For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್ ಆರಂಭ: ಸ್ಪರ್ಧಿಗಳು ಇವರೇ ನೋಡಿ

  By ಫಿಲ್ಮೀಬೀಟ್ ಡೆಸ್ಕ್‌
  |

  ತೆಲುಗು ಬಿಗ್‌ಬಾಸ್ 5 ಆರಂಭವಾಗಿದೆ. ಈಗಾಗಲೇ ಸ್ಪರ್ಧಿಗಳು ಒಬ್ಬೊಬ್ಬರಾಗಿ ಮನೆ ಸೇರುತ್ತಿದ್ದಾರೆ. ಕಳೆದ ಬಾರಿಗಿಂತಲೂ ಭಿನ್ನವಾಗಿ ಮನೆಯನ್ನು ರೆಡಿ ಮಾಡಲಾಗಿದ್ದು, ಭಾರಿ ಅದ್ಧೂರಿಯಾಗಿಯೇ ಇದೆ ಬಿಗ್‌ಬಾಸ್ ಮನೆ.

  ತೆಲುಗು ಬಿಗ್‌ಬಾಸ್ ಸೀಸನ್ ನಾಲ್ಕು ಮುಗಿದು ಕೆಲವು ತಿಂಗಳುಗಳು ಕಳೆದಿವೆ. ತುಸು ಬೇಗನೇ ಸೀಸನ್ ಐದನ್ನು ಆರಂಭ ಮಾಡಲಾಗಿದೆ. ಕಳೆದ ಸೀಸನ್ ನಿರೂಪಣೆ ಮಾಡಿದ್ದ ನಾಗಾರ್ಜುನ ಅವರೇ ಸೀಸನ್ 5ನ್ನು ನಿರೂಪಣೆ ಮಾಡಲಿದ್ದಾರೆ.

  ಬಿಗ್‌ಬಾಸ್ ಸೀಸನ್ 5 ರ ಆರಂಭದಲ್ಲಿ ನಾಗಾರ್ಜುನ ಪ್ರೇಕ್ಷಕರನ್ನು ಮೊದಲು ಬಿಗ್‌ಬಾಸ್ ಮನೆಯ ಒಳಕ್ಕೆ ಕರೆದುಕೊಂಡು ಹೋಗಿ ತೋರಿಸಿದ್ದಾರೆ. ಮನರಂಜನೆಯನ್ನು ಗುರಿಯಾಗಿಟ್ಟುಕೊಂಡೆ ಈ ಮನೆಯಲ್ಲಿ ವಿನ್ಯಾಸ ಮಾಡಲಿರುವುದಾಗಿ ಹೇಳಿದ ನಾಗಾರ್ಜುನ, ಈ ಸೀಸನ್ ಕಳೆದ ಸೀಸನ್‌ಗಳಿಗಿಂತಲೂ ಐದು ಪಟ್ಟು ಹೆಚ್ಚು ಮನರಂಜನೆ ನೀಡಲಿದೆ ಎಂದರು.

  ಧಮ್‌ದಾರ್ ಪ್ರಾರಂಭವನ್ನೂ ನೀಡಿದ ನಾಗಾರ್ಜುನ, ತಮ್ಮ ತಂದೆ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಸಿನಿಮಾದ 'ಒಕ ಲೈಲಾ ಕೋಸಂ' ಹಾಡಿಗೆ ನರ್ತಿಸಿದ್ದಾರೆ, ನಂತರ 'ಮಾಸ್ಸು ಮರಣಂ' ಹಾಡಿಗೂ ಕುಣಿದರು ನಾಗಾರ್ಜುನ.

  ಯೂಟ್ಯೂಬರ್ ಸಿರಿ ಮೊದಲ ಸ್ಪರ್ಧಿ

  ಯೂಟ್ಯೂಬರ್ ಸಿರಿ ಮೊದಲ ಸ್ಪರ್ಧಿ

  ತೆಲುಗು ಬಿಗ್‌ಬಾಸ್ ಸೀಸನ್ 5ರ ಮೊದಲ ಸ್ಪರ್ಧಿಯಾಗಿ ಯೂಟ್ಯೂಬರ್ ಸಿರಿಯನ್ನು ಸ್ವಾಗಿತಿಸಿದರು. ಯೂಟ್ಯೂಬರ್ ಆಗಿರುವ ಸಿರಿಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಬೆಂಬಲಿಗರಿದ್ದಾರೆ. ಎರಡನೇ ಕಂಟೆಸ್ಟಂಟ್ ಆಗಿ ನಟ ಸನ್ನಿಯನ್ನು ನಾಗಾರ್ಜುನ ಸ್ವಾಗತಿಸಿದರು.

