ಚಿಕ್ಕ ವಯಸ್ಸಿನಲ್ಲಿ ತಾಯಿ ಪಾತ್ರವನ್ನು ಮಾಡುತ್ತಿರುವ ನಟಿಯರಿವರು; ಬದಲಾಯ್ತು ಸೀರಿಯಲ್ ಟ್ರೆಂಡ್
ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಆಗಾಗ ಟ್ರೆಂಡ್ ಬದಲಾಗುವುದನ್ನು ನಾವು ಗಮನಿಸುತ್ತೇವೆ. ಅಂತೆಯೇ ಪ್ರಸ್ತುತ ಧಾರಾವಾಹಿ ಜಗತ್ತಿನಲ್ಲಿ ಒಂದು ಹೊಸ ಟ್ರೆಂಡ್ ಶುರುವಾಗಿದೆ.
ಬಹಳಷ್ಟು ಪುಟಾಣಿ ಮಕ್ಕಳು ಧಾರವಾಹಿಗಳಲ್ಲಿ ಇತ್ತೀಚೆಗೆ ಕಾಣಿಸಿಕೊಳ್ಳುತ್ತಿದ್ದು, ಅವರ ತಾಯಿ ಪಾತ್ರವನ್ನು ಬಹಳ ಕಲಾವಿದರು ವಹಿಸಿಕೊಳ್ಳುತ್ತಿದ್ದಾರೆ. ಚಿಕ್ಕ ವಯಸ್ಸಾದರೂ ಪ್ರಬುದ್ಧ ತಾಯಿ ಪಾತ್ರವನ್ನು ಅಚ್ಚುಕಟ್ಟಾಗಿ ನಡೆಸಿಕೊಡುತ್ತಿರುವ ನಟಿಮಣಿಗಳ ಬಗ್ಗೆ ತಿಳಿಯೋಣ ಬನ್ನಿ..

'ಸೀತಾರಾಮ' ನಟಿ ವೈಷ್ಣವಿ ಗೌಡ
ಸದ್ಯ 'ಸೀತಾರಾಮ' ಎಂಬ ಧಾರಾವಾಹಿ ಬಹಳ ಪಾಪ್ಯುಲರ್ ಆಗಿದ್ದು, ಅದರಲ್ಲಿ ನಾಯಕ ನಟಿಯಾಗಿ ನಟಿಸುತ್ತಿರುವ ನಟಿ ವೈಷ್ಣವಿ ಗೌಡ ಅವರು ಸಿಹಿ ಎಂಬ ಮಗುವಿನ ತಾಯಿ ಸೀತಾ ಪಾತ್ರವನ್ನು ಮಾಡುತ್ತಿದ್ದಾರೆ. ಈಚೆಯ ಪ್ರೀತಿ ಮಮತೆ ಹಾಗೂ ಮೃಧು ಸ್ವಭಾವ ಪ್ರೇಕ್ಷಕರಿಗೆ ಬಹಳ ಹಿಡಿಸಿದೆ.
'ಪಾರು' ಧಾರಾವಾಹಿಯ ನಟಿ ಮೋಕ್ಷಿತಾ ಪೈ
'ಪಾರು' ಧಾರಾವಾಹಿ ಹಲವಾರು ವರ್ಷಗಳಿಂದ ಪ್ರೇಕ್ಷಕರ ಮನೆಗೆದ್ದಿದ್ದು, ಅದರ ನಾಯಕ ನಟಿ ಮೋಕ್ಷಿತ ಪೈವರು ತಾಯಿ ಪಾತ್ರವನ್ನು ಮಾಡುತ್ತಿದ್ದಾರೆ. 'ಪಾರು' ಧಾರಾವಾಹಿ ಕಥೆಯಲ್ಲಿ ಪಾರು ಇನ್ನೂ ಮನೆ ಮಗುವಿನ ಹೆತ್ತ ತಾಯಿ ಎಂದು ಯಾರಿಗೂ ತಿಳಿಯದಿಲ್ಲ. ಆ ಪಾತ್ರವನ್ನು ನಟಿ ಮೋಕ್ಷಿತಾ ಅವರು ಅಚ್ಚುಕಟ್ಟಾಗಿ ನಟಿಸುತ್ತಿದ್ದಾರೆ.
'ಕೆಂಡಸಂಪಿಗೆ' ಧಾರಾವಾಹಿಯ ಸಾಧನಾ
ನಟಿ ಅಮೃತ ರಾಮಮೂರ್ತಿ 'ಕೆಂಡಸಂಪಿಗೆ' ಧಾರಾವಾಹಿ ಸಾಧನಾ ಎಂಬ ಪಾತ್ರ ಮಾಡುತ್ತಿದ್ದು, ಶಾಲೆಗೆ ಹೋಗುವ ಪುಟ್ಟ ಮಗುವಿನ ತಾಯಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಕೆ ಧಾರಾವಾಹಿಯಲ್ಲಿ ಖಳನಾಯಕಿಯ ಪಾತ್ರವನ್ನು ಮಾಡಿದರೂ ತಾಯಿಯಾಗಿ ಅದ್ಭುತವಾಗಿ ನಟಿಸುತ್ತಿದ್ದಾರೆ.

