ಸದ್ಯದಲ್ಲೇ 'ಥಟ್ ಅಂತ ಹೇಳಿ!?'ಗೆ 2000 ಸಂಭ್ರಮ

ನಾ ಸೋಮೇಶ್ವರ: ಈ ದಾಖಲೆಯ ನಂತರ ನಮ್ಮ ಕಾರ್ಯಕ್ರಮದಲ್ಲಿ ಸಾಕಷ್ಟು ಬದಲಾವಣೆ ಮಾಡಬೇಕೆಂದು ಬಯಸಿದ್ದೇವೆ. ಅದನ್ನು ಒಂದರ ನಂತರ ಮತ್ತೊಂದರಂತೆ ಒಂದೊಂದಾಗಿ ಪ್ರಯೋಗಿಸಲಿದ್ದೇವೆ. ಸದ್ಯಕ್ಕೆ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಕರೆಸಿ ಅವರ ಸಂದರ್ಶನದ ಜೊತೆಗೆ ಎಂದಿಗಿಂತ ಕಡಿಮೆ ಪ್ರಶ್ನೆ-ಉತ್ತರದ ಮೂಲಕ ನಡೆಸುತ್ತಿದ್ದೇವೆ. ಮುಂದೆ, 2000 ಸಂಚಿಕೆ ಪೂರೈಸಿದ ನಂತರ ನಮ್ಮ ಕಾರ್ಯಕ್ರಮದಲ್ಲಿ ಗಮನಾರ್ಹ ಬದಲಾವಣೆ ಆಗಲಿದೆ, ವೀಕ್ಷಿಸಿ...
ಪ್ರಶ್ನೆ: ನೀವು ಬಹುಮಾನ ರೂಪವಾಗಿ ಕೊಡುತ್ತಿರುವ ಪುಸ್ತಕದ ಹಿನ್ನೆಲೆಯೇನು? ಅದರ ಪ್ರಾಯೋಜಕರು ಯಾರು?
ಆರತಿ: ಬೇರೇನಾದರೂ ಬಹುಮಾನ ಕೊಡುವುದಕ್ಕಿಂತ ಜನರ ಜ್ಞಾನ ಹೆಚ್ಚಿಸುವಂತ ಪುಸ್ತಕ ಕೊಡುವುದು ಒಳ್ಳೆಯದು ಎಂಬುದು ನಮ್ಮ ಅನಿಸಿಕೆ. ಇದನ್ನು ತುಂಬಾ ಮಂದಿ ಮೆಚ್ಚದ್ದಾರೆ ಕೂಡ.
ಜೊತೆಗೆ ಕನ್ನಡ ಲೇಖಕರ ಪರಿಚಯ ಮಾಡಿಕೊಡುವುದರ ಜೊತೆಗೆ ವೀಕ್ಷಕರಲ್ಲಿ ಕನ್ನಡ ಸಾಹಿತ್ಯ ಹಾಗೂ ಬರಹಗಾರರ ಬಗ್ಗೆ ಹೆಚ್ಚಿನ ಅರಿವು ಮೂಡಿಸಬಹುದು. ನಮ್ಮ ಈ ಉದ್ದೇಶಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಹಾಗಾಗಿ ಪುಸ್ತಕ ಬಹಮಾನ ವಿತರಣೆಯನ್ನೇ ಮುಂದುವರಿಸಿದ್ದೇವೆ.
ಈ ಪುಸ್ತಕಗಳು ನಮಗೆ, ಕರ್ನಾಟಕ ಪುಸ್ತಕ ಪ್ರಾಧಿಕಾರ, ಅಂಕಿತ ಪ್ರಕಾಶನ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಮೂಲಕ ದೊರೆಯುತ್ತವೆ. ಕೆಲವನ್ನು ಸ್ವತಃ ನಾ. ಸೋಮೇಶ್ವರ ಅವರೇ ಕೊಂಡುತಂದು ಹಂಚುತ್ತಾರೆ. ಒಟ್ಟಿನಲ್ಲಿ ಪುಸ್ತಕಗಳನ್ನೇ ಹಂಚುವುದು ನಮ್ಮ ಧ್ಯೇಯೋದ್ದೇಶ. ಅದನ್ನು ಹೀಗೆ ಮುಂದುವರಿಸಿಕೊಂಡು ಹೋಗಲಿದ್ದೇವೆ.
ಪ್ರಶ್ನೆ: ಒಟ್ಟೂ ಎಷ್ಟು ಸಂಚಿಕೆ ಮಾಡಬೇಕೆಂಬ ಗುರಿ ಹೊಂದಿದ್ದೀರಿ?
