ಕಿರುತೆರೆಯಿಂದ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿರುವ ಈ ಬೆಡಗಿಯರ ಬಣ್ಣದ ಪಯಣ ಶುರುವಾಗಿದ್ದು ಎಲ್ಲಿಂದ?

By ಅನಿತಾ ಬನಾರಿ

ನಟನೆ ಎಂದಾಗ ಕೆಲವರಿಗೆ ಸಿನಿಮಾದಲ್ಲಿಯೇ ಹೆಸರು ಮಾಡಬೇಕೆಂದಿರುತ್ತದೆ. ಮತ್ತೆ ಕೆಲವರಿಗೆ ಕ್ಷೇತ್ರ ಯಾವುದಾದರೂ ಪರವಾಗಿಲ್ಲ ಪಾತ್ರಗಳು ಒಳ್ಳೆಯದಿರಬೇಕು ಎಂಬ ಬಯಕೆ ಇರುತ್ತದೆ. ಎರಡು ಅವರವರ ಆಯ್ಕೆ ಹಾಗೂ ಆಸಕ್ತಿ.

ಕಿರುತೆರೆಯಿಂದ ಆಕ್ಟಿಂಗ್ ಕೆರಿಯರ್ ಶುರು ಮಾಡಿ ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ ಹತ್ತಾರು ಉದಾಹರಣೆಗಳು ಇಂದು ನಮ್ಮ ಮುಂದಿದೆ. ಜೊತೆಗೆ ಎರಡನ್ನು ಸಮನಾಗಿ ಸರಿದೂಗಿಸಿಕೊಂದು ಹೋಗುತ್ತಿರುವವರು ಇದ್ದಾರೆ.

The colorful journey of these actresses from the small screen to movies

ಕವಿತಾ ಗೌಡ

'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ಲಚ್ಚಿ ಪಾತ್ರದ ಮೂಲಕ ಕಿರುತೆರೆಗೆ ಕಾಲಿಟ್ಟ ನಟಿ ಕವಿತಾ ಗೌಡ, ಭರತನಾಟ್ಯ ನೃತ್ಯಗಾರ್ತಿಯು ಹೌದು. ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಬಹಳ ಪಾಪ್ಯುಲರ್ ಆದ ಈ ನಟಿ ನಂತರ ವಿದ್ಯಾ ವಿನಾಯಕ ಎಂಬ ಧಾರಾವಾಹಿಯಲ್ಲಿ ವಿದ್ಯಾ ಎನ್ನುವ ನಾಯಕಿಯ ಪಾತ್ರ ಮಾಡಿ ಫೇಮಸ್ ಆದರು. ಬಿಗ್ ಬಾಸ್ ಸ್ಪರ್ಧೆಯಾಗಿ ಆಗಿ ಇನ್ನಷ್ಟು ಪಾಪ್ಯುಲಾರಿಟಿ ಪಡೆದ ಇವರು ಹಲವಾರು ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. "ಶ್ರೀನಿವಾಸ ಕಲ್ಯಾಣ" ಇವರ ಮೊದಲ ಬೆಳ್ಳಿತೆರೆ ಸಿನಿಮಾ. ನಂತರ "ಗುಬ್ಬಿ ಮೇಲೆ ಬ್ರಹ್ಮಾಸ್ತ್ರ", "ಗೋವಿಂದ ಗೋವಿಂದ", "ಬೀರಬಲ್", "ಜಸ್ಟ್ ಲವ್", "ಹುಟ್ಟುಹಬ್ಬದ ಶುಭಾಶಯಗಳು" ಇತ್ಯಾದಿ ಚಿತ್ರಗಳಲ್ಲಿ ಮಿಂಚಿದ್ದಾರೆ.

ರಂಜನಿ ರಾಘವನ್

ಕೆಳದಿ ಚೆನ್ನಮ್ಮ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ರಂಜನಿ ರಾಘವನ್ ನಂತರ ನಟಿಸಿದ್ದು 'ಆಕಾಶದೀಪ' ಧಾರಾವಾಹಿಯಲ್ಲಿ. ಮುಂದೆ 'ಪುಟ್ಟಗೌರಿ' ಮದುವೆ ಧಾರಾವಾಹಿಯಲ್ಲಿ ನಾಯಕಿ ಗೌರಿಯಾಗಿ ನಟಿಸಿದ್ದ ರಂಜನಿ ಆ ಪಾತ್ರದ ಮೂಲಕ ಕರುನಾಡಿನಾದ್ಯಂತ ಫೇಮಸ್ ಆದರು. 'ಇಷ್ಟದೇವತೆ' ಎಂಬ ಧಾರಾವಾಹಿಯನ್ನು ನಿರ್ದೇಶಿಸಿದ ಆಕೆ ಆ ಧಾರಾವಾಹಿಗೆ ಸಂಭಾಷಣೆಯನ್ನು ಕೂಡಾ ಬರೆದರು. 'ಕತೆಡಬ್ಬಿ' ಎಂಬ ಒಂದು ಪುಸ್ತಕವನ್ನು ಬರೆಯುವ ಮೂಲಕ ಬರಹಗಾರ್ತಿ ಎಂದು ಎನಿಸಿಕೊಂಡ ರಂಜನಿ ರಾಜಹಂಸ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟರು. 'ಸತ್ಯಂ', 'ಠಕ್ಕರ್', 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಇತ್ಯಾದಿ ಸಿನಿಮಾಗಳಲ್ಲೂ ಮಿಂಚಿದ್ದಾರೆ. 'ಕನ್ನಡತಿ' ಧಾರಾವಾಹಿಯಲ್ಲಿ ನಾಯಕಿ ಭುವಿ ಪಾತ್ರವನ್ನು ಮಾಡಿ ಬಹಳಷ್ಟು ಪಾಪ್ಯುಲರ್ ಆಗಿದ್ದಾರೆ.