'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ದಿಶಾ ಮದನ್
'ಲಕ್ಷ್ಮೀ ನಿವಾಸ' ಎಂಬ ಹೊಸ ಧಾರಾವಾಹಿಯಲ್ಲಿ ಭಾವನ ಎಂಬ ಪಾತ್ರವನ್ನು ದಿಶಾ ಮದನ್ ಅವರು ನಿಭಾಯಿಸುತ್ತಿದ್ದಾರೆ. ಅದರಲ್ಲಿ ಆಕೆ ಪುಟ್ಟ ಮಗು ಖುಷಿಗೆ ತಾಯಿಯಾಗುವ ಜವಾಬ್ದಾರಿಯನ್ನು ಹೊರುವ ಪಾತ್ರ ಅದಾಗಿದೆ. ಜೊತೆಗೆ ಖುಷಿಯ ಒಳಿತಿಗಾಗಿಮ ಮಿಡಿಯುತ್ತಿರುವ ಹೆಣ್ಣು ಮಗಳ ಪಾತ್ರ ಆಕೆಯದು.
'ಅಮೃತಧಾರೆ'ಯ ಅಪರ್ಣ
ನಟಿ ಸಾಧನಾ ಅವರು ಹಲವಾರು ವರ್ಷಗಳ ನಂತರ ನಟನ ಕ್ಷೇತ್ರಕ್ಕೆ ಮತ್ತೆ ಮರಳಿದ್ದು, 'ಅಮೃತಧಾರೆ' ಧಾರಾವಾಹಿಯಲ್ಲಿ ಅಪರ್ಣ ಎಂಬ ಪಾತ್ರವನ್ನು ಅಚ್ಚುಕಟ್ಟಾಗಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಆಕೆ ಒಬ್ಬ ತಾಯಿಯ ಪಾತ್ರವನ್ನು ಮಾಡುತ್ತಿದ್ದು ತನ್ನ ಮಕ್ಕಳಿಗೆ ಮಮತೆ ಪ್ರೀತಿ ತೋರಿಸುವ ಒಳ್ಳೆಯ ತಾಯಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
'ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ನೇಹಾ ಗೌಡ
ನಟಿ ನೇಹಾ ಗೌಡರು ನಮ್ಮ ಲಚ್ಚಿ ಧಾರಾವಾಹಿಯಲ್ಲಿ ನಾಯಕಿ ಪಾತ್ರವನ್ನು ಮಾಡುತ್ತಿದ್ದಾರೆ. ಗಿರಿಜಾ ಎಂಬ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವ ಇವರು ಹತ್ತು ವರ್ಷದ ಮಗುವಿನ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ. ತಾಯಿಯಾಗಿ ಅವರು ನಟಿಸುತ್ತಿರುವ ಈ ಪಾತ್ರ ಪರೀಕ್ಷಕರಿಗೆ ಬಹಳ ಹಿಡಿಸಿದೆ.
'ನಮ್ಮ ಲಚ್ಚಿ' ಧಾರಾವಾಹಿಯ ಐಶ್ವರ್ಯ ಸಿಂಧೋಗಿ
'ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ನಟಿ ಐಶ್ವರ್ಯ ಸಿಂಧೋಗಿ ಅವರು ಮಾಡ್ರನ್ ತಾಯಿ ರೂಪದಲ್ಲಿ ಕಾಣಿಸಿಕೊಂಡಿದ್ದು, ತನ್ನ ಮಗಳ ಮೇಲೆ ಬಹಳಷ್ಟು ಪ್ರೀತಿಯನ್ನು ತೋರಿಸುವ ದೀಪಿಕಾ ಎಂಬ ಪಾತ್ರ ಅವರದ್ದಾಗಿದೆ.
ಈ ರೀತಿ ನಟಿಯರು ಬಹಳ ಸಣ್ಣ ವಯಸ್ಸಿನಲ್ಲಿ ತಾಯಿ ಪಾತ್ರವನ್ನು ಅಚ್ಚುಕಟ್ಟಾಗಿ ನಡೆಸಿ ನಿಭಾಯಿಸುತ್ತಿರುವ ಹೊಸ ಟ್ರೆಂಡ್ ಕನ್ನಡ ಧಾರಾವಾಹಿಯಲ್ಲಿ ಪ್ರಸ್ತುತ ಆರಂಭವಾಗಿದೆ. ನಿಜ ಜೀವನದಲ್ಲಿ ಈ ಕೆಲ ನಟಿಯರು ತಾಯಿ ಆಗದಿದ್ದರೂ ಈ ನಟನಾ ಬದುಕಿನಲ್ಲಿ ತಾಯಿ ಪಾತ್ರವನ್ನು ಬಹಳ ಸಂಯಮ ಹಾಗೂ ಅಕ್ಕರೆಯಿಂದ ನಿಭಾಯಿಸುತ್ತಿರುವುದು ಪ್ರೇಕ್ಷಕರಿಗೆ ಬಹಳ ಸಮಾಧಾನ ಹಾಗೂ ಖುಷಿ ತಂದಿದೆ.


Click it and Unblock the Notifications











