'ಮಹಾನಟಿ' ಶೋ ಮುಗಿದ ಬಳಿಕ ಮತ್ತೆ ಕಿರುತೆರೆಯಲ್ಲಿ ಕಂಡ ನಿರ್ದೇಶಕ ತರುಣ್ ಸುಧೀರ್

By ಅನಿತಾ ಬನಾರಿ

ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಚಲನಚಿತ್ರಗಳನ್ನು ನೀಡುವ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ ತರುಣ್ ಸುಧೀರ್. ಮುಂದಿನ ಆಗಸ್ಟ್ ತಿಂಗಳಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಲವ್ ಕಮ್ ಅರೇಂಜ್ ಮ್ಯಾರೇಜ್ ಆಗುತ್ತಿರುವ ನಿರ್ದೇಶಕ ಸದ್ಯ ಮದುವೆಯ ತಯಾರಿಯಲ್ಲಿದ್ದಾರೆ. ಇದರ ಮಧ್ಯೆ ಇತ್ತೀಚೆಗಷ್ಟೇ 'ಮಹಾನಟಿ' ರಿಯಾಲಿಟಿ ಶೋ ಜಡ್ಜ್‌ ಆಗಿದ್ದರು. ಆ ಶೋ ಮುಗಿದ ಕೂಡಲೇ ನಿರ್ದೇಶಕ ಮತ್ತೆ ಜೀ ಕನ್ನಡಕ್ಕೆ ಮತ್ತೆ ಕಂಬ್ಯಾಕ್ ಮಾಡಿದ್ದಾರೆ.

ಅದು ಹೇಗೆ ಅಂತೀರಾ? ಮತ್ತೊಂದು 'ಮಹಾನಟಿ' ರಿಯಾಲಿಟಿ ಶೋದ ಮುಖಾಂತರವಂತೂ ಅಲ್ಲ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮತ್ತೊಂದು ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ನಿಮಗೆಲ್ಲಾ ತಿಳಿದೇ ಇದೆ. ವಿಶೇಷವೆಂದರೆ, ಈ ಸಲ ಈ ಕಾಮಿಡಿ ಶೋಗೆ ತರುಣ್ ಎಂಟ್ರಿ ನೀಡಿದ್ದಾರೆ.