ಅನುಪಮಾ ಗೌಡ

'ಅಕ್ಕ ತಂಗಿ', 'ಚಿ‌. ಸೌ ಸಾವಿತ್ರಿ' ಧಾರಾವಾಹಿಗಳಲ್ಲಿ ಮೊದಲು ಕಾಣಿಸಿಕೊಂಡ ಅನುಪಮಾ ಗೌಡ ಅವರು ಫೇಮಸ್ ಆದದ್ದು ಅಕ್ಕ ಎಂಬ ಧಾರಾವಾಹಿಯಿಂದ. ಅಕ್ಕ ಧಾರಾವಾಹಿಯಲ್ಲಿ ದ್ವಿಪಾತ್ರ ಮಾಡಿ ಬಹಳ ಪಾಪ್ಯುಲಾರಿಟಿ ಪಡೆದ ಇವರು ನಂತರ ಹಲವಾರು ಸಿನಿಮಾಗಳಲ್ಲಿಯೂ ಕಾಣಿಸಿಕೊಂಡರು . ಸದ್ಯಕ್ಕಂತೂ ಆಂಕರ್ ಆಗಿ ಬಹಳಷ್ಟು ರಿಯಾಲಿಟಿ ಶೋಗಳನ್ನು ಅದ್ಬುತವಾಗಿ ನಡೆಸಿಕೊಡುತ್ತಿರುವ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

The colorful journey of these actresses from the small screen to movies

ದಿವ್ಯ ಉರುಡುಗ

'ಚಿಟ್ಟೆ ಹೆಜ್ಜೆ' ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ನಡಿ ದಿವ್ಯ ಉರುಡುಗ 'ಓಂ ಶಕ್ತಿ ಓಂ ಶಾಂತಿ', 'ಅಂಬಾರಿ ಖುಷಿ', ಇತ್ಯಾದಿ ಧಾರಾವಾಹಿಗಳಲ್ಲಿ ಮಿಂಚಿದ್ದಾರೆ. ಬಿಗ್ ಬಾಸ್ ಸ್ಪರ್ಧಿಯಾಗಿ ಅದ್ಭುತವಾಗಿ ಆಡಿದ ಮೇಲಂತೂ ಇವರ ಹಾಗೂ ಅರವಿಂದ ಅವರ ಸ್ನೇಹ ಸಂಬಂಧದಿಂದ ಅರ್ವಿಯ ಹಿಂದೆ ಫೇಮಸ್ಸು. ಸದ್ಯ ಕಿರುತೆರೆಗೆ ಬ್ರೇಕ್ ಹಾಕಿರುವ ಈಕೆ ಹಿರಿತೆರೆಯಲ್ಲಿ ಬ್ಯುಸಿ.

ಅದಿತಿ ಪ್ರಭುದೇವ

'ಗುಂಡ್ಯಾನ ಹೆಂಡತಿ' ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ಅದಿತಿ 'ನಾಗಕನ್ನಿಕೆ' ಧಾರಾವಾಹಿಯಲ್ಲಿ ನಾಯಕಿಯ ಪಾತ್ರ ಮಾಡಿ ಬಹಳ ಫೇಮಸ್ ಆದರು. ಇಂದಿಗೂ ಶಿವಾನಿ ಅಲಿಯಾಸ್ ನಾಗಕನ್ನಿಕೆ ಎಂದೇ ಕರೆಸಿಕೊಳ್ಳುವ ನಟಿ ಅದಿತಿ ಪ್ರಭುದೇವ ಅವರು ನಂತರ ಬಹಳಷ್ಟು ಸಿನಿಮಾಗಳನ್ನು ಮಾಡುವ ಮೂಲಕ ಬೆಳ್ಳಿತೆರೆಯಲ್ಲಿ ಚೆನ್ನಾಗಿ ಮಿಂಚಿದರು. ಇತ್ತೀಚೆಗೆ ತಮ್ಮ ಬಹುದಿನಗಳ ಪ್ರಿಯತಮನನ್ನು ವರಿಸಿ ಯೂಟ್ಯೂಬ್ ಬ್ಲಾಗ್ ಗಳ ಮೂಲಕ ಫೇಮಸ್ ಆಗಿದ್ದಾರೆ.

More from Filmibeat

English summary
The colorful journey of these actresses, who are enchanting on the big screen with their charming acting, has begun from television,know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X