ಸ್ವಾರ್ಥದ ಜಗತ್ತು ; ಪ್ರೀತಿ,ವಿಶ್ವಾಸ,ನಂಬಿಕೆಗೆ ಇವರು ಅರ್ಹರಲ್ಲ- 'ಲಕ್ಷ್ಮೀ ನಿವಾಸ' ವಿರುದ್ದ ವಿಜಯಲಕ್ಷ್ಮೀ ಆಕ್ರೋಶ
ಬೆಳ್ಳಿತೆರೆ ಇರಲಿ .. ಕಿರುತೆರೆ ಇರಲಿ .. ಕೆಲ ಒಮ್ಮೆ ಕೆಲವರು ತಮ್ಮ ಪಾತ್ರಗಳ ಮೂಲಕ ಪ್ರೇಕ್ಷಕರ ಹೃದಯಕ್ಕೆ ಹತ್ತಿರವಾಗುತ್ತಾರೆ. ಆ ಪಾತ್ರದಲ್ಲಿ ಅವರನ್ನಲ್ಲದೇ ಬೇರೆ ಯಾರನ್ನು ಕೂಡ ಕಲ್ಪನೆ ಮಾಡಿಕೊಳ್ಳಲು ಕೂಡ ಸಾಧ್ಯವಾಗುವುದಿಲ್ಲ. ಅಷ್ಟರ ಮಟ್ಟಿಗೆ ಆ ಪಾತ್ರ ಪ್ರೇಕ್ಷಕರಿಗೆ ಕನೆಕ್ಟ್ ಆಗಿರುತ್ತೆ. ಆದರೆ ಕೆಲ ಒಮ್ಮೆ ಪ್ರೇಕ್ಷಕರ ಜೊತೆಗಿನ ಈ ಭಾವನಾತ್ಮಕ ಪಾತ್ರದ...
ಸಂಪರ್ಕದ ಕೊಂಡಿ ಅನಿವಾರ್ಯವಾಗಿ ಕಳಚಿ ಬೀಳುತ್ತೆ. ಬದುಕಿನಲ್ಲಿ ಎದುರಾದ ಮತ್ಯಾವುದೋ ತಿರುವು ಆ ಚಿತ್ರದ ಜೊತೆ ಅಥವಾ ಧಾರಾವಾಹಿಯ ಜೊತೆಗಿನ ಸಂಬಂಧಕ್ಕೆ ಬ್ರೇಕ್ ಹಾಕುತ್ತೆ. ಆಗ ಹೊರ ನಡೆಯದೇ ಬೇರೆ ದಾರಿ ಇರುವುದಿಲ್ಲ. ಇನ್ನೂ ಇಲ್ಲಿ ಪಾತ್ರಧಾರಿಗಳನ್ನು ಹೇಗೆ ಬದಲಿಸಲಾಗುತ್ತೋ ಅದೇ ತರ ಆ ಪಾತ್ರಗಳನ್ನು ಏಕಾಏಕಿ ಅಂತ್ಯಗೊಳಿಸಲಾಗುತ್ತೆ. ಅದರಲ್ಲಿಯೂ ಕನ್ನಡದಲ್ಲಿ ಸದ್ಯ ಇದೇ ಟ್ರೆಂಡ್‌ಗೆ ಭಾರೀ ಬೇಡಿಕೆ ಇದ್ದಂತೆ ಇದೆ. ಕಥೆಯ ಜೀವನಾಡಿಯಂತೆ ಇದ್ದ ಪಾತ್ರವನ್ನು ದೀಢಿರನೆ ಸಾಯಿಸಲಾಗುತ್ತಿದೆ.

