For Quick Alerts
  ALLOW NOTIFICATIONS  
  For Daily Alerts

  ತೆಲುಗು ಬಿಗ್‌ಬಾಸ್ ಆರಂಭ: ಇಲ್ಲಿದೆ ಎಲ್ಲ ಸ್ಪರ್ಧಿಗಳ ಪಟ್ಟಿ

  |

  ತೆಲುಗು ಬಿಗ್‌ಬಾಸ್ ಆರು ನಿನ್ನೆ ತಡರಾತ್ರಿ ಆರಂಭವಾಗಿದೆ. ಬರೋಬ್ಬರಿ 21 ಸ್ಪರ್ಧಿಗಳು ಈ ಬಾರಿ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ.

  ಅದ್ಧೂರಿಯಾಗಿ ನಡೆದ ಬಿಗ್‌ಬಾಸ್ ಆರಂಭ ಕಾರ್ಯಕ್ರಮದಲ್ಲಿ ಬಾಲಿವುಡ್‌ನ ಜೋಡಿಗಳಾದ ರಣ್ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಕಾಣಿಸಿಕೊಂಡಿದ್ದು ವಿಶೇಷ. ಅತಿಥಿಗಳಾಗಿ ಭಾಗವಹಿಸಿದ್ದು ಮಾತ್ರವಲ್ಲ ತಮ್ಮ ಮುಂಬರುವ ಸಿನಿಮಾ 'ಬ್ರಹ್ಮಾಸ್ತ್ರ' ಸಿನಿಮಾದ ಹಾಡು ಸಹ ಹಾಡಿದರು.

  ಈ ಹಿಂದಿನ ಕೆಲವು ಸೀನಸ್‌ಗಳಂತೆ ಈ ಸೀಸನ್‌ ಅನ್ನು ನಾಗಾರ್ಜುನ ಅವರೇ ನಿರೂಪಣೆ ಮಾಡಲಿದ್ದಾರೆ. ನಾಗಾರ್ಜುನ ನಿರೂಪಣೆ ಮಾಡಿದ್ದ ಕಳೆದೆರಡು ಸೀಸನ್‌ ಟಿಆರ್‌ಪಿ ಗಳಿಕೆಯಲ್ಲಿ ದಾಖಲೆ ಮಾಡಿತ್ತು, ಹಾಗಾಗಿ ಈ ಸೀಸನ್ ಸಹ ದಾಖಲೆ ನಿರ್ಮಿಸಲಿದೆ ಎನ್ನಲಾಗುತ್ತಿದೆ. ಬಿಗ್‌ಬಾಸ್ ಮನೆಗೆ ಎಂಟ್ರಿ ನೀಡಿದ ಸ್ಪರ್ಧಿಗಳ ಪಟ್ಟಿ ಇಲ್ಲಿದೆ ನೋಡಿ.

  ಬಿಗ್‌ಬಾಸ್‌ ತೆಲುಗಿನ ಮೊದಲ ಸ್ಪರ್ಧಿಯಾಗಿ ಒಳಗೆ ಹೋಗಿದ್ದ ತೆಲುಗಿನ 'ಮನಸ್ಸಿಚ್ಚಿ ಚೂಡು' ಧಾರಾವಾಹಿ ನಟಿ ಕೀರ್ತಿ ಭಟ್. ಆಕೆ ತನ್ನ ಇಡೀ ಕುಟುಂಬವನ್ನು ಅಪಘಾತವೊಂದರಲ್ಲಿ ಕಳೆದುಕೊಂಡರು ಮತ್ತು ಆಕೆ ಸಹ ಸತತ ಮೂವತ್ತು ದಿನಗಳ ಕಾಲ ಕೋಮಾದಲ್ಲಿದ್ದರು.

  ನಟಿ ಸುದೀಪಾ ಪಿಂಕಿ ಬಿಗ್‌ಬಾಸ್‌ನ ಎರಡನೇ ಸ್ಪರ್ಧಿ, ಬಾಲನಟಿಯಾಗಿ ಪವನ್ ಕಲ್ಯಾಣ್ ಸೇರಿ ಹಲವರೊಟ್ಟಿಗೆ ಸುದೀಪಾ ನಟಿಸಿದ್ದಾರೆ. ಮೂರನೇ ಸ್ಪರ್ಧಿ ನಟ, ಡ್ಯಾನ್ಸರ್, ಗಾಯಕ, ಕಿರು ಸಿನಿಮಾ ನಿರ್ದೇಶಕ ಹೀಗೆ ಹಲವು ಪ್ರತಿಭೆಗಳನ್ನು ಒಳಗೊಂಡ ಸ್ರಿಹಾನ್, ನಾಲ್ಕನೇ ಕಂಟೆಸ್ಟಂಟ್ ಟಿವಿ ನಿರೂಪಕಿ ಹಾಗೂ ಕ್ರೀಡಾ ವಿಶ್ಲೇಷಕಿ ನೇಹಾ ಚೌಧರಿ. ಹಾಸ್ಯನಟ ಚಾಲಾಕಿ ಚಂಟಿ ಐದನೇ ಸ್ಪರ್ಧಿ.

