ತೆಲುಗು ಬಿಗ್‌ಬಾಸ್ ಮನೆಯಲ್ಲಿ ಕನ್ನಡ ಸ್ಪರ್ಧಿಗಳೇ ಟಾರ್ಗೆಟ್; ಭಾರೀ ಆಕ್ರೋಶ, ಟ್ರೋಲ್
ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲಿ ಕೂಡ ಬಿಗ್‌ಬಾಸ್ ಶೋ ನಡೀತಿದೆ. 8ನೇ ಸೀಸನ್ 10ನೇ ವಾರಕ್ಕೆ ಕಾಲಿಟ್ಟಿದೆ. ವಿಶೇಷ ಅಂದ್ರೆ ಈ ಬಾರಿ ತೆಲುಗು ಬಿಗ್‌ಬಾಸ್ ಮನೆಯಲ್ಲಿ ಕರ್ನಾಕಟ ಮೂಲದ ಸ್ಪರ್ಧಿಗಳು ಇದ್ದಾರೆ.
ಕೆಲ ಕನ್ನಡ ಕಿರುತೆರೆ ನಟ-ನಟಿಯರು ತೆಲುಗು ಧಾರಾವಾಹಿಗಳಲ್ಲಿ ನಟಿಸಿ ಗೆದ್ದಿದ್ದಾರೆ. ಹೀಗೆ ಜನಪ್ರಿಯತೆ ಸಾಧಿಸಿದವರು ನಾಗಾರ್ಜುನ ನಡೆಸಿಕೊಡುವ ಬಿಗ್‌ಬಾಸ್ ಶೋಗೆ ಸ್ಪರ್ಧಿಗಳಾಗಿ ಹೋಗಿದ್ದಾರೆ. ನಟಿಯರಾದ ಪ್ರೇರಣಾ, ಯಶ್ಮಿ ಹಾಗೂ ಪೃಥ್ವಿ, ನಿಖಿಲ್ ಕರ್ನಾಟಕ ಮೂಲದವರು. ಸದ್ಯ ಇವರನ್ನು ಕನ್ನಡ ಬ್ಯಾಚ್ ಎಂದೇ ಕೆಲವರು ಕರೆಯಲು ಆರಂಭಿಸಿದ್ದಾರೆ.

ಈ ನಾಲ್ಕು ಜನರದ್ದು ಒಂದು ಗುಂಪು. ಆದರೆ ಎಂದೂ ಒಟ್ಟಾಗಿ ಇರುವುದಿಲ್ಲ. ಒಟ್ಟಿಗೆ ಆಡುವುದಿಲ್ಲ. ಆದರೆ ನಾಲ್ಕು ಜನ ಸೇರಿ ಒಬ್ಬರನ್ನು ಟಾರ್ಗೆಟ್ ಮಾಡ್ತಾರೆ. ಒಬ್ಬರನ್ನೇ ಗುರಿಯಾಗಿಸಿಕೊಂಡು ನಾಮಿನೇಷನ್ ಮಾಡುತ್ತಾರೆ. ಆ ಮೂಲಕ ತಾವು ಮಾತ್ರ ಮನೆಯಲ್ಲಿ ಇರಬೇಕು ಎಂದುವಂತೆ ವರ್ತಿಸುತ್ತಿದ್ದಾರೆ ಎನ್ನುವುದು ಕೆಲವರ ಆರೋಪ. ಇದೇ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೀತಿದೆ.
ಕೆಲ ತೆಲುಗು ವೀಕ್ಷಕರು ಕನ್ನಡ ಬ್ಯಾಚ್, ಕೆ- ಬ್ಯಾಚ್ ಎಂದು ಈ ನಾಲ್ಕು ಜನರನ್ನು ಕರೆದು ಟ್ರೋಲ್ ಮಾಡುತ್ತಿದ್ದಾರೆ. ಇವರು ಮನೆಯೊಳಗೆ ಇದ್ದರೆ ಉಳಿದವರನ್ನು ಆಡಲು ಬಿಡುವುದಿಲ್ಲ, ಮೊದಲು ಈ ನಾಲ್ಕು ಜನ ಹೊರಗಡೆ ಬರಬೇಕು ಎನ್ನುತ್ತಿದ್ದಾರೆ. ಇವರನ್ನು ಬೆಂಬಲಿಸುವ ವೀಕ್ಷಕರು ಕಡ ಇದ್ದಾರೆ. ಬಿಗ್‌ಬಾಸ್ ತೆಲುಗು ಸೀಸನ್-8ರ ಗ್ರ್ಯಾಂಗ್ ಫಿನಾಲೆಗೆ ಇನ್ನೊಂದು ವಾರ ಬಾಕಿಯಿದೆ. ಇಂತಹ ಸಮಯದಲ್ಲಿ ನಾಮಿನೇಷನ್, ಎಲಿಮಿನೇಷನ್ ಕುತೂಹಲ ಮೂಡಿಸಿದೆ.

