ರಾಮಾಚಾರಿ ಚೆಲುವೆ ಮೌನ ಗುಡ್ಡೆಮನೆ ಇನ್‌ಸ್ಟಾಗ್ರಾಮ್ ಪೋಸ್ಟ್ ವೈರಲ್..!
ನಟಿ ಮೌನ ಗುಡ್ಡೆ ಮನೆ ಎನ್ನುವುದಕ್ಕಿಂತಲೂ "ರಾಮಾಚಾರಿ"ಯ ಪ್ರೀತಿಯ ಪತ್ನಿ ಚಾರು ಎಂದರೆ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಚೆನ್ನಾಗಿ ಪರಿಚಯವಾಗುತ್ತೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ರಾಮಾಚಾರಿ" ಧಾರಾವಾಹಿಯಲ್ಲಿ ನಾಯಕ ನಟಿಯ ಹೆಸರು ಚಾರು. ಚಾರುಲತಾ ಎಂಬ ಪೂರ್ಣ ಹೆಸರಾದರೂ ಆಕೆ ಚಾರು ಎಂದೇ ಪರಿಚಿತ. ಈ ಚಾರು ಪಾತ್ರವನ್ನು ನಿಭಾಯಿಸುತ್ತಿರುವವರೇ ನಟಿ ಮೌನ ಗುಡ್ಡೆಮನೆ.
"ರಾಮಾಚಾರಿ" ಧಾರಾವಾಹಿ ಎಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಅಷ್ಟೇ ಅಲ್ಲದೆ ಕಿರುತೆರೆಯಲ್ಲಿ ಇರುವ ಬೇರೆ ಹಲವು ಧಾರಾವಾಹಿಗಳಿಗೆ ಒಳ್ಳೆಯ ಪೈಪೋಟಿಯನ್ನು ನೀಡುತ್ತಿದೆ. ಬಹಳ ವಿಭಿನ್ನ ಕಥಾ ಅಂದರೆ ಹೊಂದಿರುವ ಈ ಧಾರಾವಾಹಿ ಜನರ ಫೇವರೆಟ್ ಧಾರಾವಾಹಿಯಾಗಿದೆ.

ಇದರಲ್ಲಿ ರಾಮಾಚಾರಿಯ ಹೆಂಡತಿ ಚಾರು ಮೊದಲಿಗೆ ಬಹಳ ಜಂಭದ ಹುಡುಗಿಯಂತೆ ಕಾಣಿಸಿದ್ದಳು. ಕ್ರಮೇಣ ತನ್ನ ಅಹಂಕಾರವನ್ನು ಬಿಟ್ಟು ರಾಮಾಚಾರಿಯ ಪ್ರೀತಿಗೆ ಶರಣಾದಳು. ಅದಾದ ಮೇಲೆ ರಾಮಾಚಾರಿಗೆ ಒಳ್ಳೆಯ ಹೆಂಡತಿಯಾಗಿ, ಮನೆಗೆ ಒಳ್ಳೆಯ ಸೊಸೆಯಾಗಿ ಎಲ್ಲರೊಂದಿಗೂ ಸಹಬಾಳ್ವೆಯಿಂದ ನಡೆದುಕೊಳ್ಳುತ್ತಿದ್ದಾಳೆ.ಈ ಕಾರಣಕ್ಕೆ ಕಿರುತೆರೆ ಪ್ರೇಕ್ಷಕರಿಗೂ ಚಾರು ಬಹಳ ಇಷ್ಟವಾದ ಪಾತ್ರ.
ಇದೀಗ ಈ ಚಾರು ಪಾತ್ರಧಾರಿ ನಟಿ ಮೌನ ಗುಡ್ಡೆ ಮನೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿರುವ ಫೋಟೋಗಳಂತೂ ಬಹಳ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆ್ಯಕ್ಟೀವ್ ಇರುವ ನಟಿ ಮೌನ ಗುಡ್ಡೆಮನೆ, ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಆಗಾಗ ಸಾಂಪ್ರದಾಯಿಕ ಉಡುಗೆ ತೊಡುಗೆಯಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.
ಕೆಲವೊಮ್ಮೆ ಬೋಲ್ಡ್ ಲುಕ್ಕಿನಲ್ಲಿಯೂ ಕಾಣಿಸಿಕೊಂಡು ನೆಟ್ಟಿಗರು ಹುಬ್ಬೇರಿಸುವಂತೆ ಮಾಡುತ್ತಿರುತ್ತಾರೆ. ಇಷ್ಟು ದಿನ ತಮ್ಮ ಫೋಟೋಗಳನ್ನೇ ಪೋಸ್ಟ್ ಮಾಡಿಕೊಳ್ಳುತ್ತಿದ್ದ ನಟಿ ಮೌನ ಗುಡ್ಡೆಮನೆ ಇದೀಗ ತಮ್ಮ ತಂಗಿಯೊಂದಿಗೆ ಒಂದಷ್ಟು ಫೋಟೋಸ್ ಶೇರ್ ಮಾಡಿದ್ದಾರೆ.
ಹೌದು, ನಟಿ ಮೌನ ಗುಡ್ಡೆಮನೆಗೆ ತಂಗಿ ಇದ್ದು ಅವರ ಹೆಸರು ಮೌಲ್ಯ ಗುಡ್ಡೆಮನೆ. ಇದೇ ಮೊದಲ ಬಾರಿಗೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ತಂಗಿಯೊಂದಿಗೆ ಪೋಸ್ ಕೊಟ್ಟು ಫೋಟೋಸ್ ಪೋಸ್ಟ್ ಮಾಡಿದ್ದಾರೆ ನಟಿ ಮೌನ ಗುಡ್ಡೆಮನೆ. ನೋಡಲಿಕ್ಕಂತೂ ನಟಿ ಮೌನಗುಡ್ಡೆಮನೆ ಹಾಗೂ ಅವರ ತಂಗಿ ಮೌಲ್ಯ ಗುಡ್ಡೆಮನೆ ಹೆಚ್ಚು ಕಮ್ಮಿ ಒಂದೇ ರೀತಿ ಕಾಣುತ್ತಾರೆ.
