ಬಿಗ್ ಬಾಸ್ ಮನೆಗೆ ಬರಲು ತರಬೇತಿ ಪಡೆದ ಸುದೀಪ್‌ ಚಿತ್ರದ ನಾಯಕಿ, ಮನೆಗೆ ಬರುವುದು ಯಾವಾಗ...?

ಬಿಗ್‌ಬಾಸ್ ಶೋ ಎಂಬುದೇ ಹುಚ್ಚರ ಸಂತೆ. ಮತ್ತೊಬ್ಬರ ಖಾಸಗಿ ಬದುಕಿನ ಮೇಲಿರೋ ಮನುಷ್ಯ ಸಹಜ ಕ್ಯೂರಿಯಾಸಿಟಿಯನ್ನೇ ಬಂಡವಾಳ ಮಾಡಿಕೊಂಡ ಈ ಶೋವನ್ನು ಜನ ಬೈದುಕೊಂಡೂ ನೋಡುತ್ತಾರೆ. ನೋಡುತ್ತಲೇ ಬೈಯುತ್ತಾರೆ.

ಇಂಥಾ ಶೋನಲ್ಲಿ ಪ್ರತೀ ಸೀಜನ್ನಿನಲ್ಲಿಯೂ ಚಿತ್ರ ವಿಚಿತ್ರ ವ್ಯಕ್ತಿತ್ವಗಳನ್ನು ಹುಡುಕಾಡಿ ತುಂಬಿಕೊಳ್ಳೋದು ವಾಡಿಕೆ. ಈ ಬಾರಿಯ ಹಿಂದಿ ಬಿಗ್ ಬಾಸ್‌ ಕೂಡ ಇದರಿಂದ ಹೊರತಾಗಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಇನ್ನೇನು ನಾಲ್ಕೈದು ದಿನದಲ್ಲಿ ಆರಂಭವಾಗಲಿರುವ ಹಿಂದಿ ಬಿಗ್ ಬಾಸ್ ಕುರಿತು ಚರ್ಚೆ ನಡೆಯುತ್ತಿದೆ. ಈ ಬಾರಿ ಸಲ್ಮಾನ್ ಖಾನ್ ನಡೆಸಿ ಕೊಡಲಿರುವ ಈ 18ನೇ ಕಾರ್ಯಕ್ರಮದಲ್ಲಿ ಯಾರೆಲ್ಲ ಭಾಗಿಯಾಬಹುದು ಎನ್ನುವ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ. ಆ ಪೈಕಿ ಸುದೀಪ್ ಜೊತೆ ತೆರೆ ಹಂಚಿಕೊಂಡಿದ್ದ ನಾಯಕಿ ಸಮೀರಾ ರೆಡ್ಡಿ ಹೆಸರು ಎಲ್ಲರ ಹುಬ್ಬೇರಿಸಿದೆ. ನಿಜಕ್ಕೂ ಸಮೀರಾ ರೆಡ್ಡಿ ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ಬಿಗ್ ಬಾಸ್‌ಗೆ ಬರುತ್ತಾರಾ ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿದೆ.

The actress who shared the screen with Kichcha Sudeep is all set to enter Bigg Boss

ಹೌದು, ಸಮೀರಾ ರೆಡ್ಡಿ.. ಎರಡು ಸಾವಿರದ ಇಸವಿಯ ಆಸು ಪಾಸಿನಲ್ಲಿ ಚಿರಂಜೀವಿ, ಎನ್ ಟಿ ಆರ್ ಇತ್ಯಾದಿ ಸ್ಟಾರ್‌ಗಳ ಜೊತೆ ರೋಮ್ಯಾನ್ಸ್ ಮಾಡಿದ ಸಮೀರಾ ರೆಡ್ಡಿಯವರನ್ನು ಯಾರು ತಾನೇ ಮರೆಯಲು ಸಾಧ್ಯ. ಕನ್ನಡದ ವರದನಾಯಕ ಚಿತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದ ಸಮೀರಾ ರೆಡ್ಡಿ ಸದ್ಯಕ್ಕೆ ಚಿತ್ರರಂಗದಿಂದ ಅಂತರ ಕಾಪಾಡಿಕೊಂಡಿದ್ದಾರೆ. ಮನೆ-ಗಂಡ-ಮಕ್ಕಳು ಎಂದು ಸಂಸಾರದಲ್ಲಿ ತಲ್ಲೀನರಾಗಿದ್ದಾರೆ. ಇಂಥಾ ಸಮೀರಾ ರೆಡ್ಡಿ ಈ ಅಕ್ಟೋಬರ್ ಆರರಿಂದ ಹಿಂದಿಯಲ್ಲಿ ಶುರುವಾಗಲಿರುವ ಬಿಗ್ ಬಾಸ್‌ ಮನೆಗೆ ಬರುತ್ತಾರೆ ಎನ್ನುವ ಸುದ್ದಿ ಸದ್ಯಕ್ಕೆ ಗುಲ್ಲಾಗಿದೆ.