Tharun Sudhir again entered Zee Kannada after finishing Mahanati

ಹೌದು, ಕನ್ನಡ ಕಿರುತೆರೆ ಪ್ರೇಕ್ಷಕರ ಫೇವರೆಟ್ ಹಾಸ್ಯ ರಿಯಾಲಿಟಿ ಶೋಗಳಲ್ಲಿ ಒಂದಾದ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋದಲ್ಲಿ ಪ್ರೀಮಿಯರ್ ಲೀಗ್ ನಡೆಯುತ್ತಿದೆ. ಹಾಸ್ಯನಟ ಜಗ್ಗೇಶ್ ನಿರ್ಣಾಯಕರಾಗಿರುವ ಈ ಶೋದಲ್ಲಿ ಅನುಶ್ರೀ, ಅಕುಲ್ ಬಾಲಾಜಿ, ಕುರಿ ಪ್ರತಾಪ್ ಸೇರಿದಂತೆ ನುರಿತ ಆಂಕರ್‌ಗಳ ಹಾಗೂ ಕಲಾವಿದರ ತಂಡವೇ ಇದೆ. ಎಲ್ಲರೂ ಕನ್ನಡ ಪ್ರೇಕ್ಷಕರಿಗೆ ಮನೋರಂಜನೆಯ ರಸದೌತಣವನ್ನು ವಾರಾಂತ್ಯದಲ್ಲಿ ನೀಡುತ್ತಲೇ ಬಂದಿದ್ದಾರೆ. ಇದೀಗ ಈ ಕಾರ್ಯಕ್ರಮಕ್ಕೆ ಭರ್ಜರಿ ಎಂಟ್ರಿ ಕೊಟ್ಟಿರುವ ತರುಣ್ ಸುಧೀರ್ ಅವರನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಈ ಕುರಿತಂತೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಶೋ ದಲ್ಲಿ ನಡೆದ ಜನರಲ್ ಮಾತುಕತೆಯಲ್ಲಿ ತರುಣ್ ಮದುವೆ ವಿಚಾರವೂ ಪ್ರಸ್ತಾಪವಾಗಿದೆ. 'ಮಹಾನಟಿ'ಯಲ್ಲಿ ಫೈನಲಿಸ್ಟ್‌ಗಳಾಗಿದ್ದವರು ಈ ಶೋದಲ್ಲಿ ಕಾಮಿಡಿ ಮಾಡಲು ಬಂದಿರುವುದು ವಿಶೇಷ. ಇನ್ನು ಕಲಾವಿದರು ತರುಣ್ ಸುಧೀರ್ ಗೆಟಪ್‌ನಲ್ಲಿಯೂ ಬಂದು ಕಾಮಿಡಿ ಮಾಡಿದ್ದಾರೆ. ಜೊತೆಗೆ ತರುಣ್ ಸುಧೀರ್ ಅವರೇ ಮಾತನಾಡಿ ತಮ್ಮ ಮದುವೆಯ ವಿಷಯವನ್ನು ಹಂಚಿಕೊಂಡು ಸೋನಲ್ ಅವರ ಫೋಟೋವನ್ನು ಎಲ್ಲರಿಗೂ ತೋರಿಸಿದ್ದಾರೆ.

ಒಟ್ಟಿನಲ್ಲಿ ಈ ವಾರ ಕಾಮಿಡಿ ಪ್ರೀಮಿಯರ್ ಲೀಗ್ ಹಲವು ರೀತಿಯಲ್ಲಿ ವಿಶೇಷತೆಯನ್ನು ಪಡೆದುಕೊಂಡಿದೆ. ತರುಣ್ ಸುಧೀರ್ ಅವರ ಆಗಮನ, ಮಹಾನಟಿಯರ ಆಗಮನ, ಮಹಾನಟಿ ಹಾಗೂ ಕಾಮಿಡಿ ಕಿಲಾಡಿ ಕಲಾವಿದರ ಜೊತೆಯಾದ ಪ್ರದರ್ಶನ, ಇದರ ಜೊತೆಗೆ ಹೈಪ್ ಕ್ರೀಯೇಟ್ ಮಾಡಿದ ಇನ್ನೊಂದು ವಿಷಯವೆಂದರೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಎಂಟ್ರಿ ನೀಡಿರುವುದು.

Tharun Sudhir again entered Zee Kannada after finishing Mahanati

ಟೈಮ್ ಟ್ರಾವೆಲ್ ಎನ್ನುವ ವಿಷಯವನ್ನು ಇಟ್ಟುಕೊಂಡು ಹಿಂದಿನ ಕಾಲವನ್ನು ಮರುಕಳಿಸಿದಂತೆ ಮಾಡುವ ಪ್ರಯತ್ನದಲ್ಲಿ ಈ ಶೋ ಯಶಸ್ವಿಯಾಗಿದೆ. ಪುನೀತ್ ರಾಜ್ ಕುಮಾರ್ ಅವರ ಪಾತ್ರವನ್ನು ಮಾಡಿದ ವ್ಯಕ್ತಿ ಅವರಂತೆಯೇ ಮಾತನಾಡುವುದರೊಂದಿಗೆ ಡ್ಯಾನ್ಸ್ ಕೂಡ ಮಾಡಿ ನೋಡುಗರ ಕಣ್ಣಿನಲ್ಲಿ ಸಂತಸವನ್ನು ತಂದಿದ್ದಾರೆ.

More from Filmibeat

English summary
Tarun Sudhir again entered Zee Kannada after finishing Mahanati:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X