ಯಾವುದೋ ನದಿ ಎದುರುಗಡೆ ನಿಂತು ಒಂದಷ್ಟು ಫೋಟೋಸ್ ಕ್ಲಿಕ್ಕಿಸಿರುವ ಇವರು, ಅಕ್ಕ ತಂಗಿ ಇಬ್ಬರೂ ಸಾಂಪ್ರದಾಯಿಕ ಉಡುಗೆಯಾದ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಮೌನ ಗುಡ್ಡೆಮನೆ ಕಂದು ಬಣ್ಣದ ಸೀರೆ ಹುಟ್ಟು ಅದಕ್ಕೆ ಸ್ಟೈಲಿಶ್ ಆಗಿ ಉದ್ದದ ತೋಳಿನ ಬ್ಲೌಸ್ ತೊಟ್ಟಿದ್ದಾರೆ. ಅವರ ತಂಗಿ ಮೌಲ್ಯ ಗುಡ್ಡೆ ಮನೆ ಕೇಸರಿ ಬಣ್ಣದ ಬಾರ್ಡರ್ ಇರುವ ತಿಳಿ ನೇರಳೆ ಬಣ್ಣದ ಸೀರೆಗೆ, ತಿಳಿ ನೀಲಿ ಬಣ್ಣದ ಬ್ಲೌಸ್ ತೊಟ್ಟಿದ್ದಾರೆ. ಅಕ್ಕ ತಂಗಿ ಇಬ್ಬರು ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದರು ಸಹ ಬಹಳ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಫ್ರೀ ಹೇರ್ ಬಿಟ್ಟು ಗಾಗಲ್ಸ್ ಹಾಕಿಕೊಂಡು ಒಂದಷ್ಟು ಪೋಸ್ ಕೊಟ್ಟಿದ್ದಾರೆ. ಇವರಿಬ್ಬರ ಫೋಟೋಸ್ ನಟಿ ಮೌನ ಗುಡ್ಡೆ ಮನೆ ಪೋಸ್ಟ್ ಮಾಡುತ್ತಿದ್ದಂತೆಯೇ ಬಹಳ ವೈರಲ್ ಆಗಿದೆ.
ನಟಿ ಮೌನ ಗುಡ್ಡೆಮನೆ ಅವರ ಅಭಿಮಾನಿಗಳು ಪ್ರೇಕ್ಷಕರು ಇಷ್ಟು ದಿನ ಮೌನ ಅವರನ್ನಷ್ಟೇ ಹೊಗಳುತ್ತಿದ್ದರು ಇದೀಗ ಅವರ ತಂಗಿಯನ್ನು ಕೂಡ ಮೆಚ್ಚಿದ್ದಾರೆ.ಈ ಪೋಸ್ಟ್ ನ ಕಮೆಂಟ್ ಬಾಕ್ಸ್ ನಲ್ಲಿ ಶ್ಲಾಘನೆ ಮೆಚ್ಚುಗೆ ಪ್ರೀತಿಯ ಸುರಿಮಳೆಯ ಸುರಿದಿದ್ದು, "ಮುದ್ದು ಗೊಂಬೆ ಚಾರು ನೋಡೋಕೆ ಚೆಂದ." "ದಂತದ ಗೊಂಬೆ ನಡೆಯಲ್ಲೂ ಸಿರಿವಂತಿಕೆಯಲ್ಲೂ ಸಂಸ್ಕೃತಿಗಳ ಸರಮಾಲೆ ನೀನು. ನೀನು ನನಗೆ ಮುದ್ದಿನ ಸಹೋದರಿ ಇದ್ದಂತೆ. ನನ್ನ ಪಾಲಿಗಂತೂ 21ನೇ ಶತಮಾನದಲ್ಲಿ ನೀನೊಬ್ಬಳೇ ಕಣಮ್ಮ ನಾರಿಮಣಿ" ಎಂದು ಅಭಿಮಾನಿಯೊಬ್ಬರು ಕಾಮೆಂಟಿಸಿದ್ದಾರೆ.
ಈ ರೀತಿ ಇನ್ನೂ ಹತ್ತು ಹಲವು ಕಾಮೆಂಟ್ ಗಳು ನಟಿ ಮೌನ ಗುಡ್ಡೆಮನೆಗೆ ಸಿಕ್ಕಿದೆ. ಕಿರುತೆರೆ ಪ್ರೇಕ್ಷಕರು ಅಭಿಮಾನಿಗಳು ನೆಟ್ಟಿಗರು ಕಿರುತೆರೆ ನಟ ನಟಿಯರನ್ನು ಎಷ್ಟರಮಟ್ಟಿಗೆ ಹಚ್ಚಿಕೊಳ್ಳುತ್ತಾರೆ ಮೆಚ್ಚಿಕೊಳ್ಳುತ್ತಾರೆ ಎಂಬುದಕ್ಕೆ ಈ ಕಾಮೆಂಟ್ ಸೆಕ್ಷನ್ನೇ ಸಾಕ್ಷಿ!


Click it and Unblock the Notifications











