Bigg Boss: "ಹಣ ಕೊಟ್ಟು ಬಿಗ್‌ಬಾಸ್‌ಗೆ ಹೋಗ್ತಾರೆ.. ರಿಯಾಲಿಟಿ ಶೋ ಫೇಕ್.. ಜನರನ್ನು ಹುಚ್ಚರನ್ನಾಗಿ ಮಾಡ್ತಿದ್ದಾರೆ"

'ಬಿಗ್‌ ಬ್ರದರ್‌' ಶೋನಿಂದ ಪ್ರೇರಣೆಗೊಂಡು ಶುರುವಾದ 'ಬಿಗ್‌ಬಾಸ್' ಶೋ ಭಾರತದಲ್ಲಿ ಸಕ್ಸಸ್ ಕಂಡಿದೆ. ಮೊದಲಿಗೆ ಹಿಂದಿಯಲ್ಲಿ ಆರಂಭವಾದ ಶೋ ಮುಂದೆ ವಿವಿಧ ಭಾಷೆಗಳಲ್ಲಿ ವೀಕ್ಷಕರನ್ನು ರಂಜಿಸುತ್ತಾ ಬರ್ತಿದೆ. ನಿಜ ಹೇಳಬೇಕು ಅಂದರೆ ಬಿಗ್‌ಬಾಸ್ ಶೋ ನಡೆಸುವ ರೀತಿ, ಎಲಿಮಿನೇಷ್, ನಾಮಿನೇಷನ್, ಸ್ಪರ್ಧಿಗಳ ಆಯ್ಕೆ, ವಿಜೇತರನ್ನು ಘೋಷಿಸುವುದು ಎಲ್ಲವೂ ಸ್ಟ್ರಿಪ್ಟೆಡ್ ಎನ್ನುವ ವಾದ ಕೆಲವರದ್ದು.

ಈ ಹಿಂದೆ ಕೂಡ ಕೆಲವರು 'ಬಿಗ್‌ಬಾಸ್' ಶೋ ಬಗ್ಗೆ ಟೀಕೆ ಮಾಡಿದ್ದಾರೆ. ಈ ಶೋನಿಂದ ಸಮಾಜಕ್ಕೆ ಏನು ಸಂದೇಶ ಇದೆ ಎನ್ನುವ ಬಗ್ಗೆಯೂ ಚರ್ಚೆಗಳು ನಡೆದಿದೆ. ಕೆಲ ಸೆಲೆಬ್ರೆಟಿಗಳು ಬಿಗ್‌ಬಾಸ್ ಮನೆ ಒಳಕ್ಕೆ ಹೋಗಲು ಹಿಂದೇಟು ಹಾಕುವುದು ಇದೆ. ಇದು ಹುಚ್ಚರ ಕಾರ್ಯಕ್ರಮ ಎಂದು ಕೆಲವರು ಹೇಳುತ್ತಾರೆ. ಬಿಗ್‌ಬಾಸ್ ಶೋ ಬಗೆಗಿನ ಆರೋಪಗಳೆಲ್ಲಾ ನಿಜ ಎಂದು ಮಾಜಿ ಬಿಗ್‌ಬಾಸ್ ಸ್ಪರ್ಧಿ ಹೇಳಿದ್ದಾರೆ.

Telugu former bigg boss contestant Sarayu shocking statement on reality shows

ತೆಲುಗು ಬಿಗ್ ಬಾಸ್ ಸೀಸನ್ 5 ಹಾಗೂ ಬಿಗ್ ಬಾಸ್ OTT ಸ್ಪರ್ಧಿಯಾಗಿ ಸರಯು 2 ಬಾರಿ ಬಿಗ್ ಬಾಸ್ ಮನೆಗೆ ಹೋಗಿದ್ದರು. ಸೀಸನ್ 5ರ ಮೊದಲ ವಾರದಲ್ಲಿ ಸರಯು ಎಲಿಮಿನೇಟ್ ಆಗಿದ್ದರು. ಮತ್ತೆ ಒಟಿಟಿ ಶೋಗೆ ಹೋಗಿ 4ನೇ ವಾರದಲ್ಲೇ ಹೊರ ಬಂದಿದ್ದರು. ನಂತರ ನಾನು ಪಿಆರ್‌ ಟೀಮ್‌ಗಳ ಕಾರಣದಿಂದ ಹೊರ ಬಂದೆ ಎಂದು ಆರೋಪಿಸಿದ್ದರು. ಆದರೆ ಬಿಗ್ ಬಾಸ್ ಆಯೋಜಕರ ಬಗ್ಗೆ ಆಗಲಿ, ಎಲಿಮಿನೇಷನ್ ಬಗ್ಗೆ ಮಾತನಾಡಲಿಲ್ಲ. ವಾಸ್ತವವಾಗಿ ಬಿಗ್ ಬಾಸ್‌ಗೆ ಹೋಗುವವರ ಜೊತೆ ಮೊದಲೇ ಒಪ್ಪಂದ ಆಗಿರುತ್ತದೆ. ಮನೆಯೊಳಗೆ ಅಹಿತಕರ ಘಟನೆ ನಡೆಯದಂತೆ ವರ್ತಿಸಬೇಕು ಎಂದು ಹೇಳಿರುತ್ತಾರೆ. ಹಾಗಾಗಿ ಕೆಲವರು ಶೋನಿಂದ ಹೊರ ಬಂದಮೇಲೂ ಅಲ್ಲಿನ ಅರಾಜಕತೆ ಬಗ್ಗೆ ಮಾತನಾಡಲ್ಲ.

