For Quick Alerts
  ALLOW NOTIFICATIONS  
  For Daily Alerts

  ಪ್ರಿಯಕರನ ಜೊತೆ ಸೇರಿ ಮಾಜಿ ಪ್ರಿಯಕರನ ಹತ್ಯೆಗೆ ಯತ್ನ: ಕಿರುತೆರೆ ನಟಿ ಬಂಧನ

  |

  ಸಿನಿಮಾಗಳಲ್ಲಿ, ಕಿರುತೆರೆ ಧಾರಾವಾಹಿಗಳಲ್ಲಿ ಕಾಣುವ ಘಟನೆಗಳು ಕೆಲವೊಮ್ಮೆ ನಿಜ ಜೀವನದಲ್ಲೂ ನಡೆದಿದೆ. ತಮ್ಮ ಸುಖಕ್ಕೆ ಅಡ್ಡ ಬಂದರೆ ಅದು ಪತಿಯಾದರೂ, ಪ್ರಿಯಕರನೇ ಆದರೂ ಕೊಲ್ಲುವ ಸನ್ನಿವೇಶಗಳು ಸಿನಿಮಾ, ಧಾರಾವಾಹಿಗಳಲ್ಲಿ ನೋಡಿದ್ದೇವೆ. ಇಂತದ್ದೇ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

  ತೆಲುಗು ಕಿರುತೆರೆ ನಟಿ ನಾಗವರ್ಧಿನಿ ಹೊಸ ಪ್ರಿಯಕರನ ಜೊತೆ ಸೇರಿ ಮಾಜಿ ಪ್ರಿಯಕರನನ್ನು ಕೊಲ್ಲಲು ಪ್ರಯತ್ನಿಸಿದ್ದಾಳೆ. ಪ್ರಕರಣ ಸಂಬಂಧ ಬಂಜಾರಾ ಹಿಲ್ಸ್ ಪೊಲೀಸರು ಆಕೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ನಾಗವರ್ಧಿನಿ ಸದ್ಯ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. 'ಗುಪ್ಪೆಡಂತ ಮನಸು' ಹಾಗೂ 'ಗುಂಡಮ್ಮ ಕಥ' ರೀತಿಯ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾಳೆ. ಆದರೆ ತನ್ನ ವೈಯಕ್ತಿಕ ವಿಚಾರದಿಂದ ನಟಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಸದ್ಯ ಈ ವಿಚಾರ ಟಾಲಿವುಡ್‌ ಅಂಗಳದಲ್ಲಿ ಈಗ ದೊಡ್ಡಮಟ್ಟದಲ್ಲಿ ಸದ್ದಿ ಮಾಡ್ತಿದೆ.

  ಪ್ಯಾಲಿಯೋ ಡಯೆಟ್‌ನಿಂದ ಪ್ರಾಣಕ್ಕೆ ಸಂಚಕಾರ? ಖ್ಯಾತ ನಟ ಕಲ್ಯಾಣ್ ಕುಮಾರ್ ಸೊಸೆ ಪ್ರಿಯದರ್ಶಿನಿ ನಿಧನಪ್ಯಾಲಿಯೋ ಡಯೆಟ್‌ನಿಂದ ಪ್ರಾಣಕ್ಕೆ ಸಂಚಕಾರ? ಖ್ಯಾತ ನಟ ಕಲ್ಯಾಣ್ ಕುಮಾರ್ ಸೊಸೆ ಪ್ರಿಯದರ್ಶಿನಿ ನಿಧನ

  ಟಿವಿ ಧಾರಾವಾಹಿಗಳು, ಸಿನಿಮಾಗಳಲ್ಲಿ ನಟಿಸುತ್ತಿರುವ ಸೂರ್ಯನಾರಾಯಣನೊಂದಿಗೆ ನಾಗವರ್ಧಿನಿ ನಾಲ್ಕೈದು ವರ್ಷಗಳಿಂದ ಸಹಜೀವನ ನಡೆಸಿದ್ದರು. ಆದರೆ ಕೆಲ ಭಿನ್ನಾಭಿಪ್ರಾಯಗಳಿಂದ ದೂರಾಗಿದ್ದರು. ಇದೀಗ ಆತನ ಹತ್ಯೆಗೆ ಯತ್ನಿಸಿ ನಾಗವರ್ಧಿನಿ ಪೊಲೀಸರ ಅತಿಥಿ ಆಗಿದ್ದಾಳೆ.

  ಕೊಲೆಗೆ ಸಂಚು

  ಕೊಲೆಗೆ ಸಂಚು

  ಸೂರ್ಯ ನಾರಾಯಣನಿಂದ ದೂರಾದ ಮೇಲೆ ನಟಿ ನಾಗವರ್ಧಿನಿ ತನ್ನ ಜೊತೆ ಧಾರಾವಾಹಿಯಲ್ಲಿ ನಟಿಸುತ್ತಿರುವ ದಾಸರಿ ಶ್ರೀನಿವಾಸ್ ರೆಡ್ಡಿ ಎಂಬುವನ ಜೊತೆ ಪ್ರೀತಿ ಬಿದ್ದಿದ್ದಳು.ಇಬ್ಬರು ಲಿವ್‌ ಇನ್‌ರಿಲೇಶನ್‌ಶಿಪ್‌ನಲ್ಲಿ ಇದ್ದರು. ಸೂರ್ಯನಾರಾಯಣ ಇದ್ದ ಅಪಾರ್ಟ್‌ಮೆಂಟ್‌ಗೆ ಇಬ್ಬರು ಶಿಫ್ಟ್‌ ಆಗಿದ್ದರು. ಹಾಗಾಗಿ ಆಗಾಗ್ಗೆ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತಂತೆ. ಇದರಿಂದ ಬೇಸತ್ತ ನಾಗವರ್ಧಿನಿ ಪ್ರಿಯಕರನ ಜೊತೆ ಸೇರಿ ಸೂರ್ಯನಾರಾಯಣ ಹತ್ಯೆಗೆ ಸಂಚು ರೂಪಿಸಿದ್ದಾಳೆ.

