Thanmaya Kashyap: ದತ್ತ ಭಾಯ್ ಅಕ್ಕ ಶರಾವತಿಯ ಬ್ಯೂಟಿ ಸೀಕ್ರೇಟ್ ಏನು ಗೊತ್ತಾ?

By ಎಸ್ ಸುಮಂತ್

ಕಲರ್ಸ್ ಕನ್ನಡದಲ್ಲಿ ಸಖತ್ ಸದ್ದು ಮಾಡುತ್ತಿರುವ ಧಾರಾವಾಹಿ ಎಂದರೆ ಅದು 'ದೃಷ್ಟಿಬೊಟ್ಟು'. ಪ್ರೋಮೋ,‌ ಪೋಸ್ಟರ್‌ಗಳು ರಿಲೀಸ್ ಆದಾಗಿನಿಂದ ಎಲ್ಲರ ದೃಷ್ಟಿ ಕೂಡ ಆ ಧಾರಾವಾಹಿ ಮೇಲೆ ಬಿದ್ದಿದೆ. ಪ್ರೋಮೋದಲ್ಲಿಯೇ ಇಷ್ಟು ಗಟ್ಟಿ ಡೈಲಾಗ್ಸ್ ಇರುವಾಗ, ಸೀರಿಯಲ್ ಹಿಟ್ ಆಗೋದ್ರಲ್ಲಿ ಅನುಮಾನವೇ ಇಲ್ಲ. ಉತ್ತರ ಕರ್ನಾಟಕದ ದತ್ತ ಭಾಯ್ ಕಥೆ ಇದು.

ದತ್ತ ಭಾಯ್ ಒಬ್ಬ ಖಡಕ್ ಮನುಷ್ಯ. ಅವನ ಸುತ್ತ ಕೂಡ ಒಂದಷ್ಟು ಅರ್ಥವಾಗದ ಸಂಬಂಧಗಳಿವೆ, ಕೆಡುಕು ಬಯಸುವ ಜೀವಗಳಿವೆ, ಕಾಪಾಡುವ ಮನಸ್ಸುಗಳಿವೆ‌. ಇದರ ನಡುವೆ ಸೌಂದರ್ಯ ಎಂಬ ಪದಕ್ಕೆ ತದ್ವಿರುದ್ಧವಾದ ಹುಡುಗಿಯ ಜೊತೆಗೆ ದತ್ತ ಭಾಯ್ ಅದೇಗೆ ಲವ್ವಲ್ಲಿ ಬೀಳ್ತಾರೆ, ಮನೆಯಲ್ಲಿರುವ ಶರಾವತಿ ಒಪ್ಪುವುದಾದರೂ ಹೇಗೆ..? ಆ ಪರಿಸ್ಥಿತಿ ಯಾವ ರೀತಿ ನಿರ್ಮಾಣವಾಗುತ್ತದೆ ಎಂಬೆಲ್ಲಾ ವಿಚಾರಗಳ ಬಗ್ಗೆ ಸಹಜವಾಗಿಯೇ ಕುತೂಹಲವಿದೆ. ಅದಕ್ಕೂ ಮುನ್ನ ದತ್ತ ಭಾಯ್‌ನ ಕಂಟ್ರೋಲ್‌ನಲ್ಲಿಟ್ಟಿರುವ ಶರಾವತಿಯ ಬಗ್ಗೆ ತಿಳಿದುಕೊಂಡು ಬಿಡಿ.

Thanmaya kashyap plays the villain in colors kannada Drustibottu serial

ವರ್ಷಗಳ ಬಳಿಕ ಬಂದ್ರು ತನ್ಮಯ

ತನ್ಮಯ ಕಶ್ಯಪ್ ಸದ್ಯ 'ದೃಷ್ಠಿಬೊಟ್ಟು' ಧಾರಾವಾಹಿಯಲ್ಲಿ ದತ್ತ ಭಾಯ್ ಅಕ್ಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಲವು ವರ್ಷಗಳ ಬಳಿಕ ತನ್ಮಯ ಕಮ್ ಬ್ಯಾಕ್ ಆಗಿದ್ದಾರೆ. ಈ ಮೊದಲು 'ಸ್ವಾತಿ ಮುತ್ತು', 'ಉಘೇ ಉಘೇ ಮಹದೇಶ್ವರ', 'ಸರ್ಪ ಸಂಬಂಧ' ಧಾರಾವಾಹಿಗಳಲ್ಲಿ ನಟಿಸಿದ್ದರು.

ದತ್ತನ ಪಾಲಿಗೆ ಖಳನಾಯಕಿ..?