ಈ ಬಾರಿ ಬಿಗ್‌ಬಾಸ್ ತೆಲುಗು ಸೀಸನ್ 11 ವಾರ ಆರಂಭವಾಗಿದೆ. ವಾರದ ಮೊದಲ ದಿನದ ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು ಪ್ರೋಮೊ ಹೊರಬಿದ್ದಿದೆ. ಇದನ್ನು ನೋಡಿ ಮತ್ತೆ ಕನ್ನಡ ಬ್ಯಾಚ್ ಎಂದು ಟ್ರೋಲ್ ಮಾಡುತ್ತಿದ್ದಾರೆ. ನಿಖಿಲ್ ಹಾಗೂ ಪ್ರೇರಣಾ ಈ ಬಾರಿ ನಾಮಿನೇಷನ್‌ನಲ್ಲಿಲ್ಲ. ಆದರೆ ಪೃಥ್ವಿ ಮತ್ತು ಯಶ್ಮಿ ಇದ್ದಾರೆ.
ಈ ವಾರ ಯಾರು ಬಿಗ್‌ಬಾಸ್ ಮನೆಯಲ್ಲಿ ಇರಬಾರದು ಎಂದುಕೊಳ್ಳುತ್ತಿರಾ ಅವರ ಫೋಟೊಗಳಿಗೆ ಬಣ್ಣ ಬಳಿಯಿರಿ ಎಂದು ನಾಮಿನೇಷನ್ ಪ್ರಕ್ರಿಯೆ ಆರಂಭಿಸಲಾಗಿದೆ. ಸದ್ಯ ಮನೆಯೊಳಗೆ 9 ಮಂದಿ ಸ್ಪರ್ಧಿಗಳು ಇದ್ದಾರೆ. ಅದರಲ್ಲಿ 6 ಜನ ನಾಮಿನೇಟ್ ಆಗಿದ್ದಾರೆ. ಕಳೆದ 11 ವಾರಗಳಿಂದ ಕನ್ನಡದ ನಾಲ್ವರಲ್ಲಿ ಒಬ್ಬರು ಕೂಡ ಎಲಿಮಿನೇಟ್ ಆಗಿಲ್ಲ. ಆದರೆ ಈ ವಾರ ಯಶ್ಮಿ ಹೊರ ಬರುತ್ತಾರೆ ಎನ್ನಲಾಗ್ತಿದೆ.
ಅವಿನಾಶ್, ಟೇಸ್ಟಿ ತೇಜಾ, ಗೌತಮ್, ಯಶ್ಮಿ, ವಿಷ್ಣುಪ್ರಿಯಾ ಹಾಗೂ ಪೃಥ್ವಿ ಈ ವಾರ ನಾಮಿನೇಟ್ ಆಗಿದ್ದಾರೆ. ಅವಿನಾಶ್ ಇದೇ ಮೊದಲ ಬಾರಿಗೆ ನಾಮಿನೇಷನ್ ಲಿಸ್ಟ್‌ನಲ್ಲಿದ್ದಾರೆ. ಆದರೆ ರೋಹಿಣಿ ಮಾತ್ರ ಬಚಾವಾಗಿದ್ದಾರೆ. ಕುತಂತ್ರದಿಂದ ಕನ್ನಡ ಸ್ಪರ್ಧಿಗಳು ಆಡುತ್ತಿದ್ದಾರೆ. ಹಾಗಾಗಿ ಅವರು ಎಲಿಮಿನೇಟ್ ಆಗ್ತಿಲ್ಲ, ಇದಕ್ಕೆ ನಾಗಾರ್ಜುನ ಕೂಡ ಸಾಥ್ ಕೊಡುತ್ತಿದ್ದಾರೆ ಎಂದು ಕೆಲವರು ಆರೋಪಿಸುತ್ತಿದ್ದಾರೆ.
'ಊಟಿ' ಎಂಬ ಕನ್ನಡ ಚಿತ್ರದಲ್ಲಿ ನಟಿಸಿದ್ದ ನಿಖಿಲ್ ಬಳಿಕ 'ಮನೆಯೇ ಮಂತ್ರಾಲಯ' ಧಾರಾವಾಹಿ ನಟಿಸಿದ್ದರು. ಬಳಿಕ ತೆಲುಗು ಕಿರುತೆರೆ ಪ್ರವೇಶಿಸಿದ್ದರು. 'ವಿದ್ಯಾ ವಿನಾಯಕ' ಕನ್ನಡ ಧಾರಾವಾಹಿಯಲ್ಲಿ ಯಶ್ಮಿ ಗೌಡ ಮಿಂಚಿದ್ದರು.
'ಆನ', 'ಪೆಂಟಗನ್' ಸೇರಿದಂತೆ ಕೆಲ ಕನ್ನಡ ಚಿತ್ರಗಳಲ್ಲಿ ಪ್ರೇರಣಾ ಕಂಬಂ ನಟಿಸಿದ್ದರು. ಮಂಗಳೂರು ಮೂಲದ ಪೃಥ್ವಿರಾಜ್ ಕನ್ನಡದ 'ಅರ್ಧಾಂಗಿ' ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು. ಇದೀಗ ತೆಲುಗು ಕಿರುತೆರೆಯಲ್ಲಿ ಈ ನಾಲ್ಕು ಜನ ಬ್ಯುಸಿಯಾಗಿದ್ದಾರೆ.


Click it and Unblock the Notifications











