ್ಯದ ತೆಲುಗು 'ಕಿಂಗ್' ಎನಿಸಿಕೊಂಡಿದೆ. ವಿಶೇಷ ಅಂದ್ರೆ ನಾಗಾರ್ಜುನ ಬಿಗ್ ಬಾಸ್ ಹೋಸ್ಟ್ ಮಾಡಿದ್ದು ಇದೇ ಮೊದಲ ಸಲ.

ಫೈನಲ್ ನಲ್ಲಿ ಏನು ಸ್ಪೆಷಲ್ ಇತ್ತು?

ಫೈನಲ್ ನಲ್ಲಿ ಏನು ಸ್ಪೆಷಲ್ ಇತ್ತು?

ತೆಲುಗು ಬಿಗ್ ಬಾಸ್ ಫೈನಲ್ ದಿನ ಅಂತಹದ್ದೇನಿತ್ತು ವಿಶೇಷ ಎಂದು ಗಮನಿಸಿದ್ರೆ, ಅಂದು ಫೈನಲ್ ವೇದಿಕೆ ಮೆಗಾಸ್ಟಾರ್ ಚಿರಂಜೀವಿ ಎಂಟ್ರಿಕೊಟ್ಟಿದ್ದರು. ಚಿರು ಎಂಟ್ರಿಯಿಂದ ಶೋಗೆ ಮತ್ತಷ್ಟು ಟಿ.ಆರ್.ಪಿ ಲಭಿಸಿದೆ ಎನ್ನುತ್ತಿವೆ ಟಾಲಿವುಡ್ ಮೂಲಗಳು.

ಕುತೂಹಲ ಮೂಡಿಸಿದ್ದ ಅಂತಿಮ ಸ್ಪರ್ಧಿಗಳು

ಕುತೂಹಲ ಮೂಡಿಸಿದ್ದ ಅಂತಿಮ ಸ್ಪರ್ಧಿಗಳು

ಇನ್ನು ತೆಲುಗು ಬಿಗ್ ಬಾಸ್ ಮೂರನೇ ಆವೃತ್ತಿ ಯಾರು ಗೆಲ್ಲಬಹುದು ಎಂಬುದು ಭಾರಿ ಸಂಚಲನ ಸೃಷ್ಟಿಸಿತ್ತು. ಫೈನಲ್ ವೇದಿಕೆಯಲ್ಲಿ ರಾಹುಲ್ ಮತ್ತು ಶ್ರೀಮುಖಿ ಇದ್ದರು. ಶ್ರೀಮುಖಿ ಗೆಲ್ಲಬಹುದು ಎಂದು ಕೆಲವರು ಊಹಿಸಿದ್ದರು. ಆದರೆ, ಅಂತಿಮವಾಗಿ ರಾಹುಲ್ ಬಿಗ್ ಬಾಸ್ ಗೆದ್ದಿದ್ದರು. ಈ ಇಬ್ಬರು ಸ್ಪರ್ಧಿಗಳು ಬಗ್ಗೆ ಹೆಚ್ಚು ಕುತೂಹಲ ಇದ್ದ ಕಾರಣ, ಫೈನಲ್ ಗೆ ಹೆಚ್ಚು ವೀಕ್ಷಕರು ಬರುವಂತೆ ಮಾಡಿತ್ತು ಎನ್ನುವುದನ್ನು ಅಲ್ಲೆಗಳೆಯುವಂತಿಲ್ಲ.

ಈ ದಾಖಲೆ ಬ್ರೇಕ್ ಆಗುತ್ತಾ?

ಈ ದಾಖಲೆ ಬ್ರೇಕ್ ಆಗುತ್ತಾ?

ಖುದ್ದು ಬಿಗ್ ಬಾಸ್ ಮಾಲಿಕರಾಗಿರುವ ಎಂಡೆಮೋಲ್ ಸಂಸ್ಥೆ ಈ ಟಿ.ಆರ್.ಪಿ ಪ್ರಕಟ ಮಾಡಿರುವುದರಿಂದ ಇತರೆ ಬಿಗ್ ಬಾಸ್ ಗಳಿಗೆ ಇದು ಪ್ರತಿಷ್ಠೆಯಾಗಿದೆ. ಬಿಗ್ ಬಾಸ್ ಕನ್ನಡ 7ನೇ ಆವೃತ್ತಿ ಹಾಗೂ ಹಿಂದಿ ಬಿಗ್ ಬಾಸ್ 13ನೇ ಆವೃತ್ತಿಯ ಫೈನಲ್ ಮುಂದಿನ ದಿನಗಳಲ್ಲಿ ಪ್ರಸಾರವಾಗಲಿದ್ದು, ತೆಲುಗು ಬಿಗ್ ಬಾಸ್ ನಿರ್ಮಿಸಿರುವ ಈ ದಾಖಲೆ ಬ್ರೇಕ್ ಮಾಡುತ್ತಾ? ಕಾದುನೋಡಬೇಕಿದೆ.

More from Filmibeat

English summary
Bigg Boss Telugu Season 3 Finale scores a TRP of 18.29 for 4.5 hours. this is the highest ever TRP of any Bigg boss across India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X