BBK 12 ; ಈ ಮನೆ ನನ್ನದಲ್ವಾ ಅದಕ್ಕೆ ಎಂದ ಸ್ಪಂದನಾ- ಕೊನೆಗೂ ಸತ್ಯ ಒಪ್ಪಿಕೊಂಡ್ರಲ್ಲ ಎಂದ ಪ್ರೇಕ್ಷಕರು

ಬಣ್ಣದ ಸೆಳೆತಕ್ಕೆ ಸಿಲುಕಿದವರಲ್ಲಿ ಹಲವಾರು ಜನ ''ಬಿಗ್ ಬಾಸ್‌''ನಲ್ಲಿ ಭಾಗವಹಿಸಬೇಕೆಂದು ಕನಸು ಕಾಣುತ್ತಾರೆ. ಆದರೆ .. ಈ ಸುವರ್ಣ ಅವಕಾಶ ಎಲ್ಲರಿಗೆ ಸಿಗುವುದಿಲ್ಲ. ಒಂದು ವೇಳೆ ಸಿಕ್ಕರೂ ಕೂಡ ಮನೆಯಲ್ಲಿ ಹೆಚ್ಚು ದಿನ ಉಳಿಯಲು ಸಾಧ್ಯವಾಗುವುದಿಲ್ಲ. ಯಾಕೆಂದರೆ.. ''ಬಿಗ್ ಬಾಸ್'' ಕೇವಲ ಮಾನಸಿಕ ಸ್ಫರ್ಧೆ ಅಲ್ಲ. ದೈಹಿಕ ಸ್ಫರ್ಧೆ ಕೂಡ ಹೌದು. ಮಾನಸಿಕವಾಗಿ ಬಲಿಷ್ಠವಾಗಿದ್ದು ದೈಹಿಕವಾಗಿ ಬಲಹೀನರಾಗಿದ್ದರೆ..

ಅಥವಾ ದೈಹಿಕವಾಗಿ ಬಲಶಾಲಿಯಾಗಿ ಮಾನಸಿಕವಾಗಿ ದೌರ್ಬಲ್ಯವನ್ನು ಹೊಂದಿದ್ದರೆ ಈ ಮನೆಯಲ್ಲಿ ಉಳಿಯುವುದು, ಫಿನಾಲೆ ಹಂತದವರೆಗೆ ತಲುಪುವುದು ಅಸಾಧ್ಯ. ಟಾಸ್ಕ್‌ಗಳಲ್ಲಿ ಬೆವರು ಸುರಿಸದೇ ಇದ್ದರೆ ಎರಡು ವಾರದ ಮೇಲೆ ಉಳಿಯುವುದು ಕೂಡ ಅಸಾಧ್ಯ. ಆದರೆ ಈ ಅಸಾಧ್ಯ ಕೆಲಸವನ್ನು ಸಾಧ್ಯವನ್ನಾಗಿಸಿದ ಹೆಗ್ಗಳಿಕೆ ಸ್ಪಂದನಾ ಸೋಮಣ್ಣ ಅವರದ್ದು. ಇದು ನಮ್ಮ ಮಾತಲ್ಲ. ಬದಲಿಗೆ ಕಳೆದ ಹಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಜನ ನಡೆಸಿರುವ ಚರ್ಚೆ.

The House is Mine Spandana Somanna s Claim At Bigg Boss Kannada 12 Sparks Brutal Troll Fest

ಹೌದು, ಬಹುತೇಕರಿಗೆ ಗೊತ್ತಿರುವಂತೆ, ಗಮನಿಸಿರುವಂತೆ, ಹಲವರ ಪ್ರಕಾರ ಸ್ಪಂದನಾ ಸೋಮಣ್ಣ ಬಿಗ್ ಬಾಸ್ ಮನೆಯಿಂದ ಯಾವಾಗಲೋ ಹೊರಗಡೆ ಬರಬೇಕಿತ್ತು. ಆದರೆ ಸ್ಪಂದನಾ 100 ದಿನಗಳಾಗುತ್ತಾ ಬಂದರೂ ಕೂಡ ಇನ್ನೂ ಇದ್ದಾರೆ. ಹೀಗಾಗಿ ಅಚ್ಚರಿಗೊಂಡಿರುವ ಹಲವರು ಸ್ಪಂದನಾ ಕಲರ್ಸ್ ಕನ್ನಡದ ದತ್ತು ಪುತ್ರಿ ಎಂದು ಹೇಳುತ್ತಿದ್ದಾರೆ. ಬಿಗ್ ಬಾಸ್‌ನ ಫಿನಾಲೆಗೆ ಹೋದರು ಕೂಡ ಅದರಲ್ಲಿ ಅಚ್ಚರಿ ಇಲ್ಲ, ಟ್ರೋಫಿ ಗೆದ್ದರೂ ಕೂಡ ಆಶ್ಚರ್ಯ ಇಲ್ಲ ಎಂದೆಲ್ಲಾ ಮಾತನಾಡುತ್ತಿದ್ದಾರೆ.

ಇನ್ನು ಮನೆಯಲ್ಲಿದ್ದಾಗ ಇದೇ ವಿಚಾರವನ್ನು ಜಾಹ್ನವಿ ಕೂಡ ಪ್ರಸ್ತಾಪಿಸಿದ್ದರು. ಕೆಲವರು ಎಲಿಮಿನೇಟ್ ಆಗಬೇಕಾದವರು ಮನೆಯೊಳಗೆ ಉಳಿದುಕೊಂಡಿದ್ದಾರೆ. ಅವನ್ನು ಕಲರ್ಸ್ ಕನ್ನಡ ಸೇವ್ ಮಾಡುತ್ತಿದೆ ಎಂದು ಜಾಹ್ನವಿ ಹೇಳಿದ್ದರು. ಅದರಲ್ಲಿ ಸ್ಪಂದನಾ ಸೋಮಣ್ಣ, ಸೂರಜ್ ಹಾಗೂ ರಾಶಿಕಾ ಮೂವರ ಹೆಸರನ್ನು ತೆಗೆದುಕೊಂಡಿದ್ದರು.

