For Quick Alerts
  ALLOW NOTIFICATIONS  
  For Daily Alerts

  Kapil Sharma: ತಾತ್ಕಾಲಿಕವಾಗಿ ಬಂದ್ ಆಗಲಿದೆ ಜನಪ್ರಿಯ ಕಾಮಿಡಿ ಶೋ

  |

  ಹಿಂದಿ ಟಿವಿ ಮಾರುಕಟ್ಟೆಯಲ್ಲಿ 'ಕಪಿಲ್ ಶರ್ಮಾ ಶೋ' ತನ್ನದೇ ಪ್ರತ್ಯೇಕ ಸ್ಥಾನವಿದೆ. ಹಲವು ವರ್ಷಗಳಿಂದಲೂ ಕಪಿಲ್ ಶರ್ಮಾರ ಈ ಕಾಮಿಡಿ ಟಾಕ್ ಶೋ ಟಾಪ್ ಸ್ಥಾನದಲ್ಲಿದೆ. ಆದರೆ ಈಗ ಈ ಶೋ ತಾತ್ಕಾಲಿಕವಾಗಿ ಸ್ಥಗಿತವಾಗಲಿದೆ.

  'ಕಪಿಲ್ ಶರ್ಮಾ' ಶೋ ಹಿಂದಿ ಕಿರುತೆರೆಯ ಬಹು ಜನಪ್ರಿಯ ಶೋ ಆಗಿದ್ದು ಈ ಶೋ ಸ್ಥಗಿತಗೊಳಿಸುತ್ತಿರುವುದು ಹಲವರ ಹುಬ್ಬೇರುವಂತೆ ಮಾಡಿದೆ. ಶೋ ಅಭಿಮಾನಿಗಳಿಗೆ ಸಮಾಧಾನದ ವಿಷಯವೆಂದರೆ ಶೋ ಸ್ಥಗಿತಗೊಳ್ಳುತ್ತಿರುವುದು ಕೆಲ ದಿನಗಳ ಅವಧಿಗೆ ಮಾತ್ರ.

  ಕಪಿಲ್‌ ಮೇಲೆ ಅಕ್ಷಯ್ ಸಿಟ್ಟು: ವಿವಾದ ಬಗೆಹರಿಸಿಕೊಂಡ ಕಪಿಲ್ಕಪಿಲ್‌ ಮೇಲೆ ಅಕ್ಷಯ್ ಸಿಟ್ಟು: ವಿವಾದ ಬಗೆಹರಿಸಿಕೊಂಡ ಕಪಿಲ್

  ಶೋನ ನಿರೂಪಕ ಕಪಿಲ್ ಶರ್ಮಾ ವಿದೇಶ ಪ್ರವಾಸಕ್ಕೆ ಹೋಗುತ್ತಿರುವ ಕಾರಣ ಶೋ ಅನ್ನು ಸ್ಥಗಿತಗೊಳಿಸಲಾಗುತ್ತಿದೆ. ಕಪಿಲ್ ಶರ್ಮಾ ವಿದೇಶ ಪ್ರವಾಸ ಹೋಗುತ್ತಿರುವುದು ಮೋಜಿಗಾಗಿ ಅಲ್ಲ ಬದಲಿಗೆ ಅಲ್ಲಿ ಲೈವ್ ಪ್ರದರ್ಶನ ನೀಡಲು.

  ಈ ಮೊದಲು ಸಹ ಹಲವು ಬಾರಿ ಕಪಿಲ್ ಶರ್ಮಾ, ತನ್ನ ಶೋನ ಸಹ ಕಲಾವಿದರನ್ನು ಕರೆದುಕೊಂಡು ವಿದೇಶಗಳಲ್ಲಿ ಲೈವ್ ಶೋ ನೀಡಿದ್ದರು. ಈಗಲೂ ಕಪಿಲ್ ಶರ್ಮಾಗೆ ಅದೇ ಬೇಡಿಕೆ ಇದ್ದು, ಕೆನಡಾ, ಅಮೆರಿಕದ ಹಲವು ಕಡೆಗಳಲ್ಲಿ ಶೋಗಳನ್ನು ಮುಂದಿನ ಕೆಲವು ದಿನಗಳಲ್ಲಿ ನೀಡಲಿದ್ದಾರೆ.

