ಅಂದು ಪುಟ್ಟಕ್ಕನ ಮಕ್ಕಳು, ಇಂದು ಶ್ರೀ ಗಂಧದ ಗುಡಿ ; 156 ಸಂಚಿಕೆ, 'ಚಂದನಾ' ಪಾತ್ರಕ್ಕೆ ಸಂಜನಾ ಗುಡ್ ಬೈ - ಹೊಸ ನಟಿ ಯಾರು?

ಕಿರುತೆರೆಯಲ್ಲಿ ಯಾವುದೇ ಧಾರಾವಾಹಿ ಇರಲಿ, ಆ ಧಾರಾವಾಹಿಯ ಪಾತ್ರಗಳ ಜೊತೆ ಪ್ರೇಕ್ಷಕರು ಭಾವನಾತ್ಮಕವಾಗಿ ಬೆಸದುಕೊಂಡರೆ ಆ ಧಾರಾವಾಹಿ ಗೆದ್ದಂತೆ ಎನ್ನುವ ಮಾತು ಇದೆ. ಇದು ಎಷ್ಟರ ಮಟ್ಟಿಗೆ ನಿಜಾ ಎನ್ನುವುದು ಕಿರುತೆರೆಯವರಿಗೆ ಗೊತ್ತಾದರು ಹಲವರು ಬಾರಿ ಆ ಪಾತ್ರಗಳನ್ನು ಮತ್ತು ಆ ಪಾತ್ರಧಾರಿಗಳನ್ನು ಹಲವರು ಮನೆಯ ಸದಸ್ಯರಂತೆ ನೋಡುತ್ತಾರೆ. ಪ್ರೀತಿ ಮಾಡುತ್ತಾರೆ. ಇನ್ನೂ ಕೆಲ ಒಮ್ಮೆ ದ್ವೇಷವನ್ನು ಕೂಡ ಮಾಡುತ್ತಾರೆ.

ಆದರೆ.. ಹೀಗೆ ಬೆಸೆದ ಸಂಬಂಧ ಕೆಲ ಒಮ್ಮೆ ಅರ್ಧಕ್ಕೆ ಕಳಚಿ ಬಿದ್ದಿದ್ದು ಇದೆ. ಕೆಲವರು ಬೇರೆ ಯಾವುದೋ ಕಾರಣಕ್ಕೋ ಅಥವಾ ಅನಾರೋಗ್ಯದಿಂದಾಗಿಯೋ, ಮನಸಿಲ್ಲದಿದ್ದರೂ ಧಾರಾವಾಹಿಯನ್ನು ಕೈ ಬಿಡುತ್ತಾರೆ. ಇನ್ನೂ ಹಲವರು ವ್ಯೆಯಕ್ತಿಕ ಕಾರಣ ನೀಡಿ ಧಾರಾವಾಹಿಯಿಂದ ಏಕಾಏಕಿ ಹೊರ ಬರುತ್ತಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಮತ್ತು ಆ ಧಾರಾವಾಹಿಯ ಪ್ರೇಕ್ಷಕರಿಗೆ ನಿರಾಸೆ ಮಾಡುತ್ತಾರೆ. ಉದಾಹರಣೆಗೆ ಸಂಜನಾ ಬುರ್ಲಿ.

The Big Switch Sneha Manjunath Joins Shree Gandhadagudi After Sanjana Burli s Shock Exit

ಹೌದು, ಸಂಜನಾ ಬುರ್ಲಿ.. ''ಲಗ್ನ ಪತ್ರಿಕೆ''ಯ ಮಯೂರಿ. ''ಪುಟ್ಟಕ್ಕನ ಮಕ್ಕಳು'' ಧಾರಾವಾಹಿಯ ಸ್ನೇಹಾ. ಹೆಚ್ಚು ಕಡಿಮೆ ''ಪುಟ್ಟಕ್ಕನ ಮಕ್ಕಳು'' ಧಾರಾವಾಹಿಯ 800 ಸಂಚಿಕೆಗಳ ಮೂಲಕ ಕರುನಾಡಿನೆಲ್ಲೆಡೆ ಮನೆ ಮಾತಾದ ಸಂಜನಾ ಕಳೆದ ವರ್ಷ ಏಕಾಏಕಿ ಧಾರಾವಾಹಿಯಿಂದ ಹೊರ ಬಂದರು. ಈ ಮೂಲಕ ತಮ್ಮ ಅಭಿಮಾನಿಗಳನ್ನು ಅಚ್ಚರಿಗೆ ದೂಡಿದ್ದರು.

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಿಂದ ಹೊರ ಬರುವುದಕ್ಕೆ ಶಿಕ್ಷಣ ಪ್ರಮುಖ ಕಾರಣವೆಂದು ಹೇಳಿದ್ದ ಸಂಜನಾ ಬುರ್ಲಿ, ಆ ನಂತರ ಕಾಣಿಸಿಕೊಂಡಿದ್ದು ''ಕಲರ್ಸ್ ಕನ್ನಡ''ದ ಅಂಗಳದಲ್ಲಿ. ಪ್ರತಿ ದಿನ ರಾತ್ರಿ 8 ಗಂಟೆಗೆ ಪ್ರಸಾರವಾಗುವ ''ಶ್ರೀ ಗಂಧದ ಗುಡಿ'' ಧಾರಾವಾಹಿಯನ್ನು ಒಪ್ಪಿಕೊಂಡ ಸಂಜನಾ ಈ ಧಾರಾವಾಹಿಯಲ್ಲಿ ಚಂದನಾ ಪಾತ್ರವನ್ನು ನಿರ್ವಹಿಸುತ್ತಿದ್ದರು. ತಮ್ಮ ಅಭಿನಯದಿಂದ ಮತ್ತೊಮ್ಮೆ ತಮ್ಮ ಅಭಿಮಾನಿಗಳ ಹೃದಯವನ್ನು ಕೂಡ ಗೆದ್ದರು.

