For Quick Alerts
  ALLOW NOTIFICATIONS  
  For Daily Alerts

  The Kapil Sharma Show: ಭಾರತದ ಜನಪ್ರಿಯ ಟಿವಿ ಕಾರ್ಯಕ್ರಮ 'ಕಪಿಲ್ ಶರ್ಮಾ ಶೋ' ಬಂದ್! ಕಾರಣ?

  |

  ಭಾರತ ಟಿವಿ ಜಗತ್ತಿನಲ್ಲಿ ಇತ್ತೀಚಿನ ಕೆಲ ವರ್ಷಗಳಲ್ಲಿ ಅತಿ ಹೆಚ್ಚು ಜನಪ್ರಿಯವಾಗಿದ್ದ ಶೋ ಎಂದರೆ 'ದಿ ಕಪಿಲ್ ಶರ್ಮಾ ಶೋ'. ಯಶಸ್ಸಿನ ಉತ್ತಂಗದಲ್ಲಿದ್ದ ಈ ಶೋ ಇದೀಗ ಹಠಾತ್ತನೆ ಬಂದ್ ಆಗುತ್ತಿದೆ!

  ಹೌದು, ಸೋನಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ದಿ ಕಪಿಲ್ ಶರ್ಮಾ' ಶೋ ಹಠಾತ್ತನೆ ಬಂದ್ ಆಗುತ್ತಿದ್ದು, 'ಕಪಿಲ್ ಶರ್ಮಾ ಶೋ' ಜಾಗಕ್ಕೆ 'ಲಾಫ್ಟರ್ ಚಾಲೆಂಜ್' ಶೋ ಲಗ್ಗೆ ಇಡುತ್ತಿದೆ.

  ಕಪಿಲ್‌ ಮೇಲೆ ಅಕ್ಷಯ್ ಸಿಟ್ಟು: ವಿವಾದ ಬಗೆಹರಿಸಿಕೊಂಡ ಕಪಿಲ್ಕಪಿಲ್‌ ಮೇಲೆ ಅಕ್ಷಯ್ ಸಿಟ್ಟು: ವಿವಾದ ಬಗೆಹರಿಸಿಕೊಂಡ ಕಪಿಲ್

  'ಕಪಿಲ್ ಶರ್ಮಾ ಶೋ' ಪ್ರಸಾರವಾಗುತ್ತಿದ್ದ ಟೈಮ್ ಸ್ಲಾಟ್‌ನಲ್ಲಿ ಇನ್ನು ಮುಂದೆ 'ಲಾಫ್ಟರ್ ಚಾಲೆಂಜ್' ಹೆಸರಿನ ಹಾಸ್ಯ ಕಾರ್ಯಕ್ರಮ ಪ್ರಸಾರವಾಗುತ್ತದೆಯೆಂದು ಚಾನೆಲ್‌ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಅಷ್ಟಕ್ಕೂ 'ದಿ ಕಪಿಲ್ ಶರ್ಮಾ' ಶೋ ಅನ್ನು ಸ್ಥಗಿತಗೊಳಿಸಿದ್ದೇಕೆ?

  'ದಿ ಕಪಿಲ್ ಶರ್ಮಾ ಶೋ' ಒಂದು ಕಾಲದಲ್ಲಿ ಯಶಸ್ಸಿನ ಉತ್ತುಂಗದಲ್ಲಿತ್ತು. ಮೊದಲು 'ಕಾಮಿಡಿ ನೈಟ್ಸ್ ವಿಥ್ ಕಪಿಲ್' ಹೆಸರಿನಲ್ಲಿ ಒಂದು ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದ್ದ ಶೋ ಬಳಿಕ ಚಾನೆಲ್‌ನೊಂದಿಗೆ ತಿಕ್ಕಾಟದ ಕಾರಣದಿಂದ ಸೋನಿಗೆ ವರ್ಗಾವಣೆಯಾಯ್ತು. ಸೋನಿಗೆ ಬಂದ ನಂತರವು ಕಾರ್ಯಕ್ರಮ ಟಿಆರ್‌ಪಿ ಪಟ್ಟಿಯಲ್ಲಿ ಮೊದಲಲ್ಲೇ ಇತ್ತು.

   ಕನ್ನಡಿಗನಾಗಿ ತೆರೆಯ ಮೇಲೆ ಮಿಂಚಲಿದ್ದಾರೆ ನಟ ಅಕ್ಷಯ್ ಕುಮಾರ್! ಕನ್ನಡಿಗನಾಗಿ ತೆರೆಯ ಮೇಲೆ ಮಿಂಚಲಿದ್ದಾರೆ ನಟ ಅಕ್ಷಯ್ ಕುಮಾರ್!

  ಆದರೆ ಇತ್ತೀಚಿನ ದಿನಗಳಲ್ಲಿ ಕಪಿಲ್ ಶರ್ಮಾ ಶೋನಲ್ಲಿ ಮೊದಲಿಗೆ 'ಗಮ್ಮತ್ತು' ಇಲ್ಲವೆಂದು ಪ್ರೇಕ್ಷಕರು, ನೆಟ್ಟಿಗರು ಕಮೆಂಟ್ ಮಾಡಲಾರಂಭಿಸಿದ್ದರು. ಕಪಿಲ್ ಶರ್ಮಾ ಸಹ ಆರೋಗ್ಯ ಸಮಸ್ಯೆಗೆ ತುತ್ತಾದರು, ಕೆಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡರು. ಇದೆಲ್ಲದರ ಕಾರಣದಿಂದಾಗಿ ಶೋನ ಜನಪ್ರಿಯತೆ ನಿಧಾನಕ್ಕೆ ಇಳಿಮುಖವಾಗುತ್ತಾ ಬಂತು.