ಇದೀಗ ಮಾಜಿ ಬಿಗ್‌ಬಾಸ್ ಸ್ಪರ್ಧಿ ಸರಯು ಧೈರ್ಯ ಮಾಡಿ ಬಿಗ್ ಬಾಸ್ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. "ಬಿಗ್‌ಬಾಸ್‌ಗೆ ಸ್ಪರ್ಧಿಯಾಗಿ ಹೋದರೆ ಆಯೋಜಕರು ಹಣ ಕೊಡೋದಲ್ಲ, ಕೆಲವೊಮ್ಮೆ ಹಣ ಕೊಟ್ಟು ಹೋಗುವವರು ಇದ್ದಾರೆ. ಅಂತಹವರಿಗೆ ಮನೆಯೊಳಗೆ ಬಹಳ ಬೆಂಬಲ ಇರುತ್ತದೆ ಎಂದಿದ್ದಾರೆ. ತೆಲುಗು ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ಸರಯು ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಬಿಗ್‌ಬಾಸ್ ಮಾತ್ರವಲ್ಲ ಎಲ್ಲಾ ರಿಯಾಲಿಟಿ ಶೋಗಳು ಫೇಕ್ ಎಂದಿದ್ದಾರೆ. ಇವೆಲ್ಲಾ ಕೊಂಡುಕೊಂಡು ಅಥವಾ ತಿರುಗಿ ಅವರಿಗೆ ಹಣ ಕೊಟ್ಟು ತಮಗೆ ಬೇಕಾದರವರನ್ನು ಪ್ರಮೋಟ್ ಮಾಡಿ ಮುಂದಕ್ಕೆ ತೆಗೆದುಕೊಂಡು ಹೋಗುವ ಶೋಗಳು. ನಮ್ಮನ್ನು, ನಿಮ್ಮನ್ನು, ವೀಕ್ಷಕರನ್ನು ಹುಚ್ಚರನ್ನಾಗಿ ಮಾಡುವ ಶೋಗಳು ಇವೆಲ್ಲಾ" ಎಂದು ಸರಯು ಹೇಳಿದ್ದಾರೆ.

"ನಾನು ಕೂಡ ಬಿಗ್ ಬಾಸ್‌ ಶೋಗೆ ಹೋಗಿದ್ದೆ. ಅದಕ್ಕೆ ಹೇಳುತ್ತಿದ್ದೇನೆ, ನಾನು ಶೋಗೆ ಹೋದಾಗ ನನಗೆ ಏನು ಗೊತ್ತಿರಲಿಲ್ಲ. ಕೆಲಸ ಮಾಡ್ತಿದ್ದೀವಾ, ಯೂಟ್ಯೂಬ್ ವಿಡಿಯೋ ಮಾಡ್ತಿದ್ದೀನಿ, ಮನಗೆ ಬರ್ತೀನಿ ಎಂದುಕೊಂಡಿದ್ದೆ. ಆದರೆ ಬಿಗ್‌ಬಾಸ್ ಮನೆಯೊಳಗೆ ಹೋದ ಮೇಲೆ ಕೆಲವರಿಗೆ ಹೊರಗೆ ಮಾತ್ರವಲ್ಲ, ಒಳಗಡೆ ಕೂಡ ಸಪೋರ್ಟ್ ಇರುತ್ತದೆ ಅನ್ನೋದು ಗೊತ್ತಾಯಿತು. ಒಳಗೆ ಸಪೋರ್ಟ್ ಇದ್ದರೆ ಅವರ ಕಾನ್ಫಿಡೆನ್ಸ್ ನೆಕ್ಸ್ಟ್ ಲೆವೆಲ್‌ನಲ್ಲಿ ಇರುತ್ತದೆ. ಅವರನ್ನು ಸೋಲಿಸುವುದು ಕಷ್ಟ. ಅವರ ಮೇಲೆ ಫೈಟ್ ಮಾಡಿದರೆ ನಮಗೆ ಕೆಟ್ಟದು. ಹೊರಗೆ ಬಂದ ಮೇಲೆ ಜನ ಕೂಡ ನಮ್ಮನ್ನು ನೋಡಿ ನಗುತ್ತಾರೆ" ಎಂದಿದ್ಧಾರೆ.

Telugu former bigg boss contestant Sarayu shocking statement on reality shows

ಸದ್ಯ ತೆಲುಗು ಬಿಗ್‌ಬಾಸ್ ಸೀಸನ್-7ರ ಪ್ರೋಮೊ ರಿಲೀಸ್ ಆಗಿದೆ. ಈ ಬಾರಿ ಕೂಡ ನಾಗಾರ್ಜುನ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ. ಸ್ಪರ್ಧಿಗಳಿಗಾಗಿ ಹುಡುಕಾಟ ನಡೀತಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಶೋ ಆರಂಭವಾಗುವ ನಿರೀಕ್ಷೆಯಿದೆ. ಇಂತಹ ಸಮಯದಲ್ಲಿ ಬಿಗ್‌ಬಾಸ್ ಮಾಜಿ ಸ್ಪರ್ಧಿ, ನಟಿ ಸರಯು ಹೇಳಿಕೆ ಸಂಚಲನ ಸೃಷ್ಟಿಸಿದೆ.

More from Filmibeat

English summary
Reality shows are fake, Says former bigg boss contestant Sarayu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X