  'ಅರ್ಜುನ್ ರೆಡ್ಡಿ' ಲಹರಿ

  'ಅರ್ಜುನ್ ರೆಡ್ಡಿ' ಲಹರಿ

  'ಅರ್ಜುನ್ ರೆಡ್ಡಿ' ಸಿನಿಮಾ ಮೂಲಕ ನಟನೆ ಆರಂಭಿಸಿ ಲಹರಿ ಮೂರನೇ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟರು. ವಿಶೇಷ ನೀಲಿ ಗುಲಾಬಿಯನ್ನು ನಾಗಾರ್ಜುನಗೆ ಉಡುಗೊರೆ ನೀಡಿದರು ಲಹರಿ. ಹಾಡುಗಾರ ಶ್ರೀರಾಮಚಂದ್ರ ಐದನೇ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆ ಪ್ರವೇಶ ಮಾಡಿದರು.

  ನೃತ್ಯ ನಿರ್ದೇಶಕಿ ಅನಿ

  ನೃತ್ಯ ನಿರ್ದೇಶಕಿ ಅನಿ

  ನೃತ್ಯ ನಿರ್ದೇಶಕಿ ಅನಿ ಐದನೇ ಸ್ಪರ್ಧಿಯಾಗಿ ಮನೆ ಪ್ರವೇಶ ಮಾಡಿದರು. ನಾಗಾರ್ಜುನ ಜೊತೆ ತಮ್ಮ ಮಗನ ಬಗ್ಗೆ ಮಾತನಾಡುತ್ತಾ ಭಾವುಕರಾಗಿ ಕಣ್ಣೀರು ಹಾಕಿ ಮನೆಯ ಒಳಗೆ ಹೋದರು ಅನಿ. ಆರನೇ ಸ್ಪರ್ಧಿಯಾಗಿ ನಟ ಲೋಬೊ ಮನೆ ಪ್ರವೇಶಿಸಿದರು. ಅವಕಾಶಕ್ಕಾಗಿ ಮಾ ಟಿವಿ ಮುಂದೆ ಹಲವು ಕಾಲ ಕಾಯುತ್ತಿದ್ದ ನಾನು ಇಂದು ಅದೇ ಟಿವಿಯ ಪ್ರಮುಖ ಶೋನಲ್ಲಿ ಸ್ಪರ್ಧಿಯಾಗಿದ್ದಕ್ಕೆ ಹೆಮ್ಮೆ ಇದೆ ಎಂದರು.

  ಏಳನೇ ಸ್ಪರ್ಧಿ ಪ್ರಿಯಾ

  ಏಳನೇ ಸ್ಪರ್ಧಿ ಪ್ರಿಯಾ

  ಟಿವಿ ನಟಿ ಪ್ರಿಯಾ ಏಳನೆ ಸ್ಪರ್ಧಿಯಾಗಿ ಮನೆ ಪ್ರವೇಶ ಮಾಡಿದರು. 'ನಾನು ನನ್ನ ವ್ಯಕ್ತಿತ್ವವನ್ನು ಪರೀಕ್ಷೆ ಮಾಡಿಕೊಳ್ಳಲು ಮನೆಯ ಒಳಕ್ಕೆ ಹೋಗುತ್ತಿದ್ದೇನೆ'' ಎಂದರು ಪ್ರಿಯಾ. ಎಂಟನೇ ಸ್ಪರ್ಧಿಯಾಗಿ ಸೂಪರ್ ಮಾಡೆಲ್ ಜೆಸ್ಸಿ ಮನೆ ಪ್ರವೇಶ ಮಾಡಿದರು.

  ಹೆಣ್ಣಾದ ಪ್ರಿಯಾಂಕಾ ಒಂಬತ್ತನೇ ಸ್ಪರ್ಧಿ

  ಹೆಣ್ಣಾದ ಪ್ರಿಯಾಂಕಾ ಒಂಬತ್ತನೇ ಸ್ಪರ್ಧಿ

  ಒಂಬತ್ತನೇ ಸ್ಪರ್ಧಿಯಾಗಿ ಪ್ರಿಯಾಂಕಾ ಬಿಗ್‌ಬಾಸ್ ಮನೆ ಪ್ರವೇಶ ಮಾಡಿದರು. ಗಂಡಾಗಿ ಹುಟ್ಟಿ ನಂತರ ಶಸ್ತ್ರಚಿಕಿತ್ಸೆ ಮೂಲಕ ಹೆಣ್ಣಾದವರು ಪ್ರಿಯಾಂಕಾ. ಹತ್ತನೇ ಸ್ಪರ್ಧಿಯಾಗಿ ಯೂಟ್ಯೂಬರ್ ಷಣ್ಮುಗ ಬಿಗ್‌ಬಾಸ್ ಮನೆ ಪ್ರವೇಶ ಮಾಡಿದರು.

