Lakshmi Baramma ;ಮುಕ್ತಾಯಗೊಂಡ ಲಕ್ಷ್ಮಿ ಬಾರಮ್ಮ ಧಾರಾವಾಹಿ.. ಕಾವೇರಿ ಪಾತ್ರಧಾರಿ ಹೇಳಿದ್ದೇನು ಗೊತ್ತಾ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಲಕ್ಷ್ಮೀ ಬಾರಮ್ಮ" ಧಾರಾವಾಹಿ ಅಂತ್ಯವಾಗಿದೆ. ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯ ಸೋಶಿಯಲ್ ಮೀಡಿಯಾ ಪೇಜ್ ಅಫಿಶಿಯಲ್ ಆಗಿ ಒಂದು ವಿಡಿಯೋ ಬಿಟ್ಟಿದ್ದಾರೆ. ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ "ಲಕ್ಷ್ಮಿ ಬಾರಮ್ಮ" ಧಾರಾವಾಹಿ ಅಂತ್ಯವಾಗುತ್ತಿರುವುದರ ಬಗ್ಗೆ ಇದೀಗ ಒಂದು ರೀಲ್ ಹೊರ ಬಂದಿದೆ. ಈ ರೀಲ್ ನಲ್ಲಿ ಮನೆಮಗಳು ಲಕ್ಷ್ಮಿಗೆ ವಿದಾಯ ಹೇಳಿದೆ ಕಲರ್ಸ್ ಕನ್ನಡ ವಾಹಿನಿ.
ಅಂದಹಾಗೆ "ಲಕ್ಷ್ಮಿ ಬಾರಮ್ಮ" ಧಾರಾವಾಹಿ ಒಂದು ದಶಕಕ್ಕೂ ಹಿಂದೆಯೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು. ಅದೇ ಧಾರಾವಾಹಿಯ ನಿರ್ಮಾಪಕರು "ಲಕ್ಷ್ಮಿ ಬಾರಮ್ಮ" ಎನ್ನುವ ಎರಡನೇ ಧಾರವಾಹಿಯನ್ನು ಇದೀಗ ಎರಡು ವರ್ಷಗಳ ಹಿಂದೆ ಆರಂಭಿಸಿದರು. ಈ "ಲಕ್ಷ್ಮೀ ಬಾರಮ್ಮ" ಧಾರವಾಹಿಯನ್ನು ಲಕ್ಷ್ಮೀ ಬಾರಮ್ಮ 2 ಎಂದೇ ಪ್ರೇಕ್ಷಕರು ಪರಿಗಣಿಸಿದರು.

ಈ ಧಾರಾವಾಹಿ ಇದೀಗ ಎರಡು ವರ್ಷಗಳ ಕಾಲ ಪ್ರೇಕ್ಷಕರನ್ನು ರಂಜಿಸಿದ್ದು, 600ಕ್ಕೂ ಹೆಚ್ಚು ಎಪಿಸೋಡ್ ಗಳು ಈ ಧಾರಾವಾಹಿಯಿಂದ ಹೊರ ಬಂದಿವೆ. 300ಕ್ಕೂ ಹೆಚ್ಚಿನ ಗಂಟೆಗಳ ಕಾಲ ಈ ಧಾರಾವಾಹಿ ಪ್ರೇಕ್ಷಕರನ್ನು ರಂಜಿಸಿದೆ. ಕಲರ್ಸ್ ಕನ್ನಡ ವಾಹಿನಿಯವರು, ಬಹಳ ಅಕ್ಕರೆಯಿಂದ ಮನೆಮಗಳು ಲಕ್ಷ್ಮಿಗೆ ವಿದಾಯವನ್ನು ಈ ರೀಲ್ ಮೂಲಕ ತಿಳಿಸಿದ್ದಾರೆ.