ಅಕ್ಟೋಬರ್ 6, 2025 ರಂದು ಆರಂಭವಾದ ''ಶ್ರೀ ಗಂಧದಗುಡಿ'' ಸದ್ಯ 156 ಸಂಚಿಕೆಗಳನ್ನು ಪೂರೈಸಿದೆ. ಜನ ಮನ ಗೆಲ್ಲುತ್ತಾ ಟಿ.ಆರ್.ಪಿ ರೇಸ್‌ನಲ್ಲಿ ಕೂಡ ಮುಂಚೂಣಿಯಲ್ಲಿದೆ. ಹೀಗಿರುವಾಗ ಇದೀಗ ಈ ಧಾರಾವಾಹಿಯಿಂದ ಸಂಜನಾ ಬುರ್ಲಿ ಹೊರ ಬಂದಿದ್ಧಾರೆ.

ಸಂಜನಾ ಅವರ ಈ ನಿರ್ಧಾರದ ಹಿಂದಿರುವ ನಿಜವಾದ ಕಾರಣವೇನು..? ಎನ್ನುವುದು ಗೊತ್ತಿಲ್ಲವಾದರು ಸಂಜನಾ ಮತ್ತೊಮ್ಮೆ ತಮ್ಮ ವೈಯಕ್ತಿಕ ಕಾರಣಗಳಿಂದ ಹೊರ ಬಂದಿದ್ಧಾರೆ ಎನ್ನುವ ಸುದ್ದಿ ಸದ್ಯ ಕೇಳಿ ಬರುತ್ತಿದೆ.

The Big Switch Sneha Manjunath Joins Shree Gandhadagudi After Sanjana Burli s Shock Exit

ಹೌದು, ಈ ವರ್ಷದ ಆರಂಭದಲ್ಲಿ ಜನವರಿ 25 ರಂದು ದಾವಣಗೆರೆ ಮೂಲದ ವೈದ್ಯ ಸಮರ್ಥ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಸರ್ ಫ್ರೈಸ್ ನೀಡಿದ್ದರು. ಸದ್ಯ ಡಾಕ್ಟರ್ ಸಮರ್ಥ್ ಜೊತೆ ಸಂಜನಾ ಸಪ್ತಪದಿಯನ್ನು ತುಳಿಯಲು ಅಣಿಯಾಗಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

ಇನ್ನು ''ಶ್ರೀ ಗಂಧದ ಗುಡಿ'' ಧಾರಾವಾಹಿಗೆ ಸಂಜನಾ ಪ್ರತಿ ತಿಂಗಳು 20 ದಿನ ಮೀಸಲಿಡಬೇಕಾಗುತ್ತೆ. ಹೀಗಾಗಿ ಮದುವೆಯ ತಯಾರಿಗೆ ತಮ್ಮ ಈ ಶೆಡ್ಯೂಲ್‌ದಿಂದ ಅಡೆತಡೆಯಾಗಬಹುದು ಎಂದು ಸಂಜನಾ ''ಶ್ರೀ ಗಂಧದಗುಡಿ'' ಧಾರಾವಾಹಿಗೆ ಗುಡ್ ಬೈ ಹೇಳಿರಬಹುದು ಎನ್ನುವ ಮಾತು ಕಿರುತೆರೆಯ ವಲಯದಲ್ಲಿ ಹರಿದಾಡುತ್ತಿದೆ.

The Big Switch Sneha Manjunath Joins Shree Gandhadagudi After Sanjana Burli s Shock Exit

ಸದ್ಯ ಸಂಜನಾ ಅವರ ಜಾಗಕ್ಕೆ ಸ್ನೇಹಾ ಮಂಜುನಾಥ್ ಬಂದಿದ್ಧಾರೆ. ಸ್ನೇಹಾ ಬೇರೆ ಯಾರು ಅಲ್ಲ ಈ ಹಿಂದೆ ಜೀ ಪವರ್‌ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ''ಶುಭಸ್ಯ ಶೀಘ್ರಂ'' ಧಾರಾವಾಹಿಯ ನಾಯಕಿ. ಇದಕ್ಕೂ ಮುನ್ನ ''ಶಾಂತಂ ಪಾಪಂ'' ಮತ್ತು ''ರಾಮಾಚಾರಿ'' ಧಾರಾವಾಹಿಯಲ್ಲಿ ಸ್ನೇಹಾ ಕಾಣಿಸಿಕೊಂಡಿದ್ದರು. ಈಗ ಸ್ನೇಹಾ ಕೂಡ ಜೀ ಕುಟುಂಬಕ್ಕೆ ವಿದಾಯ ಹೇಳಿ ''ಕಲರ್ಸ್'' ಬಳಗ ಸೇರಿಕೊಂಡಿದ್ಧಾರೆ.

More from Filmibeat

English summary
Shree Gandhadagudi cast update: Actress Sneha Manjunath replaces Sanjana Burli as the new heroine. Stay updated on the latest casting news and character shifts here.
Read more about: colors kannada ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X