  ಸೂರ್ಯ ನಾರಾಯಣ ತಾಕೀತು

  ಸೂರ್ಯ ನಾರಾಯಣ ತಾಕೀತು

  ಒಂದೇ ಅಪಾರ್ಟ್‌ಮೆಂಟ್‌ನಲ್ಲಿ ಇದ್ದ ಕಾರಣ ನಾಗವರ್ಧಿನಿ ಹಾಗೂ ದಾಸರಿ ಶ್ರೀನಿವಾಸ್ ರೆಡ್ಡಿ ಜೊತೆ ಸೂರ್ಯ ನಾರಾಯಣ ಪದೇ ಪದೇ ಜಗಳವಾಡುತ್ತಿದ್ದನು.

  ಇತ್ತೀಚೆಗೆ ಆತ ನೇರವಾಗಿ ನಾಗವರ್ಧಿನಿ ಮನೆಗೆ ಹೋಗಿ ಶ್ರೀನಿವಾಸ್ ರೆಡ್ಡಿಯನ್ನು ಬಿಟ್ಟು ಬಿಡಬೇಕು, ನನ್ನ ಜೊತೆ ಸೇರಿ ಬದುಕಬೇಕು ಎಂದು ತಾಕೀತು ಮಾಡಿ ಬಂದಿದ್ದನಂತೆ. ಇದರಿಂದ ದೊಡ್ಡ ಗಲಾಟೆ ನಡೆದು ತಮ್ಮಿಬ್ಬರ ಪ್ರೀತಿಗೆ ಅಡ್ಡಗಾಲಾಗಿರುವ ಸೂರ್ಯನಾರಾಯಣನನ್ನ ಹತ್ಯೆ ಮಾಡಲು ಇಬ್ಬರು ತೀರ್ಮಾನಿಸಿದ್ದಾರೆ.
  ಕಟ್ಟಡದಿಂದ ನೂಕಿ ಹತ್ಯೆಗೆ ಯತ್ನ

  ಕಟ್ಟಡದಿಂದ ನೂಕಿ ಹತ್ಯೆಗೆ ಯತ್ನ

  ಮೊದಲೇ ಸಂಚು ರೂಪಿಸಿದಂತೆ ಸೂರ್ಯ ನಾರಾಯಣನನ್ನು ಎರಡನೇ ಅಂತಸ್ತಿನಿಂದ ನಾಗವರ್ಧಿನಿ ಹಾಗೂ ಶ್ರೀನಿವಾಸ್ ರೆಡ್ಡಿ ಕೆಳಕ್ಕೆ ನೂಕಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಸೂರ್ಯ ನಾರಾಯಣ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಇತ್ತ ಪೊಲೀಸರು ಹತ್ಯೆ ಯತ್ನ ಕೇಸ್ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

  ಟ್ರಯಾಂಗಲ್ ಲವ್ ಸ್ಟೋರಿ

  ಟ್ರಯಾಂಗಲ್ ಲವ್ ಸ್ಟೋರಿ

  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೂರ್ಯ ನಾರಾಯಣ ಹಾಗೂ ಆರೋಪಿ ಶ್ರೀನಿವಾಸ್ ರೆಡ್ಡಿ ಸ್ನೇಹಿತರು ಎಂದು ಗೊತ್ತಾಗಿದೆ. ಸ್ವತಃ ಸೂರ್ಯ ನಾರಾಯಣ, ನಾಗವರ್ಧಿನಿಯನ್ನು ಶ್ರೀನಿವಾಸ್ ರೆಡ್ಡಿ ಪರಿಚಯ ಮಾಡಿಸಿದ್ದ. ನಂತರ ಈ ಸ್ಟೋರಿ ಟ್ರಯಾಂಗಲ್ ಸ್ಟೋರಿ ಆಗಿ ಬದಲಾಗಿತ್ತು. ಆದರೆ ಇದು ಕೊಲೆ ಮಾಡುವರೆಗೂ ಹೋಗಿ ತಲುಪುತ್ತದೆ ಎಂದು ಯಾರು ಭಾವಿಸಿರಲಿಲ್ಲ. ನಾಗವರ್ಧಿನಿ ಈಗಾಗಲೇ ಮದುವೆ ಆಗಿ ಗಂಡನಿಂದ ದೂರಾಗಿದ್ದಾಳೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

  English summary
  Telugu Serial Actress Naga Vardhini, Lover arrested for Attempting to Murder Her Ex-lover. TV actress Naga Vardhini is a known face in the Andra Telangana. Know More.
  Thursday, November 3, 2022, 17:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X