ಅಂದಹಾಗೆ "ಲಕ್ಷ್ಮಿ ಬಾರಮ್ಮ" ಧಾರಾವಾಹಿಯಲ್ಲಿ, ನಾಯಕ ನಟ ವೈಷ್ಣವ್ ಪಾತ್ರದಲ್ಲಿ ಶಮಂತ್ ಬ್ರೋ ಗೌಡ ಅವರು ಕಾಣಿಸಿಕೊಂಡಿದ್ದರು, ಬಿಗ್ ಬಾಸ್ ನಂತರ ಇದು ಇವರ ಮೊದಲ ಕಿರುತೆರೆ ಧಾರಾವಾಹಿಯಾಗಿತ್ತು. ಹಾಗೆಯೇ ನಟಿ ಭೂಮಿಕಾ ರಮೇಶ್ ಲಕ್ಷ್ಮಿ ಎಂಬ ನಾಯಕ ನಟಿ ಪಾತ್ರದ ಮೂಲಕ ಜನಮನ ಗೆದ್ದರು.
ಖಳನಾಯಕಿಯಾಗಿ ಸುಷ್ಮಾ ನಾಣಯ್ಯ ಅವರು ಕಾವೇರಿ ಪಾತ್ರದ ಮೂಲಕ ಜನಮನ ಗೆದ್ದಿದ್ದರು. ಹಾಗೆಯೇ ನಟಿ ತನ್ವಿ ರಾವ್ ಕೂಡ ಬಹಳ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇವರು ನಟಿಸಿದ್ದ ಕೀರ್ತಿ ಪಾತ್ರ ಜನ ಮನ್ನಣೆ ಗಳಿಸಿತ್ತು. ಬಹುದೊಡ್ಡ ತಾರಾಗಣವನ್ನೇ ಹೊಂದಿದ್ದ ಈ ಧಾರಾವಾಹಿ ಬಹಳ ವಿಭಿನ್ನ ಕಥಾ ಹಂದರದೊಂದಿಗೆ ಬಹಳಷ್ಟು ಟ್ವಿಸ್ಟ್ ಗಳ ಜೊತೆಗೆ ಪ್ರೇಕ್ಷಕರ ಮನಸೂರೆಗೊಂಡಿದ್ದಂತೂ ನಿಜ.
ಈ ಧಾರಾವಾಹಿಯಲ್ಲಿ ಖಳನಾಯಕಿ ಪಾತ್ರ ಮಾಡಿದ್ದ ನಟಿ ಸುಷ್ಮಾ ನಾಣಯ್ಯ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ "ಲಕ್ಷ್ಮೀ ಬಾರಮ್ಮ ಧಾರಾವಾಹಿಗೆ ಗುಡ್ ಬೈ ಹೇಳಲು ಬಹಳ ಕಷ್ಟವಾಗುತ್ತಿದೆ. ನನ್ನ ಮನಸ್ಸಿಗೆ ಬಹಳ ಹತ್ತಿರವಾದ ಶೋ ಇದು. ಯಾವುದು ಎಷ್ಟೇ ಇಷ್ಟವಿದ್ದರೂ ಅದಕ್ಕೊಂದು ಅಂತ್ಯ ಸಿಗಲೇಬೇಕು. ಈ ಅಂತ್ಯದ ಹಿಂದೆಯೇ ಇನ್ನೊಂದರ ಆರಂಭವಿರುತ್ತದೆ ಎಂದು ನಂಬಿದ್ದೇನೆ. ಈ ಧಾರಾವಾಹಿಯಲ್ಲಿ ಕಾವೇರಿ ಪಾತ್ರ ಮಾಡುವುದು ಬಹಳ ಚಾಲೆಂಜಿಂಗ್ ಆಗಿತ್ತು" ಎಂದು ಹೇಳಿದ್ದಾರೆ.