  ಕಪಿಲ್ ಶರ್ಮಾ ಶೋಗೆ ಹೋಗುವುದಿಲ್ಲವೆಂದ ಅಕ್ಷಯ್ ಕುಮಾರ್: ಕಾರಣ?ಕಪಿಲ್ ಶರ್ಮಾ ಶೋಗೆ ಹೋಗುವುದಿಲ್ಲವೆಂದ ಅಕ್ಷಯ್ ಕುಮಾರ್: ಕಾರಣ?

  ಜೊತೆಗೆ ಕಪಿಲ್ ಶರ್ಮಾ ಹೊಸ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದು, ಅದರ ಶೂಟಿಂಗ್ ಸಹ ಇದೇ ಸಮಯದಲ್ಲಿ ಆರಂಭಗೊಳ್ಳಲಿದೆ ಹಾಗಾಗಿ ಕಪಿಲ್ ಶರ್ಮಾ ತಮ್ಮ 'ದಿ ಕಪಿಲ್ ಶರ್ಮಾ' ಶೋ ಅನ್ನು ಕೆಲ ಕಾಲ ಸ್ಥಗಿತಗೊಳಿಸಲಿದ್ದಾರೆ.

  ಈ ಹಿಂದೆ ಕಪಿಲ್ ಶರ್ಮಾ, ತಮ್ಮ ಶೋ ಅನ್ನು ಸ್ಥಗಿತಗೊಳಿಸಿದ್ದಾಗ ಅವರ ಬದಲಿಗೆ ನಟ ಅರ್ಶದ್ ವಾರ್ಸಿ ಹಾಗೂ ಇತರ ಕೆಲವರು ಶೋ ಅನ್ನು ಅತಿಥಿ ನಿರೂಪಕರಾಗಿ ಮುಂದುವರೆಸಿದ್ದರು. ಆದರೆ ಈ ಬಾರಿ ಅವರು ಬೇರೆ ನಟರಿಗೆ ಶೋ ಜವಾಬ್ದಾರಿ ನೀಡುವುದು ಬೇಡವೆಂದು ನಿರ್ಧರಿಸಿದ್ದಾರೆ.

  ಈ ಮೊದಲು ಸಹ 'ದಿ ಕಪಿಲ್ ಶರ್ಮಾ' ಶೋ ಅನ್ನು ಕಪಿಲ್ ಶರ್ಮಾ ನಿಲ್ಲಿಸಿದ್ದರು. ವೈಯಕ್ತಿಕ ಕಾರಣಗಳಿಂದಾಗಿ ಖಿನ್ನಿತೆಗೆ ಒಳಗಾಗಿದ್ದ ಅವರು ಶೋ ನಡೆಸಲಾಗಿರಲಿಲ್ಲ. ತೀವ್ರ ಮಾನಸಿಕ ಅನಾರೋಗ್ಯಕ್ಕೆ ಒಳಗಾಗಿದ್ದ ಕಪಿಲ್ ಶರ್ಮಾ, ಚಿಕಿತ್ಸೆಯ ಬಳಿಕ ಮತ್ತೆ ಶೋಗೆ ಮರಳಿದರು.

  ಕಪಿಲ್ ಶರ್ಮಾ, ಟಿವಿ ಕಿರುತೆರೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಿರೂಪಕರಲ್ಲಿ ಮೊದಲಿಗರು. ಬಾಲಿವುಡ್‌ನಲ್ಲಿ ಯಾವುದೇ ಸಿನಿಮಾ ಬಂದರು, ಪ್ರಚಾರಕ್ಕಾಗಿ ಕಪಿಲ್ ಶರ್ಮಾ ಶೋಗೆ ಬರಲೇ ಬೇಕು. ಅಮಿತಾಬ್ ಬಚ್ಚನ್, ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಎ.ಆರ್.ರೆಹಮಾನ್ ಇನ್ನೂ ಹಲವರು ಕಪಿಲ್ ಶರ್ಮಾ ಶೋಗೆ ಅತಿಥಿಗಳಾಗಿ ಆಗಮಿಸಿದ್ದಾರೆ. ಜಾಕಿ ಚಾನ್, ಕ್ರಿಸ್ ಗೇಲ್ ಅಂಥಹಾ ವಿದೇಶಿಗರೂ ಸಹ ಈ ಶೋಗೆ ಆಗಮಿಸಿದ್ದಾರೆ.

  English summary
  The Kapil Sharma show will be stopped temporarily. Show host Kapil Sharma going foreign tour for his live show and movie shooting.
  Saturday, March 26, 2022, 9:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X