  ಕೆಲವು ಸಿನಿಮಾಗಳಲ್ಲಿ ನಟಿಸಿರುವ ಶ್ರೀ ಸತ್ಯ ಆರನೇ ಸ್ಪರ್ಧಿ. ಏಳನೇ ಸ್ಪರ್ಧಿಯಾಗಿ ಅರ್ಜುನ್ ಕಲ್ಯಾಣ್ ಎಂಟ್ರಿ ಪಡೆದುಕೊಂಡಿದ್ದಾರೆ. ಎಂಟನೇ ಸ್ಪರ್ಧಿಯಾಗಿ ಗಲಾಟಾ ಗೀತು ಮನೆ ಪ್ರವೇಶಿಸಿದ್ದಾರೆ. ಒಂಬತ್ತೇ ಸ್ಪರ್ಧಿ ನಟಿ ಅನುರಾಧಾ ಪುತ್ರಿ ಅಭಿನಯಶ್ರೀ. ಹತ್ತು ಮತ್ತು ಹನ್ನೊಂದನೇ ಸ್ಪರ್ಧಿಯಾಗಿ ಮರೀನಾ ಅಬ್ರಹಾಂ ಹಾಗೂ ರೋಹಿತ್ ಸಾಹನಿ. ಹನ್ನೆರಡನೇ ಸ್ಪರ್ಧಿಯಾಗಿ ಬಾಲ ಆದಿತ್ಯ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ. ಹದಿಮೂರನೇ ಸ್ಪರ್ಧಿಯಾಗಿ ನಟಿ ವಾಸಂತಿ ಕೃಷ್ಣ ಎಂಟ್ರಿ ಪಡೆದುಕೊಂಡಿದ್ದಾರೆ.

  ಹದಿನಾಲ್ಕನೇ ಸ್ಪರ್ಧಿಯಾಗಿ ಪೋಷಕ ನಟ ಶಾನಿ ಸಲ್ಮಾನ್ ಮನೆ ಪ್ರವೇಶಿಸಿದ್ದಾರೆ. ಹದಿನೈದನೇ ಸ್ಪರ್ಧಿಯಾಗಿ ಇನಾಯಾ ಸುಲ್ತಾನಾ ಮನೆ ಪ್ರವೇಶಿಸಿದ್ದಾರೆ. ರಾಮ್ ಗೋಪಾಲ್ ವರ್ಮಾ ಜೊತೆ ಈಕೆ ಮಾಡಿದ್ದ ಡ್ಯಾನ್ಸ್ ವಿವಾದ ಹುಟ್ಟುಹಾಕಿತ್ತು. ಹದಿನಾರನೇ ಸ್ಪರ್ಧಿಯಾಗಿ ಆರ್‌ಜೆ ಸೂರ್ಯ ಎಂಟ್ರಿ ತೆಗೆದುಕೊಂಡಿದ್ದಾರೆ. ಈತ ಒಳ್ಳೆ ಮಿಮಿಕ್ರಿ ಕಲಾವಿದ ಸಹ. ಹದಿನೇಳನೇ ಸ್ಪರ್ಧಿಯಾಗಿ ಹಾಸ್ಯನಟಿ ಫೈಮಾ ಮನೆ ಪ್ರವೇಶಿಸಿದ್ದಾರೆ. ತೆಲುಗು ಯೂಟ್ಯೂಬರ್ ಆದಿ ರೆಡ್ಡಿ ಬಿಗ್‌ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಹತ್ತೊಂಬತ್ತನೇ ಸ್ಪರ್ಧಿಯಾಗಿ ಮಾಡೆಲ್ ರಾಜ್ ಶೇಖರ್ ಮನೆ ಪ್ರವೇಶಿಸಿದ್ದಾರೆ.

  ಇಪ್ಪತ್ತನೇ ಸ್ಪರ್ಧಿಯಾಗಿ ತೆಲುಗು ನಟಿ ಆರೋಹಿ ರಾವ್ ಮನೆ ಪ್ರವೇಶ ಮಾಡಿದ್ದಾರೆ. 21 ನೇ ಸ್ಪರ್ಧಿಯಾಗಿ ಹಿನ್ನೆಲೆ ಗಾಯಕ ಎಲ್‌ವಿ ರೇವಂತ್ ಬಿಗ್‌ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ದೊಡ್ಡ ಸಂಖ್ಯೆಯ ಸ್ಪರ್ಧಿಗಳು ಮನೆಯ ಒಳಗೆ ಇದ್ದು, ಯಾರು ಗೆಲುವು ಸಾಧಿಸಲಿದ್ದಾರೆ ಕಾದು ನೋಡಬೇಕಿದೆ.

  English summary
  Telugu Bigg Boss season six started on September 04 night. Here is the full list of contestants

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X