ನಿಜಾ.. ಎಲ್ಲವೂ ಆ ತಂಡದ ನಿರ್ದೇಶಕನ ನಿರ್ಧಾರ. ಆ ತಂಡದ ನಿರ್ಧಾರ. ಆದರೆ.. ಈ ನಿರ್ಧಾರಗಳು ಕೆಲ ಒಮ್ಮೆ ಪ್ರಶ್ನೆ ಹುಟ್ಟು ಹಾಕುತ್ತವೆ. ವಿವಾದಕ್ಕೆ ಕೂಡ ನಾಂದಿ ಹಾಡುತ್ತವೆ. ಧಾರಾವಾಹಿಯಲ್ಲಿನ ವಾತಾವರಣ ಹಾಳಾಗಿದೆಯಾ ಎನ್ನುವ ಅನುಮಾನಕ್ಕೆ ಕೂಡ ಕಾರಣವಾಗುತ್ತವೆ. ಸದ್ಯ ''ಲಕ್ಷ್ಮೀ ನಿವಾಸ'' ಧಾರಾವಾಹಿ ವಿಚಾರದಲ್ಲಿ ಇದೇ ಆಗಿದೆ.
ಹೌದು, ''ಲಕ್ಷ್ಮೀ ನಿವಾಸ''.. ಜೀ ಕನ್ನಡದ ಜನಪ್ರಿಯ ಧಾರಾವಾಹಿ. ಟಿಆರ್‌ಪಿ ರೇಸ್‌ನಲ್ಲಿ ಕೂಡ ಮುಂಚೂಣಿಯಲ್ಲಿರುವ ಧಾರಾವಾಹಿ ಇದು. ಆದರೆ. ವಿಪರ್ಯಾಸ ಇದರ ಹೊರತಾಗಿಯೂ ಈ ಧಾರಾವಾಹಿ ಮೊದಲಿಂದ ವಿವಾದದ ಕೇಂದ್ರ ಬಿಂದುವಾಗುತ್ತಲೇ ಬಂದಿದೆ.
ಏಕಾಏಕಿ ಈ ಧಾರಾವಾಹಿಯಲ್ಲಿ ಪಾತ್ರಧಾರಿಗಳನ್ನು ಬದಲಿಸಲಾಗುತ್ತಿದೆ. ಯಾಕೆ ಹೀಗೆ..? ಗೊತ್ತಿಲ್ಲ. ಆದರೆ ಧಾರಾವಾಹಿಯಿಂದ ಹೊರ ಬಂದ ನಟಿಯರು ತಂಡದ ವಿರುದ್ದ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಕೂಡ ಹೊರ ಹಾಕುತ್ತಿದ್ದಾರೆ.
ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ಶ್ವೇತಾ ಮತ್ತು ಅಂಜಲಿ ಅವರ ಬೆನ್ನಲ್ಲಿಯೇ ಈ ಧಾರಾವಾಹಿಯಿಂದ ನಿರ್ಗಮಿಸಿರುವ ವಿಜಯಲಕ್ಷ್ಮೀ ಸುಬ್ರಮಣಿ ಕಳೆದ ಕೆಲ ದಿನಗಳ ಹಿಂದೆಯಷ್ಟೇ ತಮ್ಮ ಮನದ ನೋವನ್ನು ಹೊರ ಹಾಕಿದ್ದರು. ಕಥಾಬ್ರಹ್ಮರು ನನಗೆ ತಿಳಿಸದೇ ಮಾಡಿದ ಷಡ್ಯಂತ್ರ ಇದು ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

ವಿಪರ್ಯಾಸ ಅಂದರೆ ಇಡೀ ತಂಡಕ್ಕೆ ವಿಜಯಲಕ್ಷ್ಮಿ ಅವರ ಪಾತ್ರ ಮುಕ್ತಾಯವಾಗುತ್ತಿದೆ ಎನ್ನುವ ವಿಚಾರ ಗೊತ್ತಿತ್ತು. ಆದರೆ ಖುದ್ದು ವಿಜಯಲಕ್ಷ್ಮಿ ಅವರಿಗೆ ಈ ವಿಚಾರ ಗೊತ್ತಿರಲಿಲ್ಲ. ಈ ವಿಚಾರ ಇವರಿಗೆ ಗೊತ್ತಾಗಿದ್ದು ಕೂಡ ಮೊನ್ನೆ ಮೊನ್ನೆಯಷ್ಟೇ. ಹೀಗಾಗಿ ತಮ್ಮ ತಂಡದ ವಿರುದ್ದವೇ ಆಕ್ರೋಶವನ್ನು ವಿಜಯಲಕ್ಷ್ಮಿ ವ್ಯಕ್ತಪಡಿಸಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊಸ ಪೋಸ್ಟ್ ಹಂಚಿಕೊಂಡಿದ್ದಾರೆ.
