ಬಿಗ್ ಬಾಸ್‌ನಲ್ಲಿ ಬಿಗ್ ಟ್ವಿಸ್ಟ್; ಫಿನಾಲೆ ಮುನ್ನ ಹಿಂದೆ ಸರಿದ ಗೆಲ್ಲುವ ಕುದುರೆ-18 ಲಕ್ಷದ ಜೊತೆ ಹೊರಬಂದ ಸ್ಪರ್ಧಿ
ಕಿರುತೆರೆಯ ಪ್ರೇಕ್ಷಕರಲ್ಲಿ ಹಲವರ ಪಾಲಿಗೆ ''ಬಿಗ್ ಬಾಸ್'' ಪ್ರತಿ ವರ್ಷ ಬರುವ ಹಬ್ಬ. ಈ ಹಬ್ಬದಲ್ಲಿ ದೈಹಿಕವಾಗಿ ಹದಿನೈದು ಜನ ಭಾಗವಾದರೆ ಮಾನಸಿಕವಾಗಿ ಹಲವಾರು ಜನ ತಮ್ಮ ಮನೆಯಲ್ಲಿ ಈ ಹಬ್ಬ ಆಚರಿಸುತ್ತಾರೆ. ಆ ಮನೆಯಲ್ಲಿ ದಿನ ನಿತ್ಯ ನಡೆಯುವ ವಿದ್ಯಮಾನದ ಕುರಿತು ತಮ್ಮ ಮನೆಯಲ್ಲಿ ಚರ್ಚೆ ಮಾಡುತ್ತಾರೆ. ಸಾಮಾಜಿಕ ಜಾಲತಾಣದ ಸಹಾಯದ ಮೂಲಕವೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಒಂದರ್ಥದಲ್ಲಿ ''ಬಿಗ್ ಬಾಸ್'' ಕೇವಲ ಕಾರ್ಯಕ್ರಮ ಅಲ್ಲ. ಹಲವರ ಪಾಲಿಗೆ ಭಾವನಾತ್ಮಕವಾದ ರಣರಂಗ. ಇನ್ನೂ ಸ್ಫರ್ಧಿಗಳ ಪಾಲಿಗೆ ಬದುಕು ಬದಲಿಸಬಲ್ಲ.. ಅಪಾರವಾದ ಹೆಸರನ್ನು ನೀಡಬಲ್ಲ.. ದೊಡ್ಡ ಮೊತ್ತದ ಹಣವನ್ನು ಕೂಡ ಕೊಡಬಲ್ಲ.. ಕಾರ್ಯಕ್ರಮ ''ಬಿಗ್ ಬಾಸ್''.

ಇಂಥಾ ''ಬಿಗ್ ಬಾಸ್''ನ ಗೆಲ್ಲಬೇಕೆಂದು ಹಲವರು ಪ್ರಯತ್ನ ಮಾಡುತ್ತಾರೆ. ಗೆಲ್ಲುವ ಉದ್ದೇಶದಿಂದಲೇ ಮನೆಯನ್ನು ಕೂಡ ಪ್ರವೇಶ ಮಾಡುತ್ತಾರೆ. ಕೊನೆಯ ಹಂತಕ್ಕೆ ಬಂದರೆ ಎಲ್ಲರಲ್ಲಿಯೂ ಟ್ರೋಫಿ ಎತ್ತಿ ಹಿಡಿಯುವ ಕನಸು ಚಿಗುರೊಡೆಯುತ್ತೆ.