ನಾ ಸೋಮೇಶ್ವರ: ನಾವು ಇಷ್ಟೇ ಸಂಚಿಕೆ ನಿರ್ಮಿಸಬೇಕೆಂಬ ಯಾವುದೇ ಗುರಿ ಹೊಂದಿಲ್ಲ. ಹೀಗೆ ಮುಂದುವರಿಸಿಕೊಂಡು ಹೊಗಲಿದ್ದೇವೆ. ಜನರು ಭಾಗವಹಿಸುವ ತನಕ, ವೀಕ್ಷಕರು ವೀಕ್ಷಿಸುವ ತನಕ ಎನ್ನಬಹುದು. ಈಗ ಲಿಮ್ಕಾ ದಾಖಲೆ ನಿರ್ಮಾಣವಾಗಿದೆ, ಮುಂದೆ ಗಿನ್ನಿಸ್ ದಾಖಲೆಗೂ ಸೇರಬಹುದು.
ಆದರೆ ನಮ್ಮ ಉದ್ದೇಶ ಯಾವುದೇ ದಾಖಲೆಗಾಗಿ ಮಾಡುವುದಲ್ಲ. ಜನರ ಜ್ಞಾನ ಹೆಚ್ಚಿಸುವುದರ ಜೊತೆಗೆ ಕನ್ನಡದ ಅಪಾರ ಸಾಹಿತ್ಯ ಭಂಡಾರ ಹಾಗೂ ಲೇಖಕರನ್ನು ಪೀಳಿಗೆಯಿಂದ ಪೀಳಿಗೆಗೆ ಪರಿಚಯಿಸಲು ನೆರವಾಗುವುದು.
ಈ ನಿಟ್ಟಿನಲ್ಲಿ, ಕಾರ್ಯಕ್ರಮದಲ್ಲಿ ಹೆಚ್ಚು ಹೆಚ್ಚು ಜನರು ದೂರದೂರುಗಳಿಂದಲೂ ಬಂದು ಭಾಗವಹಿಸಲು ನೆರವಾಗುವಂತೆ, ಕೆಎಸ್ ಆರ್ ಟಿಸಿ ಬಸ್ ಚಾರ್ಜನ್ನು ನಾವೇ ಭರಿಸುತ್ತಿದ್ದೇವೆ. ಸಾಕಷ್ಟು ಜನರು ಕರ್ನಾಟಕದ ಮೂಲೆಮೂಲೆಯಿಂದ ಬಂದು ಭಾಗವಹಿಸುತ್ತಿದ್ದಾರೆ."
ಒಟ್ಟಿನಲ್ಲಿ, ದೂರದರ್ಶನದಲ್ಲಿ ಪ್ರಸಾರವಾಗುತ್ತಿರುವ ಥಟ್ ಅಂತ ಹೇಳಿ ಕಾರ್ಯಕ್ರಮ ದಿನೇ ದಿನೇ ಹೆಚ್ಚು ಹೆಚ್ಚು ವೀಕ್ಷಕರನ್ನು ಸೆಳೆದುಕೊಂಡು ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದೆ. ಕಾರ್ಯಕ್ರಮದಲ್ಲಿ ಆಗಾಗ ವಿಭಿನ್ನತೆ ತರುವ ಮೂಲಕ ಏಕತಾನತೆಯನ್ನು ಮುರಿದು ವೀಕ್ಷಕರಿಗೆ ಜ್ಞಾನದೀಪವಾಗಿದೆ.
ನಿರೂಪಕ ನಾ ಸೋಮೇಶ್ವರ, ನಿರ್ಮಾಪಕಿ ಆರತಿ ಎಚ್ ಎನ್ ಜೊತೆಗೆ ಅನಿತಾ, ಶಕುಂತಲಾ ಹಾಗೂ ಶ್ರೀದೇವಿ ಈ ಕಾರ್ಯಕ್ರಮದ ಯಶಸ್ಸಿಗೆ ನಿರಂತರವಾಗಿ ಶ್ರಮಿಸುತ್ತಾ, ಇದನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇನ್ನೇನು ಸದ್ಯದಲ್ಲೇ 2000 ದ ಸ್ಪೆಷಲ್ ಸಂಚಿಕೆ ಪ್ರಸಾರವಾಗಲಿದೆ, ನೀವೆಲ್ಲರೂ ನೋಡಬಹುದು... (ಒನ್ ಇಂಡಿಯಾ ಕನ್ನಡ)


Click it and Unblock the Notifications