  ಹನ್ನೊಂದನೇ ಸ್ಪರ್ಧಿ ಹಮೀದಾ

  ಹನ್ನೊಂದನೇ ಸ್ಪರ್ಧಿ ಹಮೀದಾ

  ನಟಿ ಹಮೀದಾ ಹನ್ನೊಂದನೇ ಸ್ಪರ್ಧಿಯಾಗಿ ಮನೆ ಪ್ರವೇಶ ಮಾಡಿದರು. ಹನ್ನೆರಡನೇ ಸ್ಪರ್ಧಿಯಾಗಿ ಡಾನ್ಯರ್ ಮಾಸ್ಟರ್ ನಟರಾಜ್ ಬಿಗ್‌ಬಾಸ್ ಮನೆ ಪ್ರವೇಶ ಮಾಡಿದರು. ನಟರಾಜ್‌ರ ಏಳು ತಿಂಗಳ ಗರ್ಭಿಣಿ ಪತ್ನಿ ಸಹ ವೇದಿಕೆಗೆ ಬಂದು ಪತಿಯನ್ನು ಬೀಳ್ಕೊಟ್ಟರು.

  ಯೂಟ್ಯೂಬರ್ ಸರಯು

  ಯೂಟ್ಯೂಬರ್ ಸರಯು

  ಹದಿಮೂರನೇ ಸ್ಪರ್ಧಿಯಾಗಿ ಯೂಟ್ಯೂಬರ್, ನಟಿ ಸರಯು ಬಿಗ್‌ಬಾಸ್ ಮನೆ ಪ್ರವೇಶ ಮಾಡಿದರು. ಹದಿನಾಲ್ಕನೇ ಸ್ಪರ್ಧಿಯಾಗಿ ವಿಶ್ವ ಮನೆ ಪ್ರವೇಶಿಸಿದರು. ಫೈಟರ್ ಆಗಿರುವ ವಿಶ್ವ ಭಾರತದಲ್ಲಿ WWE ನಡೆದಾಗ ಫೈನಲ್ ಪ್ರವೇಶ ಮಾಡಿದ್ದರಂತೆ. ಅದ್ಭುತ ದೇಹವನ್ನು ವಿಶ್ವ ಪ್ರದರ್ಶಿಸಿದರು.

  ನಟಿ ಉಮಾದೇವಿ ಹದಿನೈದನೇ ಸ್ಪರ್ಧಿ

  ನಟಿ ಉಮಾದೇವಿ ಹದಿನೈದನೇ ಸ್ಪರ್ಧಿ

  ಹದಿನೈದನೇ ಸ್ಪರ್ಧಿಯಾಗಿ ಟಿವಿ ನಟಿ ಉಮಾದೇವಿ ಮನೆ ಪ್ರವೇಶ ಮಾಡಿದರು. ತನ್ನ ಜೀವನದ ಗುರಿಗಳ ಬಗ್ಗೆ ಮಾತನಾಡಿ ಸರಳವಾಗಿ ಮನೆ ಪ್ರವೇಶ ಮಾಡಿದರು ಉಮಾ. ನಟ ಮಾನಸ್ ಹದಿನಾರನೇ ಸ್ಪರ್ಧಿಯಾಗಿ ಮನೆ ಪ್ರವೇಶ ಮಾಡಿದರು. ಪವನ್ ಕಲ್ಯಾಣ್ ಅಭಿಮಾನಿ ಆಗಿರುವ ಮಾನಸ್ ವೇದಿಕೆ ಮೇಲೆ ಅವರಂತೆ ನೃತ್ಯ ಮಾಡಿ, ಮಿಮಿಕ್ರಿ ಸಹ ಮಾಡಿದರು.

  ಆರ್‌ಜೆ ಕಾಜಲ್ ಮತ್ತು ಶ್ವೇತ

  ಆರ್‌ಜೆ ಕಾಜಲ್ ಮತ್ತು ಶ್ವೇತ

  ಹದಿನೇಳನೇ ಸ್ಪರ್ಧಿಯಾಗಿ ರೆಡಿಯೊ ಜಾಕಿ ಮತ್ತು ಡಬ್ಬಿಂಗ್ ಕಲಾವಿದೆ ಕಾಜಲ್ ಬಿಗ್‌ಬಾಸ್ ಮನೆ ಪ್ರವೇಶ ಮಾಡಿದರು. 2009ರಿಂದಲೂ ಕಾಜಲ್ ಡಬ್ಬಿಂಗ್ ಕಲಾವಿದೆಯಾಗಿ ತೆಲುಗು ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಹದಿನೆಂಟನೇ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆ ಪ್ರವೇಶ ಮಾಡಿದ್ದು ನಟಿ, ಮಾಡೆಲ್ ಶ್ವೇತ. ಕೊನೆಯ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟವರು ರವಿ.

  English summary
  Telugu Bigg Boss season 05 started. Nagarjuna hosting show. 18 contestants were entered Bigg Boss house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X