  ಇದರ ಜೊತೆಗೆ ಕಪಿಲ್ ಶರ್ಮಾ ಜೊತೆ ಹಲವು ವರ್ಷಗಳಿಂದ ಶೋ ಮಾಡುತ್ತಾ ಬಂದಿದ್ದ ಕೆಲವು ನಟರ ಮೇಲೆ ಕಪಿಲ್ ಶರ್ಮಾ ಜಗಳ ಮಾಡಿದ್ದರು. ಇದರಿಂದಾಗಿ ಸುನಿಲ್ ಗ್ರೋವರ್ ಸೇರಿದಂತೆ ಇನ್ನೂ ಕೆಲವರು ಕಪಿಲ್‌ನಿಂದ ದೂರಾದರು. ಇದು ಸಹ ಶೋನ ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಯ್ತು. 'ಕಪಿಲ್ ಶರ್ಮಾ ಶೋ'ನ ಕೇಂದ್ರ ಹಾಸ್ಯಗಾರರಾಗಿದ್ದ ಸುನಿಲ್ ಗ್ರೋವರ್, ಶೋ ಅನ್ನು ಬಿಟ್ಟು ಹೋಗಿದ್ದು ಕಪಿಲ್‌ಗೆ ಆದ ಬಹಳ ದೊಡ್ಡ ನಷ್ಟ.

  ಕೆಲವು ತಿಂಗಳ ಹಿಂದಷ್ಟೆ ಕಪಿಲ್ ಶರ್ಮಾ, ನೆಟ್‌ಪ್ಲಿಕ್ಸ್ ಒಟಿಟಿ ಸಹ ಪ್ರವೇಶಿಸಿದ್ದು, ನೆಟ್‌ಫ್ಲಿಕ್ಸ್‌ ಜೊತೆಗೆ 'ಐ ಆಮ್ ನಾಟ್ ಡನ್ ಯೆಟ್' ಹೆಸರಿನ ದೊಡ್ಡ ಶೋ ಅನ್ನೇ ನಡೆಸಿಕೊಡುತ್ತಿದ್ದಾರೆ. ಸ್ಟಾಂಡಪ್ ಕಾಮಿಡಿಯಂತೆಯೇ ಇರುವ ಈ ಶೋ ಒಳ್ಳೆಯ ಜನ್ರಪಿಯತೆ ಗಳಿಸಿದೆ. ಅಲ್ಲದೆ, ನೆಟ್‌ಫ್ಲಿಕ್ಸ್‌ನಿಂದ ದೊಡ್ಡ ಮೊತ್ತದ ಸಂಭಾವನೆಯನ್ನೂ ಕಪಿಲ್ ಪಡೆಯುತ್ತಿದ್ದಾರೆ. ಹಾಗಾಗಿ 'ದಿ ಕಪಿಲ್ ಶರ್ಮಾ' ಶೋ ಮೇಲೆ ಅವರು ಆಸಕ್ತಿ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

  Recommended Video

  Rocky bhai Yash Superb Answers to Mumbai Media | Watch with Kannada Subtitles | KGF 2 | Sanjay dutt

  ಇದರ ಜೊತೆಗೆ ಕಪಿಲ್ ಶರ್ಮಾ, ಸಿನಿಮಾಗಳಲ್ಲಿ ನಟನೆ, ವಿದೇಶಗಳಲ್ಲಿ ಶೋ ನೀಡುವುದು, ಸಿನಿಮಾ-ಧಾರಾವಾಹಿ ನಿರ್ಮಾಣದಲ್ಲಿಯೂ ತೊಡಗಿಕೊಳ್ಳುತ್ತಿದ್ದಾರೆ ಇದೂ ಸಹ 'ಕಪಿಲ್ ಶರ್ಮಾ ಶೋ' ಜನಪ್ರಿಯತೆ ಕಡಿಮೆ ಆಗಲು ಕಾರಣವಾಗಿದೆ.

  'ಕಪಿಲ್ ಶರ್ಮಾ ಶೋ' ಬದಲಿಗೆ ಪ್ರಸಾರವಾಗಲಿರುವ 'ಲಾಫ್ಟರ್ ಚಾಲೆಂಜ್' ಕಾರ್ಯಕ್ರಮದಲ್ಲಿ ಅಕ್ಷಯ್ ಕುಮಾರ್ ಮುಖ್ಯ ಜಡ್ಜ್ ಆಗಿರಲಿದ್ದಾರೆ. ಅವರ ಜೊತೆಗೆ ನಟ ಶ್ರೇಯಸ್ ತಲಪಡೆ ಇರಲಿದ್ದಾರೆ. ಜೊತೆಗೆ ಸಾಜಿದ್ ಖಾನ್ ಸಹ ಇರಲಿದ್ದಾರೆ.

  English summary
  The Kapil Sharma show replacing by The Great Indian laughter Challenge. Kapil Sharma Show was one of the leading Tv talk show of India.
  Thursday, April 7, 2022, 17:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X