ಈ ಕುರಿತು ಬರೆದುಕೊಂಡಿರುವ ವಿಜಯಲಕ್ಷ್ಮಿ ಪ್ರೀತಿ ವಿಶ್ವಾಸಕ್ಕೆ ಬೆಲೆ ಇಲ್ಲ, ಬರೀ ಸ್ವಾರ್ಥ,ಪಕ್ಷಪಾತ, ಒಂದು ಪಾತ್ರವನ್ನು ಮೇಲೆತ್ತಲು ಅದಕ್ಕೆ ಅನುಕಂಪ ಗಿಟ್ಟಿಸಿಕೊಡುವುದಕ್ಕೆ ಇನ್ನೊಂದು ಪಾತ್ರವನ್ನು ಕೊಲ್ಲುವುದು.. ಕಲಾವಿದೆಗೆ ಕೊನೆಯವರೆಗೂ ತಿಳಿಸದಿರುವುದು.. ಒಬ್ಬ ಕಲಾವಿದೆಗೆ ಈ ಪರಿ ಅವಮಾನ ಎಂದು ಹೇಳಿದ್ದಾರೆ.
ಮುಂದುವರೆದು ಒಂದು ತಿಂಗಳ ಹಿಂದೆಯೇ ಇಡೀ ಸೆಟ್‌ಗೆ ನನ್ನ ಪಾತ್ರವನ್ನ ಮುಗಿಸುತ್ತಿರುವುದು ಗೊತ್ತಿತ್ತು ಆದರೆ ಯಾರೊಬ್ಬರೂ ನನ್ನ ಮುಂದೆ ಬಾಯಿ ಬಿಟ್ಟಿರಲಿಲ್ಲ ಎಂದು ಹೇಳಿರುವ ವಿಜಯಲಕ್ಷ್ಮಿ ಸುಬ್ರಮಣಿ ನನಗೆ ಕಿಂಚಿತ್ತೂ ಅನುಮಾನ ಬರದಂತೆ ನೋಡಿಕೊಂಡಿದ್ದರು ಎಂದಿದ್ದಾರೆ. ಪ್ರೀತಿ, ವಿಶ್ವಾಸ, ನಂಬಿಕೆಗೆ ಅರ್ಹರೆ ಅಲ್ಲ ಅನ್ನಿಸಿತು... ಬರೀ ಸ್ವಾರ್ಥ... ಎರಡು ವರ್ಷ ಪಾತ್ರಕ್ಕೆ ಜೀವ ತುಂಬಿದ್ದಕ್ಕೆ ಒಳ್ಳೆ ಪುರಸ್ಕಾರ ಎಂದು ತಮ್ಮ ನೋವನ್ನು ಕೂಡ ವಿಜಯಲಕ್ಷ್ಮಿ ಸುಬ್ರಮಣಿ ಹೊರ ಹಾಕಿದ್ದಾರೆ.
ವಿಜಯಲಕ್ಷ್ಮಿ ಅವರ ಈ ಪೋಸ್ಟ್‌ಗೆ ಹಲವರು ಕಾಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು ಭವಿಷ್ಯದಲ್ಲಿ ಇಂತಾ ಟೀಮ್ ಜೊತೆ ಇನ್ಯಾವತ್ತೂ ಕೆಲಸ ಮಾಡಬೇಡಿ ಎಂದು ಹೇಳಿದ್ದಾರೆ. ಅಮ್ಮ ನಮ್ಮ ಮನಸ್ಸು ಗೆದ್ದಿದ್ದೀರಿ... ಒಳ್ಳೆ ಅವಕಾಶಗಳು ಸಿಗಲಿ ಎಂದು ಹಾರೈಸಿದ್ದಾರೆ. ಪದೇ ಪದೇ ಒಳ್ಳೆಯ ಕಲಾವಿದರನ್ನ ಬದಲಿಸುತ್ತಿರುವುದು ಬೇಸರದ ಸಂಗತಿ ಎಂದು ಹೇಳಿದ್ದಾರೆ.


Click it and Unblock the Notifications