ಸದ್ಯಕ್ಕೆ 'ದೃಷ್ಟಿ ಬೊಟ್ಟು' ಧಾರಾವಾಹಿಯ ಒಂದೆರಡು ಝಲಕ್ ರಿವೀಲ್ ಆಗಿದೆ. ಅದರಲ್ಲಿ ಶರಾವಾತಿಯ ಪಾತ್ರದ ಕೊಂಚ ಪರಿಚಯವು ಆಗಿದೆ. ಅದರಲ್ಲಿ ದತ್ತುಗೆ ಯಾವತ್ತು ನನ್ನ ಸತ್ಯ ಗೊತ್ತಾಗಲ್ಲ. ದತ್ತು ನನ್ನ ಕೈಗೊಂಬೆ ಅನ್ನೋ ಡೈಲಾಗ್ ಇದೆ. ಇದನ್ನ ನೋಡ್ತಾ ಇದ್ರೆ ಶರಾವತಿ ಪಾತ್ರ ಅಲ್ಲಿ ಖಳನಾಯಕಿಯೇ ಇರಬಹುದು. ವೀಕ್ಷಕರು ಕೂಡ ಇದು 'ಬ್ರಹ್ಮಗಂಟು' ಧಾರಾವಾಹಿಯ ಸೌಂದರ್ಯ ರೀತಿಯ ಖಳನಾಯಕಿ ಎಂದೇ ಊಹೆ ಮಾಡಿದ್ದಾರೆ.

Thanmaya kashyap plays the villain in colors kannada Drustibottu serial

ಶರಾವತಿಯ ಬ್ಯೂಟಿ ಸಿಕ್ರೇಟ್ ರಿವೀಲ್

ಇನ್ನು ಶರಾವತಿ ಪಾತ್ರಧಾರಿ ತನ್ಮಯ ಕಶ್ಯಪ್ ನೋಡುವುದಕ್ಕೆ ಸೌಂದರ್ಯ ದೇವತೆಯಂತೆ ಕಾಣುತ್ತಾರೆ. ಫಿಟ್ನೆಸ್, ಬ್ಯೂಟಿ ಎರಡರಲ್ಲೂ ಪರ್ಫೆಕ್ಟ್. ಹೀಗಾಗಿ ಕಲರ್ಸ್ ಕನ್ನಡ ನಡೆಸಿದ ಚಿಟ್ ಚಾಟ್‌ನಲ್ಲಿ ತನ್ಮಯ ಅವರ ಸೌಂದರ್ಯದ ಗುಟ್ಟಿನ ಬಗ್ಗೆ ಕೇಳಿದಾಗ ಅವರು ಕೊಟ್ಟ ಉತ್ತರ ಹೀಗಿದೆ, 'ನನ್ನ ದೇಹದ ಪ್ರಕೃತಿ ಇರೋದೆ ಹೀಗೆ. ಆ ದೇವರು ಕೊಟ್ಟ ವರ ಇದು. ಹೊಟ್ಟೆ 80% ತುಂಬಿದಾಗಲೇ ಊಟ ನಿಲ್ಲಿಸಬೇಕು ಅಂತಾರೆ. ಅದನ್ನು ಸ್ವಲ್ಪ ಫಾಲೋ ಮಾಡ್ತೀನಿ' ಎಂದಿದ್ದಾರೆ.

ರಂಗಭೂಮಿಯ ಕಲಾವಿದೆ

ಪಾತ್ರದ ಬಗ್ಗೆ ಪ್ರಶ್ನೆ ಕೇಳಿದಾಗ ಥಿಯೇಟರ್ ಹಿಸ್ಟರಿ ರಿವೀಲ್ ಮಾಡಿದ್ದಾರೆ. 'ನಾನು ಬೇಸಿಕಲಿ ಥಿಯೇಟರ್ ಆರ್ಟಿಸ್ಟ್. ರಂಗಭೂಮಿಯಿಂದ ಬಂದವರಿಗೆ ಮುಖಭಾವದ ಹಲವು ಆಯಾಮಗಳ ಬಗ್ಗೆ ತಿಳಿದಿರುತ್ತೆ. ಅಲ್ಲಿ ಅದೆಲ್ಲವನ್ನು ಕಲಿಸುತ್ತಾರೆ. ಕಲಾವಿದರು ಕನ್ನಡಿ ಮುಂದೆ ನಿಂತರು ಪ್ರಾಕ್ಟೀಸ್ ಮಾಡುತ್ತಾ ಇರುತ್ತಾರೆ. ನಾನು ಥಿಯೇಟರ್ ಆರ್ಟಿಸ್ಟ್ ಆಗಿರುವ ಕಾರಣ, ಈ ಪಾತ್ರಕ್ಕೆ ನ್ಯಾಯ ಒದಗಿಸಿ ಕೊಡುತ್ತೀನಿ' ಎಂದಿದ್ದಾರೆ. ಹಲವು ವರ್ಷಗಳ ಬಳಿಕ ತನ್ಮಯಾ ಮತ್ತೆ ಸೀರಿಯಲ್ ಲೋಕಕ್ಕೆ ಬಂದಿದ್ದಾರೆ. ಇದು ಸಂತಸಕರ ಸಂಗತಿಯೇ ಸರಿ.

More from Filmibeat

English summary
colors kannada Drustibottu serial Sharavathi role revealed. Here is the details about Theater artist Thanmaya kashyap is now a villain;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X