ಇದರ ಜೊತೆಗೆ "ಆದರೆ ನನ್ನ ಪಾತ್ರದ ಪ್ರತಿ ಅಂಶವನ್ನು ನಾನು ಬಹಳಷ್ಟು ಎಂಜಾಯ್ ಮಾಡಿದ್ದೇನೆ. ಕಾವೇರಿ ಪಾತ್ರವನ್ನು ಇನ್ಮೇಲೆ ಬಹಳಷ್ಟು ಮಿಸ್ ಮಾಡಿಕೊಳ್ಳದಿದ್ದೇನೆ. ಈ ಸಂದರ್ಭದಲ್ಲಿ ನಾನು ಬಹಳಷ್ಟು ಜನರನ್ನು ಸ್ಮರಿಸಬೇಕಾಗಿದೆ. ಓನ್ಲಿ ಜೆಡಿ ಟೀಮ್ ನನ್ನನ್ನು ಈ ಪಾತ್ರಕ್ಕೆ ಆಯ್ಕೆ ಮಾಡಿದ್ದಕ್ಕಾಗಿ ಹಾಗೆಯೇ ನನ್ನನ್ನು ಹುರಿದುಂಬಿಸಿದ, ಸಹಕರಿಸಿದ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಎಲ್ಲಾ ಸಹನಟರಿಗೆ ನಾನು ತುಂಬು ಹೃದಯದ ಧನ್ಯವಾದಗಳು ಹೇಳುತ್ತೇನೆ. ಜೊತೆಗೆ ಈ ಧಾರಾವಾಹಿಯ ನಿರ್ಮಾಪಕರಾದ ಜೈ ಮಾತ ಕಂಬೈನ್ಡ್ಸ್ ಹಾಗೂ ಡಿ ಅಶ್ವಿನಿ ಪ್ರಕಾಶ ಅವರಿಗೂ ನಾನು ಚಿರಋಣಿ ನಾನು ಕೆಲಸ ಮಾಡಿದ ಅತ್ಯುನ್ನತ ನಿರ್ಮಾಪಕರುಗಳಲ್ಲಿ ಇವರೂ ಒಬ್ಬರು. ಯಶವಂತ್ ಪಾಂಡು ಸರ್ ಗು ನಾನು ಧನ್ಯವಾದ ಹೇಳುತ್ತೇನೆ. ಮುಖ್ಯವಾಗಿ ನನ್ನನ್ನು ಆರಂಭದಿಂದಲೂ ಈ ಧಾರಾವಾಹಿ ಕೊನೆಯವರೆಗೂ ಸದಾ ಸಪೋರ್ಟ್ ಮಾಡಿ ಇಷ್ಟಪಟ್ಟ ಎಲ್ಲಾ ನನ್ನ ಪ್ರೇಕ್ಷಕರಿಗೂ ಅಭಿಮಾನಿಗಳಿಗೂ ಪ್ರೀತಿಯ ಧನ್ಯವಾದಗಳು" ಎಂದು ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ ನಟಿ ಸುಷ್ಮಾ ನಾಣಯ್ಯ.
ಈ ಧಾರಾವಾಹಿಯ ಕೊನೆಯ ಎಪಿಸೋಡಿನ ಶೂಟಿಂಗ್ ಅನ್ನು ಇದೇ ಧಾರಾವಾಹಿಯ ಬಹಳಷ್ಟು ಕಲಾವಿದರು ತಮ್ಮ ಸೋಶಿಯಲ್ ಮೀಡಿಯಾ ಗಳಲ್ಲಿ ಹಂಚಿಕೊಂಡಿದ್ದು, ತಮಗೆ ಅವಕಾಶ ನೀಡಿದ ಲಕ್ಷ್ಮೀ ಬಾರಮ್ಮ ಧಾರಾವಾಹಿಗೆ ವಿಡಿಯೋ ಹಾಗೂ ಫೋಟೋಸ್ ಗಳನ್ನು ಶೇರ್ ಮಾಡುವ ಮೂಲಕ ವಿದಾಯ ಹೇಳಿದ್ದಾರೆ.


Click it and Unblock the Notifications