ಆ ನಂತರ ಸ್ಪಂದನಾ ಕೂಡ ವೀಕ್ ಅಂತ ಎಲ್ಲರಿಗೂ ಗೊತ್ತು. ಟಾಸ್ಕ್‌ನಲ್ಲಿ ಇಲ್ಲ, ಮಾತಾಡೋದಿಲ್ಲ. ಹೀಗಿದ್ದರೂ ಯಾಕೆ ಸೇವ್ ಆಗುತ್ತಿದ್ದಾಳೆ? ಸೀರಿಯಲ್ ಹೀರೋಯಿನ್, ಫ್ಯಾನ್ಸ್ ಇದ್ದಾರೆ ಅಂತ ಚಾನೆಲ್‌ನನವರ ಸೇವ್ ಮಾಡುತ್ತಿದ್ದಾರೆ. ಅವರ ಚಾನೆಲ್‌ನ ಸೀರಿಯಲ್‌ನಲ್ಲಿ ನಟಿಸಿದ್ದಾರೆ ಅನ್ನೋ ಕಾರಣಕ್ಕೆ ಎಂದು ಗಂಭೀರ ಆರೋಪ ಮಾಡಿದ್ದರು. ಕೊನೆಗೆ ಹೊರಬಂದಾಗ ಅವರು, ನಾನು ಹೇಳಿದ ಸಂಪೂರ್ಣ ಮಾತುಗಳನ್ನು ಪ್ರಸಾರ ಮಾಡಲಿಲ್ಲ, ಆದ್ದರಿಂದ ನನ್ನ ಮೇಲೆಯೇ ಆರೋಪ ಹೊರಿಸುವ ರೀತಿ ಆಯ್ತು ಎಂದು ತೇಪೆ ಹಚ್ಚುವ ಪ್ರಯತ್ನವನ್ನು ಜಾಹ್ನವಿ ಮಾಡಿದ್ದರು.

ಕೇವಲ ಜಾಹ್ನವಿ ಮಾತ್ರ ಅಲ್ಲ ಸೂರಜ್ ಮತ್ತು ಮಾಳು ಮನದಲ್ಲಿ ಕೂಡ ಇದೇ ಪ್ರಶ್ನೆ ಸದ್ಯ ಮನೆಯ ಹೊರಗಡೆ ಬಂದ ನಂತರ ಕಾಡುತ್ತಿದೆ. ಸ್ಪಂದನಾ ಮನೆಯಲ್ಲಿ ಇರಲು ಅರ್ಹರಲ್ಲ, ಅವರನ್ನು ಇನ್ನೂ ಯಾಕೆ ಹೊರ ಹಾಕಿಲ್ಲ ಎನ್ನುವುದೇ ನಮಗೆ ಗೊತ್ತಾಗುತ್ತಿಲ್ಲ ಎಂದು ಸೂರಜ್ ಮತ್ತು ಮಾಳು ತಮ್ಮ ಸಂದರ್ಶನಗಳಲ್ಲಿ ಕೂಡ ಹೇಳಿದ್ದಾರೆ.

the-house-is-mine-spandana-somanna-s-claim-at-bigg-boss-kannada-12-sparks-brutal-troll-fest

ಹೀಗಿರುವಾಗ ಜಿಯೋ ಹಾಟ್​ಸ್ಟಾರ್​ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ''ಬಿಗ್ ಬಾಸ್'' ಮನೆಯಲ್ಲಿ ಯಾಕೆ ಸೆಟಪ್ ಹಾಕಿಸಿಲ್ಲ ಎಂದು ರಘು ಪ್ರಶ್ನೆಯನ್ನು ಕೇಳುತ್ತಾರೆ. ಆಗ ಸ್ಪಂದನಾ ತಮಾಷೆಯಾಗಿ ನಮ್ಮ ಮನೆಯಲ್ವಾ..? ಅದಕ್ಕೆ ಕೇಳ್ತಿದ್ದೀರಲ್ವಾ ನನಗೆ ಗೊತ್ತಾಯ್ತು ಎಂದು ತಮಾಷೆಯಾಗಿ ಹೇಳುತ್ತಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೀವು ಹೇಳಿದ್ದು ನೂರಕ್ಕೆ ನೂರು ನಿಜಾ, ''ಬಿಗ್ ಬಾಸ್'' ನಿಮ್ಮ ಮನೆನೇ ಎಂದು ಹೇಳುತ್ತಿದ್ದಾರೆ. ಕೊನೆಗೂ ಸತ್ಯ ಒಪ್ಪಿಕೊಂಡ್ರಲ್ಲ ಎನ್ನುತ್ತಿದ್ದಾರೆ. ಈ ವಿಡಿಯೋವನ್ನು ಇಟ್ಟುಕೊಂಡು ಇನ್ನು ಕೆಲವರು ಸ್ಪಂದನಾ ಅವರನ್ನು ಟ್ರೋಲ್ ಕೂಡ ಮಾಡುತ್ತಿದ್ದಾರೆ.

More from Filmibeat

English summary
Is Spandana Somanna overstaying her welcome? After her "Ownership" remark, BBK12 fans are hitting back with a "Troll Fest." Explore the most viral reactions and find out why viewers are calling for justice for eliminated contestants like Malu and Suraj.
Read more about: biggboss bigg boss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X