ಆದರೆ ಕೆಲವರಿಗೆ ತಮ್ಮ ಮೇಲೆ ಅನುಮಾನ ಇರುತ್ತೆ. ಟ್ರೋಫಿ ಗೆಲ್ಲುವ ಅರ್ಹತೆ ತನಗೆ ಇದೆಯಾ ಎನ್ನುವ ಪ್ರಶ್ನೆ ಮೂಡುತ್ತೆ. ಗೆಲ್ಲದೇ ಇದ್ದರೆ ಟ್ರೋಫಿಯೂ ಇಲ್ಲ.. ಹಣವೂ ಇಲ್ಲ.. ಎನ್ನುವ ಚಿಂತೆ ಕಾಡಲು ಶುರುವಾಗುತ್ತೆ. ಪ್ರಯತ್ನ ವ್ಯರ್ಥವಾಗುವ ಭಯ ಕಾಡುತ್ತೆ.ಇಂತಹವರಿಗಾಗಿಯೇ ''ಬಿಗ್ ಬಾಸ್''ನಲ್ಲಿ ಹಣದ ಆಮೀಷವನ್ನೊಡ್ಡಲಾಗುತ್ತೆ. ಅದುವೇ ಕ್ಯಾಶ್ ಬಾಕ್ಸ್ ಟಾಸ್ಕ್. ತಮ್ಮ ಮೇಲೆ ತಮಗೆ ಅನುಮಾನ ಇದ್ದವರಿಗೆ .. ಹಣದ ಅವಶ್ಯಕತೆ ಇರುವವರಿಗೆ .. ಹಣ ಪಡೆದು ಮನೆಯ ಹೊರಗಡೆ ಬರುವ ಅವಕಾಶವನ್ನು ''ಬಿಗ್ ಬಾಸ್'' ಈ ಮೂಲಕ ನೀಡುತ್ತೆ.
ಈ ಅವಕಾಶವನ್ನು ಸದ್ಯ ತಮಿಳು ''ಬಿಗ್ ಬಾಸ್'' ಸ್ಫರ್ಧಿ ಗಾನಾ ವಿನೋದ್ ಸದುಪಯೋಗ ಮಾಡಿಕೊಂಡಿದ್ದಾರೆ. ಆದರೆ ಇವರ ಈ ನಿರ್ಧಾರ ಹಲವರಿಗೆ ಆಘಾತ ನೀಡಿದೆ. ಅಚ್ಚರಿಗೆ ದೂಡಿದೆ. ಯಾಕೆಂದರೆ ತಮಿಳು ''ಬಿಗ್ ಬಾಸ್''ನಲ್ಲಿ ಗಾನಾ ವಿನೋದ್ ಈ ಬಾರಿ ಗೆಲ್ಲುವ ಸ್ಫರ್ಧಿ ಎಂದೇ ಬಿಂಬಿತರಾಗಿದ್ದವರು. ತಮ್ಮ ಹಾಡುಗಾರಿಕೆ ಮತ್ತು ನೇರ ಮಾತುಗಳಿಂದ ತಮಿಳುನಾಡಿನ ಲಕ್ಷಾಂತರ ಜನರ ಹೃದಯವನ್ನು ಗೆದ್ದಿದ್ದವರು. ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಬೆಂಬಲ ಇತ್ತು ಇವರಿಗೆ.
ಆದರೆ. ಗ್ರ್ಯಾಂಡ್ ಫಿನಾಲೆಗೆ ಇನ್ನೂ ಕೆಲ ದಿನ ಇರುವ ಸಮಯದಲ್ಲಿ ಗಾನಾ ವಿನೋದ್ ಹಣ ತೆಗೆದುಕೊಂಡು ಹೊರ ಬಂದಿದ್ದಾರೆ. ಹಣದ ಮೊತ್ತ 18 ಲಕ್ಷಕ್ಕೇರಿದಾಗ ಹೊರ ನಡೆದಿದ್ದಾರೆ. ಗೆಲ್ಲುವ ಕುದುರೆ ಸ್ಫರ್ಧೆಯಿಂದ ಕೊನೆಗೆ ಹೀಗೆ ಹಿಂದೆ ಸರಿದರೆ ಆಘಾತವಾಗದಿರುತ್ತಾ..? ಹೀಗಾಗಿಯೇ ಹಲವರು ಸದ್ಯ ಗಾನಾ ವಿನೋದ್ ಅವರ ಈ ನಿರ್ಧಾರದ ಕುರಿತು ಚರ್ಚೆ ಮಾಡುತ್ತಿದ್ದಾರೆ. ಮತ್ತೊಬ್ಬ ಸ್ಫರ್ಧಿ ಅರೋರಾ ಸಿಂಕ್ಲೇರ್ ಅವರೇ ಗಾನಾ ವಿನೋದ್ ಅವರ ಬ್ರೈನ್ ವಾಶ್ ಮಾಡಿ ಅವರನ್ನು ಹೊರ ದಬ್ಬಿದರು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಕೆಲವರು ಗಾನಾ ವಿನೋದ್ ಅವರನ್ನು ಸಮರ್ಥನೆಮಾಡಿಕೊಳ್ಳುತ್ತಿದ್ದು ಮಧ್ಯಮ ವರ್ಗದ ಕುಟುಂಬದಿಂದ ಬಂದ ವಿನೋದ್‌ಗೆ 18 ಲಕ್ಷ ರೂಪಾಯಿ ಎಂಬುದು ಸಣ್ಣ ಮೊತ್ತವೇನಲ್ಲ. ಫಿನಾಲೆಯಲ್ಲಿ ಟ್ರೋಫಿ ಸಿಗುತ್ತದೋ ಇಲ್ಲವೋ ಎಂಬ ಅನಿಶ್ಚಿತತೆಯ ಬದಲು, ಕೈಗೆ ಬಂದ ಭದ್ರವಾದ ಹಣವನ್ನು ತೆಗೆದುಕೊಂಡಿದ್ದು ಬುದ್ಧಿವಂತಿಕೆಯ ಕೆಲಸ ಎಂಬ ವಾದವನ್ನು ಮಾಡುತ್ತಿದ್ಧಾರೆ.
ಅಂದ್ಹಾಗೇ ''ದೇರ್ ಎಕ್ಸ್‌ಪ್ಲೋರರ್'' ವರದಿಯ ಪ್ರಕಾರ, ''ಬಿಗ್ ಬಾಸ್''ನಲ್ಲಿ ಭಾಗವಹಿಸಿದ್ದಕ್ಕೆ ದಿನಕ್ಕೆ ₹22,000 ಸಂಭಾವನೆ ಇವರಿಗೆ ಸಿಗ್ತಿತ್ತು. ಆ ಪ್ರಕಾರ ಕೇವಲ ಒಂದು ವಾರಕ್ಕೆ ₹1.54 ಲಕ್ಷ ಪಡೆಯುತ್ತಿದ್ದ ಗಾನಾ ವಿನೋದ್ 14 ವಾರಗಳ ಕಾಲ ಮನೆಯಲ್ಲಿದ್ದು ಒಟ್ಟು ₹21.56 ಲಕ್ಷವನ್ನು ಗಳಿಸಿದ್ದಾರೆ. ಇದರ ಜೊತೆ ₹18 ಲಕ್ಷವನ್ನು ಕೂಡ ಪಡೆದಿದ್ದಾರೆ. ಈ ಮೂಲಕ ''ಬಿಗ್ ಬಾಸ್'' ಕಾರ್ಯಕ್ರಮದಿಂದ ಗಾನಾ ವಿನೋದ್ ಒಟ್ಟು ₹39.56 ಲಕ್ಷ ಪಡೆದಿದ್ದಾರೆ.
ಇನ್ನುಳಿದಂತೆ ಗಾನಾ ವಿನೋದ್ ಹೊರ ಬರುತ್ತಿದ್ದಂತೆ ಲೆಕ್ಕಾಚಾರಗಳು ಬದಲಾಗಿವೆ. ಸದ್ಯ ಅರೋರಾ ಸಿಂಕ್ಲೇರ್.. ಸಬರಿನಾಥನ್.. ವಿಕ್ಕಲ್ಸ್ ವಿಕ್ರಮ್.. ಸ್ಯಾಂಡ್ರಾ ಏಮಿ.. ಮತ್ತು ದಿವ್ಯಾ ಗಣೇಶ್ ಮನೆಯಲ್ಲಿದ್ದಾರೆ. ಈ ಐವರ ಫೈಕಿ ಟ್ರೋಪಿ ಯಾರ ಪಾಲಾಗುತ್ತೆ ಎಂಬ ಪ್ರಶ್ನೆಗೆ ಉತ್ತರ ತಿಳಿಯಲು ತಮಿಳುನಾಡು ಕಾತುರದಿಂದ ಕಾಯುತ್ತಿದೆ.


Click it and Unblock the Notifications











