ಮತ್ತೆ ಬಂತು ತೆಲುಗು ಬಿಗ್‌ಬಾಸ್: ಟಿವಿ-ಒಟಿಟಿ ಎರಡರಲ್ಲೂ ಪ್ರಸಾರ!

ಬಿಗ್‌ಬಾಸ್‌ ಕನ್ನಡ ಒಟಿಟಿ ಈಗಾಗಲೇ ಪ್ರಸಾರವಾಗುತ್ತಿದೆ. ಕೇವಲ ವೂಟ್‌ ಒಟಿಟಿಯಲ್ಲಿ ಮಾತ್ರವೇ ಪ್ರಸಾರವಾಗುತ್ತಿರುವ ಈ ರಿಯಾಲಿಟಿ ಶೋ ತಕ್ಕಮಟ್ಟಿಗೆ ಜನರನ್ನು ಸೆಳೆಯುತ್ತಿದೆ.

ಇದೇ ಸಮಯದಲ್ಲಿ ತೆಲುಗು ಬಿಗ್‌ಬಾಸ್‌ ಸಹ ಆರಂಭವಾಗುತ್ತಿದೆ. ನಾಗಾರ್ಜುನ ನಿರೂಪಣೆ ಮಾಡಲಿರುವ ಈ ಶೋ ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, ಇದೇ ಮೊದಲ ಬಾರಿಗೆ ಟಿವಿ ಮತ್ತು ಒಟಿಟಿ ಎರಡರಲ್ಲೂ ಏಕಕಾಲಕ್ಕೆ ಈ ಶೋ ಪ್ರಸಾರವಾಗಲಿದೆ.

ಈಗಾಗಲೇ ಶೋನ ಮೊದಲ ಪ್ರೋಮೋ ಬಿಡುಗಡೆ ಆಗಿದೆ. ನಾಗಾರ್ಜುನ ಅವರೇ ಈ ಬಾರಿಯೂ ಶೋ ನಿರೂಪಣೆ ಮಾಡುವುದು ಖಾತ್ರಿಯಾಗಿದ್ದು ಮಾ ಚಾನೆಲ್‌ನಲ್ಲಿ ಶೋ ಪ್ರಸಾರವಾಗಲಿದೆ. ಅದರ ಜೊತೆಗೆ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿಯೂ ಈ ಶೋ ವಾರದ ಏಳು ದಿನ ದಿನದ 24 ಗಂಟೆ ಲೈವ್‌ನಲ್ಲಿ ಪ್ರಸಾರವಾಗಲಿದೆ.

Telugu Bigg Boss Season 06 Starts Soon, Promo Out Now

ತೆಲುಗು ಬಿಗ್‌ಬಾಸ್ ಶೋ 2017 ರಲ್ಲಿ ಆರಂಭವಾಯಿತು. ಮೊದಲ ಶೋ ಅನ್ನು ಜೂ ಎನ್‌ಟಿಆರ್ ನಿರೂಪಣೆ ಮಾಡಿದರು. ಈ ಶೋ ಉತ್ತಮ ಟಿವಿಆರ್ ಪಡೆದುಕೊಂಡಿತು. ಆದರೆ ಆ ಬಳಿಕ ಎರಡನೇ ಸೀಸನ್‌ನ ವೀವರ್‌ಶಿಪ್‌ನಲ್ಲಿ ಕುಸಿತ ಕಂಡುಬಂತು.

ಮೂರನೇ ಸೀಸನ್ ಅನ್ನು ನಾಗಾರ್ಜುನ ನಿರೂಪಣೆ ಮಾಡಿದರು. ಈ ಶೋ ಬಿಗ್‌ಬಾಸ್ ಇತಿಹಾಸದಲ್ಲೇ ದಾಖಲೆ ಸೃಷ್ಟಿಸಿ, ಭಾರತದಲ್ಲೇ ಇನ್ನಾವ ಭಾಷೆಯೂ ಗಳಿಸದಷ್ಟು ಟಿವಿಆರ್ ಅನ್ನು ಆ ವರ್ಷ ದಾಖಲಿಸಿತು. ಆ ಬಳಿಕ ನಾಲ್ಕನೇ ಸೀಸನ್‌ ಮೂರನೇ ಸೀಸನ್‌ಗಿಂತಲೂ ಜನಪ್ರಿಯವಾಯಿತು. ಸಮಂತಾ ನಿರೂಪಣೆ ಮಾಡಿದ ಎಪಿಸೋಡ್‌ ಅಂತೂ ಅತಿ ಹೆಚ್ಚು ನೋಡಲಾದ ಬಿಗ್‌ಬಾಸ್ ಎಪಿಸೋಡ್‌ ಎಂಬ ಖ್ಯಾತಿ ಗಳಿಸಿತು.

ಕೋವಿಡ್ ಸಮಯದಲ್ಲಿಯೂ ಬಹಳ ಜಾಗರೂಕತೆಯಿಂದ ಕಳೆದ ವರ್ಷ ಬಿಗ್‌ಬಾಸ್ 5 ಮುಗಿಸಿರುವ ತೆಲುಗು, ಇದೀಗ ಬಿಗ್‌ಬಾಸ್ ಸೀಸನ್ 6 ಆರಂಭಿಸುತ್ತಿದೆ. ಪ್ರೋಮೋ ಬಿಡುಗಡೆ ಆಗಿದ್ದು, ''ಲೈಫ್‌ನ ಯಾವುದೇ ಮೂಮೆಂಟ್ ಆಗಿರಲಿ ಅದು ಬಿಗ್‌ಬಾಸ್ ನಂತರವೇ'' ಎಂಬ ಟ್ಯಾಗ್‌ ಲೈನ್ ಜೊತೆಗೆ ಈ ವರ್ಷದ ಬಿಗ್‌ಬಾಸ್ ಬರುತ್ತಿದೆ. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಹಾಗೂ ಟಿವಿ ಎರಡರಲ್ಲೂ ಏಕಕಾಲಕ್ಕೆ ಈ ಶೋ ಪ್ರಸಾರವಾಗುತ್ತಿರುವುದು ವಿಶೇಷ.

ವಿವಿಧ ಭಾಷೆಯ ಬಿಗ್‌ಬಾಸ್ ರಿಯಾಲಿಟಿ ಶೋಗಳಲ್ಲಿ ತೆಲುಗು ಬಿಗ್‌ಬಾಸ್‌ ಹೆಚ್ಚು ಜನಪ್ರಿಯ. ಹಿಂದಿ, ಕನ್ನಡದ ಬಳಿಕ ತೆಲುಗು ಬಿಗ್‌ಬಾಸ್‌ಗೆ ಭಾರಿ ಸಂಖ್ಯೆಯ ವೀಕ್ಷಕರಿದ್ದಾರೆ. ಜೂ ಎನ್‌ಟಿಆರ್, ನಾನಿ, ರಮ್ಯಕೃಷ್ಣ, ಸಮಂತಾ, ನಾಗಾರ್ಜುನ ಅವರುಗಳು ಈವರೆಗೆ ಈ ಶೋ ಅನ್ನು ಹೋಸ್ಟ್ ಮಾಡಿದ್ದಾರೆ. ಆದರೆ ಕಳೆದ ಮೂರು ಸೀಸನ್‌ನಿಂದ ಸತತವಾಗಿ ನಾಗಾರ್ಜುನ ಹೋಸ್ಟ್ ಮಾಡುತ್ತಿದ್ದಾರೆ. ಮಧ್ಯದಲ್ಲಿ ಒಮ್ಮೆ ನಾಗಾರ್ಜುನ 'ವೈಲ್ಡ್ ಡಾಗ್' ಸಿನಿಮಾದ ಚಿತ್ರೀಕರಣಕ್ಕೆ ಹೋದಾಗ ನಟ ಸಮಂತಾ 'ಬಿಗ್‌ಬಾಸ್' ಶೋ ಹೋಸ್ಟ್ ಮಾಡಿದ್ದರು.

Recommended Video

ಇದು ಪವಿತ್ರಾ ಲೋಕೇಶ್- ನರೇಶ್ ಡೇಟಿಂಗ್ ಒಪ್ಪಂದ | Pavithra Lokesh and Naresh *Sandalwood

More from Filmibeat

English summary
Telugu Bigg Boss season 06 will begin soon. Promo out now. Nagarjuna is hosting the show. This time show will telecast on Tv and OTT simultaneously.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X