ಇದಕ್ಕೆ ಪೂರಕವಾಗಿ ಹಾಸ್ಯಾಸ್ಪದ ವಿಡಿಯೋವನ್ನು ಕೂಡ ಮಾಡಿರುವ ಸಮೀರಾ ರೆಡ್ಡಿ, ಬಿಗ್ ಬಾಸ್ ಮನೆಗೆ ತೆರಳಲು ನಾನು ಟ್ರೇನಿಂಗ್ ಪಡೆಯುತ್ತಿದ್ದೇನೆ ಎಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನಿಜಕ್ಕೂ ಬಿಗ್ ಬಾಸ್‌ಗೆ ನಾನು ಹೋಗ್ತಿದ್ದೀನಾ ಎನ್ನುವ ಪ್ರಶ್ನೆಯನ್ನು ತಮ್ಮ ಅಭಿಮಾನಿಗಳಿಗೆ ಹಿಂಬಾಲಕರಿಗೆ ಕೇಳಿದ್ದಾರೆ. ನೋಡಲು ತುಂಬಾ ಮಜವಾಗಿರುವ ಈ ವಿಡಿಯೋ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ವೈರಲ್ ಆಗುತ್ತಿದೆ.

the-actress-who-shared-the-screen-with-kichcha-sudeep-is-all-set-to-enter-bigg-boss

ಸಮೀರಾ ರೆಡ್ಡಿಯವರ ಈ ವಿಡಿಯೋವನ್ನು ನೋಡಿದ ಅನೇಕರು ದಯಮಾಡಿ ಬಿಗ್ ಬಾಸ್ ಮನೆಗೆ ಯಾವುದೇ ಕಾರಣಕ್ಕೂ ಹೋಗಬೇಡಿ ಎಂದು ಮನವಿಯನ್ನು ಮಾಡಿಕೊಂಡರೆ, ಇನ್ನೂ ಹಲವರು ನಕ್ಕು ನಕ್ಕು ಸುಸ್ತಾಯಿತು ಎಂದಿದ್ದಾರೆ. ನಿಜಾ ಸಮೀರಾ ರೆಡ್ಡಿ ತಾವು ಬಿಗ್ ಬಾಸ್ ಮನೆಗೆ ಬರುತ್ತಿರುವ ವಿಚಾರವನ್ನು ಅಧಿಕೃತವಾಗಿ ಹಂಚಿಕೊಂಡಿಲ್ಲ. ಆದರೂ ಅಡ್ಡ ಗೋಡೆಯ ಮೇಲೆ ಈ ವಿಡಿಯೋ ಮೂಲಕ ದೀಪ ಇಟ್ಟಿದ್ದಾರೆ. ಈ ಕಾರಣಕ್ಕೆ ಅನೇಕರು ಬಿಗ್ ಬಾಸ್‌ ಮನೆಗೆ ನಿಮಗೆ ಸ್ವಾಗತ ಎಂದಿದ್ದಾರೆ. ಈ ಸಲ್ ಕಪ್ ನಿಮ್ದೇ ಬಿಡಿ ಎಂದು ಶುಭಾಶಯವನ್ನು ಕೂಡ ಕೋರುತ್ತಿದ್ದಾರೆ.

ಉಳಿದಂತೆ ಸಮೀರಾ ರೆಡ್ಡಿ ಅವರನ್ನು ಹೊರತು ಪಡಿಸಿದರೆ ಪವಿತ್ರ ರಿಶ್ತಾದಿಂದ ಫೇಮಸ್ ಆದ ಕಿರುತೆರೆ ಕಲಾವಿದ ರಿತ್ವಿಕ್ ಹೆಸರು ಬಿಗ್ ಬಾಸ್ ಸೀಸನ್ 18ರಲ್ಲಿ ಮುಂಚೂಣಿಯಲ್ಲಿದೆ. ಇವರನ್ನು ಹೊರತು ಪಡಿಸಿದರೆ ಹಿಂದಿ ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತವಾಗಿರುವ ದಿಗ್ವಿಜಯ್ ಸಿಂಗ್ ಹೆಸರು ಕೂಡ ಕೇಳಿ ಬರುತ್ತಿದೆ. ಇನ್ನೂ ಜೋದಾ ಅಕ್ಬರ್, ಅಲಿ ಬಾಬಾ, ದಾಸ್ತಾನ್ ಎ ಕಬೂಲ್, ಹೀಗೆ ಹಲವು ಧಾರಾವಾಹಿಗಳ ಮೂಲಕ ಅನೇಕ ಅಭಿಮಾನಿಗಳನ್ನು ಹೊಂದಿರುವ ಶೇಜಾನ್ ಖಾನ್ ಕೂಡ ಬಿಗ್ ಬಾಸ್ ಮನೆಗೆ ತೆರಳುವುದು ಖಚಿತ ಎನ್ನುವ ಮಾತು ಮುಂಬೈನಲ್ಲಿ ಕೇಳಿ ಬರುತ್ತಿದೆ.

ಇನ್ನೂ ಕುಂಡಲಿ ಭಾಗ್ಯ, ಸಸುರಾಲ್ ಸೀಮರ್ ಕಾ ಸೇರಿ ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸಿರುವ ಧೀರಜ್ ಕೂಡ ಈ ಬಾರಿಯ ಬಿಗ್ ಬಾಸ್ ಮನೆಗೆ ತೆರಳಲಿದ್ದಾರೆ ಎನ್ನುವ ಸುದ್ದಿ ಸದ್ಯಕ್ಕೆ ಕೇಳಿ ಬರುತ್ತಿದೆ. ಏಕ್ ಹಜಾರೋ ಮೇ ಮೇರಿ ಬೆಹನಾ ಹೈ, ನಾಗಿನ್ 4 ಧಾರಾವಾಹಿಗಳಲ್ಲಿ ಅಭಿನಯಿಸಿರುವ ನಿಯಾ ಶರ್ಮಾ ಕೂಡ ಬಿಗ್ ಬಾಸ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.ಅಕ್ಟೋಬರ್ ಆರರಿಂದ ಹಿಂದಿ ಬಿಗ್ ಬಾಸ್ ಶುರುವಾಗಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X