ಈ ಬಾರಿಯ 'ಬಿಗ್ ಬಾಸ್' ಮನೆಯಲ್ಲಿ ಇರ್ತಾರಾ ಸುಮಂತ್ ಮತ್ತು ತರಂಗ ವಿಶ್ವ?

ಕನ್ನಡ ಕಿರುತೆರೆ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿರುವ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-8ಕ್ಕೆ ದಿನಗಣನೆ ಪ್ರಾರಂಭವಾಗಿದೆ. ಇದೇ ತಿಂಗಳ ಕೊನೆಯಲ್ಲಿ ಅಂದರೆ ಫೆಬ್ರವರಿ 28ಕ್ಕೆ ಬಿಗ್ ಬಾಸ್ ಕನ್ನಡ ಗ್ರ್ಯಾಂಡ್ ಓಪನ್ ಆಗಲಿದೆ. ಈಗಾಗಲೇ ಬಿಗ್ ಬಾಸ್ ಗೆ ಯಾರೆಲ್ಲ ಹೋಗ್ತಾರೆ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ.

ಬಿಗ್ ಬಾಸ್ ಮನೆಗೆ ಹೋಗುವವರ ಸಂಭಾವ್ಯರ ಪಟ್ಟಿ ದೊಡ್ಡದಾಗಿ ಇದೆ. ಈಗಾಗಲೇ ಸಾಕಷ್ಟು ಕಲಾವಿದರ ಹೆಸರುಗಳು ವೈರಲ್ ಆಗಿದೆ. ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಕಿರುತೆರೆ ಮತ್ತು ಸಿನಿಮಾ ಕಲಾವಿದರ ಹೆಸರಿನ ಜೊತೆಗೆ ಬೇರೆ ಬೇರೆ ಕ್ಷೇತ್ರದ ಗಣ್ಯರ ಹೆಸರುಗಳು ಕೇಳಿಬರುತ್ತಿದೆ.

ಇದೀಗ ಈ ಪಟ್ಟಿಯಲ್ಲಿ ನಟ ಸುಮಂತ್ ಶೈಲೇಂದ್ರ ಮತ್ತು ಮಜಾ ಟಾಕೀಸ್ ತರಂಗ ವಿಶ್ವ ಹೆಸರು ಕೇಳಿ ಬರುತ್ತಿದೆ. ನಟ ಸುಮಂತ್ ಶೈಲೇಂದ್ರ ಅವರನ್ನು ಬಿಗ್ ಬಾಸ್ ಈಗಾಗಲೇ ಸಂಪರ್ಕ ಮಾಡಿದ್ದು, ಈ ಬಾರಿಯ ಬಿಗ್ ಬಾಸ್ ನಲ್ಲಿ ಸುಮಂತ್ ಇರಲಿದ್ದಾರೆ ಎನ್ನುವ ಸುದ್ದಿ ಜೋರಾಗಿ ಕೇಳಿಬರುತ್ತಿದೆ.

Tharanga Vishwa and actor Sumanth Shailendra likely to enter Bigg Boss Kannada 8

2011ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟ ಸುಮಂತ್ ದಿಲ್ವಾಲಾ ಸಿನಿಮಾ ಮೂಲಕ ಖ್ಯಾತಿ ಗಳಿಸಿದ್ದರು. ರಾಧಿಕಾ ಪಂಡಿತ್ ಈ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದ್ದರು. ನಿರ್ಮಾಪಕ ಶೈಲೇಂದ್ರ ಅವರ ಪುತ್ರ ಸುಮಂತ್. ಈ ಬಾರಿಯ ಬಿಗ್ ಬಾಸ್ ನಲ್ಲಿ ಸುಮಂತ್ ಭಾಗಿಯಾಗಿ ಮನರಂಜನೆ ನೀಡುತ್ತಾರಾ ಎಂದು ಕಾದು ನೋಡಬೇಕು.

ಇನ್ನು ಮಜಾ ಟಾಕೀಸ್ ಖ್ಯಾತಿಯ ತರಂಗ ವಿಶ್ವ ಸಹ ಬಿಗ್ ಬಾಸ್ ಮನೆಯಲ್ಲಿ ಇರಲಿದ್ದಾರೆ ಎನ್ನಲಾಗುತ್ತಿದೆ. ಮಜಾ ಟಾಕೀಸ್ ಮೂಲಕ ನಗಿಸುತ್ತಿರುವ ವಿಶ್ವ ಬಿಗ್ ಮನೆಗೆ ಎಂಟ್ರಿ ಕೊಟ್ಟು ಪ್ರೇಕ್ಷಕರ ಮೊಗದಲ್ಲಿ ನಗು ತರಿಸುತ್ತಾರೆ ಎಂದು ಕಾದು ನೋಡಬೇಕು.

ಈಗಾಗಲೇ ಬಿಗ್ ಬಾಸ್ ಸೀಸನ್-8ರ ಪ್ರೋಮೋಗಳು ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಇತ್ತೀಚಿಗೆ ಬಿಡುಗಡೆಯಾದ ಕಿಚ್ಚ ಸುದೀಪ್ ಅವರ ಭವಿಷ್ಯ ಹೇಳುವ ಜೋಯಿಸರ ಲುಕ್ ಪ್ರೇಕ್ಷಕರ ಹೃದಯ ಗೆದ್ದಿದೆ. ಪ್ರೋಮೋ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

More from Filmibeat

English summary
Majaa Talkies fame Tharanga Vishwa and Dilwala actor Sumanth Shailendra likely to enter Bigg Boss Kannada 8.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X